Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, January 2, 2018

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 01/2018. ಕಲಂ: 279,304[ಎ] ಐ.ಪಿ.ಸಿ & 187 ಐಎಂವಿ ಕಾಯ್ದೆ.
ದಿ:01-01-2018 ರಂದು 01-00 .ಎಮ್ ಕ್ಕೆ ಠಾಣಾ ವ್ಯಾಪ್ತಿಯ ಗುಳಗಣ್ಣ ವರ ಪಾಲಿಟೆಕ್ನಿಕ್ ಕಾಲೇಜ ಹತ್ತಿರ ಎನ್.ಹೆಚ್-63 ರಸ್ತೆಯಲ್ಲಿ ವಾಹನ ಅಪಘಾತವಾದ ಬಗ್ಗೆ ಮಾಹಿತಿ ಬಂದಿದ್ದು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಮಹಿಂದ್ರಾ ಬೊಲೆರೋ ಮ್ಯಾಕ್ಸ ಪಿಕಪ್ ವಾಹನದಲ್ಲಿ ಸಿಕ್ಕಿಕೊಂಡು ಮೃತಪಟ್ಟಿದ್ದ ವ್ಯಕ್ತಿಗೆ ಹೊರತೆಗೆದು ನಂತರ ಸ್ಥಳದಲ್ಲಿ ಅಪಘಾತವನ್ನು ನೋಡಿರುವ ಪ್ರತ್ಯಕ್ಷ ಸಾಕ್ಷಿದಾರರಾದ, ಪ್ರಕಾಶ ಮುರಡಿ. ಸಾ: ಮಂಗಳಾಪೂರ ಇವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು, ಸಾರಾಂಶವೇನೆಂದರೆ, ದಿ:01-01-2018 ರಂದು 00-30 .ಎಮ್ ಫಿರ್ಯಾದಿದಾರರು ಹಲಿಗೇರಿ ಯಲ್ಲಿ ತಮ್ಮ ಕೆಲಸ ಮುಗಿಸಿಕೊಂಡು ತನ್ನ ಸ್ನೇಹಿತನಿಗೆ ಸಂಗಡ ಕರೆದುಕೊಂಡು ವಾಪಾಸ್ ತಮ್ಮ ಊರಿಗೆ ಅಂತಾ ಬರುತ್ತಿದ್ದಾಗ ಮಾರ್ಗದ ಕೊಪ್ಪಳ-ಗದಗ ಎನ್.ಹೆಚ್-63 ರಸ್ತೆಯ ಗುಳಗಣ್ಣವರ ಪಾಲಿಟೆಕ್ನಿಕ್ ಕಾಲೇಜ ಹತ್ತಿರ ತಮ್ಮ ಮುಂದೆ ಲಾರಿ ನಂ: ಕೆಎ-35/ಬಿ-6731 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ರಸ್ತೆಯ ಮೇಲೆ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಹೋಗುವಾಗ ಅದೇ ಸಮಯಕ್ಕೆ ತನ್ನ ಎದುರುಗಡೆ ಕೊಪ್ಪಳದ ಕಡೆಯಿಂದ ಬಂದ ಮಹಿಂದ್ರ ಮ್ಯಾಕ್ಸ ಪಿಕಪ್ ನಂ: ಕೆಎ-25/ಡಿ-9329 ನೇದ್ದಕ್ಕೆ ಟಕ್ಕರ ಕೊಟ್ಟು ಅಪಘಾತ ಮಾಡಿ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಲಾರಿ ಚಾಲಕನು ಓಡಿ ಹೋಗಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಮಹಿಂದ್ರಾ ಬೊಲೆರೋ ಮ್ಯಾಕ್ಸ ಪಿಕಪ್ ನೇದ್ದರ ಚಾಲಕ ರಮೇಶ ಕುಸುಗಲ್. ಸಾ: ಬೆನ್ನೂರ ತಾ: ನವಲಗುಂದ. ಇತನಿಗೆ ಭಾರಿಪೆಟ್ಟುಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಕಾರಣ ಸದರಿ ಲಾರಿ ಚಾಲಕನಿಗೆ ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ತಡವಾಗಿ ನೀಡಿದ ದೂರನ್ನು ಸ್ಥಳದಲ್ಲಿಯೇ ಬೆಳಿಗ್ಗೆ 06-30 ಗಂಟೆಗೆ ಪಡೆದುಕೊಂಡು, ವಾಪಾಸ್ ಠಾಣೆಗೆ ಬೆಳಿಗ್ಗೆ 07-00 ಗಂಟೆಗೆ ಬಂದು ಸದರಿ ದೂರಿನ ಸಾರಾಂಶದ ಮೇಲಿಂದ ಗುನ್ನೆ ನಂ: 01/2018. ಕಲಂ: 279,304[ಎ] ಐ.ಪಿ.ಸಿ & 187 ಐಎಂವಿ ಕಾಯ್ದೆ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 01/2018 ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ 1965.
ದಿನಾಂಕ:- 01-01-2018 ರಂದು 02:00 .ಎಂ.ಕ್ಕೆ ಶ್ರೀ ವೆಂಕಟೇಶ ಚವ್ಹಾಣ .ಎಸ್.,   ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಇವರು ತಮ್ಮ ವರದಿಯೊಂದಿಗೆ ಮೂಲ ಪಂಚನಾಮೆ, ಅಕ್ರಮ ಮಧ್ಯ ಮಾರಾಟಕ್ಕೆ ಸಂಭಂದಿಸಿದಂತಹ ಮುದ್ದೆಮಾಲು ಹಾಗೂ ಆರೋಪಿತನನ್ನು ಹಾಜರಪಡಿಸಿದ್ದು ಅದರ ಸಾರಾಂಶ ಪ್ರಕಾರ ಇದೆ. “ ನಿನ್ನೆ ದಿನಾಂಕ:- 31-12-2017 ರಂದು ರಾತ್ರಿ 11-00 ಗಂಟೆ ಸುಮಾರಿಗೆ ನಾನು ಠಾಣೆಯಲ್ಲಿರುವಾಗ ಮಾನ್ಯ ಸಿ.ಪಿ.. ಸಾಹೇಬರು ಕೂಡಾ ಠಾಣೆಗೆ ಭೇಟಿ ನೀಡಿದ್ದು ವೇಳೆಗೆ ಠಾಣೆ ವ್ಯಾಪ್ತಿಯ ಜಂಗ್ಲಿ ರಂಗಾಪೂರುದಲ್ಲಿ ಜಂಗಲ್ ಟ್ರೀ ಗೆಸ್ಟಗೌಸ್ ಹತ್ತಿರ   ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತವಾದ ಭಾತ್ಮೀ ಬಂದ ಮೇರೆಗೆ ದಾಳಿ ಮಾಡುವ ಕುರಿತು ಮಾನ್ಯ ಸಿ.ಪಿ.. ಸಾಹೇಬರ ನೇತೃತ್ವದಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಸಿದ್ದನಗೌಡ ಪಿ.ಸಿ. 40, ಮರಿಶಾಂತಗೌಡ ಪಿ.ಸಿ. 363 ಮತ್ತು ಬಸವರಾಜ .ಪಿ.ಸಿ. 211, ಮತ್ತು ಇಬ್ಬರು ಪಂಚರು ಕೂಡಿಕೊಂಡು ಸಿ.ಪಿ. ಸಾಹೇಬರಿಗೆ ಒದಗಿಸಿದ ಸರಕಾರಿ ಜೀಪ್ ನಂಬರ್: ಕೆ.-37/ಜಿ-451 ನೇದ್ದರಲ್ಲಿ ರಾತ್ರಿ 11:15 ಗಂಟೆಗೆ ಠಾಣೆಯಿಂದ ಹೊರಟು ಜಂಗ್ಲಿ ರಂಗಾಪೂರು ಗ್ರಾಮಕ್ಕೆ ಹೋಗಿ ಮಾಹಿತಿ ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ವಾಹನವನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಮಾಹಿತಿ ಇದ್ದ ಸ್ಥಳದ ಹತ್ತಿರ ಮರೆಯಲ್ಲಿ ನಿಂತು ನೋಡಲಾಗಿ ಜಂಗ್ಲಿ ರಂಗಾಪುರ ಗ್ರಾಮದಲ್ಲಿ ಜಂಗಲ್ ಟ್ರೀ ಗೆಸ್ಟಗೌಸ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಮಧ್ಯದ ಬಾಟಲಿಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದು ಜನರು ಬಂದು ಅವನ ಹತ್ತಿರ ಇದ್ದ ಮಧ್ಯದ ಬಾಟಲಿಗಳು ಖರೀದಿ ಮಾಡಿಕೊಂಡು ಹೋಗುತ್ತಿದ್ದುದು ಕಂಡು ಬಂದಿತು. ಆಗ ಸಮಯ ರಾತ್ರಿ 11-45 ಗಂಟೆಯಾಗಿತ್ತು. ಕೂಡಲೇ ಮಧ್ಯ ಮಾರಾಟ ಮಾಡುತ್ತಿದ್ದವನ  ಮೇಲೆ ದಾಳಿ ಮಾಡಲಾಗಿ ಸಾರ್ವಜನಿಕರು ಓಡಿ ಹೋಗಿದ್ದು, ಮಧ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದಿದ್ದು, ಅವನಿಗೆ ವಿಚಾರಿಸಲು ಅವನು ತನ್ನ ಹೆಸರು ಶಿವಸಾಗರ ತಂದೆ ವೀರಭದ್ರಪ್ಪ ನಾಯಕ ವಯಸ್ಸು 27 ವರ್ಷ, ಜಾತಿ: ನಾಯಕ . ಜಂಗಲ ಟ್ರೀ ಗೆಸ್ಟಹೌಸದಲ್ಲಿ ಕೆಲಸ ಸಾ: ವಾಲ್ಮೀಕಿ ಸರ್ಕಲ್ ಗಂಗಾವತಿ ಅಂತಾ ತಿಳಿಸಿದನು. ಅವನಿಗೆ ಮಧ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಯಾವುದಾದರೂ ಅಧಿಕೃತ ಪರವಾನಿಗೆ / ಲೈಸೆನ್ಸ್ ಇದೆಯೇ ? ಅಂತಾ ವಿಚಾರಿಸಲು ಅವನು ತಮ್ಮ ಹತ್ತಿರ ಯಾವುದೇ ಅಧಿಕೃತ ಪರವಾನಿಗೆ ಇರುವುದಿಲ್ಲಾ. ತಾನು ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡನು. ಸ್ಥಳದಲ್ಲಿ ಆತನ ಹತ್ತಿರ ಇದ್ದ ಮಧ್ಯದ ಬಾಟಲಿಗಳನ್ನು ನೋಡಲು ನಾಲ್ಕು ಫುಲ್ ಬಾಟಲಗಳು ಇದ್ದು, ಪರಿಶೀಲಿಸಿ ನೋಡಲು 1) ಒಂದು Black Dog whisky 750 ml. ಅಂ. ಕಿ. ರೂ. 1730=80, 2) ಎರಡು 8 PM whisky 750 ml (ಪ್ರತಿಯೊಂದರ ಬೆಲೆ ರೂ. 283=56) ಅಂ.ಕಿ. ರೂ. 567=12, 3) ಒಂದು Camino Taquila 750 ml. ಅಂ. ಕಿ. 3,350=00, ಸಿಕ್ಕಿರುತ್ತದೆ. ಸದರಿಯವನ ವಶದಿಂದ ದೊರೆತ ಎಲ್ಲಾ ಮಧ್ಯದ ಬಾಟಲಗಳು ಅಸಲಿಯೋ ಅಥವಾ ನಕಲಿಯೋ ಎಂಬ ಬಗ್ಗೆ ರಸಾಯನಿಕ ಪರೀಕ್ಷೆ ಮಾಡಿಸುವ ಕುರಿತು ಪ್ರತಿಯೊಂದು ಬಾಟಲಿಯ ಬಾಯಿಗೆ ಬಿಳಿ ಬಟ್ಟೆಯನ್ನು ಕಟ್ಟಿ, VB ಅಕ್ಷರದಿಂದ ಸೀಲ್ ಮಾಡಿ ಪಂಚರ ಸಹಿ ಚೀಟಿ ಅಂಟಿಸಲಾಯಿತು. ಈ ಬಗ್ಗೆ ದಿನಾಂಕ: 31-12-2017 ರಂದು ರಾತ್ರಿ 11-45 ಪಿ.ಎಂ.ದಿಂದ ದಿನಾಂಕ: 01-01-2018 ರಂದು 01-00 ಎ.ಎಂ. ವರೆಗೆ ಸ್ಥಳದಲ್ಲಿಯೇ ಪಂಚನಾಮೆಯನ್ನು ನಿರ್ವಹಿಸಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಮಾಲಿನೊಂದಿಗೆ ವಾಪಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 01/2018 ಕಲಂ. 399 ಐ.ಪಿ.ಸಿ.

01-01-2018 ರಂದು ರಾತ್ರಿ 11-30 ಗಂಟೆ ಸುಮಾರಿಗೆ ಗದಗ-ಗಜೇಂದ್ರಗಡೆ ರಸ್ತೆಯ ಮೇಲೆ ಕಂಠಿಬಸವೇಶ್ವರ ದೇವಸ್ಥಾನದ ಹತ್ತಿರ ದರೋಡೆ ಮಾಡಲು ಸಂಚು ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿ.ಎಸ್. ಯಲಬುರ್ಗಾ ಹಾಗೂ ಪಿ.ಎಸ್. ಬೇವೂರ ರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ದಿನಾಂಕ : 02-01-2017 ರಂದು 00-05 ಗಂಟೆಗೆ ದಾಳಿ ಮಾಡಲಾಗಿ ಆರೋಪಿತರು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ರಸ್ತೆಯ ಮೇಲೆ ಹೋಗಿ ಬರುವ ವಾಹನಗಳನ್ನು ತಡೆದು ಜನರಿಗೆ ಹೆದರಿಸಿ ಬೆದರಿಸಿ ಅವರಿಂದ ಹಣವನ್ನು ದರೋಡೆ ಮಾಡುವ ಸಲುವಾಗಿ ತಯಾರಿ ನಡೆಸುತ್ತಿರುವಾಗ 3 ಜನ ಆರೋಪಿತರು ಸಿಕ್ಕಿಬಿದ್ದಿದ್ದು, 02 ಜನ ಆರೋಪಿತರು ಓಡಿ ಹೋಗಿದ್ದು ಇರುತ್ತದೆಆರೋಪಿತರಿಂದ ಕಬ್ಬೀಣದ ರಾಡ್, ಚಾಕು, ಖಾರದ ಪುಡಿ, ನೈಲಾನ ಹಗ್ಗ, ಮೊಬೈಲ ಪೋನ ವಷಪಡಿಸಿಕೊಂಡಿದ್ದು ಇರುತ್ತದೆ. ಅಂತಾ ಇದ್ದ  ಸಾರಾಂಶದ ಮೇಲಿಂದ ಯಲಬುರ್ಗಾ ಠಾಣಾ ಗುನ್ನೆ ನಂ. 01/2018 ಕಲಂ. 399 .ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ

0 comments:

 
Will Smith Visitors
Since 01/02/2008