Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, July 23, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 159/2015  ಕಲಂ 78(3) Karnataka Police Act:.
ದಿನಾಂಕ 22-07-2015 ರಂದು 20-15 ಗಂಟೆಗೆ ಶ್ರೀ ಈ.ಕಾಳಿಕೃಷ್ಣ, ಪೊಲೀಸ್ ಇನ್ಸಪೆಕ್ಟರ್ ಗಂಗಾವತಿ ನಗರ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ತಮ್ಮದೊಂದು ವರದಿಯನ್ನು  ಜಪ್ತಿ ಪಂಚನಾಮೆ  ಹಾಗೂ ಮುದ್ದೇಮಾಲನ್ನು ನಾಲ್ಕು ಜನ ಆರೋಪಿತರ ಸಮೇತವಾಗಿ ಹಾಜರ ಪಡಿಸಿದ್ದು, ಸದರಿ ವರದಿಯ ಸಾರಂಶವೇನೆಂದರೆ, ಇಂದು ದಿನಾಂಕ 22-07-2015 ರಂದು 19-00 ಗಂಟೆಗೆ ಆರೋಪಿತರಾದ (01) ಕಾಸಿಂಬಾಬಾ. (02) ಹುಲುಗಪ್ಪ. (03) ನಜೀರ ಅಹ್ಮದ. (04) ಕಾಸಿಂ ಅಲಿ ರವರು ಗಂಗಾವತಿ ನಗರದ ಶಾದಿಮಹಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಸಾರ್ವಜನಿಕರನ್ನು ಕರೆದು 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಕೂಗುತ್ತಾ ಸಾರ್ವಜನಿಕರಿಂದ ಹಣವನ್ನು ಕಟ್ಟಿಸಿಕೊಳ್ಳುತ್ತಾ ಮೋಬೈಲ್ ದಲ್ಲಿ ಮತ್ತು ಚೀಟಿಗಳಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ ಸದರಿಯರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಆರೋಪಿತರಿಂದ 01] ಮಟಕ ಜೂಜಾಟದಿಂದ ಸಂಗ್ರಹಿಸಿದ ಒಟ್ಟು ನಗದು ಹಣ ರೂ. 1,070-00. (02) ಒಂದು ಸ್ಯಾಮಸಂಗ್ ಕಂಪನಿಯ ಮೊಬೈಲ್. (03) ಒಂದು ಲಾವಾ ಕಂಪನಿಯ ಮೊಬೈಲ್. (04) ಎರಡು ಮಟಕಾ ನಂಬರ ಬರೆದ ಚೀಟಿಗಳು ಹಾಗೂ (05) ಎರಡು ಪೆನ್ನುಗಳನ್ನು ಪಂಚರ ಸಮಕ್ಷಮ 19-00 ಗಂಟೆಯಿಂದ 20-00 ಗಂಟೆಯವರೆಗೆ ಜಪ್ತಿ ಪಡಿಸಿಕೊಂಡು ಈ ಬಗ್ಗೆ ಜಪ್ತಿ ಪಂಚನಾಮೆ ಬರೆದುಕೊಂಡಿದ್ದು ಇರುತ್ತದೆ. ಸದರಿಯವರ ಮೇಲೆ ಪ್ರಕರಣ ದಾಖಲಿಸಲು ಪಿ.ಐ. ಗಂಗಾವತಿ ನಗರ ಠಾಣೆ ರವರು ನೀಡಿದ ವರದಿ ಮೇಲಿಂದ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 118/2015  ಕಲಂ 87 Karnataka Police Act:.
ದಿನಾಂಕ: 22-07-2015 ರಂದು ಸಂಜೆ 6-45 ಗಂಟೆಗೆ ಮಾನ್ಯ ಸಿ.ಪಿ.. ಸಾಹೇಬರು ಕುಷ್ಠಗಿ ವೃತ್ತ ರವರು ಠಾಣೆಗೆ ಹಾಜರಾಗಿ ಒಂದು ಜ್ಞಾಪನ ಪತ್ರ ಮತ್ತು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ, 3 ಜನ ಆರೋಪಿತರನ್ನು ಹಾಗೂ ಜೂಜಾಟದ ಹಣ 5011=00 ರೂ ಮತ್ತು 52 ಇಸ್ಪೇಟ್ ಎಲೆಗಳನ್ನು, ಹಾಗೂ ಇತರೇ ಜೂಜಾಟದ ಸಾಮಗ್ರಿಗಳನ್ನು  ಹಾಜರು ಪಡಿಸಿದ್ದು ಅದರ ಸಾರಾಂಶವೆನಂದರೆ, ಕುಷ್ಠಗಿ ಪಟ್ಟಣದ ಎಂ..ಪಿ. ಆಪೀಸಿನ ಕೌಂಪೌಂಡ ಹತ್ತಿರ ಕಂದಕೂರ ರಸ್ತೆ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಅಂದರ-ಬಾಹರ ಎಂಬ ಇಸ್ಪೀಟ್-ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಫಿರ್ಯಾಧಿದಾರರು ಮತ್ತು ಸಿಬ್ಬಂದಿಯವರಾದ ಪುಂಡಪ್ಪ .ಎಸ್.., ಹೆಚ್.ಸಿ-36,63 ಪಿ.ಸಿ-117,105,407, ಜೀಪ್ ಚಾಲಕ .ಪಿ.ಸಿ-38 ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 3 ಜನ ಆರೋಪಿತರನ್ನು ಹಾಗೂ ಇಸ್ಪೇಟ್ ಜೂಜಾಟದ ಒಟ್ಟು ಹಣ 5011=00, ಹಾಗೂ 52 ಇಸ್ಪೇಟ್ ಎಲೆಗಳು ಹಾಗೂ ಇತರೇ ಜೂಜಾಟದ ಸಾಮಗ್ರಿಗಳನ್ನು ಪಂಚನಾಮೆ ಜಪ್ತಿಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಹಾಜರು ಪಡಿಸಿದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.   
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 226/2015  ಕಲಂ 04 ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇದ ಅಧಿನಿಯಮ 2004. ಮತ್ತು ಕಲಂ 03, 04 ಮತ್ತು 28 ಕರ್ನಾಟಕ ಮನಿ ಲೆಂಡರ್ಸ್ ಕಾಯ್ದೆ 1961:.
ದಿನಾಂಕ:- 22-07-2015 ರಂದು ಮಧ್ಯಾಹ್ನ 12:30 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ನಾಗರತ್ನ, ಸಬ್ ಇನ್ಸಪೆಕ್ಟರ್ ಆಫ್ ಪೊಲೀಸ್ ತಾವರಗೇರಾ ಪೊಲೀಸ್ ಠಾಣೆ ಇವರು ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿಸಿದ ದೂರಿನೊಂದಿಗೆ ಪಂಚನಾಮೆ ಮತ್ತು ದಾಖಲೆಗಳನ್ನು ಹಾಜರಪಡಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ಗುಪ್ತ ಮಾಹಿತಿ ಮುಖಾಂತರ ಗಂಗಾವತಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಕೆಲವು ವ್ಯಕ್ತಿಗಳು ಅಕ್ರಮ ಬಡ್ಡಿ ವ್ಯವಹಾರ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿರುವ ಹಿನ್ನಲೆಯಲ್ಲಿ ಇದರ ನಿಯಂತ್ರಣಕ್ಕಾಗಿ ಅನಧಿಕೃತವಾಗಿ ಬಡ್ಡಿ ವ್ಯವಹಾರ ಮಾಡುತ್ತಿರುವ ವ್ಯಕ್ತಿಗಳ ಮನೆ ಹಾಗೂ ಆಫೀಸಗಳ ಮೇಲೆ ದಾಳಿ ಮಾಡುವ ಕುರಿತು ಮಾನ್ಯ ನ್ಯಾಯಾಲಯದಿಂದ ಸರ್ಚ ವಾರೆಂಟ್ ಪಡೆದುಕೊಂಡಿದ್ದು ಇರುತ್ತದೆ. ದಿನಾಂಕ: 22-07-2015 ರಂದು ಬೆಳಗಿನ ಜಾವ 5:00 ಗಂಟೆಗೆ ನಾನು ಹಾಗೂ  ಸಿಬ್ಬಂದಿಯವರಾದ ಮ.ಪಿ.ಸಿ. 23, ಪಿ.ಸಿ. 32, 179, 38, 97, 287, 358 ಹಾಗೂ ಪಂಚರಾದ (01) ಶ್ರೀ ದುರಗಣ್ಣ ತಂದೆ ಗೇಲಪ್ಪ, ವಯಸ್ಸು 35 ವರ್ಷ, ಜಾತಿ: ಉಪ್ಪಾರ : ಒಕ್ಕಲುತನ ಸಾ: ಜೀರಾಳ ಕಲ್ಗುಡಿ (2) ಶ್ರೀ ಲಕ್ಕಣ್ಣ ತಂದೆ ದುರಗಪ್ಪ, 30 ವರ್ಷ, ನಾಯಕ : ಒಕ್ಕಲುತನ ಸಾ: ಜೀರಾಳ ಕಲ್ಗುಡಿ ಇವರೊಂದಿಗೆ  ಠಾಣೆಯಿಂದ ಪೊಲೀಸ್ ಜೀಪ್ ನಂ. ಕೆ.ಎ-37/ಜಿ-337 ನೇದ್ದರಲ್ಲಿ ಹೊರಟು ಶ್ರೀರಾಮನಗರಕ್ಕೆ ಬೆಳಿಗ್ಗೆ 06:00 ಗಂಟೆಗೆ ಬಂದಿದ್ದು, ಎಲ್ಲರೂ ಜೀಪಿನಿಂದ ಇಳಿದು ಅಲ್ಲಿಂದ ಶ್ರೀ ಶರಣಪ್ಪ ಬಾವಿ ಇವರ  ಫೈನಾನ್ಸ್ ಗೆ ಹೋಗಿ ನೋಡಲಾಗಿ ಫೈನಾನ್ಸ್ ಗೆ ಬೀಗ ಹಾಕಿದ್ದು, ಅಲ್ಲಿದ್ದ ಕೆಲಸಗಾರ ಕೃಷ್ಣ ತಂದೆ ಭೀಮಪ್ಪ ಚಂದ್ರಗಿ 30 ವರ್ಷ ಸಾ: ಶ್ರೀರಾಮನಗರ ಇವನಿಗೆ ವಿಚಾರಿಸಲು ಫೈನಾನ್ಸ್ ನ ಬೀಗದ ಕೈ ತನ್ನ ಹತ್ತಿರ ಇರುವುದಿಲ್ಲಾ.  ಮಾಲೀಕರ ಹತ್ತಿರ ಇರುವುದಾಗಿ ತಿಳಿಸಿದನು.  ನಂತರ ಮಾಲೀಕ ಶರಣಪ್ಪ ಇವರಿಗೆ ದೂರವಾಣಿ ಮೂಲಕ ಕರೆ ಮಾಡಲಾಗಿ ಅವರು ಊರಲ್ಲಿ ಇರುವುದಿಲ್ಲಾ ಅಂತಾ ತಿಳಿಸಿದ್ದು, ನಂತರ  ಅವರ ಫೈನಾನ್ಸ್  ಆಫೀಸ್ ಮೇಲೆ ದಾಳಿ ಮಾಡುವ ಸಲುವಾಗಿ ಮಾನ್ಯ ನ್ಯಾಯಾಲಯದಿಂದ ವಿಶೇಷ ಸರ್ಚ ವಾರೆಂಟ್ ಪಡೆದುಕೊಂಡಿರುವುದಾಗಿ ಹೇಳಿ ಆಫೀಸ್ ಹತ್ತಿರ ಬಂದು ಬೀಗವನ್ನು ತೆಗೆದು ಆಫೀಸ ಪರಿಶೀಲಿಸುವಾಗ ಸಹಕರಿಸುವಂತೆ ತಿಳಿಸಿದ್ದು, ಆದರೆ ಅವರು ಸುಮಾರು 3 ಗಂಟೆಗಳ ಕಾಲ ಕಾದರೂ ಸಹ ಬರದೇ ಇದ್ದುದರಿಂದ ಬೆಳಿಗ್ಗೆ 10:00 ಗಂಟೆಗೆ ಒಬ್ಬ ಬೀಗ ಮುರಿಯುವ ಜೋಗೇರ ದುರುಗೇಶ ತಂದೆ ರಾಮಣ್ಣ ಸಾ: ಗಂಗಾವತಿ ಎಂಬುವವನನ್ನು ಕರೆಯಿಸಿ  ಪಂಚರ ಸಮಕ್ಷಮದಲ್ಲಿ ಬೀಗ ಮುರಿದು ಒಳಗೆ  ಹೋಗಿ ಟೇಬಲ್ ಡ್ರಾ ಮತ್ತು ಗೋಡೆಯ ಅಲಮಾರವನ್ನು ತೆಗೆದು ಪರಿಶೀಲಿಸಲಾಗಿ ಅಲ್ಲಿ ಪ್ರಾಮೀಜರಿ ನೋಟಗಳ ಒಂದು ಖಾಲಿ ಪುಸ್ತಕ ಮತ್ತು 5 ಖರೀದಿ ಪತ್ರಗಳು ಮತ್ತು ಖರೀದಿ ಕರಾರು ಪತ್ರಗಳು ಮತ್ತು ಮಾರಾಟ ಕರಾರು ಪತ್ರದ ದಾಖಲಾತಿಗಳು ದೊರೆತಿರುತ್ತವೆ.  ಇವುಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಬರೆದುಕೊಂಡಿದ್ದು ಇರುತ್ತದೆ. ಸದರಿ  ಶರಣಪ್ಪ ಬಾವಿ ಇವರು ಸಾರ್ವಜನಿಕರಿಂದ ಹೆಚ್ಚಿನ ಬಡ್ಡಿಗಾಗಿ ಮತ್ತು ಸಾರ್ವಜನಿಕರಿಗೆ ತೊಂದರೆ ಕೊಡುವ ಉದ್ದೇಶದಿಂದ ಅವರಿಂದ ಸಹಿ ಮಾಡಿಸಿಕೊಳ್ಳಲು ಖಾಲಿ ಪ್ರಾಮಿಸರಿ ನೋಟ್ಗಳನ್ನು ಇಟ್ಟುಕೊಂಡಿದ್ದು ಮತ್ತು   ಸಾಲಕ್ಕಾಗಿ ಖರೀದಿ ಪತ್ರಗಳನ್ನು ಬರೆಯಿಸಿಕೊಂಡಂತೆ ಕಂಡುಬಂದಿದ್ದು ಇರುತ್ತದೆ.   ಕಾರಣ ಸದರಿ ಬಾವಿ ಶರಣಪ್ಪ ತಂದೆ ಬಾವಿ ಬಸನಗೌಡ, ವಯಸ್ಸು 57 ವರ್ಷ, ಜಾತಿ: ಲಿಂಗಾಯತ ಸಾ: ಸಿದ್ದಾಪೂರು ತಾ: ಗಂಗಾವತಿ ಇತನ ಮೇಲೆ ಕಲಂ 04 ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇದ ಅಧಿನಿಯಮ 2004. ಮತ್ತು ಕಲಂ 03, 04 ಮತ್ತು 28 ಮನಿ ಲೆಂಡರ್ಸ್ ಕಾಯ್ದೆ ನೇದ್ದರ ಅಡಿಯಲ್ಲಿ ಕ್ರಮ ಜರುಗಿಸಲು ಸೂಚಿಸಿದೆ." ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 226/2015 ಕಲಂ  04 ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇದ ಅಧಿನಿಯಮ 2004. ಮತ್ತು ಕಲಂ 03, 04 ಮತ್ತು 28 ಕರ್ನಾಟಕ ಮನಿ ಲೆಂಡರ್ಸ್ ಕಾಯ್ದೆ 1961 ರ ಅಡಿಯಲ್ಲಿ ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು
4) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 162/2015  ಕಲಂ 04 ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇದ ಅಧಿನಿಯಮ 2004. ಮತ್ತು ಕಲಂ 506 ಐ.ಪಿ.ಸಿ:.

ದಿನಾಂಕ 22-07-2015 ರಂದು ಮದ್ಯಾಹ್ನ 13-40 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಎಮ್. ಗೋಪಾಲ್ ಕೃಷ್ಣಾ ರೆಡ್ಡಿ ತಂದಿ ರಾಮಾರಾವ್ ವಯ-40 ವರ್ಷ ಜಾ. ಕಮ್ಮಾ ಸಾ. ರಾಮನಗರ ಕಾರಟಗಿ ತಾ. ಗಂಗಾವತಿ ರವರು ಠಾಣೆಗೆ ಹಾಜರಾಗಿ ತಮ್ಮದೊಂದು ಗಣಕೀಕೃತ ಫಿರ್ಯಾದಿಯನ್ನು ಹಾಝರುಪಡಿಸಿದ್ದು ಅದರ ಸಾರಾಂಶವೆನಂದರೆ, ನಾನು ಕಾರಟಗಿಯ ಶರಣಪ್ಪ ತಂದಿ ಸಿದ್ದಪ್ಪ ಸಾಲೋಣಿ ಇವರಿಂದ ದಿನಾಂಕಃ21-11-2011 ರಂದು ರೂ. 10,00,000/- ಅದಕ್ಕೆ ತಿಂಗಳಿಗೆ ನೂರಕ್ಕೆ ರೂ.3/- ಬಡ್ಡಿಕೊಡುವ ಷರತ್ತಿನ ಮೇಲೆ ಸಾಲವಾಗಿ ಪಡೆದಿದ್ದೇನು ಅದರ ಭದ್ರತೆಗಾಗಿ ಮತ್ತು ಮರುಪಾವತಿಗಾಗಿ ಸದರಿ ಶರಣಪ್ಪ ಇವರು ನನ್ನ ಹೆಂಡತಿಯ ಹೆಸರನಲ್ಲಿದ್ದ ಭೂಮಿಯನ್ನು ತನ್ನ ತಾಯಿಯ ಹೆಸರಿಗೆ ಖರೀದಿ ಕರಾರು ಪತ್ರ ಮಾಡಿಸಿಕೊಂಡಿರುತ್ತಾರೆ. ಮತ್ತು ಅದೇ ದಿನ ನನ್ನಿಂದ ಸಹಿ ಮಾಡಿದ 3 ಖಾಲಿ ಚೆಕ್ ಗಳು ಮತ್ತು ಸಹಿ ಮಾಡಿದ ಮುದ್ರಿತ 3 ಖಾಲಿ ಪ್ರಾಮಿಸರಿ ಮೋಟುಗಳನ್ನು ಪಡೆದಿರುತ್ತಾರೆ. ಅಲ್ಲದೇ ದಿನಾಂಕ- 19-09-2013 ರಂದು ಸದರಿ ಶರಣಪ್ಪ ಕಡೆಯಿಂದ ರೂ, 500,000/-ಗಳನ್ನು ಅದಕ್ಕೆ ತಿಂಗಳಿಗೆ ರೂ. 3/- ಬಡ್ಡಿಕೊಡಯವ ಷರತ್ತಿನ ಮೇಲೆ ಸಲಾವಾಗಿ ಪಡೆದುಕೊಂಡಿದ್ದೇನು ಅದರ ಭದ್ರತೆಗಾಗಿ ಮರುಪಾವತಿಗಾಗಿ ಶರಣಪ್ಪ ಇವರು ನನ್ನ ಹೆಂಡತಿಯ ಹೆಸರಿನ ಭೂಮಿಯನ್ನು ತನ್ನ ಹೆಸರಿನಲ್ಲಿ ಖರೀಧಿ ಕರಾರು ಪತ್ರ ಮಾಡಿಸಿಕೊಂಡಿರುತ್ತಾರೆ ಮತ್ತು ಅಂದು ನನ್ನಿಂದ 2 ಖಾಲಿ ಚೆಕ್ ಮತ್ತು ಮುದ್ರಿತ 2 ಪ್ರಾಮೀಸರಿ ನೋಟುಗಳನ್ನು ಪಡೆದಿರುತ್ತಾರೆ. ನಾನು ಸದರಿ ಸಾಲವನ್ನು ಒಪ್ಪಿದ ಪ್ರಕಾರ ನಿಗದಿತ ಸಮಯದಲ್ಲಿ ಮರುಪಾವತಿ ಮಾಡದೇ ಇದ್ದುದರಿಂದ ಪುನಃ ಸದರಿ ಶರಣಪ್ಪ ಇವರು ನನ್ನ ಹೆಂಡತಿಯ ಹೆಸರಿನಲ್ಲಿದ್ದ ಭೂಮಿಯನ್ನು ತನ್ನ ತಾಯಿಯ ಹೆಸರಿನಿಂದ ರದ್ದು ಪಡಿಸಿ ಅವುಗಳ ಮಾರುಕಟ್ಟೆ ಬೆಲೆ ಹಾಗೂ ಮುಂಗಡ ಹಣ ಹೆಚ್ಚಿಗೆ ಮಾಡಿ ತಮ್ಮ ಹೆಸರಿನಲ್ಲಿ ಪುನಃ ದಿನಾಂಕ-30-11-2013 ರಂದು ತನ್ನ ಹೆಸರಿನಲ್ಲಿ ಖರಿದಿ ಖರಾರು ಪತ್ರಗಳನ್ನು ಮಾಡಿಸಿಕೊಂಡಿರುತ್ತಾರೆ ತನ್ನ ಹೆಸರಿನಲ್ಲಿ ಮಾಡಿಸಿಕೊಂಡ ಸದರಿ ಖರೀದಿ ಕರಾರು ಪತ್ರಗಳ ಆಧಾರದ ಮೇಲೆ ನನ್ನ ಹೆಂಡತಿಯ ವಿರುದ್ದ ಮಾನ್ಯ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಮಾಡಿರುತ್ತಾರೆ. ಅದೇ ಪ್ರಕಾರ ನನ್ನ ಕಡೆಯಿಂದ ಖಾಲಿ ಚೆಕ್ ಮತ್ತು ಪ್ರಾಮೀಸರಿ ನೋಟಗಳ ಆದಾರದ ಮೇಲೆ ತನ್ನ ಗೆಳೆಯನಾದ ರಮೇಶ ತಂದಿ ಮಲ್ಲಪ್ಪ ಕುಂಟೋಜಿ ಸಾ. ಯರಡೋಣ 2) ಕೆ. ಅಂಬಣ್ಣ ದೇವಣ್ಣ ಸಾ. ಗುಡಿತಿಮ್ಮಪ್ಪನ ಕ್ಯಾಂಪ್ ಕಾರಟಗಿ ಇವರುಗಳ ಕಡೆಯಿಂದ ನನ್ನ ಮೇಲೆ ಚೆಕ್ ಗಳ ಆಧಾರದ ಮೇಲೆ ಗಂಗಾವತಿಯ ಮಾನ್ಯ ಅಪಾರ ಜೆ.ಎಮ್.ಎಫ್.ಸಿ ನ್ಯಾಯಾಲಯದಲ್ಲಿ ಕೇಸ ಮಾಡಿಸಿರುತ್ತಾರೆ. ಸದರಿ ಶರಣಪ್ಪ ಇವರು ನಾನು ಅವರಿಂದ 10,000,00/- ಗಳನ್ನು ಸಾಲ ಪಡೆದಾಗ ಮತ್ತು ನನ್ನ ಹೆಂಡತಿಯ ಹೆಸರಿನಲ್ಲಿ ಇದ್ದ ಭೂಮೀಯನ್ನು ತನ್ನ ತಾಯಿಯ ಹೆಸರಿನಲ್ಲಿ ಭದ್ರತೆಗಾಗಿ ಖರಿದಿ ಖರಾರು ಪತ್ರ ಮಾಡಿಸಿಕೊಂಡಾಗ ನಾನು ಹಣ ಹಾಗೂ ಬಡ್ಡಿಯನ್ನು ಪಾವತಿ ಮಾಡಿದಾಗ ಅದನ್ನು ರದ್ದು ಮಾಡುವುದಾಗಿ ನನಗೆ ಪ್ರತ್ಯೇಖ ಖರಾರು ಪತ್ರಗಳನ್ನು ಸಹ ಮಾಡಿಸಿಕೊಂಡಿರುತ್ತಾರೆ. ನಾನು ಸದರಿ ಶರಣಪ್ಪ ಇವರಿಗೆ ಸದರಿ ಸಾಲಾದ ಹಣ ಹಾಗೂ ಅದರ ಮೇಲಾಧ ನ್ಯಾಯಯುತ ಬಡ್ಡಿಯನ್ನು ಸೇರಿಸಿ ಮರುಪಾವತಿ ಮಾಡಲು ಸಿದ್ದನಿದ್ದರೂ ಸಹ ನನ್ನಿಂದ ಹಣ ಮತ್ತು ಬಡ್ಡಿಯನ್ನು ಪಡೆಯದೇ ಹೆಚ್ಚಿನ ಬಡ್ಡಿ ಹಾಗೂ ದಾಖಲೆಯಲ್ಲಿ ನಮೂದು ಮಾಡಿದ ಸಾಲದ ಹೆಚ್ಚಿನ ಹಣವನ್ನು ಮರುಪಾವತಿ ಮಾಡಬೇಕೆಂದು ನನಗೆ ತುಂಭಾ ತೊಂದರೆ ಮತ್ತು ಕಿರುಕುಳ ನೀಡುತ್ತಾ ಬಂದಿರುತ್ತಾರೆ. ಸದರಿ ಶರಣಪ್ಪ ಮತ್ತು ಆತನ ಗೆಳೆಯರು ಕೂಡಿ ಯಾವುದೇ ಪರವಾನಿಗೆಯನ್ನು ಪಡೆಯದೇ ಲೇವಾದೇವಿ ವ್ಯವಹಾರ ಮಾಡುತ್ತಿರುತ್ತಾರೆ ಮತ್ತು ತಾವು ನೀಡಿದ ಸಾಲದ ಹಣಕ್ಕಿಂತ ಹೆಚ್ಚಿನ ಹಣವನ್ನು ದಾಖಲೆಯಲ್ಲಿ ನಮೂದಿಸಿ ತಿಂಗಳಿಗೆ ನೂರಕ್ಕೆ 3/- ರಿಂದ ರೂ. 4/- ಹಣವನ್ನು ನೀಡುವಂತೆ ನನಗೆ ಒತ್ತಾಯಿಸುತ್ತಾರೆ ಅದಕ್ಕೆ ನಾನು ಒಪ್ಪದೆ ಇದ್ದಾಗ ನನಗೆ ಹಾಗು ನನ್ನ ಹೆಂಡತಿ ಶ್ರೀಮತಿ ನಳನಿಗೆ ದಾಖಲೆಯ ಪ್ರಕಾರ ಪಾವತಿ ಮಾಡದೇ ಇದ್ದರೆ ನಿಮ್ಮಗಳನ್ನು ಜೀವ ಸಹಿತ ಉಳಿಸುವುದಿಲ್ಲವೆಂದು ಜೀವದ ಬೇದರಿಕೆ ಸಹ ಹಾಕಿರುತ್ತಾರೆ. ಕಾರಣ ದಯಾಳುಗಳಾದ ತಾವು ಅವರುಗಳ ವಿರುದ್ದ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಂಡು ಅವರಿಂದ ನನಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ನನಗೆ ಮತ್ತು ನನ್ನ ಹೆಂಡತಿಗೆ ರಕ್ಷಣೆ ನೀಡಿ ಅವರುಗಳಿಂದ ನಮ್ಮಗಳನ್ನು ರಕ್ಷಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕಳಕಳಿಯ ಪ್ರಾರ್ಥಿಸುತ್ತೇನೆ. ಅಂತಾ ಮುಂತಾಗಿ ನೀಡಿದ ಪಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  

0 comments:

 
Will Smith Visitors
Since 01/02/2008