Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, January 8, 2018

1] ಯಲಬುರ್ಗಾ ಪೊಲೀಸ್ ಠಾಣೆ 02/2018  ಕಲಂ. 279, 304(ಎ) ಐ.ಪಿ.ಸಿ:
ದಿನಾಂಕ: 07-01-2018 ರಂದು ಬೆಳಗ್ಗೆ 09-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರ ಮಗನಾದ ರಂಜಿತ್ ವಯ: 04 ವರ್ಷ ಈತನು ತಮ್ಮ ಅಂಗಡಿಯ ಮುಂದೆ ಇರುವ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ, ವಾಪಸ್ ಅಂಗಡಿಗೆ ಬರುವ ಸಲುವಾಗಿ ವಜ್ರಬಂಡಿ-ಮಂಡಲಮರಿ ಕ್ರಾಸ್ ಕಡೆಗೆ ಹೋಗುವ ರಸ್ತೆಯನ್ನು ದಾಟುತ್ತಿದ್ದಾಗ, ಆರೋಪಿತನಾದ ಶಿವರಾಜ ತಂದೆ ಕಳಕಪ್ಪ ಮೂಗನೂರು, ವಯ: 34 ವರ್ಷ ಸಾ: ಮಂಡಲಮರಿ  ಈತನು ತನ್ನ ಟಾ ಟಾ ಎಸ ನಂ: ಕೆಎ-37 ಎ-1436 ನೇದ್ದರನ್ನು ಒಮ್ಮಲೇ ಹಿಂದೆ ನೋಡದೇ ಹಿಮ್ಮಖವಾಗಿ ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು, ಫಿರ್ಯಾದಿದಾರನ ಮಗನಿಗೆ ಟಕ್ಕರ್ ಕೊಟ್ಟಿದ್ದರಿಂದ ಆತನು ರಸ್ತೆಯ ಮೇಲೆ ಬಿದ್ದಿದ್ದರಿಂ ಟಾ ಟಾ ಎಸ ವಾಹನದ ಹಿಂದಿನ ಗಾಲಿಯು ಆತನ ತಲೆಯ ಮೇಲೆ ಹತ್ತಿ ಇಳಿದ್ದಿದ್ದು, ಇದರಿಂದ ಆತನಿಗೆ ತಲೆಗೆ ರಕ್ತಗಾಯವಾಗಿ ಮೂಗಿನಲ್ಲಿ ಹಾಗೂ ಬಾಯಿಯಲ್ಲಿ ರಕ್ತ ಬಂದಿದ್ದು, ಆತನಿಗೆ ಚಿಕಿತ್ಸೆಗಾಗಿ ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡುವಷ್ಟರಲ್ಲಿ ಮಾರ್ಗ ಮಧ್ಯದಲ್ಲಿಯೇ ಮೃತ ಪಟ್ಟಿರುತ್ತಾನೆ. ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ  ಗುನ್ನೆ ನಂ: 04/2017 ಕಲಂ: 143, 147, 148, 323, 324, 354, 307, 504, 506 ಸಹಿತ 149 ಐ.ಪಿ.ಸಿ.

07-01-2018 ರಂದು ರಾತ್ರಿ 11-00  ಗಂಟೆಗೆ ಫಿರ್ಯಾದಿದಾರರಾದ ಕರಿಯಮ್ಮ ಗಂಡ ಬಸಪ್ಪ ಚಳ್ಳಾರಿ ವಯಾ: 28 ವರ್ಷ ಜಾತಿ: ಕುರುಬರು ಉ: ಕೂಲಿ ಕೆಲಸ ಸಾ: ಕಲಾಲಬಂಡಿ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ಪಿರ್ಯಾದಿಯ ಸಾರಾಂಶದ ವೆನೆಂದರೆ, ಫಿರ್ಯಾದಿದಾರರ ಅತ್ತಿಗೆ ಗಾಯಾಳು ಗಂಗಮ್ಮ ಇವರು ಅಂಗನವಾಡಿ ಕಾರ್ಯಕರ್ತೆ ಇದ್ದು ದಿನಾಂಕ: 08-01-2018 ರಂದು ಗ್ರಾಮದಲ್ಲಿ ಸಾಮೂಹಿಕ ವಿವಾಹಗಳು ಜರುಗುತ್ತಿದ್ದರಿಂದ ಮೇಲಾಧಿಕಾರಿಗಳ ಆದೇಶದಂತೆ ಗಂಗಮ್ಮ ಇವರು ಆರೋಪಿ ರವರಿಗೆ ವಧು ವರರ ವಯಸ್ಸಿನ ದಾಖಲಾತಿಯನ್ನು ಕೊಡುವಂತೆ ಕೇಳಿದ್ದಕ್ಕೆ ಅವ್ಯಾಚ್ಯವಾಗಿ ಬೈದಾಡಿದ್ದು ನಂತರ ಗಂಗಮ್ಮ ಇವರ ಗಂಡನಾದ ರಂಗನಾಥ ಇವರು ಸಹ ಕೇಳಲು ಹೋದಾಗ ಆರೋಪಿತನು ಏಕವಚನದಲ್ಲಿ ಬೈದು ಕಳಿಸಿದ್ದು ಆ ವಿಚಾರವಾಗಿ ವಿಚಾರಿಸಲು ಸಂಜೆ 6-00 ಗಂಟೆಗೆ ಹೋದಾಗ ಆರೋಪಿತರೆಲ್ಲರೂ ಒಟ್ಟುಗೂಡಿಕೊಂಡು ಜಗ್ಗಾಡಿ ಮಾನಭಂಗ ಮಾಡಿದ್ದು ಅಲ್ಲದೇ ಕೈಗಳಿಂದ, ಬಡಿಗೆ ಕಲ್ಲುಗಳಿಂದ ಮಾರಣಾಂತೀಕವಾಗಿ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ. 

0 comments:

 
Will Smith Visitors
Since 01/02/2008