Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, February 23, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಗಂಗಾತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 41/2015 ಕಲಂ. 78(1)(ಎ)(6) ಕೆ.ಪಿ. ಕಾಯ್ದೆ ಸಹಿತ 420 ಐ.ಪಿ.ಸಿ:
ದಿನಾಂಕ 22-02-2015 ರಂದು 11-45 ಎ.ಎಂ.ಕ್ಕೆ ಶ್ರೀ ಉದಯರವಿ ಪಿ.ಎಸ್.ಐ. ಕಾರಟಗಿ ಪೊಲೀಸ್ ಠಾಣೆ ರವರು ಕ್ರೀಕೇಟ್ ಜೂಜಾಟದಲ್ಲಿ ತೊಡಗಿದ ಸೋಮಶೇಖರ ತಂದೆ ಶಿವಪ್ಪ ವಯಾ: 27 ವರ್ಷ, ಜಾ: ಲಿಂಗಾಯತ, ಉ: ಗುಮಾಸ್ತ, ಸಾ: ಮೆಹಬೂಬ ನಗರ ಗಂಗಾವತಿ ಇವನ್ನು ಹಾಜರಪಡಿಸಿ ಸದರಿಯವನ ಮೇಲೆ ಕ್ರಮ ಜರುಗಿಸುವ ಕುರಿತು ತಮ್ಮದೊಂದು ವರದಿಯನ್ನು ಪಂಚನಾಮೆಯೊಂದಿಗೆ ನೀಡಿದ್ದು ಅದರ ಸಾರಂಶವೇನೆಂದರೆ, ಇಂದು ದಿನಾಂಕ: 22-02-2015 ರಂದು ಬೆಳಿಗ್ಗೆ 10-00 ಗಂಟೆಗೆ ಆರೋಪಿತನು ಗಂಗಾವತಿ ನಗರದ ಮಹಿಬೂಬ ನಗರದಲ್ಲಿರುವ ಗೋವಾ ಬೇಕರಿಯ ಹತ್ತಿರ ಭಾರತ ಮತ್ತು ದಕ್ಷಿಣ ಆಪ್ರೀಕಾ ತಂಡಗಳ ನಡುವೆ ನಡೆದ ಕ್ರಿಕೇಟ್ ಆಟದ ಮೇಲೆ ಜೂಜಾಟದಲ್ಲಿ ತೊಡಗಿ ದಕ್ಷಿಣ ಆಪ್ರಿಕಾ ತಂಡ ಪಂದ್ಯ ಗೆದ್ದರೆ 5,000-00 ರೂಗಳನ್ನು ಮತ್ತು ಭಾರತ ಗೆದ್ದರೆ 9,000-00 ಕೊಡುವದಾಗಿ ಜನರಿಗೆ ಒಂದಕ್ಕೆ ದುಪ್ಪಟ್ಟು ಹಣ ಕೊಡುವುದಾಗಿ ನಂಬಿಸಿ ಅವರಿಂದ ಹಣ ಪಡೆದುಕೊಂಡು ಅವರಿಗೆ ಮೋಸ ಮಾಡುತ್ತಿದ್ದರಿಂದ ಸದರಿಯವನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಸದರಿಯವನಿಂದ ಜೂಜಾಟಕ್ಕೆ ಸಂಬಂಧಿಸಿದ 100-00 ರೂ ಹಣ, ಜೂಜಾಟ ಆಡಲು ಬಳಸಿದ ಒಂದು ಸ್ಯಾಮಸಂಗ್ ಮೊಬೈಲ್ ದೊರೆತಿದ್ದು ಇರುತ್ತದೆ ಸದರಿ ಮೊಬೈಲ್ ದಲ್ಲಿ ಅವನು ಜನರಿಗೆ ಮಾತನಾಡಿದ ಬಗ್ಗೆ ಕಾಲ್ ರೆಕಾರ್ಡಿಂಗ್ ಸಹ ಇರುತ್ತದೆ. ಅವನಿಂದ ದೊರೆತ ಹಣ ಮತ್ತು ಮೊಬೈಲ್ ನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯನ್ನು ಬರೆದುಕೊಂಡಿದ್ದು ಇರುತ್ತದೆ.  ಆರೋಪಿತನು ಇಂದು ನಡೆದ ಭಾರತ ಮತ್ತು ದಕ್ಷಿಣ ಆಫ್ರೀಕಾ ತಂಡಗಳ ನಡುವೆ ನಡೆದ ವಿಶ್ವಕಪ್ ಕ್ರಿಕೇಟ್ ನ ಸರಣಿಯ ಕ್ರಿಕೇಟ್ ಆಟದ ಮೇಲೆ ಜೂಜಾಟ ಆಡುತ್ತಾ ಸಾರ್ವಜನಿಕರಿಗೆ ಒಂದಕ್ಕೆ ಐದರಷ್ಟು ಹಣ ಕೊಡುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದರಿಂದ ಸದರಿಯವನ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2)  ಗಂಗಾತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 42/2015 ಕಲಂ. 78(1)(ಎ)(6) ಕೆ.ಪಿ. ಕಾಯ್ದೆ ಸಹಿತ 420 ಐ.ಪಿ.ಸಿ :.
ದಿನಾಂಕ 22-02-2015 ರಂದು 12-00 ಪಿ.ಎಂ.ಕ್ಕೆ ಶ್ರೀ ಈ. ಕಾಳಿಕೃಷ್ಣ, ಪಿ.ಐ. ನಗರ ಪೊಲೀಸ್ ಠಾಣೆ ಗಂಗಾವತಿರವರು ಕ್ರೀಕೇಟ್ ಜೂಜಾಟದಲ್ಲಿ ತೊಡಗಿದ 01] ರಸೂಲ್ ಖಾನ್ @ಮುನ್ನಾ ತಂದೆ ಮೈಬೂಬಖಾನ್,  02] ಇಕ್ಬಾಲ್ ತಂದೆ ಮಹ್ಮದ್ ಅಲಿ, 03] ಸುನಿಲ್ ತಂದೆ ಡಿ. ನಾರಾಯಣರಾವ್ ಎಲ್ಲರೂ ಸಾ: ಗಂಗಾವತಿ ಇವನ್ನು ಹಾಜರಪಡಿಸಿ ಸದರಿಯವನ ಮೇಲೆ ಕ್ರಮ ಜರುಗಿಸುವ ಕುರಿತು ತಮ್ಮದೊಂದು ವರದಿಯನ್ನು ಪಂಚನಾಮೆಯೊಂದಿಗೆ ನೀಡಿದ್ದು ಅದರ ಸಾರಂಶವೇನೆಂದರೆ, ಇಂದು ದಿನಾಂಕ: 22-02-2015 ರಂದು ಬೆಳಿಗ್ಗೆ 10-00 ಗಂಟೆಗೆ ಆರೋಪಿತರು ಗಂಗಾವತಿ ನಗರದ ಎ.ಪಿ.ಎಂ.ಸಿ. ಆವರಣದಲ್ಲಿ ಭಾರತ ಮತ್ತು ದಕ್ಷಿಣ ಆಪ್ರೀಕಾ ತಂಡಗಳ ನಡುವೆ ನಡೆದ ಕ್ರಿಕೇಟ್ ಆಟದ ಮೇಲೆ ಜೂಜಾಟದಲ್ಲಿ ತೊಡಗಿ ದಕ್ಷಿಣ ಆಪ್ರಿಕಾ ತಂಡ ಪಂದ್ಯ ಗೆದ್ದರೆ 1,000-00 ರೂಗಳನ್ನು ಮತ್ತು ಭಾರತ ಗೆದ್ದರೆ 1,800-00 ಕೊಡುವದಾಗಿ ಜನರಿಗೆ ಒಂದಕ್ಕೆ ದುಪ್ಪಟ್ಟು ಹಣ ಕೊಡುವುದಾಗಿ ನಂಬಿಸಿ ಅವರಿಂದ ಹಣ ಪಡೆದುಕೊಂಡು ಅವರಿಗೆ ಮೋಸ ಮಾಡುತ್ತಿದ್ದರಿಂದ ಸದರಿಯವನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಸದರಿಯವನಿಂದ ಜೂಜಾಟಕ್ಕೆ ಸಂಬಂಧಿಸಿದ 11,600-00 ರೂ ಹಣ, ಜೂಜಾಟ ಆಡಲು ಬಳಸಿದ ಮೂರು ಸ್ಯಾಮಸಂಗ್ ಮೊಬೈಲ್ ಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಬರೆದುಕೊಂಡಿದ್ದು ಇರುತ್ತದೆ. ಆರೋಪಿತರು ಇಂದು ನಡೆದ ಭಾರತ ಮತ್ತು ದಕ್ಷಿಣ ಆಫ್ರೀಕಾ ತಂಡಗಳ ನಡುವೆ ನಡೆದ ವಿಶ್ವಕಪ್ ಕ್ರಿಕೇಟ್ ನ ಸರಣಿಯ ಕ್ರಿಕೇಟ್ ಆಟದ ಮೇಲೆ ಜೂಜಾಟ ಆಡುತ್ತಾ ಸಾರ್ವಜನಿಕರಿಗೆ ಒಂದಕ್ಕೆ ದುಪ್ಪಟ್ಟು ಹಣ ಕೊಡುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದ ಬಗ್ಗೆ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ಪಿರ್ಯಾದಿ ಸಾರಾಂಶದ ಮೇಲಿಂದ ಸದರಿಯವರ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3)  ಗಂಗಾತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 43/2015 ಕಲಂ. 78(1)(ಎ)(6) ಕೆ.ಪಿ. ಕಾಯ್ದೆ ಸಹಿತ 420 ಐ.ಪಿ.ಸಿ :.
ದಿನಾಂಕ 22-02-2015 ರಂದು  12-30 ಪಿ.ಎಂ.ಕ್ಕೆ ಶ್ರೀ ಶರಣೇಗೌಡ ಪಿ.ಎಸ್.ಐ. ತಾವರಗೇರಾ ಪೊಲೀಸ್ ಠಾಣೆ ರವರು ಕ್ರಿಕೇಟ್ ಜೂಜಾಟದಲ್ಲಿ ತೊಡಗಿದ ನಾಗರಾಜ ತಂದೆ ಚನ್ನಪ್ಪ ಉಪ್ಪಿನ ಸಾ: ಇಲಾಹಿ ಕಾಲೋನಿ ಗಂಗಾವತಿ ಇವರನ್ನು ಹಾಜರ ಪಡಿಸಿ ಸದರಿಯವನ ಮೇಲೆ ಕ್ರಮ ಜರುಗಿಸುವ ಕುರಿತು ತಮ್ಮದೊಂದು ವರದಿಯನ್ನು ಪಂಚನಾಮೆಯೊಂದಿಗೆ ನೀಡಿದ್ದು ಅದರ ಸಾರಂಶವೇನೆಂದರೆ, ಇಂದು ದಿನಾಂಕ 22-02-2015 ರಂದು ವಿಶ್ವಕಪ್ ಕ್ರಿಕೇಟ್ ಪಂದ್ಯಾಟದ ನಿಮಿತ್ಯವಾಗಿ ಭಾರತ-ದಕ್ಷಿಣ ಆಫ್ರೀಕ ದೇಶಗಳ ತಂಡಗಳ ನಡುವ 50 ಓವರಗಳ ಕ್ರೀಕೇಟ್ ಪಂದ್ಯಾವಳಿ ಇದ್ದು, ಆರೋಪಿತನುಇಂದು  ಮುಂಜಾನೆ 10-15 ಗಂಟೆಗೆ ಗಂಗಾವತಿ ನಗರದ ಇಲಾಹಿ ಕಾಲೋನಿಯ ಮಸೀದಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರೊಂದಿಗೆ ಭಾರತ ಗದ್ದರೆ 1000 ರೂ.ಗಳಿಗೆ 1500 ರೂ.ಗಳನ್ನು ಕೊಡುವುದಾಗಿ ಮತ್ತು ಆಸ್ಟ್ರೇಲಿಯಾ ಗೆದ್ದರೆ 1000 ರೂ. ಗಳಿಗೆ 1000 ರೂ.ಗಳನ್ನು ಕೊಡುವುದಾಗಿ ಜನರಿಗೆ ಹೆಚ್ಚಿನ ಹಣ ಕೊಡುವುದಾಗಿ ನಂಬಿಸಿ ಅವರಿಂದ ಹಣ ಪಡೆದುಕೊಂಡು ಅವರಿಗೆ ಮೋಸ ಮಾಡುತ್ತಿದ್ದರಿಂದ ಸದರಿಯವನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಸದರಿಯವನಿಂದ ಜೂಜಾಟಕ್ಕೆ ಸಂಬಂಧಿಸಿದ 400-00 ರೂ ಹಣ, ಜೂಜಾಟ ಆಡಲು ಬಳಸಿದ ಒಂದು ನೋಕಿಯಾ ಕಂಪನಿಯ ಮೊಬೈಲ್ ದೊರೆತಿದ್ದು ಇರುತ್ತದೆ  ಇವುಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಬರೆದುಕೊಂಡಿದ್ದು ಇರುತ್ತದೆ.  ಆರೋಪಿತನು ಇಂದು ನಡೆದ ಭಾರತ ಮತ್ತು ದಕ್ಷಿಣ ಆಫ್ರೀಕಾ ತಂಡಗಳ ನಡುವೆ ನಡೆದ ವಿಶ್ವಕಪ್ ಕ್ರಿಕೇಟ್ ನ ಸರಣಿಯ ಕ್ರಿಕೇಟ್ ಆಟದ ಮೇಲೆ ಜೂಜಾಟ ಆಡುತ್ತಾ ಸಾರ್ವಜನಿಕರಿಗೆ ಹೆಚ್ಚಿನ ಹಣ ಕೊಡುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದರಿಂದ ಸದರಿಯವನ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4)  ಗಂಗಾತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 44/2015 ಕಲಂ. 78(1)(ಎ)(6) ಕೆ.ಪಿ. ಕಾಯ್ದೆ ಸಹಿತ 420 ಐ.ಪಿ.ಸಿ :.
ದಿನಾಂಕ 22-02-2015 ರಂದು  12-30 ಪಿ.ಎಂ.ಕ್ಕೆ ಶ್ರೀ DAd£ÉÃAiÀÄ ಪಿ.ಎಸ್.ಐ. ¸ÀAZÁj ¥Éưøï oÁuÉ UÀAUÁªÀw ರವರು ಕ್ರಿಕೇಟ್ ಜೂಜಾಟದಲ್ಲಿ ತೊಡಗಿದ ಪರಮಜ್ಯೋತಿ ತಂದೆ ವೆಂಕೋಬಣ್ಣ 02] ನಂಜಯ್ಯ ತಂದೆ ಬೆಟ್ಟದಯ್ಯ ಇಬ್ಬರುಸಾ: ಹಿರೇಜಂತಕಲ್-ಗಂಗಾವತಿ ಇವರನ್ನು ಹಾಜರ ಪಡಿಸಿ ಸದರಿಯವನ ಮೇಲೆ ಕ್ರಮ ಜರುಗಿಸುವ ಕುರಿತು ತಮ್ಮದೊಂದು ವರದಿಯನ್ನು ಪಂಚನಾಮೆಯೊಂದಿಗೆ ನೀಡಿದ್ದು ಅದರ ಸಾರಂಶವೇನೆಂದರೆ, ಇಂದು ದಿನಾಂಕ 22-02-2015 ರಂದು ವಿಶ್ವಕಪ್ ಕ್ರಿಕೇಟ್ ಪಂದ್ಯಾಟದ ನಿಮಿತ್ಯವಾಗಿ ಭಾರತ-ದಕ್ಷಿಣ ಆಫ್ರೀಕ ದೇಶಗಳ ತಂಡಗಳ ನಡುವ 50 ಓವರಗಳ ಕ್ರೀಕೇಟ್ ಪಂದ್ಯಾವಳಿ ಇದ್ದು, ಆರೋಪಿತನುಇಂದು  ಮುಂಜಾನೆ 10-15 ಗಂಟೆಗೆ ಗಂಗಾವತಿ ನಗರದ ಹಿರೇಜಂತಕಲ್ ಏರಿಯಾದ ಪಂಪಾಪತಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರೊಂದಿಗೆ ಭಾರತ ಗದ್ದರೆ 1000 ರೂ.ಗಳಿಗೆ 1500 ರೂ.ಗಳನ್ನು ಕೊಡುವುದಾಗಿ ಮತ್ತು ಆಸ್ಟ್ರೇಲಿಯಾ ಗೆದ್ದರೆ 1000 ರೂ. ಗಳಿಗೆ 1000 ರೂ.ಗಳನ್ನು ಕೊಡುವುದಾಗಿ ಜನರಿಗೆ ಹೆಚ್ಚಿನ ಹಣ ಕೊಡುವುದಾಗಿ ನಂಬಿಸಿ ಅವರಿಂದ ಹಣ ಪಡೆದುಕೊಂಡು ಅವರಿಗೆ ಮೋಸ ಮಾಡುತ್ತಿದ್ದರಿಂದ ಸದರಿಯವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಸದರಿಯವನಿಂದ ಜೂಜಾಟಕ್ಕೆ ಸಂಬಂಧಿಸಿದ 430-00 ರೂ ಹಣ, ಜೂಜಾಟ ಆಡಲು ಬಳಸಿದ ಎರಡು ಸ್ಯಾಮಸಂಗ್ ಕಂಪನಿಯ ಮೊಬೈಲ್ ಗಳು ದೊರೆತಿದ್ದು ಇರುತ್ತದೆ  ಇವುಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಬರೆದುಕೊಂಡಿದ್ದು ಇರುತ್ತದೆ.  ಆರೋಪಿತರು ಇಂದು ನಡೆದ ಭಾರತ ಮತ್ತು ದಕ್ಷಿಣ ಆಫ್ರೀಕಾ ತಂಡಗಳ ನಡುವೆ ನಡೆದ ವಿಶ್ವಕಪ್ ಕ್ರಿಕೇಟ್ ನ ಸರಣಿಯ ಕ್ರಿಕೇಟ್ ಆಟದ ಮೇಲೆ ಜೂಜಾಟ ಆಡುತ್ತಾ ಸಾರ್ವಜನಿಕರಿಗೆ ಹೆಚ್ಚಿನ ಹಣ ಕೊಡುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದರಿಂದ ಸದರಿಯವರ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 36/2015 ಕಲಂ. 279, 337 338 ಐ.ಪಿ.ಸಿ:.
ದಿನಾಂಕ 22.02.2015 ರಂದು ಬೆಳಿಗ್ಗೆ 08:45 ಗಂಟೆಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಎನ್.ಹೆಚ್-63 ಕೊಪ್ಪಳ-ಗದಗ ರಸ್ತೆ ದದೇಗಲ್ ಗ್ರಾಮದ ಹತ್ತಿರ ರಸ್ತೆ ತಿರುವಿನಲ್ಲಿ ಆರೋಪಿತನು ತನ್ನ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆ.-37/ಏಫ್-390 ನೇದ್ದನ್ನು ಗದಗ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದು ಎದುರಿಗೆ ಬರುತ್ತಿದ್ದ ಪಿರ್ಯಾದಿದಾರರ ಮೋ.ಸೈ ನಂ ಕೆ.-37/ಕ್ಯೂ-9101 ನೇದ್ದಕ್ಕೆ ಟಕ್ಕರಕೊಟ್ಟು ಅಪಘಾತ ಮಾಡಿದ್ದರಿಂದ ಸಾದಾ ಹಾಗೂ ಭಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ.
6) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 37/2015 ಕಲಂ. 279, 338 ಐ.ಪಿ.ಸಿ:.

ದಿನಾಂಕ 21.02.2015 ರಂದು ಮದ್ಯಾನ 3:00 ಗಂಟೆಯ ಸುಮಾರಿಗೆ ಕೊಪ್ಪಳ-ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಮಾದಿನೂರ-ದದೇಗಲ್ ರಸ್ತೆ ದದೇಗಲ್ ಸೀಮಾದಲ್ಲಿ ಆರೋಪಿತನು ತನ್ನ ಲಾರಿ ನಂ .ಪಿ-37/ವಾಯ್-2678 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದು ರಸ್ತೆಯ ಎಡಕ್ಕೆ ಪಲ್ಟಿ ಮಾಡಿದ್ದರಿಂದ ಆರೋಪಿ ಚಾಲಕನಿಗೆ ಭಾರಿ ಸ್ವರೂಪದ ಗಾಯವಾಗಿದ್ದು ಇರುತ್ತದೆ.

0 comments:

 
Will Smith Visitors
Since 01/02/2008