Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, July 14, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 108/2015  ಕಲಂ 78(3) Karnataka Police Act.
ದಿನಾಂಕ:13-07-2015 ರಂದು ರಾತ್ರಿ 09-35 ಗಂಟೆಗೆ ಶ್ರೀ ಘೋರ್ಪಡೆ ಯಲ್ಲಪ್ಪ ಪಿ.ಎಸ್.ಐ ಸಾಹೇಬರು  ಕುಷ್ಟಗಿ ಪೊಲೀಸ್ ಠಾಣೆ ಠಾಣೆಗೆ ಬಂದು ಒಂದು ವರದಿ, ಒಂದು ಮಟಕಾ ದಾಳಿ ಪಂಚನಾಮೆ. ನಗದು ಹಣ 2560=00 ಗಳು, ಸಾಮಾಗ್ರಗಳನ್ನು ಇಬ್ಬರೂ ಆರೋಪಿತರನ್ನು ತಂದು ಹಾಜರಪಡಿಸಿದ್ದು  ಸದರಿ ಸಾರಾಂಶ ವೆನೆಂದರೆ. ದೋಟಿಹಾಳ ಗ್ರಾಮದಲ್ಲಿ ಮಟ್ಕಾ ಜೂಜಾಟ ನಡೆದಿದೆ ಅಂತಾ ಖಚಿತ ಬಾತ್ಮಿ ಬಂದಿದ್ದು ಆಗ ಪಂಚರಾದ 1] ಮಾಸಪ್ಪ ತಂದೆ ಯಮನಪ್ಪ ಆರಾಳ ವಯಾ 32 ವರ್ಷ ಜಾ: ಕುರುಬರ ಉ:ಒಕ್ಕಲುತನ ಸಾ:ಅಡವಿಬಾವಿ 2] ಮುತ್ತಪ್ಪ ತಂದೆ ಮಹಾಂತಪ್ಪ ಬಳೂಟಗಿ ವಯಾ 28 ವರ್ಷ ಜಾ:ಲಿಂಗಾಯತ :ಒಕ್ಕಲುತನ ಸಾ:ಅಡವಿಬಾವಿ ರವರನ್ನು ಹಾಗೂನಮ್ಮ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ-63,ನೀಲಕಂಠಪ್ಪ, ಪಿ.ಸಿ-344,ಸಂಗಪ್ಪ,ಪಿ.ಸಿ-297,ಚಂದಪ್ಪ,ಪಿ.ಸಿ-275, ಭರಮಪ್ಪ,ಪಿ.ಸಿ-117,ಶ್ರೀಧರ, ಪಿ.ಸಿ-112, ವೀರಪ್ಪ  ಮತ್ತು ಎ.ಎಸ್.ಐ ಬಸವರಾಜ ಎಲ್ಲರೂ ಕೂಡಿ ಸರಕಾರಿ ಜೀಪ ನಂ:ಕೆ.ಎ-37/ಜಿ-292  ಅದರ ಚಾಲಕ ಎ.ಪಿ.ಸಿ-38, ಶಿವಕುಮಾರ ರೊಂದಿಗೆ ಠಾಣೆಯಿಂದ ಸಾಯಂಕಾಲ 07-15 ಗಂಟೆಗೆ ಹೊರಟು 07-45 ಗಂಟೆಗೆ ದೋಟಿಹಾಳ ಗ್ರಾಮಕ್ಕೆ ಹೋಗಿ ಮಠದ ಕಡೆಗೆ ಹೋಗುವ ರಸ್ತೆಯಲ್ಲಿ ದೂರದಲ್ಲಿ ನಿಂತು ನೋಡಲು ಒಂದು ಮನೆಯ ಮುಂದೆ ನಿಂತು ಸಾರ್ವಜನಿಕ ಸ್ಥಳದಲ್ಲಿ ಯಾರೋ ಇಬ್ಬರೂ ಮಟಕಾ ಜೂಜಾಟದಲ್ಲಿ ತೊಡಗಿದ್ದು ಅವರು ಜನರಿಂದ ಹಣ ಪಡೆದು ಮಟಕಾ ಚೀಟಿಗಳನ್ನು ಬರೆದುಕೊಡುತ್ತಿದ್ದರು ಅದರಲ್ಲಿ ಒಬ್ಬ ಒಂದು ರೂಪಾಯಿಗೆ 80 ರೂಪಾಯಿಗಳನ್ನು ಕೊಡುತ್ತೇವೆ  ಅಂತಾ ಹೊದರುತ್ತಿದ್ದ ಇನ್ನೊಬ್ಬ ಮಟಕಾ ಚೀಟಿಗಳನ್ನು ಬರೆದು ಹಣ ಪಡೆದುಕೊಳ್ಳುತ್ತಿದ್ದನು, ಆಗ ನಾವು ಒಮ್ಮಲೇ ಎಲ್ಲರೂ ರೇಡ ಮಾಡಲು ಪೊಲೀಸರನ್ನು ನೋಡಿ ಮಟಕಾ ಬರೆಯಿಸುತ್ತಿದ್ದ ಜನ ಓಡಿ ಹೋದರು,ಮಟಕಾ ಬರೆಯಿಸಿತ್ತದ್ದವರು ಇವರು ಸಹ ಓಡಿ ಪ್ರಯತ್ನಿಸುತ್ತಿದ್ದಾಗ ಸದರಿಯವರನ್ನು ಪೊಲೀಸರು ಹಿಡಿದುಕೊಂಡರು ಆಗ ಹಾಜರಿದ್ದ ಪಿ.ಎಸ್.ಐ ಸಾಹೇಬರು ಸದರಿಯವರನ್ನು ವಿಚಾರಿಸಿದಾಗ ಬರೆಯುತ್ತಿದ್ದವನ ಹೆಸರು ವಾಸುದೇವ ತಂದೆ ಶಂಕ್ರಪ್ಪ ಕೊತ್ತಮ್ ವಯಾ 36 ವರ್ಷ ಜಾ: ನೇಕಾರ [ತೊಗಟವೀರ] ಉ:ನೇಕಾರಿಕೆ ಸಾ:ದೋಟಿಹಾಳ ಮತ್ತು ಮಟಕಾ ಚೀಟಿ ಬರೆದು ಕೊಡುತ್ತಿದ್ದವ ಹೆಸರು ವಿಚಾರಿಸಿದಾಗ ನಾಗೇಶ ತಂದೆ ಶಂಕ್ರಪ್ಪ ಕೊತ್ತಮ್ ವಯಾ 40 ವರ್ಷ ಜಾ: ನೇಕಾರ [ತೊಗಟವೀರ] ಉ:ನೇಕಾರಿಕೆ ಸಾ:ದೋಟಿಹಾಳ ಅಂತಾ ತಿಳಿಸಿದರು. ಇವರನ್ನು ಜಡ್ತಿ ಮಾಡಲಾಗಿ ವಾಸುದೇವ ತನ ಹತ್ತಿರ ಕೇವಲ ಒಂದು ಇಂಟೆಕ್ಷ ಮೋಬೈಲ್ ಪೋನ್ ಅಂ:ಕಿ:1000=00 ಗಳಷ್ಟು ಆಗಬಹುದು. ನಾಗೇಶ ಈತನ ವಶದಲ್ಲಿ ಮಟಕಾ ಜೂಜಾಟದ ಹಣ 2560=00 ಗಳ ನಗದು ಹಣ, ಮಟಕಾ ಬರೆದ ಚೀಟಿ, ಮತ್ತು ಒಂದು ಬಾಲ್ ಪೆನ್ನು ಒಂದು ನೋಕಿಯೋ ಮೋಬೈಲ್ ಅಂ:ಕಿ: 400=00 ರೂ:ಗಳಷ್ಟು ಆಗಬಹುದು ಸದರಿಯವುಗಳನ್ನು ಪೋಲಿಸರು ಜಪ್ತ ಮಾಡಿಕೊಂಡರು ಹಾಗೂ ಆರೋಪಿತರನ್ನು ವಶಕ್ಕೆ ತೆಗೆದುಕೊಂಡಿದ್ದು ತಾವು ಬರೆದ ಮಟಕಾ ಪಟ್ಟಿಯನ್ನು ಗಜೇಂದ್ರಗಡದ ವಿಠ್ಠಲಸಾ ತಂದೆ ನಾರಾಯನಸಾ ಬದಿ ಇವರಿಗೆ ಕೊಡುವುದಾಗಿ ತಿಳಿಸಿರುತ್ತಾರೆ. ಎಲ್ಲಾ ನಗದು ಹಣ ಮತ್ತು ಮಟ್ಕಾ ಸಾಮಗ್ರಿಗಳನ್ನು ಜಪ್ತಿ ಮಾಡಿಕೊಂಡಿದ್ದು ಅದೆ ಅಂತಾ ವಗೈರೆ ಸಾರಾಂಶದ ಮೇಲಿಂದ ಪ್ರಕಾರ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದೆ.
2) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 129/2015 ಕಲಂ. ಕಲಂ  454, 457, 380 ಐ.ಪಿ.ಸಿ:.  

ದಿನಾಂಕ: 13-07-2015 ರಂದು ಸಂಜೆ 5-45 ಗಂಟೆಗೆ ಫಿರ್ಯಾದಿದಾರರಾದ ಶಂಭುಲಿಂಗನಗೌಡ ತಂದೆ ವಿರುಪನಗೌಡ ಉ: ಮುಖ್ಯೋಪಾದ್ಯಾಯರು ಸ.ಹಿ.ಪ್ರಾ ಶಾಲೆ ಸರದಾರಗಲ್ಲಿ ಕೊಪ್ಪಳ ಸಾ: ಹಲಗೇರಿ ತಾ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿಯನ್ನು ಹಾಜರಪಡಿಸಿದ್ದು, ಸಾರಾಂಶ ಏನೆಂದರೆ, ತಾವು ದಿನಾಂಕ: 11-07-2015 ರಂದು ಶನಿವಾರದಂದು ಮದ್ಯಾಹ್ನ 12-30 ಗಂಟೆಗೆ ಶಾಲೆಯನ್ನು ಮುಗಿಸಿಕೊಂಡು ಶಾಲೆಯ ಎಲ್ಲಾ ಕೊಠಡಿಯ ಬಾಗಿಲುಗಳಗೆ ಬೀಗ ಹಾಕಿಕೊಂಡು ಹೋಗಿದ್ದು, ಗೇಟ್ ಹತ್ತಿರ ಇರುವ ಬಿಸಿಯೂಟದ ದಾಸ್ತಾನು ಕೊಠಡಿಯ ಬಾಗಿಲುಗೆ ಬೀಗ ಹಾಕಿಕೊಂಡು ತಾವು ತಮ್ಮ ಊರಿಗೆ ಹೋಗಿರುತ್ತಾರೆ. ಇಂದು ದಿನಾಂಕ: 13-07-2015 ರಂದು ಮುಂಜಾನೆ 9-30 ಗಂಟೆಗೆ ತಾವು ಶಾಲೆಗೆ ಬರುತ್ತಿರುವಾಗ ತಮ್ಮ ಶಾಲೆಯ ಸಹಶಿಕ್ಷಕರಾದ ಬಸವರಾಜ ಹೊಸಮನಿ ಇವರು ತಮ್ಮ ಮೊಬೈಲ್ಗೆ ಕರೆ ಮಾಡಿ ವಿಷಯ ತಿಳಿಸಿದ್ದೇನೆಂದರೆ, ತಮ್ಮ ಶಾಲೆಯ ಬಿಸಿಯೂಟದ ದಾಸ್ತಾನು ಕೊಠಡಿಯ ಬಾಗಿಲು ಚೀಲಕ ಮುರಿದಿರುತ್ತದೆ ಬರ್ರಿ ಅಂತಾ ಹೇಳಿದಾಗ ತಾವು ಕೂಡಲೇ ತಮ್ಮ ಶಾಲೆಗೆ ಹೋಗಿ ನೋಡಲು ವಿಷಯ ನಿಜ ಇತ್ತು. ನಂತರ ತಾವುಗಳು ಒಳ ಹೋಗಿ ನೋಡಿದಾಗ ಕೋಠಡಿಯಲ್ಲಿದ್ದ 50 ಕೆ.ಜಿ ತೂಕದ ತೋಗರಿ ಬೇಳಯ ಮೂರು ಪಾಕೇಟುಗಳು ಅಂ.ಕಿ.ರೂ 13,000=00 ಬೆಲೆಬಾಳುವುಗಳು ಕಾಣಲಿಲ್ಲಾ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ತಿಳಿದುಬಂದಿತು. ಕಾರಣ ನಮ್ಮ ಶಾಲೆಯಲ್ಲಿ ಕಳ್ಳತನವಾದ 150 ಕೆ.ಜಿ ತೋಗರಿ ಬೇಳೆ ಅಂ.ಕಿ.ರೂ 13,000=00 ಬೆಲೆ ಬಾಳುವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳತನವಾದ ಬೇಳೆಯನ್ನ ಪತ್ತೇ ಹಚ್ಚಿ ಕಳ್ಳತನ ಮಾಡಿದ ಯಾರೋ ಕಳ್ಳರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ಇರುವ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತೇನೆ.

0 comments:

 
Will Smith Visitors
Since 01/02/2008