1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 77/2018 ಕಲಂ. 279, 337, 338, 304(ಎ) IPC ಮತ್ತು 187 IMV Act.
ದಿ: 16-02-2018 ರಂದು ಸಂಜೆ 7-30 ಗಂಟೆಗೆ ಫಿರ್ಯಾದಿದಾರರು
ಒಣಬಳ್ಳಾರಿ ಗ್ರಾಮದಿಂದಾ ತಮ್ಮ ಅಣ್ಣ ಗವಿಸಿದ್ದಪ್ಪ ಹಡಪದ ಇವರ ಹೆಂಡತಿ ಶೃತಿ ಇವರಿಗೆ ಹೊಸತಾಗಿ
ಮೊದಲು ತಮ್ಮ [ಗಂಡನ] ಮನೆಗೆ ನಡೆಯಲು ಅಂತಾ ಕರೆದುಕೊಂಡು ಚಾಲಕ ಮೈಲಾರಿ ಸಾ: ಸಂಗಾಪೂರ ಇವರ ಹೊಸ
ಅಪ್ಪೆ ಗೂಡ್ಸ ದಲ್ಲಿ ಕುಳಿತುಕೊಂಡು ಮಾರ್ಗದ ಕೊಪ್ಪಳ-ಕುಷ್ಟಗಿ ರಸ್ತೆಯ ಇರಕಲಗಡಾ ದಾಟಿ ಹಟ್ಟಿ
ಕ್ರಾಸ್ ಸಮೀಪ ತಮ್ಮ ವಾಹನದ ಚಾಲಕನು ರಸ್ತೆಯ ಬದಿಯಲ್ಲಿ ಓಡಿಸಿಕೊಂಡು ಹೊರಟಿದ್ದಾಗ, ಅದೇ
ಸಮಯಕ್ಕೆ ಹಿಂದಿನಿಂದ ಬೊಲೆರೋ ಪಿಕಪ್ ನಂ: ಕೆಎ-37/ಎ-8222 ನೇದ್ದರ ಚಾಲಕನು ತನ್ನ ವಾಹನವನ್ನು
ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸುತ್ತಾ
ಫಿರ್ಯಾದಿತರ ವಾಹನದ ನಿಗದಿತ ಅಂತರ ಕಾಪಾಡದೇ ಓವರ್ ಟೇಕ್ ಮಾಡಿಕೊಂಡು ಬಂದು ಫಿರ್ಯಾದಿಯ ಅಪ್ಪೆ
ವಾಹನಕ್ಕೆ ಟಕ್ಕರ ಕೊಟ್ಟು ಅಪಘಾತ ಮಾಡಿ ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಚಾಲಕನು ಓಡಿ
ಹೋಗಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ 14 ಜನರು ಗಾಯಗೊಂಡಿದ್ದು ಅಪ್ಪೆ ವಾಹನದಲ್ಲಿದ್ದ ಪಾಲಿಕೆಮ್ಮ ತಂದೆ ಗವಿಸಿದ್ದಪ್ಪ
ಹಡಪದ. ವಯ: 6 ವರ್ಷ, ಸಾ: ಒಣಬಳ್ಳಾರಿ. ಇವಳಿಗೆ ತಲೆಗೆ ತೀವ್ರ ಗಾಯವಾಗಿದ್ದರಿಂದ ಸ್ಥಳದಲ್ಲಿಯೇ
ಮೃತಪಟ್ಟಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ
ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 40/2018
ಕಲಂ. 143, 147, 395, 323, 504 ಸಹಿತ 149 ಐ.ಪಿ.ಸಿ ಮತ್ತು 3(1)(10)
ಎಸ್.ಸಿ/ಎಸ್.ಟಿ. ಕಾಯ್ದೆ 1989.
ದಿನಾಂಕ:- 16-02-2018 ರಂದು
ರಾತ್ರಿ 9:30 ಗಂಟೆಗೆ ಫಿರ್ಯಾದಿದಾರರಾದ ಲಕ್ಷ್ಮಣ ತಂದೆ ಯಮನಪ್ಪ ಭೋವಿ ವಯಸ್ಸು
33, ಜಾ. ಬೋವಿ ಸಾ. ಕೆಸರಹಟ್ಟಿ, ಇವರು ದೂರು ನೀಡಿದ್ದು ಮುಂಜಾನೆ ಸುಮಾರು 10-00 ಗಂಟೆಗೆ ನಮ್ಮ
ಊರು ಕೆಸರಹಟ್ಟಿ ಗ್ರಾಮದ ರೋಡಿನಲ್ಲಿ ನಿಂತುಕೊಂಡಿದ್ದಾಗ, ಆಗ ನನ್ನ ಹತ್ತಿರ ಬಂದ ಲಿಂಗಾಯತ ಜನಾಂಗದ
(1) ಮಂಜುನಾಥ ತಂದೆ ಮಲ್ಲಿಕಾರ್ಜುನ ಗುಡೂರ ಎಂಬಾತ ಎನಲೇ ವಿಡಿಯೋ ಮಾಡುತ್ತಿಯಾ ವಡ್ಡ ಸೂಳೇಮಗ ನಿನ್ನನ್ನು
ಒದ್ದು ಬಿಡತಿನಿ ಎಂದು ಕೈಯಿಂದ ನನ್ನ ಮುಖಕ್ಕೆ ಹೊಡೆದನು. ಇತರೆ 10 ಜನರು ಅವನೊಂದಿಗೆ ಸೇರಿ ನನಗೆ
ಹೊಡೆ ಬಡಿ ಮಾಡಿದರು, ಆಗ ಜಗಳ ಬಿಡಿಸಲು ಬಂದ ನನ್ನ ತಂದೆ ಯಮನಪ್ಪ ಇವರಿಗೆ ಹೊಡೆದರು. ಮೇಲೆ ತೋರಿಸಿರುವ
ಆರೋಪಿತರೆಲ್ಲರೂ ಲೇ ವಡ್ಡ ಸೂಳೆ ಮಕ್ಕಳ ನಿಮ್ಮನ್ನು ಊರು ಬಿಟ್ಟು ಓಡಿಸುತ್ತೇವೆ, ಎಂದು ಜಾತಿ ನಿಂದನೇ
ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ. 41/2018 ಕಲಂ. 143, 147,
148, 341, 395, 323, 504, 506 ಸಹಿತ 149 ಐ.ಪಿ.ಸಿ:
ದಿನಾಂಕ:- 16-02-2018 ರಂದು
ರಾತ್ರಿ 10:45 ಗಂಟೆಗೆ ಫಿರ್ಯಾದಿದಾರರಾದ ಶರಣಪ್ಪ ತಂದೆ ಮಲ್ಲಿಕಾರ್ಜುನ ಗುಡೂರು, 42 ವರ್ಷ, ಇವರು ದೂರು ನೀಡಿದ್ದು ಮುಂಜಾನೆ ಸುಮಾರು
10-00 ಗಂಟೆಯ ಸುಮಾರಿಗೆ ನಾನು ಕೆಸರಹಟ್ಟಿ ಗ್ರಾಮದ ಶಾಲೆಯ ಮುಂದುಗಡೆ ನಿಂತುಕೊಂಡಿದ್ದಾಗ, ನಮ್ಮ
ಗ್ರಾಮದ ಮೆಹಬೂಬ ಸಾಬ ಹಾಗೂ ಭೀಮ ತಂದೆ ಯಂಕರೆಡ್ಡಿ ಲಾಯದುಣಸಿ ಇಬ್ಬರೂ ಹಣಕಾಸಿನ ವಿಷಯಕ್ಕೆ ಜಗಳ ಮಾಡುತ್ತಿದ್ದಾಗ
ನಮ್ಮ ಗ್ರಾಮದ (1) ವಡ್ಡರ ಲಕ್ಷ್ಮಣ ತಂದೆ ಯಮನಪ್ಪ ಈತನು ಅಲ್ಲಿಗೆ ಬಂದು ಲೇ ಲಿಂಗಾಯತ ಸೂಳೇ ಮಕ್ಕಳದು
ಜಾಸ್ತಿಯಾಗಿದೆ ಇನ್ನು ಮೇಲೆ ಕೇಸರಹಟ್ಟಿ ಗ್ರಾಮದಲ್ಲಿ ಈ ಸುಳೇಮಕ್ಕಳದು ನಡೆಯಲು ಬಿಡಬಾರದು ನಮ್ಮ
ಜಾತಿಯ ತಂಗಡಗಿ ಹಾಗೂ ನಮ್ಮ ಜಾತಿಯ ಅನ್ಸಾರಿ ಶಾಸಕರಿದ್ದು ಎಲ್ಲಾ ಅಧಿಕಾರ ನಮ್ಮಲ್ಲಿ ಇದ್ದು, ಹಿಂದೂ
ಮುಸ್ಲೀಂರ ಜಗಳ ಹಚ್ಚಿ ಊರಲ್ಲಿ ಬಣ ಮಾಡಿದರೆ ಈ ಸೂಳೇಮಕ್ಕಳ ಸೊಕ್ಕು ಮುರಿಯಬಹುದು ಅಂತಾ ಮಹಿಬೂಬಸಾಬನಿಗೆ
ಹೇಳುತ್ತಿದ್ದಾಗ ಮತ್ತು ಅವರ ಜಗಳ ಮಾಡುವುದನ್ನು ಮೊಬೈಲ್ ಮೂಲಕ ಸೆರೆ ಹಿಡಿಯಲು ಪ್ರಯತ್ನಿಸಿದಾಗ ನಾನು
ನಮ್ಮ ಗ್ರಾಮದಲ್ಲಿ ಶಾಂತಿಯಿಂದ ನಾವು ಬಾಳುವೆ ಮಾಡುತ್ತಿದ್ದು, ನೀನು ಯಾಕೆ ಈ ರೀತಿ ಜಗಳ ಹಚ್ಚುವ
ಮಾತುಗಳನ್ನು ಆಡುತ್ತೀಯಾ ಎಂದು ಲಕ್ಷ್ಮಣನಿಗೆ ಹೇಳಿದಾಗ ಆತನು ನನಗೆ ಲೇ ಸೂಳೇ ಮಗನೇ ನೀನು ಆ ಕಡೆ
ಬಣದ ವ್ಯಕ್ತಿಯಾಗಿ ಮಾತಾಡುತ್ತೀಯಾ ಎಂದು ನನಗೆ ಬೈಯ್ದು ನನ್ನನ್ನು ಹೊಡೆಯಲು ಬಂದಾಗ ನಾನು ಸುಮ್ಮನಗೆ
ನನ್ನ ಮನೆಯ ಕಡೆಗೆ ಹೊರಟಾಗ ದಾರಿಯಲ್ಲಿ ಬಾವಿಯ ಹತ್ತಿರ ಬಂದಾಗ ಲಕ್ಷ್ಮಣ ಈತನು ತನ್ನ ಿತರೆ 15 ಸಹಚರರೊಂದಿಗೆ
ಬಾಯಿ ಮಾಡುತ್ತಾ ಬೈಯ್ಯುತ್ತಾ ಏಕಾಏಕಿಯಾಗಿ ನನ್ನ ಹತ್ತಿರ ಓಡೋಡಿ ಬಂದು ನನ್ನನ್ನು ಹಿಡಿದುಕೊಂಡು
ಕೈಗಳಿಂದ ಹೊಡಿ-ಬಡಿ ಮಾಡಿದ್ದು, ಇದರಿಂದ ನನ್ನ ಬಲಗಾಲಿಗೆ ಗಾಯವಾಗಿದ್ದು, ಅವರು ಲೇ ಸೂಳೇ ಮಗನೇ ನಮ್ಮ
ತಂಟೆಗೆ ಬಂದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲಾ ಎಂದು ಬಾಯಿ ಮಾಡುತ್ತಾ ಅವಾಚ್ಯ ಶಬ್ದಗಳಿಂದ
ಬೈಯ್ಯುತ್ತಾ ಲಕ್ಷ್ಮಣ ಈತನು ನನ್ನ ಕೊರಳಲ್ಲಿ ಇದ್ದ 3 ತೊಲೆ ಬಂಗಾರದ ಸರವನ್ನು ಕಿತ್ತುಕೊಂಡನು. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment