ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 118/2014
ಕಲಂ. 15(ಎ),32(3) ಕೆ.ಇ.ಕಾಯ್ದೆ:
ದಿನಾಂಕ 13-11-2014 ರಂದು ಸಂಜೆ 5-30 ಗಂಟೆಗೆ ಮಾನ್ಯ
ಪಿ.ಎಸ್.ಐ ಸಾಹೇಬರು ತಮ್ಮ ಒಂದು ವರದಿ ಮತ್ತು ಪಂಚನಾಮೆ ಸಲ್ಲಿಸಿದ್ದು ಅದರಲ್ಲಿ ಇಂದು ದಿನಾಂಕ
ಮದ್ಯಾಹ್ನ 3-00 ಗಂಟೆ ಸುಮಾರಿಗೆ ಶಿರಗುಂಪಾಗ್ರಾಮದ ಹತ್ತಿರ
ಇರುವ ಬಿಸ್ಮಿಲ್ಲಾ ಹೋಟೇದಲ್ಲಿ ಅದರ ಮಾಲೀಕರಾದ ಅಕ್ಬರಸಾಬ ಈತನು ಊಟಕ್ಕೆ ಬರುವ ಜನರಿಗೆ
ಮದ್ಯಸೇವನೆ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾನೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಪಂಚರೊಂದಿಗೆ
ಮತ್ತು ಸಿಬ್ಬಂದಿಯವರಾದ ಹೆಚ್.ಸಿ 108 ಪಿ.ಸಿ 276,187,381 ರವರೊಂದಿಗೆ ಸರಕಾರಿ ಜೀಪ ನಂ ಕೆಎ 37/ಜಿ-292 ನೇದ್ದರಲ್ಲಿ ಮದ್ಯಾಹ್ನ 3-15 ಗಂಟೆಸುಮಾರಿಗೆ ಹೊರಟು ಶಿರಗುಂಪಿ ಗ್ರಾಮದ ಹೊಟೇಲ್ ಹತ್ತಿರ ಜೀಪನ್ನು ನಿಲ್ಲಿಸಿ ವಾಚ್
ಮಾಡಲು ಅಲ್ಲಿ ಬಿಸ್ಮಿಲ್ಲಾ ಹೋಟೆಲದಲ್ಲಿ ಜನರು ಕುಳಿತಿದ್ದು ಅವರ ಮುಂದೆ ಇರುವ ಟೇಬಲ್ಲಮೇಲೆ
ಮದ್ಯದ ಬಾಟಲಿಗಳಿದ್ದು ಸಿಬ್ಬಂದಿಯವರೊಂದಿಗೆ ಹೋಗಿ ಧಾಳಿ ಮಾಡಲು ಟೇಬಲ್ ಮುಂದೆ ಕುಳಿತಿದ್ದ ಜನರು
ಓಡಿ ಹೋಗಿದ್ದು ಅದರ ಮಾಲಕಿನಿಗೆ ವಿಚಾರಿಸಲು ಸದರಿಯವನು ತನ್ನ ಹೆಸರು ಅಕ್ಬರಸಾಬ ತಂದೆ ಹುಸೇನಸಾಬ
ಟಾಕೇದಾರ ವಯ: 50 ಜಾ: ಮುಸ್ಲಿಂ ಉ: ಬಿಸ್ಮಿಲ್ಲಾ ಹೋಟೆಲ್
ಮಾಲೀಕರು ಸಾಳ ಶಿರಗುಂಪಿ ಅಂತಾ ತಿಳಿಸಿದನು ಸದರಿಯವನಿಗೆ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುವ
ಕುರಿತು ಲೈಸೆನ್ಸ್ ಪರ್ಮಿಟ್ ಬಗ್ಗೆ ವಿಚಾರಿಸಲು ತನ್ನಲ್ಲಿ ಯಾವದೇ ಪರ್ಮಿಟ್ ಇರುವದಿಲ್ಲಾ ಅಂತಾ
ತಿಳಿಸಿದ್ದು ಟೇಬಲ್ ಮೇಲೆ ಇದ್ದ ಮದ್ಯದ ಬಾಟಲಿಗಳನ್ನು ಪರಿಶೀಲಿಸಲಾಗಿ ಅದರಲ್ಲಿ ಒಂದು
ವಿಂಡ್ಸರ್ ಕಂಪನಿಯ 2 ತುಂಬಿದ ಮದ್ಯದ ಗಾಜಿನ ಕ್ವಾಟರ್
ಬಾಟಲಿಗಳಿದ್ದು ಒಂದೊಂದು ಬಾಟಲಿಯಲ್ಲಿ 180 ಎಂ.ಎಲ್ ದ ಅಂ.ಕಿ 96=00 ರೂ ಇರುತ್ತದೆ. ಇನ್ನೊಂದು ಬಾಟಲಿ ಪರಿಶೀಲಿಸಲು ಅದು ಓಟಿ ಕಂಪನಿಯ
ಎರಡು ರಟ್ಟಿನ ಪ್ಯಾಕ್ ಇದ್ದು ಒಂದೊಂದು ರಟ್ಟಿನ ಪ್ಯಾಕದಲ್ಲಿ 180 ಎಂ.ಎಲ್ ದ ಮದ್ಯ ತುಂಬಿದ್ದು ಅಂ.ಕಿ 113=00 ರೂ ಇರುತ್ತದೆ
ಸದರಿಯವುಗಳನ್ನು ಪಿ.ಎಸ್.ಐ ರವರು ಪಂಚರ ಸಮಕ್ಷಮ ಜಪ್ತು ಮಾಡಿದ್ದು ಇರುತ್ತದೆ.
0 comments:
Post a Comment