1] ಕುಕನೂರ ಪೊಲೀಸ್
ಠಾಣೆ 05/2018 ಕಲಂ. 87 Karnataka Police
Act.
ದಿನಾಂಕ: 11-01-2018 ರಂದು ಸಾಯಂಕಾಲ 6:10 ಗಂಟೆ ಸುಮಾರಿಗೆ ಆರೋಪಿತರೆಲ್ಲರೂ ಚಿತ್ತಾಪೂರ
ಗ್ರಾಮದ ಬನ್ನಿಕಟ್ಟಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಪಣಕ್ಕೆ ಹಣ ಮತ್ತು ಮೋಬೈಲ್ ಗಳನ್ನು ಹಚ್ಚಿ
ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಎಂಬ ಜೂಜಾಟದಲ್ಲಿ ತೊಡಗಿದ್ದಾಗ ಪಿಎಸ್ಐ ಹಾಗೂ ಸಿಬ್ಬಂದಿಯವರು
ಪಂಚರೊಂದಿಗೆ ದಾಳಿ ಮಾಡಿದಾಗ 6 ಜನರು ಸಿಕ್ಕಿಬಿದ್ದಿದ್ದು ಒಬ್ಬನು ಓಡಿ ಹೊಗಿದ್ದು ಸಿಕ್ಕಿಬಿದ್ದ
ಆರೋಪಿತರಿಂದ ಇಸ್ಪೇಟ್ ಜೂಜಾಟದ ನಗದು ಹಣ 6000=00 ರೂ. 5 ಮೋಬೈಲ್ ಒಂದು ಪ್ಲಾಸ್ಟಿಕ್ ಚೀಲ ಮತ್ತು 52 ಇಸ್ಪೀಟ್ ಎಲೆಗಳು ಇವೆಲ್ಲವೂಗಳನ್ನು ಜಪ್ತ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ.
2] ಸಂಚಾರ ಪೊಲೀಸ್ ಠಾಣೆ ಗಂಗಾವತಿ ಗುನ್ನೆ
ನಂ: 02/2017 ಕಲಂ: 279, 338 ಐ.ಪಿ.ಸಿ.
ದಿನಾಂಕ 11-01-2018 ರಂದು ರಾತ್ರಿ 7-00 ಗಂಟೆಗೆ ಫಿರ್ಯಾದಿದಾರನ ತಂದೆಯಾದ ಮುಸ್ತಾಫ ತಂದೆ ಸೈಯದ್ ಸಾಬ ವ:52 ಇತನು ತನ್ನ ತಳ್ಳುವ ಬಂಡಿಯನ್ನು ರಾಜಭವನ್ ಕ್ರಾಸ್ ಕಡೆಯಿಂದ
ದಬ್ಬಿಕೊಂಡು ಮನೆಗೆ ಹೋರಟಿರುವಾಗ ಕನ್ರೂಲ್ ಬಾಬ ದಾರ್ಗಾದ ಹತ್ತಿರ ರಸ್ತೆ ದಾಟುತ್ತಿರುವಾಗ
ರಾಜಭವನ್ ಕ್ರಾಸ್ ಕಡಯಿಂದ ಆರೋಪಿತನು ತನ್ನ ಕಾರ ನಂ ಕೆಎ 37 ಎನ್ 1511 ನೇದ್ದನ್ನು ಅತಿ ಜೋರಾಗಿ
ಮತ್ತು ಅಲಕ್ಚತನ ದಿಂದ ಚಾಲನೆ ಮಾಡಿಕೊಂಡು ಬಂದು ಮುಸ್ತಾಫ ಇತನಿಗೆ ಟಕ್ಕರ್ ಕೊಟ್ಟು ಅಪಾಘತ
ಮಾಡಿದ್ದರಿಂದ ಮುಸ್ತಾಫನ ಬಲಗೈ ಹೆಬ್ಬೆರಳಿಗೆ ಭಾರಿ ಸ್ವರೂಪದ ರಕ್ತಗಾಯವಾಗಿದ್ದು ಇರುತ್ತದೆ
ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
3] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 08/2017 ಕಲಂ: 341, 323, 307, 504, 506 ಸಹಿತ 34 ಐ.ಪಿ.ಸಿ
ಮತ್ತು 3(1)(10) ಎಸ್.ಸಿ/ಎಸ್.ಟಿ. ಪಿ.ಎ. ಕಾಯ್ದೆ 1989.
ದಿನಾಂಕ 11-08-2018 ರಂದು 2330 ಗಂಟೆಗೆ ದುರುಗೇಶ ತಾಯಿ ಮಲ್ಲಮ್ಮ ಮೇವುಮರದ, 22 ವರ್ಷ,
ಜಾ: ಮಾದಿಗ, ಉ: ಕೆ.ಇ.ಬಿ. ದಿನಗೂಲಿ ನೌಕರ, ಸಾ: ಅಂಬೇಡ್ಕರ್ ನಗರ, ಗಂಗಾವತಿ ಇವರು ಲಿಖಿತ ಫಿರ್ಯಾದಿಯನ್ನು
ಹಾಜರುಪಡಿಸಿದ್ದು, ದಿನಾಂಕ 11-01-2018 ರಂದು ನನ್ನ ಕೆಲಸಕ್ಕೆ ಹೋಗಿದ್ದು, ಸಂಜೆ 4-30 ಗಂಟೆ ಸುಮಾರಿಗೆ
ಮನೆಯಲ್ಲಿಟ್ಟಿದ್ದ ಮೊಬೈಲ್ ತರಲೆಂದು ಮನೆಗೆ ಬಂದಿದ್ದೆನು. ನಂತರ ವಾಪಸ್ ನನ್ನ ಕೆಲಸಕ್ಕೆ
ಹೋಗಲೆಂದು ನನ್ನ ಬೈಕ್ ತೆಗೆದುಕೊಂಡು ಹೋಗುತ್ತಿರುವಾಗ ವಿಜಯ್ ಕ್ಲಿನಿಕ್ ಹತ್ತಿರ ರಸ್ತೆಯ ಮೇಲೆ ನನ್ನನ್ನು
ಅಡ್ಡಗಡ್ಡಿ ನಿಲ್ಲಿಸಿದ ಗಂಗಾವತಿಯ ಲಕ್ಷ್ಮೀಕ್ಯಾಂಪ್ ಅರ್ಬಾಜ್ ಖಾನ್ ತಂದೆ ಸರ್ದಾರಖಾನ್ ಇವನು ಮತ್ತಿತರ
ಇಬ್ಬರು ನನಗೆ ಲೇ ಮಾದಿಗ ಸೂಳೇಮಗನೇ, ನಮ್ಮ ಹುಡುಗುರನ್ ಹೊಡಿತೀ ಏನಲೇ ಅಂತಾ ಜಾತಿ ಎತ್ತಿ
ಬೈಯುತ್ತಾ ಅರ್ಬಾಜಖಾನ್ ಇವನು ತನ್ನ ಕೈಯಲ್ಲಿದ್ದ ಸ್ಕ್ರೂಡ್ರೈವರ್ದಿಂದ ಕೊಲೆ ಮಾಡುವ ಉದ್ದೇಶದಿಂದ
ನನ್ನ ತಲೆಗೆ ಎಡಭಾಗದಲ್ಲಿ, ಬಲಭಾಗದಲ್ಲಿ ಹಾಗೂ ಮುಂಭಾಗದಲ್ಲಿ ಎಡಗೈಗೆ, ಎಡಭುಜಕ್ಕೆ, ಕುತ್ತಿಗೆಯ
ಹತ್ತಿರ ಎಡ ಹಾಗೂ ಬಲಭಾಗದಲ್ಲಿ ಮತ್ತು ಬೆನ್ನಿಗೆ ಜೋರಾಗಿ ಎಳೆದನು. ಇದರಿಂದ ನನಗೆ ರಕ್ತಗಾಯಗಳಾಗಿ
ಮೈಕೈ ನೋವಾಗಿದ್ದರಿಂದ ನಾನು ಜೋರಾಗಿ ಚೀರಿಕೊಂಡಾಗ ಆಗ ಅಲ್ಲಿಯೇ ಇದ್ದ ಸೋಮನಾಥ ತಂದೆ ನೀಲಪ್ಪ ಕಂಪ್ಲಿ
ಹಾಗೂ ಹನುಮಂತಪ್ಪ ತಂದೆ ಶಿವಪ್ಪ ಐಹೊಳೆ ಇವರು ಬಂದು ನನ್ನನ್ನು ಬಿಡಿಸಿಕೊಂಡರು. ಆದಾಗ್ಯೂ
ಅವನು ಲೇ ನಿಮ್ಮೌನ್ ಮಾದಿಗ ಸೂಳೇಮಗನ ಇವರು ಬಂದ್ರು ಅಂತ ನೀ ಉಳಕೊಂಡಿ, ಇಲ್ಲಂದ್ರ ನಿನ್ ಜೀವ ಉಳಸತ್ತಿದ್ದಿಲ್ಲ,
ಹುಷಾರ್ ಅಂತಾ ಅನ್ನುತ್ತಾ ಅಲ್ಲಿಂದ ಹೊರಟು ಹೋದನು. ಪ್ರಕರಣ ದಾಖಲು ಮಾಡಿಕೊಂಡು ತನಿಖೆ
ಕೈಗೊಂಡಿದ್ದು ಇರುತ್ತದೆ.
0 comments:
Post a Comment