1] ಕುಕನೂರ ಪೊಲೀಸ್
ಠಾಣೆ 13/2018 ಕಲಂ. 87 Karnataka Police
Act.
ದಿನಾಂಕ: 16-01-2018 ರಂದು ಸಾಯಂಕಾಲ 5:30 ಗಂಟೆ ಸುಮಾರಿಗೆ ತಳಕಲ್ ಗ್ರಾಮದ ಸೀಮಾದಲ್ಲಿರುವ
ಸಿದ್ದನಗೌಡ ಪಾಟೀಲ ಇವರ ಹೊಲದ ಹತ್ತಿರ ಸರ್ಕಾರಿ ಹಳ್ಳದಲ್ಲಿ ಆರೋಪಿತರೆಲ್ಲರೂ ಗುಂಪಾಗಿ ಕುಳಿತುಕೊಂಡು
ಪಣಕ್ಕೆ ಹಣ ಹಚ್ಚಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಎಂಬ ಜೂಜಾಟದಲ್ಲಿ ತೊಡಗಿದ್ದಾಗ ಪಿಎಸ್ಐ
ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ದಾಳಿ ಮಾಡಿ ಎಲ್ಲಾ ಆರೋಪಿತರನ್ನು ಹಿಡಿದು ಆರೋಪಿತರಿಂದ ಇಸ್ಪೇಟ್
ಜೂಜಾಟದ ನಗದು ಹಣ 8700=00 ರೂ. ಒಂದು ಪ್ಲಾಸ್ಟಿಕ್ ಚೀಲ ಮತ್ತು 52 ಇಸ್ಪೀಟ್ ಎಲೆಗಳು ಇವೆಲ್ಲವೂಗಳನ್ನು ಜಪ್ತ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ.
2] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 04/2018 ಕಲಂ: 279, 337, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:
ದಿನಾಂಕ: 16-01-2018 ರಂದು ಫಿರ್ಯಾದಿದಾರರು ಹಾಗೂ ಆತನ ಹೆಂಡತಿಯಾದ ಗಾಯಾಳು ಅನ್ನಪೂರ್ಣ
ಇಬ್ಬರು ಕೂಡಿಕೊಂಡು ತಮ್ಮ ಸ್ಕೂಟಿ ಯಲ್ಲಿ ತಮ್ಮೂರಿಗೆ ರಜೆಗೆ ಹೋಗಿ, ರಜೆ ಮುಗಿಸಿಕೊಂಡು ವಾಪಸ್
ಯಲಬುರ್ಗಾ ಮಾರ್ಗವಾಗಿ ಕುಕನೂರಿಗೆ ಹೋಗುತ್ತಿದ್ದಾಗ, ಸಾಯಂಕಾಲ 5-30 ಗಂಟೆಯ ಸುಮಾರಿಗೆ
ಯಲಬುರ್ಗಾ ಸೀಮಾದಲ್ಲಿ ರಸ್ತೆಯ ಬದಿಗೆ ನಿಧಾನವಾಗಿ ನಡೆಸಿಕೊಂಡು ಬರುತ್ತಿದ್ದಾಗ, ಆರೋಪಿತನು
ತಾನು ನಡೆಸುತ್ತಿದ್ದ ಮೋಟಾರ್ ಸೈಕಲ್ ನಂಳ ಕೆಎ-26 ಎಸ್-8321 ನೇದ್ದರ ಮೇಲೆ ಗಾಯಾಳು
ಶಿವಕುಮಾರನನ್ನು ಕೂಡಿಸಿಕೊಂಡು ತಾನು ನಡೆಸುತ್ತಿದ್ದ ಮೋಟಾರ್ ಸೈಕಲ್ ನ್ನು ಅತೀವೇಗವಾಗಿ ಮತ್ತು
ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಫಿರ್ಯಾದಿದಾರರಿಗೆ ಟಕ್ಕರ್ ಕೊಟ್ಟು ಅಫಘಾತ ಮಾಡಿದ್ದರಿಂದ
ಫಿರ್ಯಾದಿದಾರನಿಗೆ ಬಲ ತೊಡೆಯ ಹತ್ತಿರ ಭಾರಿ ಸ್ವರೂದ ಗಾಯವಾಗಿದ್ದು, ಅಲ್ಲದೇ ಬಲ ಪಾದದ ಹತ್ತಿರ,
ಬಲಗೈ ಬೆರಳುಗಳ ಹತ್ತಿರ ಗಾಯವಾಗಿದ್ದು, ಅಲ್ಲದೇ ಅನ್ನಪೂರ್ಣ ಇವರಿಗೆ ಬಲಗಾಲ ಮೋಣಕಾಲ ಹತ್ತಿರ,
ಬಲ ಹೆಬ್ಬೆರಳಿಗೆ ರಕ್ತಗಾಯವಾಗಿದ್ದು, ಅಲ್ಲದೇ ಹೊಟ್ಟೆಗೆ ಒಳ ಪೆಟ್ಟಾಗಿರುತ್ತದೆ. ಹಾಗೂ
ಆರೋಪಿತನ ಮೋಟಾರ್ ಸೈಕಲ್ ಹಿಂದೆ ಕುಳಿತಿದ್ದ ಶಿವಕುಮಾರ ಈತನಿಗೂ ಸಹ ಎರಡು ಮೋಣ ಕೈ ಹತ್ತಿರ,
ತಲೆಯ ಮೇಲೆ ರಕ್ತಗಾಯವಾಗಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment