ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 194/2015 ಕಲಂ. 279, 304(ಎ) ಐ.ಪಿ.ಸಿ:.
ದಿನಾಂಕ:- 29-06-2015 ರಂದು ಬೆಳಿಗ್ಗೆ 09:30 ಗಂಟೆಗೆ
ಫಿರ್ಯಾದಿದಾರರಾದ ಶ್ರೀ ಡಿ. ಶ್ರೀನಿವಾಸ ರೆಡ್ಡಿ
ತಂದೆ ಡಿ. ರಾಮಕೃಷ್ಣ ರೆಡ್ಡಿ, ವಯಸ್ಸು 48 ವರ್ಷ, ಜಾತಿ: ರೆಡ್ಡಿ ಉ: ಒಕ್ಕಲುತನ ಸಾ: ರಾಂಪೂರು.
ತಾ: ಗಂಗಾವತಿ. ಇವರು ಠಾಣೆಗೆ ಹಾಜರಾಗಿ ನುಡಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶ
ಈ ಪ್ರಕಾರ ಇದೆ. ನಾನು ಗಂಗಾವತಿ ತಾಲೂಕಿನ ರಾಂಪೂರು
ಗ್ರಾಮದ ನಿವಾಸಿ ಇದ್ದು, ಒಕ್ಕಲುತನ ಮಾಡಿಕೊಂಡಿರುತ್ತೇನೆ. ನಾವು ಮೂರು ಜನ ಅಣ್ಣ ತಮ್ಮಂದಿರು ಇದ್ದು,
(1) ನಾನು (2) ನಾರಾಯಣರೆಡ್ಡಿ (3) ಸೋಮರೆಡ್ಡಿ ಅಂತಾ ಇರುತ್ತೇವೆ. ಸೋಮರೆಡ್ಡಿಗೆ (1) ರಾಮಕಿರಣ ರೆಡ್ಡಿ-19 ವರ್ಷ (2) ಅನುಷಾ-16
ವರ್ಷ ಅಂತಾ ಇಬ್ಬರು ಮಕ್ಕಳು ಇರುತ್ತಾರೆ. ರಾಮಕಿರಣ
ರೆಡ್ಡಿ ಈತನು ಪ್ರಸ್ತುತ ಸಾಲಿನಲ್ಲಿ ಪಿ.ಯು.ಸಿ. ದ್ವಿತೀಯ ವರ್ಷದಲ್ಲಿ ಅನುತ್ತೀರ್ಣನಾಗಿದ್ದರಿಂದ
ಈಗ ಸಪ್ಲಿಮೆಂಟರಿ ಪರೀಕ್ಷೆಗಳು ನಡೆಯುತ್ತಿದ್ದವು. ಇಂದು ದಿನಾಂಕ:- 29-06-2015 ರಂದು ಬೆಳಿಗ್ಗೆ
08:10 ಗಂಟೆಯ ಸುಮಾರಿಗೆ ರಾಮಕಿರಣ ರೆಡ್ಡಿ ಈತನು ಪರೀಕ್ಷೆ ಬರೆಯುವ ಸಲುವಾಗಿ ಮನೆಯಿಂದ ತಮ್ಮ ಬಜಾಜ್
ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-37/ ಆರ್-7137 ನೇದ್ದನ್ನು ನಡೆಯಿಸಿಕೊಂಡು ಗಂಗಾವತಿಗೆ ಹೋದನು.
ನಂತರ ಬೆಳಿಗ್ಗೆ 08:30 ಗಂಟೆಯ ಸುಮಾರಿಗೆ ನಮ್ಮೂರ ವೈ. ರವಿ ತಂದೆ ರಂಗಯ್ಯ, ಬಲಿಜ, 30 ವರ್ಷ ಈತನು
ಫೋನ್ ಮಾಡಿ ಬಸವನದುರ್ಗ ಸೀಮಾದಲ್ಲಿರುವ ಬಾಗೋಡಿ ಗೌರೀಶ ಇವರ ಹೊಲದ ಹತ್ತಿರ ಮಲ್ಲಾಪೂರು-ರಾಂಪೂರು
ರಸ್ತೆಯಲ್ಲಿ ರಾಮಕಿರಣ ರೆಡ್ಡಿಗೆ ಬಸ್ ಅಪಘಾತ ಮಾಡಿದ್ದರಿಂದ ಆತನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ
ಅಂತಾ ತಿಳಿಸಿದನು. ಕೂಡಲೇ ನಾನು, ನನ್ನ ತಮ್ಮ ಸೋಮರೆಡ್ಡಿ
ಸ್ಥಳಕ್ಕೆ ಬಂದು ನೋಡಲಾಗಿ ರಾಮಕಿರಣ ರೆಡ್ಡಿಗೆ ತಲೆಯ ಬಲಭಾಗಕ್ಕೆ ಭಾರೀ ಸ್ವರೂಪ ರಕ್ತಗಾಯವಾಗಿದ್ದು
ಮತ್ತು ಬಲಗಾಲಿಗೆ ಗಾಯವಾಗಿ ಆತನು ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಸ್ಥಳದಲ್ಲಿ ಕೆ.ಎಸ್.ಆರ್.ಟಿ.ಸಿ.
ಬಸ್ ನಂಬರ್: ಕೆ.ಎ-37/ ಎಫ್-260 (ಗಂಗಾವತಿ-ರಾಂಪೂರು) ನೇದ್ದು ನಿಂತಿತ್ತು. ಮತ್ತು ಮೋಟಾರ್ ಸೈಕಲ್
ಸಹ ಸ್ಥಳದಲ್ಲಿಯೇ ಬಿದ್ದಿತ್ತು. ಅಲ್ಲಿದ್ದ ವೈ. ರವಿಗೆ ವಿಚಾರಿಸಲು ತಿಳಿಸಿದ್ದೇನೆಂದರೆ, ಬೆಳಿಗ್ಗೆ 08:20 ಗಂಟೆಯ ಸುಮಾರಿಗೆ ನಾನು ಮೋಟಾರ್ ಸೈಕಲ್
ನಡೆಯಿಸಿಕೊಂಡು ಗಂಗಾವತಿಗೆ ಬರುತ್ತಿದ್ದೆನು. ಆಗ ರಾಮಕಿರಣ ರೆಡ್ಡಿಯು ಸಹ ಬಜಾಜ್ ಪಲ್ಸರ್ ಮೋಟಾರ್
ಸೈಕಲ್ ನಡೆಯಿಸಿಕೊಂಡು ನನ್ನ ಮುಂದೆ ಗಂಗಾವತಿ ಕಡೆಗೆ ಹೋಗುತ್ತಿರುವಾಗ ಆತನ ಎದುರುಗಡೆ ಸಂಗಾಪೂರು
ಕಡೆಯಿಂದ ಒಂದು ಬಸ್ ಬರುತ್ತಿದ್ದು, ಸದರಿ ಬಸ್ ಚಾಲಕನು ತನ್ನ ಬಸ್ನ್ನು ಅಡ್ಡಾದಿಡ್ಡಿಯಾಗಿ ಅತೀ ಜೋರಾಗಿ
ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ರಾಮಕಿರಣ ರೆಡ್ಡಿಯ ಮೋಟಾರ್ ಸೈಕಲ್ಗೆ ಟಕ್ಕರ್
ಕೊಟ್ಟು ಅಪಘಾತ ಮಾಡಿದನು. ಇದರಿಂದ ರಾಮಕಿರಣ ರೆಡ್ಡಿಯ ತಲೆಗೆ ತೀವ್ರ ಸ್ವರೂಪದ ಗಾಯವಾಗಿ ಸ್ಥಳದಲ್ಲಿಯೇ
ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದನು. ಬಸ್ ಚಾಲಕನ
ಬಗ್ಗೆ ವಿಚಾರಿಸಲು ಮಲ್ಲೇಶ ತಂದೆ ದೊಡ್ಡಪ್ಪ ಗಂಗಾವತಿ ಕೆ.ಎಸ್.ಆರ್.ಟಿ.ಸಿ. ಡಿಪೋ ಸಾ: ನಾರಿನಾಳ
ಅಂತಾ ತಿಳಿಯಿತು. ನಂತರ ರಾಮಕಿರಣ ರೆಡ್ಡಿಯ ಶವವನ್ನು ಯಾವುದೋ ಒಂದು ಟಾಟಾ ಏಸ್ ವಾಹನದಲ್ಲಿ ತೆಗೆದುಕೊಂಡು
ಬಂದು ಗಂಗಾವತಿ ಉಪವಿಭಾಗ ಆಸ್ಪತ್ರೆಯ ಶವಾಗಾರ ಕೋಣೆಯಲ್ಲಿ ಹಾಕಿ ಈಗ ಈ ಹೇಳಿಕೆ ಫಿರ್ಯಾದಿಯನ್ನು ನೀಡಿರುತ್ತೇನೆ.
ಕಾರಣ ಈ ಅಪಘಾತಕ್ಕೆ ಕಾರಣನಾದ ಕೆ.ಎಸ್.ಆರ್.ಟಿ.ಸಿ. ಬಸ್ ನಂಬರ್: ಕೆ.ಎ-37/ ಎಫ್-260 ನೇದ್ದರ ಚಾಲಕ
ಮಲ್ಲೇಶನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ. ಅಂತಾ ನೀಡಿದ ಹೇಳಿಕೆ ಸಾರಾಂಶದ
ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು
2) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 139/2015 ಕಲಂ 279, 337 ಐ.ಪಿ.ಸಿ:
ದಿನಾಂಕ 29-06-2015
ರಂದು ಪಿರ್ಯಾದಿದಾರ ಶಿವರಾಜ ತಮ್ಮ ಕಾರ ನಂ.ಕೆ.ಎ 34/ಎ 9037
ನೇದ್ದರಲ್ಲಿ ಬಳ್ಳಾರಿಯಿಂದ ಕೊಪ್ಪಳಕ್ಕೆ ಕುಷ್ಟಗಿ- ಹೊಸಪೇಟೆ ಎನ್.ಹೆಚ್.13 ಒನ್ ವೇ ರಸ್ತೆಯ
ಮೇಲೆ ಐ.ಆರ್.ಬಿ ಕ್ರಾಸ್ ಹತ್ತಿರ ಹೋಗುತ್ತಿರುವಾಗ ಆರೋಪಿ ಅಶೋಕ ತನ್ನ ಟಿಪ್ಪರ್ ಲಾರಿ ನಂ.ಕೆ.ಎ37/8453 ನೇದ್ದನ್ನು ಅತೀ ವೇಗ
ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಕಾರಿಗೆ ಡಿಕ್ಕಿ ಪಡಿಸಿಕೊಂಡು ಅಪಘಾತ ಪಡಿಸಿದ್ದರಿಂದ ಕಾರಿನಲ್ಲಿದ್ದ ಇಬ್ಬರಿಗೆ ಗಾಯಗಳಾಗಿರುತ್ತವೆ ಅಂತಾ ಮುಂತಾಗಿದ್ದ
ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
3) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 112/2015 ಕಲಂ 96(ಬಿ) & (ಸಿ) ಕೆ.ಪಿ. ಕಾಯ್ದೆ:
ದಿನಾಂಕ: 29-06-2015 ರಂದು ಬೆಳಿಗ್ಗೆ 6-00 ಗಂಟೆಗೆ
ದೇವೇಂದ್ರಪ್ಪ ಸಿಪಿಸಿ 120 ರವರು ಠಾಣೆಗೆ
ಹಾಜರಾಗಿ ಫಿರ್ಯಾದಿಯನ್ನ ಹಾಜರು ಪಡಿಸಿದ್ದು, ಸದರಿ ಫಿರ್ಯಾದಿಯ ಸಾರಾಂಶವೇನೆಂದರೆ, ಇಂದು ದಿನಾಂಕ: 29-06-2015 ರಂದು 4-00 ಗಂಟೆಯಿಂದ ತಾನು ಮತ್ತು ಪಿಸಿ 150 ರವರು ನಗರದಲ್ಲಿ ಗುಡ್ ಮಾರ್ನಿಂಗ್ ಬೀಟ್ ಕರ್ತವ್ಯದಲ್ಲಿದ್ದಾಗ ಬೆಳಗಿನ ಜಾವ 5-00 ಗಂಟೆಗೆ ನಗರದ ಶರ್ಮಾ ಪೆಟ್ರೋಲ್ ಬಂಕ್
ಹತ್ತಿರ ಗಸ್ತು ತಿರುಗುತ್ತಿದ್ದಾಗ, ಬೆಳಿಗ್ಗೆ 5-15 ಗಂಟೆಗೆ ಶರ್ಮಾ
ಪೆಟ್ರೊಲ್ ಬಂಕ್ ಹತ್ತಿರ ಫಿರ್ಯಾದಿದಾರರನ್ನು ನೋಡಿ ಕತ್ತಲಲ್ಲಿ ತನ್ನ ಮುಖ ಮುಚ್ಚಿಕೊಂಡು
ಅವಿತುಕೊಂಡಿರುವುದನ್ನು ಫಿರ್ಯದಿದಾರು ನೋಡಿ ಸಂಶ ಬಂದು ಅವರು ಅವನನ್ನು ಹಿಡಿದುಕೊಂಡು ಅವನಿಗೆ
ವಿಚಾರಿಸಲಾಗಿ ಅವನು ಮೊದಲು ತನ್ನ ಹೆಸರನ್ನು ತಪ್ಪು ತಪ್ಪಾಗಿ ಹೆಳಿದ್ದು ಮತ್ತು ರಾತ್ರಿ
ವೇಳೆಯಲ್ಲಿ ಸದರಿ ಸ್ಥಳದಲ್ಲಿದ್ದ ಬಗ್ಗೆ ವಿಚಾರಿಸಿದಾಗ ಅವನು ತಪ್ಪು ತಪ್ಪಾಗಿ ಹೇಳಿದ್ದು, ನಂತರ ಅವನಿಗೆ ಮೇಲಿಂದ ಮೆಲೆ ವಿಚಾರಿಸಿದಾಗ ಅವನು ತನ್ನ ಹೆಸರು ಅಮರೇಶ
ತಂದೆ ರಾಮಣ್ಣ ತೆಗ್ಗಿನ ಮನೆ ವಯಾ; 24 ವರ್ಷ ಜಾ: ಮೋಚಿ ಉ: ಕೂಲಿ ಕೆಲಸ ಸಾ: ಬಿಸರಳ್ಳಿ ತಾ:ಜಿ: ಕೊಪ್ಪಳ ಅಂತಾ ಹೇಳಿದ್ದು ಅನವ
ಮೇಲೆ ಸಂಶಯ ಬಂದು ಹಾಗೂ ಸದರಿ ಸ್ಥಳದಲ್ಲಿ ರಾತ್ರಿ ವೇಳೆಯಲ್ಲಿ ಇದ್ದ ಬಗ್ಗೆ ಸಮರ್ಪಕ ಉತ್ತರ
ಕೊಡದೇ ಇರುವುದರಿಂದ ಮುಂಜಾಗೃತ ಕ್ರಮವಾಗಿ ಸದರಿಯವನನ್ನು ಸದರಿಯವನನ್ನು ವಶಕ್ಕೆ ತೆಗೆದುಕೊಂಡು
ಬೆಳಿಗ್ಗೆ 5-30 ಗಂಟೆಗೆ ಠಾಣೆಗೆ
ಕರೆತಂದು ಬೆಳಿಗ್ಗೆ 6-00 ಗಂಟೆಗೆ
ಫಿರ್ಯಾದಿಯನ್ನ ತಯಾರಿಸಿ ಮುಂದಿನ ಕ್ರಮ ಜರುಗಿಸುವಂತೆ ವಿನಂತಿಸಿಕೊಳ್ಳಲಾಗಿದೆ. ಅಂತಾ ಇರುವ
ಫಿರ್ಯಾದಿಯ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.