ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ತಾವರಗೇರಾ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ
ನಂ. 100/2014 ಕಲಂ. 302 ಐ.ಪಿ.ಸಿ.:.
ದಿನಾಂಕ: 13-11-2014 ರಂದು ಮುಂಜಾನೆ 10-30 ಗಂಟೆಗೆ ಫಿರ್ಯಾದಿ ಹನುಮಂತ ತಂದೆ ದ್ಯಾಮಪ್ಪ ಅಂಚಿ ವಯ: 48 ವರ್ಷ, ಜಾತಿ-ಮಾದರ, ಉ:ಕೂಲಿ ಸಾ: ತಾವರಗೇರಾ.
ರವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಸಲ್ಲಿಸಿದ್ದು ಅದರಲ್ಲಿ ತಮ್ಮ ತಂದೆಗೆ ನಾಲ್ಕು ಜನ
ಮಕ್ಕಳಿದ್ದು, ಅವರಲ್ಲಿ ನರಿಯಪ್ಪ ವಯ: 50 ವರ್ಷ ಈತನು ಹಿರಿಯ ಮಗ ಇರುತ್ತಾನೆ. ಸದರಿ ನರಿಯಪ್ಪನಿಗೆ ಈಗ್ಗೆ
ಸುಮಾರು 20 ವರ್ಷದ ಹಿಂದೆ ಹನಮವ್ವಳೊಂದಿಗೆ ಮದುವೆಯಾಗಿದ್ದು ಆಕೆಗೆ ಮೈಯಲ್ಲಿ ಆರಾಮ ಇರಲಾರದ್ದರಿಂದ
ಸುಮಾರು 2 ವರ್ಷದ ಹಿಂದೆ ಮೃತಪಟ್ಟಿದ್ದು ಇರುತ್ತದೆ. ತನ್ನ ಅಣ್ಣ ನರಿಯಪ್ಪನು ದನದ ಸಂತೆಗಳಿಗೆ ಹೋಗಿ
ದನದ ವ್ಯಾಪಾರ ಮಾಡುತ್ತಿದ್ದನು. ನಿನ್ನೆ ದಿನಾಂಕ: 12-11-2014 ರಂದು ಕೌಡೇಫಿರ್
ಹಬ್ಬ ಇರುವುದರಿಂದ ಅಲಾಯಿ ಆಡುವ ಕುರಿತು ರಾತ್ರಿ 10-00 ಗಂಟೆ ಸುಮಾರಿಗೆ ತನ್ನ ಅಣ್ಣ ನರಿಯಪ್ಪನು
ಅಲಾಯಿ ಆಡಲು ಬಸವಣ್ಣ ಕ್ಯಾಂಪಿಗೆ ಹೋದನು. ರಾತ್ರಿ ವಾಪಾಸು ಮನೆಗೆ ಬರಲ್ಲಿಲ್ಲ. ಇಂದು ಮುಂಜಾನೆ 8-00 ಗಂಟೆ ಸುಮಾರಿಗೆ ತನ್ನ ಅಣ್ಣ
ನರಿಯಪ್ಪನಿಗೆ ಬಸವಣ್ಣ ಕ್ಯಾಂಪಿನಲ್ಲಿರುವ ಸರೋಜಮ್ಮ ಗೊಂದಳಿರವರು ಕಟ್ಟಿಸುತ್ತಿರುವ ಹೊಸ
ಮನೆಯಲ್ಲಿ ಮಖದ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವರು ಅಂತಾ ತಿಳಿದು ತಾನು ಹಾಗೂ ತನ್ನ
ಅಣ್ಣ ದುರುಗಪ್ಪ ಕೂಡಿ ಹೋಗಿ ನೋಡಲಾಗಿ ತನ್ನ ಅಣ್ಣ ನರಿಯಪ್ಪನಿಗೆ ಮುಖದ ಮೇಲೆ ಕಲ್ಲು ಎತ್ತಿ
ಹಾಕಿದ್ದರಿಂದ ಮುಖ ಚಪ್ಪಟೆಯಾಗಿ ರಕ್ತ ಸೋರಿ ಸತ್ತಿದ್ದನು. ತನ್ನ ಅಣ್ಣ ನರಿಯಪ್ಪನು ನಿನ್ನೆ
ಬಸವಣ್ಣ ಕ್ಯಾಂಪಿಗೆ ಕೌಡಿಫೀರ್ ಹಬ್ಬದ ನಿಮಿತ್ಯವಾಗಿ ಅಲಾಯಿ ಆಡಲು ಹೋದಾಗ ಯಾರೋ ದುಷ್ಕರ್ಮಿಗಳು
ಯಾವುದೋ ದುರುದ್ದೇಶದಿಂದ ಮುಖದ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದು ಇರುತ್ತದೆ.
0 comments:
Post a Comment