Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, July 3, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 145/2015  ಕಲಂ 279, 304(ಎ) ಐ.ಪಿ.ಸಿ:.
ದಿನಾಂಕ -02-07-2015 ರಂದು ರಾತ್ರಿ 10-15 ಗಂಟೆಗೆ  ಫಿರ್ಯಾದಿದಾರರಾದ ಶ್ರೀ ಮೌನೇಶ ತಂದಿ  ಗೂಳಪ್ಪ ಪೂಜಾರಿ ವಯಾ- 38 ವರ್ಷ ಜಾ- ಉಪ್ಪಾರ ಉ- ಹಮಾಲಿ ಕೆಲಸ ಸಾ-  ಬಸವೇಶ್ವರನಗರ ಕಾರಟಗಿ ತಾ- ಗಂಗಾವತಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆ,  ನಾನು ಹಮಾಲಿ ಕೆಲಸ ಮಾಡಿಕೊಂಡು  ಉಪಜೀವನ ಮಾಡುತ್ತೇನೆ.  ನಾನು ಮತ್ತು ಶಂಕ್ರಪ್ಪ, ಮುದಿಯಪ್ಪ, ಲೋಕೇಶ, ಕೂಡಿಕೊಂಡು ಕಾರಟಗಿಯ ಲಾರಿ ನಂಬರ್ ಕೆ.ಎ-06 / 5935 ನೇದ್ದರಲ್ಲಿ  ಬೂದಗುಂಪಾ ಶರಣೆಗೌಡ ಇವರ ಗೋದಾಮಿನಲ್ಲಿ ಭತ್ತದ ಚೀಲಗಳನ್ನು ಲೋಡ ಮಾಡಲೆಂದು ಹೊಗಿದ್ದೇವು.  ಮದ್ಯಾಹ್ನ 1-30 ಗಂಟೆಯ ಸುಮಾರಿಗೆ ಶಂಕ್ರಪ್ಪ ಇತನು  ಸದರಿ ಲಾರಿಯ ಹಿಂದುಗಡೆ  ಭತ್ತವನ್ನು ಲೋಡ ಮಾಡಲೆಂದು  ನಾವೇಲ್ಲರು ನಿಂತಿದ್ದಾಗ ಸದರಿ ಲಾರಿಯ ಚಾಲಕ ಕೆ. ಸಂಗಪ್ಪ ತಂದಿ ಪಂಪಣ್ಣ ಕಟಾಂಬ್ಲಿ ಸಾ- ಕಾರಟಗಿ ಇತನು ಸದರಿ ಲಾರಿಯನ್ನು ಗೋದಾಮು ಮುಂದುಗಡೆ ಲೋಡಿಗೆ ನಿಲ್ಲಿಸಲೆಂದು ಚಾಲು ಮಾಡಿ  ಒಮ್ಮಿಂದೊಮ್ಮೆಲೆ ಜೋರಾಗಿ ವೇಗವಾಗಿ  ರಿವರ್ಸ ತೆಗೆದುಕೊಂಡಿದ್ದರಿಂದ  ಅಲ್ಲೆ ನಿಂತಿದ್ದ ಶಂಕ್ರಪ್ಪ ಇತನಿಗೆ ಹಿಂದುಗಡೆಯಿಂದ ಟಕ್ಕರ್ ಕೊಟ್ಟಪರಿಣಾಮವಾಗಿ  ಶಂಕ್ರಪ್ಪ ಇತನು ಕೆಳಗೆ ಬಿದ್ದಿದ್ದರಿಂದ ಶಂಕ್ರಪ್ಪ ಈತನಿಗೆ ಹಿಂದಿನ ಎಡಗಡೆ ಗಾಲಿ ಹಾಯ್ದಿದ್ದರಿಂದ  ಶಂಕ್ರಪ್ಪ ಇತನಿಗೆ ಎಡ ತೊಡೆಗೆ, ಮತ್ತು ಸೊಂಟಕ್ಕೆ ತೀವ್ರ ಸ್ವರೂಪದ ಘಾಯವಾಗಿ ರಕ್ತ ಸ್ರಾವವಾಗಿ  ಕಾಲು ಮತ್ತು ಸೊಂಟ ಮುರಿದು ಗಂಭೀರಗಾಯವಾಗಿದ್ದು ಇರುತ್ತದೆ.  ಅಪಘಾತವಾದ  ನಂತರ ಘಾಯಗೊಂಡ ಶಂಕ್ರಪ್ಪ ಇತನಿಗೆ  ಕಾರಟಗಿಗೆ ಬರುತ್ತಿದ್ದ ಅಟೋವೊಂದರಲ್ಲಿ  ಹಾಕಿಕೊಂಡು ಚಿಕಿತ್ಸೆಗಾಗಿ ಕಾರಟಗಿ ಆಸ್ಪತ್ರೆಗೆ ದಾಖಲು ಮಾಡಿದ್ದು ವೈದ್ಯರು ಆತನಿಗೆ  ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ ಕರೆದುಕೊಂಡು ಹೊಗುವಂತೆ ತಿಳಿಸಿದ್ದರಿಂದ  ನಾನು ಮತ್ತು ಲಾರಿಯ ಚಾಲಕ   ಹಾಗೂ ಶಂಕ್ರಪ್ಪನ ತಂದೆ ಶ್ಯಾಮಮುರ್ತಿ ಕೂಡಿಕೊಂಡು ಶಂಕ್ರಪ್ಪ ಇತನ ಚಿಕಿತ್ಸೆಗೆ ಆದ್ಯತೆ ಕೊಟ್ಟು ಆತನಿಗೆ ಬಳ್ಳಾರಿಗೆ ಕರೆದುಕೊಂಡು ಹೊಗುವಾಗ್ಗೆ ಕಂಪ್ಲಿ ಹತ್ತಿರ ಸಾಯಂಕಾಲ 5-30 ಗಂಟೆಗೆ ಶಂಕ್ರಪ್ಪ ಇತನು ಮೃತಪಟ್ಟಿದ್ದರಿಂದ , ಶಂಕ್ರಪ್ಪ ಇತನ ಮೃತ ದೇಹವನ್ನು  ಕಾರಟಗಿಯ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ತಂದು ಹಾಕಿ ಈಗ ತಮ್ಮಲ್ಲಿ ಬಂದು ಫಿರ್ಯಾದಿ ನೀಡುತ್ತಿದ್ದೇನೆ. ಕಾರಣ ಲಾರಿಯ ಚಾಲಕ ಕೆ. ಸಂಗಪ್ಪ  ಇತನು ಲಾರಿ ನಂ-ಕ.ಎ-06/ 5935 ನೇದ್ದನ್ನು ಅಜಾಗರೂಕತೆ ಹಾಗೂ ಅಲಕ್ಷತನದಿಂದ  ಲಾರಿಯನ್ನು ವೇಗವಾಗಿ   ಒಮ್ಮಿಂದೊಮ್ಮೆಲೆ  ರಿವರ್ಸ ತೆಗೆದುಕೊಂಡಿದ್ದರಿಂದ ಶಂಕ್ರಪ್ಪ ಇತನ ಕಾಲು ಮತ್ತು ಸೊಂಟದಮೇಲೆ  ಲಾರಿ ಗಾಲಿ ಹಾಯ್ದು ಗಂಭೀರಸ್ವರೂಪದ ಗಾಯವಾಗಿ ಇತನಿಗ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ ಹೊಗುವಾಗ್ಗೆ ಮೃತಪಟ್ಟಿದ್ದು ಇರುತ್ತದೆ. ಈ ಘಟನೆಗೆ ಲಾರಿ ಚಾಲಕ  ಕೆ.ಸಂಗಪ್ಪ ಇತನೇ ಕಾರಣನಾಗಿದ್ದು ಆತನ ಮೇಲೆ ಕಾನೂನು ರೀತಿ ಕ್ರಮಜರುಗಿಸಲು ವಿನಂತಿ ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 158/2015 ಕಲಂ. 87 Karnataka Police Act.
ದಿನಾಂಕ 02.07.2015 ರಂದು ರಾತ್ರಿ 9:15 ಗಂಟೆಗೆ ಶ್ರೀ ಚಿತ್ತರಂಜನ್ ಪಿ.ಎಸ.ಐ ಕೊಪ್ಪಳ ಗ್ರಾಮೀಣ ಠಾಣೆರವರು ಠಾಣೆಗೆ ಹಾಜರಾಗಿ ಇಸ್ಪೇಟ್ ಜೂಜಾಟದ ಗುಂಪಿನ ಮೇಲೆ ದಾಳಿ ಮಾಡಿಕೊಂಡು ಬಂದಿದ್ದು ನೀಡಿದ ಗಣಕೀಕೃತ ದೂರನ್ನು ಸ್ವೀಕರಿಸಿದ್ದು ಸದರಿ ಪಿರ್ಯಾದಿಯು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಮಾನ್ಯ ಘನ ನ್ಯಾಯಾಲಯ ಅನುಮತಿ ಪಡೆದುಕೊಂಡಿದ್ದು ದೂರಿನ ಸಾರಾಂಶ ವೇನೆಂದರೆ ಇಂದು ದಿನಾಂಕ 02.07.2015 ರಂದು ಸಾಯಂಕಾಲ 6:20 ಗಂಟೆಗೆ ಠಾಣಾ ವ್ಯಾಪ್ತಿಯ ಚಿಲವಾಡಗಿ ಗ್ರಾಮದ ಶ್ರೀ ಕರಿಯಮ್ಮ ದೇವಸ್ಥಾನದ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಎಸ್ಪೇಟ್ ಜೂಜಾಟದಲ್ಲಿ  ತೊಡಗಿದ್ದಾಗ ಅಧಿಕಾರಿ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರಿಂದ ಹಾಗೂ ಕಣದಲ್ಲಿದ್ದ ಒಟ್ಟು ನಗದು ಹಣ 1540=00 ರೂ ,52 ಇಸ್ಪೇಟ್ ಎಲೆಗಳು ಮತ್ತು ಒಂದು ಬಿಳಿಯ ಬಣ್ಣದ ಹಳೆಯ ಪ್ಲಾಸ್ಟಿಕ್ ಚೀಲ ಇವುಗಳನ್ನು  ಪಂಚರ ಸಮಕ್ಷಮ ಪಂಚನಾಮೆ ಮೂಲಕ ಜಪ್ತ ಮಾಡಿಕೊಂಡು ಸದರಿ 04 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇಲಿಂದ ಠಾಣೆಯ ಗುನ್ನೆ ನಂ 158/2015 ಕಲಂ 87 ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 128/2015  ಕಲಂ 186, 341, 323, 354, 506 ಸಹಿತ 34 ಐ.ಪಿ.ಸಿ:.

ದಿನಾಂಕ: 02-07-2015 ರಂದು ರಾತ್ರಿ 21-30 ಗಂಟೆಗೆ ಪಿರ್ಯಾದಿದಾರರಾದ ಕುಮಾರಿ ಮಂಜುಳಾ ತಂದೆ ದಿ|| ಶಿವಲಿಂಗಪ್ಪ ದೊಡ್ಡಮನಿ ವಯಾ: 27 ವರ್ಷ, ಜಾ: ಮಾದಿಗ, ಉ: ಪೌರ ನೌಕರ ಸಾ: ವಾರ್ಡ ನಂ: 12 ಬಸವೇಶ್ವರ ನಗರ ಕೊಪ್ಪಳ ರವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಪಿರ್ಯಾದಿ ನೀಡಿದ್ದು ಅದರ ಸಾರಾಂಶವೇನೆಂದರೆ,  ಇಂದು ದಿನಾಂಕ: 02-07-2015 ರಂದು ಮದ್ಯಾನ್ಹ 3-00 ಗಂಟೆಯ ಸುಮಾರಿಗೆ ಪಿರ್ಯಾದಿದಾರರು ಕೆಲಸ ಮಾಡುವ ನಗರ ಸಭೆ ಕಾರ್ಯಾಲುಯದ ಹತ್ತಿರ ಬಂದು ಪ್ರ.ವ.ವರದಿಯಲ್ಲಿ ನಮೂದಿಸಿದ ಆರೋಪಿತರು ಅವರ ಕೆಲಸಕ್ಕೆ ಅಡ್ಡಿ ಪಡಿಸಿ  ಪಿರ್ಯಾದಿಗೆ ಬಾಯಿಗೆ ಬಂದಂತೆ ಅವಾಚ್ಯವಾಗಿ ಬೈದಾಡುತ್ತಾ ಆರೋಫಿ ನಂ:1 ನೇದ್ದವಳಾದ ಸುಮಂಗಲಾ ಇವಳು ಪಿರ್ಯಾದಿಯ ತಲೆಯಲ್ಲಿನ ಕೂದಲನ್ನು ಹಿಡಿದು ತಲೆಗೆ ಕೈಗೆ ಬಡಿದಿದ್ದು, ಮತ್ತು ಆರೋಪಿ ನಂ: 2 ನೇದ್ದವನಾದ ನಾಗರಾಜ ಇವನು ಪಿರ್ಯಾದಿದಾರರ ಎರಡೂ ಕೈಗಳನ್ನು ಹಿಡಿದು ಗಟ್ಟಿಯಾಗಿ ಮೈ-ಕೈ ಮುಟ್ಟಿ ದೌನಿಯನ್ನು ಎಳೆದಾಡಿದ್ದು ಅಲ್ಲದೇ ಆರೋಪಿ ನಂ: 03 ನೇದ್ದವನಾದ ಚನ್ಬಬಸವ ಇವನು ಅವಾಚ್ಯವಾಗಿ ಪಿರ್ಯಾದಿದಾರರಿಗೆ ಬೈದಾಡಿದ್ದು ಇರುತ್ತದೆ. ಇದಾದ ನಂತರ ಆರೋಪಿತರೆಲ್ಲರೂ ಸೇರಿ ಪಿರ್ಯಾದಿದಾರಳಿಗೆ ನೀನು ಇಂದು ನಮ್ಮಿಂದ ತಪ್ಪಿಸಿಕೊಂಡಿರಬಹುದು ಕೊಪ್ಪಳಕ್ಕೆ ಬಾ ನಿನ್ನನ್ನು ಜೀವಸಹಿತ ಉಳೀಸುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ  ಪಿರ್ಯಾದಿ ಸಾರಾಂಶದ ಮೇಲಿಂಧ ಪ್ರಕರ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008