ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 172/2015
ಕಲಂ 87 Karnataka Police Act.
ದಿ: 12.07.2015 ರಂದು ಸಾಯಂಕಾಲ 7-15 ಗಂಟೆಗೆ ಶ್ರೀ ಚಿತ್ತರಂಜನ್ ಡಿ. ಪಿ.ಎಸ್.ಐ ಕೊಪ್ಪಳ
ಗ್ರಾಮೀಣ ಠಾಣೆರವರು ಠಾಣೆಗೆ ಹಾಜರಾಗಿ ಇಸ್ಪೇಟ್ ಜೂಜಾಟದ ಗುಂಪಿನ ಮೇಲೆ ದಾಳಿ ಮಾಡಿಕೊಂಡು ಬಂದು
ನೀಡಿದ ಗಣಕೀಕೃತ ದೂರನ್ನು ಸ್ವೀಕರಿಸಿದ್ದು, ಸದರಿ ಫಿರ್ಯಾದಿಯು ಅಸಂಜ್ಞೆಯ
ಪ್ರಕರಣವಾಗಿದ್ದರಿಂದ, ಮಾನ್ಯ ಘನ ನ್ಯಾಯಾಲಯದಿಂದಾ ರಾತ್ರಿ 7-30 ಗಂಟೆಗೆ ಅನುಮತಿ
ಪಡೆದುಕೊಂಡಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ಇಂದು ದಿನಾಂಕ: 12-07-2015
ರಂದು ಸಂಜೆ 5-15 ಗಂಟೆಗೆ ಠಾಣಾ ವ್ಯಾಪ್ತಿಯ ಕೊಪ್ಪಳ-ಚುಕನಕಲ್ ರಸ್ತೆ ಸ್ನೇಹಾ ದಾಬಾದ ಹತ್ತಿರ
ಸಾರ್ವಜನಿಕ ಸ್ಥಳದಲ್ಲಿ 10 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ
ಅಂದರ-ಬಾಹರ ಎಂಬ ಎಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಅಧಿಕಾರಿ ಹಾಗೂ ಸಿಬ್ಬಂದಿಯವರು
ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರಿಂದ ಹಾಗೂ ಕಣದಲ್ಲಿದ್ದ ಒಟ್ಟು ನಗದು ಹಣ 12480=00
ರೂಪಾಯಿಗಳು, 52 ಇಸ್ಪೇಟ್ ಎಲೆಗಳು ಇವುಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಜಪ್ತ ಮಾಡಿಕೊಂಡು, ಸದರಿ 10 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಸದರಿಯವರ ಮೇಲೆ ಕಾನೂನು ಕ್ರಮ
ಜರುಗಿಸುವಂತೆ ನೀಡಿದ ದೂರನ್ನು ರಾತ್ರಿ 7-45 ಗಂಟೆಗೆ ಠಾಣೆಯ ಗುನ್ನೆ ನಂ: 172/2015. ಕಲಂ: 87
ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 171/2015 ಕಲಂ. ಕಲಂ 498(ಎ), 323, 324, 504, 506, 307 ಸಹಿತ 149 ಐ.ಪಿ.ಸಿ
ಮತ್ತು 3, 4 ವರದಕ್ಷಿಣೆ ನಿಷೇಧ ಕಾಯ್ದೆ:
ದಿ:12-07-2015 ರಂದು ಬೆಳಿಗ್ಗೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ದುಖಾಃಪಾತಗೊಂಡಿದ್ದ
ಫಿರ್ಯಾದಿ ಪುಷ್ಪಾ @ ಸವಿತಾ ಗಂಡ ಜಡಿಸ್ವಾಮಿ ಸಿರಿಗೇರಿ ಸಾ: ಹಾಲವರ್ತಿ ಇವರ ಹೇಳಿಕೆ
ಫಿರ್ಯಾದಿಯನ್ನು ಬೆಳಿಗ್ಗೆ 11-15 ಗಂಟೆಗೆ ಕರ್ತವ್ಯ ನಿರತ ವೈದ್ಯರ ಸಮಕ್ಷಮ ಪಡೆದುಕೊಂಡಿದ್ದು
ಸದರಿ ದೂರಿನ ಸಾರಾಂಶವೇನೆಂದರೇ, ಕಳೆದ 02 ವರ್ಷಗಳ ಹಿಂದೆ
ನಮ್ಮ ತಂದೆ-ತಾಯಿ ಯವರು ನನ್ನನ್ನು ಹಾಲವರ್ತಿ ಗ್ರಾಮದ ಜಡಿಸ್ವಾಮಿ ಸಿರಿಗೇರಿ ಎಂಬುವವರಿಗೆ
ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಯಾದ 9 ತಿಂಗಳ ನಂತರ ನಾನು ನನ್ನ ಗಂಡನ ಮನೆಗೆ ನಡೆಯಲು
ಹಾಲರ್ತಿ ಗ್ರಾಮಕ್ಕೆ ಹೋದಾಗ ನನ್ನ ಗಂಡ ಜಡಿಸ್ವಾಮಿ ಮತ್ತು ಅವರ ಮನೆಯವರು ನನಗೆ ನೀನು
ಚೆನ್ನಾಗಿಲ್ಲ,
ಅಡುಗೆ ಮಾಡಲು ಬರುವುದಿಲ್ಲ, ನಮ್ಮ ಮನೆತನಕ್ಕೆ ಹೊಂದುವುದಿಲ್ಲ. ನಿನ್ನ ತವರುಮನೆಯಿಂದ 50 ಸಾವಿರ ರೂ ಹಣ, 2 ತೊಲೆ ಬಂಗಾರ ಸಾಮಾನು ತೆಗೆದುಕೊಂಡು ಬಾ ಅಂತಾ ವರದಕ್ಷಿಣೆ ಕಿರುಕುಳ ನೀಡಿದ್ದು ಅಲ್ಲದೇ
ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿರುತ್ತಾರೆ. ಅಲ್ಲದೇ ದಿ:11-07-15 ರಂದು ರಾತ್ರಿ 7-00 ಗಂಟೆಗೆ
ತನ್ನ ಗಂಡನು ತನಗೆ ಲೇ ಸೂಳೆ ನೀನು ನಿನ್ನ ತವರುಮನೆಗೆ ಹೋಗಿ ವರದಕ್ಷಿಣೆ ತೆಗೆದುಕೊಂಡು ಬಾ ಅಂತಾ
ಜೋರಾಗಿ ಬಾಯಿ ಮಾಡಿದಾಗ ನಾನು ಅವರಿಗೆ ಏನು ಕಿರಿಕಿರಿ ಅಂತಾ ಕೇಳಿದ್ದಕ್ಕೆ ಆರೋಪಿತರು
ಹಿಡಿದುಕೊಂಡು ಚುಚ್ಚಗ ಕಾಸಿ ಹೊಟ್ಟೆ ಮತ್ತು ಕಾಲುಗಳಿಗೆ ಬರೆ ಹಾಕಿರುತ್ತಾರೆ. ನಡೆದ ವಿಷಯ ಯಾರ
ಮುಂದೆ ಹೇಳಿದರೆ ನಿನಗೆ ಹೊಡೆದು ಸಾಯಿಸುತ್ತೇವೆ. ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ನಂತರ
ಇಂದು ದಿ:12-07-2015 ರಂದು ಬೆಳಗಿನಜಾವ 06-00 ಗಂಟೆಯ ಸುಮಾರಿಗೆ ಸಹ ಆರೋಪಿತರು ತನಗೆ
ಕಟ್ಟಿಗೆಯಿಂದ ಹೊಡೆದು ದುಖಾಃಪಾತಗೊಳಿಸಿದ್ದು ಅಲ್ಲದೇ ಗಟ್ಟಿಯಾಗಿ ಹಿಡಿದುಕೊಂಡು ಸೀಮೆಎಣ್ಣಿ
ಕುಡಿಸಿ ಸಾಯಿಸಲು ಪ್ರಯತ್ನಿಸಿದ್ದಾರೆ. ಕಾರಣ ವರದಕ್ಷಿಣೆಗೆಗಾಗಿ ದೈಹಿಕ ಮತ್ತು ಮಾನಸಿಕ
ಕಿರುಕುಳ ನೀಡಿ ಜೀವದ ಬೆದರಿಕೆ ಹಾಕಿರುವ ಸದರಿ 07 ಜನರ ಮೇಲೆ ಸೂಕ್ತ ಕಾನೂನು ಕ್ರಮ
ಜರುಗಿಸುವಂತೆ ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 106/2015 ಕಲಂ. 323, 504, 506, 448 ಸಹಿತ 34 ಐ.ಪಿ.ಸಿ:
ದಿನಾಂಕ:12-07-2015 ರಂದು ಸಾಯಂಕಾಲ 06-15 ಗಂಟೆಗೆ ಪಿರ್ಯಾಧಿದಾರರಾದ ಶ್ರೀಮತಿ ರೇಣುಕಾ
ಗಂಡ ಮಲ್ಲಪ್ಪ ಭಂಡಾರಿ ಸಾ:ಕರಿಂಕಾಲೋನಿ ಕುಷ್ಟಗಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ
ಪಿರ್ಯಾದಿಯನ್ನು ಹಾಜರ ಪಡಿಸಿದ್ದು ಸದರ ಪಿರ್ಯಾದಿಯ ಸಾರಾಂಶವೆನೆಂದರೆ ದಿನಾಂಕ:08-07-2015
ರಂದು ಸಾಯಾಂಕಾಲ 05-30 ಗಂಟೆಯ ಸುಮಾರಿಗೆ ನಮೂದಿತ ಆರೋಪಿತರು ಪಿರ್ಯಾದಿಯ ಮನೆಗೆ ಬಂದು ನಿನ್ನ
ಗಂಡ ಆರೋಪಿತರ ಪ್ಲಾಟೀನ [ರಘುನಂದನ ಬಡಾವಣೆ ಗಜೇಂದ್ರಗಡ ರಸ್ತೆ ] ಕೇಸಿನಲ್ಲಿ ಖರೀದಿದಾರರ
ಪರವಾಗಿ ಸಾಕ್ಷಿ ಹೇಳಿರುತ್ತಾನೆ. ಅಂತಾ ಅವಾಚ್ಯವಾಗಿ ಬೈದಾಡಿ ಕೈಯಿಂದ ಹೊಡಿಬಡಿ ಮಾಡಿ ಜೀವದ
ಬೆದರಿಕೆ ಹಾಕಿದ್ದು ಅಂತಾ ಮುಂತಾಗಿ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿದೆ.
0 comments:
Post a Comment