Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, February 22, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 10/2015 ಕಲಂ. 279, 337, 338, 304(ಎ) ಐ.ಪಿ.ಸಿ:.
ಫೀರ್ಯಾದಿದಾರರು ದಿನಾಂಕ: 21-02-2015 ರಂದು ರಾತ್ರಿ 09-00 ಗಂಟೆಗೆ ತಮ್ಮ ಮನೆಯಲ್ಲಿದ್ದಾಗ ತಮ್ಮೂರ ಶ್ರೀ ಶ್ರೀಕಾಂತಪ್ಪ ಹರಿಹಜನ ಈತನು ಬಂದು ನಿಮ್ಮ ಕಾಕಾ (ಚಿಕ್ಕಪ್ಪ) ರಮೇಶ ಮೋಡಿಕಾರ ಹಾಗೂ ಇನ್ನೊಬ್ಬ ರಸ್ತೆ ಅಪಘಾತವಾಗಿ ಬಿದ್ದಿದ್ದು ಅಂತಾ ಹೇಳಿದ್ದು ಫೀರ್ಯಾದಿದಾರರು ಗಾಭರಿಯಾಗಿ ಶ್ರೀ ಕಾಂತರವರನ್ನು ಕರೆದುಕೊಂಡು ಚಿಕ್ಕಗೊಣ್ಣಾಗರ ಸೀಮಾದ ಚಿಕ್ಕಗೊಣ್ಣಾಗರದಿಂದ ಗಜೇಂದ್ರಗಡ ರಸ್ತೆಯ ಹಿರೇಹಳ್ಳದ ಹತ್ತಿರ ಬಂದು ನೋಡಲು ಗಜೇಂದ್ರಗಡ ಕಡೆಗೆ ಮೋಟಾರ್ ಸೈಕಲ್ ಸ್ಕೂಟಿ ಮುಖಾಮುಖಿ ಡಿಕ್ಕಿಯಾಗಿ ಬಿದ್ದಿದ್ದು ಅಲ್ಲಿ ನೋಡಲು ಫಿರ್ಯಾದಿ ಚಿಕ್ಕಪ್ಪ ರಮೇಶ ಮತ್ತು ರಮೇಶ ಕಾತ್ರಾಳರವರ ಬಿದ್ದಿದ್ದು ತಮ್ಮ ಕಾಕಾನಿಗೆ ನೋಡಲು ತಲೆಯ ಹಣೆ ಪಟ್ಟಿಗೆ ಭಾರಿ ಕಚ್ಚು ಬಿದ್ದು ರಕ್ತ ಗಾಯವಾಗಿದ್ದು ಭಾರಿ ರಕ್ತ ಸೋರುತ್ತಿದ್ದು ಟುಕು ಟುಕು ಅಂತಿದ್ದು ರಮೇಶ ಕಾತ್ರಾಳ ಈತನಿಗೆ ನೋಡಲು ತಲೆಗೆ ಮತ್ತು ಕಿವಿಗೆ ಭಾರಿ ರಕ್ತ ಗಾಯವಾಗಿದ್ದು ಹಾಗೂ ಅಲ್ಲೆ ಇನ್ನೊಬ್ಬ ಮನುಷ್ಯ ಬಿದ್ದಿದ್ದು ಆತನ ಹೆಸರು ವಿಚಾರಿಸಲು ಪರಸಪ್ಪ @ ಪರಶುರಾಮ ತಂದೆ ಯಮನಪ್ಪ ಜೋಗಿನ ಸಾ: ಹಿರೇಗೊಣ್ಣಾಗರ ಅಂತಾ ಗೊತ್ತಾಗಿದ್ದು ಆತನಿಗೂ ಅಪಘಾತದಿಂದ ತಲೆಗೆ ಮತ್ತು ಅಲ್ಲಲ್ಲಿ ರಕ್ತ ಗಾಯವಾಗಿದ್ದು ಇರುತ್ತದೆ. ಸ್ಥಳದಲ್ಲಿದ್ದ ಅಪಘಾತದ ಮೋಟಾರ್ ಸೈಕಲ್ ನೋಡಲು ಒಂದು ಹಿರೋ ಹೊಂಡಾ ಮೋಟಾರ್ ಸೈಕಲ್ ನಂ-.ಕೆ.ಎ-34 ವಿ-2239 ಅಂತಾ ಇದ್ದು ಅಪಘಾತದಿಂದ ತಿಳಿದು ಬಂದಿದ್ದೇನೆಂದರೆ ರಮೇಶ ಕಾತ್ರಾಳ ಈತನನ್ನು ಹಿಂದೆ ಕೂಡಿಸಿಕೊಂಡು ಗಜೇಂದ್ರಗಡದಿಂದ ಚಿಕ್ಕಗೊಣ್ಣಾಗರಗೆ ಬರುವಾಗ ಹಾಗೂ ಪರಶುರಾಮನು ತನ್ನ ಸ್ಕೂಟಿ ಮೋಟಾರ್ ನಂ-ಕೆ.ಎ-19 ಯು-8848 ನೇದ್ದನ್ನು ತೆಗೆದುಕೊಂಡು ಹೊಲಕ್ಕೆ ಹೋಗುವಾಗ ಇಬ್ಬರೂ ತಮ್ಮ ಮೋಟಾರ್ ಸೈಕಲಗಳನ್ನು ಅತೀವೇಗ ಹಾಗೂ ಆಲಕ್ಷ್ಯತದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವಂತೆ ನಡೆಸಿ ಎರಡೂ ವಾಹನಗಳು ಮುಖಾಮುಖಿ ಟಕ್ಕರ ಕೊಟ್ಟು ಅಪಘಾತ ಮಾಡಿದ್ದು ಅದೆ ಅಂತಾ ತಿಳಿಯಿತು. ನಂತರ ಗಾಯಾಳುಗಳಿಗೆ ಇಲಾಜು ಕುರಿತು ಗಜೇಂದ್ರಗಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಅಲ್ಲಿ ವೈಧ್ಯರು ಸದರಿ ರಮೇಶ@ ರಾಮಣ್ಣ ಮೋಡಿಕೇರ ಈತನು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು. ಸದರಿ ಅತೀವೇಗವಾಗಿ ಹಾಗೂ ಆಲಕ್ಷ್ಯತನದಿಂದ ಮೋಟಾರ್ ಸೈಕಲ್ ನಡೆಸಿ ಅಪಘಾರ ಮಾಡಿದ 1] ರಮೇಶ @ ರಾಮಣ್ಣ ತಂದೆ ಮಾರೆಪ್ಪ ಮೋಡಿಕಾರ 2] ಪರಸಪ್ಪ @ ಪರಶುರಾಮ ತಂದೆ ಯಮನಪ್ಪ ಜೋಗಿನ ರವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅದೆ ಅಂತಾ ಮುಂತಾಗಿ ಫಿರ್ಯಾದಿ ಅದೆ.
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 45/2015 ಕಲಂ. 279 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
ದಿನಾಂಕ:- 21-02-2015 ರಂದು ಮಧ್ಯಾಹ್ನ 3:00 ಗಂಟೆಗೆ ಗಂಗಾವತಿ ಉಪವಿಭಾಗ ಆಸ್ಪತ್ರೆಯಿಂದ ಎಂ.ಎಲ್.ಸಿ. ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ದ್ಯಾಮಣ್ಣ ತಂದೆ ಹನುಮಂತಪ್ಪ ಹಾರಾಪೂರು, 40 ವರ್ಷ ಜಾತಿ: ವಾಲ್ಮೀಕಿ ಉ: ಒಕ್ಕಲುತನ ಸಾ: ಹಂಪಾಸದುರ್ಗ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ಇಂದು ದಿನಾಂಕ: 21-02-2015 ರಂದು ಮಧ್ಯಾಹ್ನ 1:00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮೂರ ಶಿವಾನಂದಪ್ಪ ತಂದೆ ಬೀರಪ್ಪ ಲಿಂಗದಹಳ್ಳಿ, 38 ವರ್ಷ ಸಾ: ಹಂಪಾಸದುರ್ಗ ಇಬ್ಬರೂ ಕೂಡಿಕೊಂಡು ಗಂಗಾವತಿಯಿಂದ ವಾಪಸ್ ಹಂಪಾಸದುರ್ಗಕ್ಕೆ ಹೊಸ ಹೋಂಡಾ ಶೈನ್ ಮೋಟಾರ್ ಸೈಕಲ್ ನಲ್ಲಿ ಹೊರಟಿದ್ದೆವು.  ಶಿವಾನಂದಪ್ಪನು ಮೋಟಾರ್ ಸೈಕಲ್ ನಡೆಯಿಸುತ್ತಿದ್ದನು.  ಗಂಗಾವತಿ-ಕೊಪ್ಪಳ ಮುಖ್ಯ ರಸ್ತೆಯ ದಾಸನಾಳ ಬ್ರಿಡ್ಜ್ ಹತ್ತಿರ ನಮ್ಮ ಎದುರುಗಡೆ ಕೊಪ್ಪಳ ಕಡೆಯಿಂದ ಒಂದು ಬಿಳಿ ಬಣ್ಣದ ನಂಬರ್ ಇರಲಾರದ ಟಾಟಾ ಮ್ಯಾಜಿಕ್ ವಾಹನ ಚಾಲಕನು ತನ್ನ ವಾಹನವನ್ನು ಅತೀ ವೇಗವಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ರಸ್ತೆಯ ಎಡಗಡೆ ನಿಧಾನವಾಗಿ ಹೊರಟಿದ್ದ ನಮಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿ ವಾಹನ ಬಿಟ್ಟು ಓಡಿ ಹೋದನು.  ಇದರಿಂದ ನನ್ನ ಬಲಗಾಲ ಮೊಣಕಾಲಿಗೆ, ಬಲ ಭುಜಕ್ಕೆ ಒಳಪೆಟ್ಟಾಗಿ, ಬಲ ಚಪ್ಪೆಗೆ ಬಲವಾದ ಒಳಪೆಟ್ಟಾಯಿತು.  ಶಿವಾನಂದಪ್ಪನಿಗೆ ಎಡಗಾಲ ಮೀನಗಂಡದ ಹತ್ತಿರ ಮತ್ತು ಬಲಗಾಲ ಹಿಂಬಡದ ಹತ್ತಿರ ಭಾರಿ ರಕ್ತಗಾಯವಾಯಿತು. ನಂತರ ನಾವು ಯಾವುದೋ ವಾಹನದಲ್ಲಿ ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ಬಂದು ದಾಖಲಾಗಿರುತ್ತೇವೆ.  ಕಾರಣ ಟಾಟಾ ಮ್ಯಾಜಿಕ ವಾಹನ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ" ಅಂತಾ ಮುಂತಾಗಿ ನೀಡಿದ ಹೇಳಿಕೆ ಪಡೆದುಕೊಂಡು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು.
3) ಬೇವೂರ ಪೊಲೀಸ್ ಠಾಣಾ ಗುನ್ನೆ ನಂ. 8/2015  ಕಲಂ 279, 337, 338 ಐ.ಪಿ.ಸಿ:.
¢£ÁAPÀ:20.02.2015 gÀAzÀÄ ¸ÁAiÀÄAPÁ® 7:30 UÀAmÉ ¸ÀĪÀiÁjUÉ G¥À஢¤ß ¤¯ÉÆUÀ¯ï gÀ¸ÉÛAiÀÄ ªÉÄÃ¯É ¤¯ÉÆÃUÀ¯ï ¹ÃªÀiÁzÀ°è DgÉÆævÀ£ÀÄ vÁ£ÀÄ £ÀqɸÀÄwÛzÀÝ ªÉÆÃlgÀ ¸ÉÊPÀ® £ÀA PÉJ-29 J¸ï-2858 £ÉzÀÝgÀ°è ¦AiÀiÁ𢠪ÀÄAdÄ£ÁxÀ ºÁUÀÆ ºÀ£ÀªÀÄAvÀ¥Àà JA§ªÀgÀ£ÀÄß vÀ£Àß ªÉÆÃlgÀ ¸ÉÊPÀ® ªÉÄÃ¯É PÀÄr¹PÉÆAqÀÄ »gÉêÀAPÀ®PÀÄAl PÀqɬÄAzÀ ¤¯ÉÆUÀ¯ï PÀqÉUÉ Cwà ªÉÃUÀªÁV ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §A¢zÀÝjAzÀ ªÉÆÃlgÀ ¸ÉÊPÀ® ªÉÄÃ¯É ¤AiÀÄAvÀæt ¸Á¢¸ÀzÉ gÀ¸ÉÛAiÀÄ ªÉÄÃ¯É ¹ÌÃqï ªÀiÁr C¥ÀWÁvÀ ªÀiÁrzÀÝjAzÀ ¸ÀzÀj C¥ÀWÁvÀzÀ°è ªÉÆÃlgÀ ¸ÉÊPÀ® ªÉÄÃ¯É PÀĽwzÀÝ ¦AiÀiÁð¢zÁgÀ¤UÉ ºÁUÀÆ ºÀ£ÀªÀÄAvÀ¥Àà EªÀjUÉ ªÀÄvÀÄÛ DgÉÆævÀ¤UÉ ¸ÁzÀ ªÀÄvÀÄÛ ¨sÁj ¸ÀégÀÆ¥ÀzÀ gÀPÀÛ UÁAiÀÄ, M¼À¥ÉmÁÖVzÀÄÝ EgÀÄvÀÛzÉ.
4)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ. 35/2015  ಕಲಂ 279, 337, 338 ಐ.ಪಿ.ಸಿ:.  
ದಿನಾಂಕ 20.02.2015 ರಂದು ಬೆಳಿಗ್ಗೆ 6:15 ಗಂಟೆಯ ಸುಮಾರಿಗೆ ಕೊಪ್ಪಳ-ಕುಷ್ಟಗಿ ರಸ್ತೆ ಫೀನಿಕ್ಸ ಪೆಟ್ರೋಲಬಂಕ ಮುಂದಿನ ರಸ್ತೆಯ ಮೇಲೆ ಆರೋಪಿತನಾದ ಹನುಮೇಶ ತಂದೆ ರಾಮಣ್ಣ ಸುಣಗಾರ ತನ್ನ ಮೋ.ಸೈ ನಂ ಕೆ.-35/ಆರ್-5988 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರನಾದ ಪರಶುರಾಮ ಇವರ ತಮ್ಮ ಮಾರುತಿಗೆ ಟಕ್ಕರಕೊಟ್ಟು ಅಪಘಾತ ಮಾಡಿದ್ದರಿಂದ ಸಾದಾ ಹಾಗೂ ಭಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ.
5)  ಗಂಗಾವತಿ ನಗರ ಪೊಲೀಸ್ ಠಾಣಾ ಗುನ್ನೆ ನಂ. 40/2015  ಕಲಂ 498(ಎ), 504, 506 ಐ.ಪಿ.ಸಿ:.  
ದಿನಾಂಕ 21-02-2015 ರಂದು ಮಧ್ಯಾಹ್ನ 1-00 ಗಂಟೆಗೆ ಶ್ರೀಮತಿ ತಾರಾಬಾಯಿ ಗಂಡ ಕುಮಾರನಾಯ್ಕ್ ವಯ 27 ವರ್ಷ ಜಾ: ಲಮಾನಿ ಉ: ಸಹ ಶಿಕ್ಷಕಿ ಸಾ: ವಿರುಪಾಪುರ ತಾಂಡಾ, ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ಸನ್ 2007 ನೇ ಸಾಲಿನಲ್ಲಿ ಫಿರ್ಯಾದಿದಾರಳ ವಿವಾಹವು ಆರೋಪಿತನೊಂದಿಗೆ ಆಗಿರುತ್ತದೆ. ವಿವಾಹವಾದ ನಂತರ ಒಂದು ವರ್ಷದವರೆಗೆ ಆರೋಪಿತನು ಫಿರ್ಯಾದಿಯೊಂದಿಗೆ ಅನ್ಯೋನ್ಯವಾಗಿದ್ದು ಫಿರ್ಯಾದಿಗೆ ಒಂದು ಮಗು ಹುಟ್ಟಿದ ನಂತರದಿಂದ  ಆರೋಪಿತನು ಫಿರ್ಯಾದಿಯ ಮೇಲೆ ಸಂಶಯ ಪಡುತ್ತಾ ಈ ಮಗು ಯಾರಿಗೆ ಹುಟ್ಟಿದೆಯೋ ಏನೋ, ಇವರ ಅಪ್ಪ ಬೇರೆ ಇದ್ದಾನೆ ಅಂತಾ ಬೈದಾಡುತ್ತಿದ್ದು ಮತ್ತು ವರದಕ್ಷೀಣೆ ಹಣ ತಂದಿರುವುದಿಲ್ಲವೆಂದು ಹೊಡಿ-ಬಡಿ ಮಾಡುತ್ತಿದ್ದು ಅಲ್ಲದೇ  ದಿನಾಂಕ 20-02-2015 ರಂದು ಬೆಳಗಿನ ಜಾವ 03-00  ಗಂಟೆಯ ಸುಮಾರಿಗೆ  ವಿರುಪಾಪುರ ತಾಂಡಾದಲ್ಲಿರುವ ಮನೆಯಲ್ಲಿ ಫಿರ್ಯಾದಿ ಮತ್ತು ಆರೋಪಿ ಮಲಗಿಕೊಂಡಿರುವಾಗ ಆರೋಪಿತನು ಫಿರ್ಯಾದಿಯ ಎದೆಯ ಮೇಲೆ ಕುಳಿತುಕೊಂಡು ಫಿರ್ಯಾದಿಗೆ  ಲೇ ಬೋಸುಡಿ ಸೂಳೆ ನೀನು ಯಾವ ಸೂಳೆಮಗನೊಂದಿಗೆ ಇದ್ದಿ, ಯಾವ ಮಿಂಡರನ್ನು ಮಾಡುತ್ತಿ ನಿನಗೆ ಇವತ್ತು ಜೀವ ಸಹಿತ ಉಳಿಸುವುದಿಲ್ಲವೆಂದು ಬೈದಾಡುತ್ತಾ ಕುತ್ತಿಗೆ ಹಿಚುಕಿರುತ್ತಾನೆ ಎಂದು ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008