Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, January 11, 2018

// ಪತ್ರಿಕಾ ಪ್ರಕಟಣೆ \\
          ದಿನಾಂಕ 10-01-2018 ರಂದು ಬೆಳಿಗ್ಗೆ 11-30.ಎಂ.ಕ್ಕೆ ಜಮೀಲುದ್ದಿನ್ @ ಸಮೀರ ತಂದೆ ಸಯ್ಯದ್ ಬಾಷುಮಿಯಾ ವಯಾ:36 ವರ್ಷ ಜಾ: ಮುಸ್ಲಿಂ ಉ: ಮೆಡಿಕಲ್ ಎಜೆನ್ಸಿ ಸಾ: ಗದಿಗೆಪ್ಪ ಲೇಹೌಟ್ ,ಗಂಗಾವತಿ.ರವರು ಠಾಣೆಗೆ ಹಾಜರಾಗಿ  ದಿನಾಂಕ: 09-01-2018 ರಂದು ರಾತ್ರಿ 11-30 ಗಂಟೆಯಿಂದ ದಿನಾಂಕ: 10-01-2018 ರ ಬೆಳಗಿನ 7-30 ಗಂಟೆಯ ನಡುವಿನ ಅವಧಿಯಲ್ಲಿ  ಯಾರೋ ಕಳ್ಳರು ಗಂಗಾವತಿ ನಗರದ ಗದಿಗೆಪ್ಪ ಲೇಹೌಟನ 02 ಕ್ರಾಸನಲ್ಲಿರುವ   ಫಿರ್ಯದಿದಾರರ ಮನೆಯ ಮೇಲಂತಸ್ತಿನ ಕೊಣೆಯ ಹಿಂದಿನ ಬಾಗಿಲನ್ನು ತೆರೆದುಕೊಂಡು ಮನೆಯ ಒಳಗೆ ಬಂದು ಮನೆಯ ಸೋಪಾ ಸೆಟ್ ಬಳಿ ಟೀಪಾಯ್ ಮೇಲೆ ಇಟ್ಟಿದ್ದ  1] MI A-1 MOBILE   ಅಂ.ಕಿ 6,000-00, 2] ನಗದು ಹಣ 50,000-00 ರೂ ಹಾಗೂ ಸೋಪಾ ಸೆಟ್ ಬಳಿ ಚಾರ್ಜ ಹಾಕಿದ್ದ 2] ಒಂದು OPPO A57 MOBILE  ಅಂ.ಕಿ 8000-00 3] I-PHONE 6S  MOBILE  ಅಂ.ಕಿ 30,000-00. ಎಲ್ಲಾ ಸೇರಿ ಒಟ್ಟು ಅಂ.ಕಿ.ರೂ.44,000-0 ರೂ ಬೆಲೆ ಬಾಳುವ 03 ಮೊಬೈಲು ಹಾಗೂ ನಗದು ಹಣ 30,300-00 ರೂಗಳನ್ನು ಈಗೆ ಒಟ್ಟು ರೂ. 74,300-00 ರೂ ಬೆಲೆಬಾಳುವುದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ಫಿರ್ಯಾದಿ ಮೇಲಿಂದ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 06/2018 ಕಲಂ 380 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

ಸದರಿ ಪ್ರಕರಣದಲ್ಲಿಯ ಆರೋಪಿತರ ಪತ್ತೆ ಕುರಿತು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳರವರಾದ     ಡಾ:: ಶ್ರೀ ಅನೂಪ್ ಶಟ್ಟಿ, .ಪಿ.ಎಸ್. ಹಾಗೂ ಮಾನ್ಯ ಡಿ.ಎಸ್.ಪಿ. ಗಂಗಾವತಿರವರಾದ ಶ್ರೀ ಸಂತೋಷ .ಬಿ. ಬನ್ನಟ್ಟಿ, ಕೆ.ಎಸ್.ಪಿ.ಎಸ್. ರವರ ಮಾರ್ಗದರ್ಶನದಲ್ಲಿ ಗಂಗಾವತಿ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್  ಶ್ರೀ ರಾಜಕುಮಾರ ವಾಜಂತ್ರಿ ಹಾಗೂ ಸಿಬ್ಬಂದಿಯವರಾದ ಕಾಮಣ್ಣ ಎ.ಎಸ್.ಐ, ಅನೀಲಕುಮಾರ, ಚಿರಂಜೀವಿ, ವಿಶ್ವನಾಥ, ಮಂಜಪ್ಪ, ಪ್ರಭಾಕರ, ರಾಜೇಶಗೌಳಿ ರವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು ಇತ್ತು. ಸದರಿ ತಂಡವು ಪ್ರಕರಣದಲ್ಲಿ ಪತ್ತೆ ಕಾರ್ಯ ಮಾಡುತ್ತಿರುವಾಗ ಇಂದು ದಿನಾಂಕ 11-01-2018 ಬಾತ್ಮಿ ಸಂಗ್ರಹಿಸಿ ಬೆಳಗ್ಗೆ 11-30 ಗಂಟೆಗೆ ವಡ್ಡರಹಟ್ಟಿ ಆರಾಳ್ ರಸ್ತೆಯಲ್ಲಿ ಆರೋಪಿತರಾದ (01) ಶಿವಾನಂದ ತಂದೆ ಕೇಶವ ರಾಗಲಪರ್ವಿ, ವಯಾ: 22 ವರ್ಷ, ಜಾ: ವಾಲ್ಮೀಕಿ, ಉ: ಫೋಟೊ ಗ್ರಾಫರ್, ಸಾ; ಸಂಗಮೇಶ್ವರ ಕ್ಯಾಂಪ್ ಗಂಗಾವತಿ. (02) ರಮೇಶ ತಂದೆ ಭೀಮಪ್ಪ ಗುಡ್ಡೇಕಲ್, ವಯಾ: 20 ವರ್ಷ, ಜಾ: ವಾಲ್ಮೀಕಿ, ಉ: ಟೈಲ್ಸ್ ಕೆಲಸ, ಸಾ; ಸಿದ್ದಿಕೇರಿ ತಾ: ಗಂಗಾವತಿ. ಇವರನ್ನು ದಸ್ತಗಿರಿ ಮಾಡಿ ಆರೋಪಿತರಿಂದ ನಗದು ಹಣ ರೂ. 30,300-00 ಮತ್ತು ರೂ.44,000-0 ರೂ ಬೆಲೆ ಬಾಳುವ 03 ಮೋಬೈಲ್ ಗಳನ್ನು ಈಗೆ ಒಟ್ಟು 74,300-00- ಬೆಲೆ ಬಾಳುವುದನ್ನು ಪ್ರಕರಣ ದಾಖಲಾದ 24 ಗಂಟೆಗೆಳಲ್ಲಿ ಜಪ್ತಿ ಪಡಿಸಿದ್ದು ಇರುತ್ತದೆ. ತಂಡದ ಕಾರ್ಯವನ್ನು ಮೇಲಾಧಿಕಾರಿಗಳು ಶ್ಲಾಘಿಸಿದ್ದಾರೆ
 

0 comments:

 
Will Smith Visitors
Since 01/02/2008