ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 49/2015
ಕಲಂ 78(3) Karnataka Police
Act:.
ದಿನಾಂಕ 23.07.2015 ರಂದು
ಸಂಜೆ 5:45 ಗಂಟೆ ಸುಮಾರಿಗೆ ವಟಪರ್ವಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ 1 ನೇದ್ದವನು
ಓ/ಸಿ ಜೂಜಾಟ ದಲ್ಲಿ ತೊಡಗಿದ್ದಾಗ ಪಿಎಸ್.ಐ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲಾಗಿ
ಆರೋಪಿತನು ಸಿಕ್ಕಿ ಬಿದ್ದಿದ್ದು ಆರೋಪಿತನಿಂದ ಓಸಿ ಜೂಜಾಟದ ನಗದು ಹಣ 480/- ಒಂದು ಬಾಲ ಪೇನ್ನ ಒಂದು
ಓಸಿ ಪಟ್ಟಿ ಜಪ್ತ ಮಾಡಿಕೊಂಡಿದ್ದು ಇರುತ್ತದೆ ಓಸಿ ಪಟ್ಟಿಗಳನ್ನು ಆರೋಪಿ ನಂ 2 ನೇದ್ದವರಿಗೆ ಕೊಡುವುದಾಗಿ
ತಿಳಿದು ಬಂದಿದ್ದು ಇರುತ್ತದೆ ಸದರಿ ಓ,ಸಿ ಜೂಜಾಟದ ಸಾಮಗ್ರಿಗಳನ್ನು ಮತ್ತು ಸಿಕ್ಕಿ ಬಿದ್ದ ಆರೋಫಿತನೊಂದಿಗೆ
ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ ಹಾಜರ ಪಡಿಸಿ ವರದಿ ನೀಡಿದ್ದರ ಮೇಲಿಂದ ಕ್ರಮ ಜರುಗಿಸಿದ್ದು ಅದೆ.
2) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 120/2015
ಕಲಂ 87 Karnataka Police
Act:.
ದಿನಾಂಕ 23-07-2015 ರಂದು ಸಂಜೆ 6 ಗಂಟೆರೆ ಶ್ರೀ. ಪುಂಡಪ್ಪ ಎ.ಎಸ್.ಐ. ಕುಷ್ಟಗಿ ಪೊಲೀಸ್
ಠಾಣೆ ರವರು ಒಂದು ವರದಿ ಮತ್ತು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ, 4 ಜನ ಆರೋಪಿತರನ್ನು ಹಾಗೂ ಜೂಜಾಟದ
ಹಣ 1090=00 ರೂ ಮತ್ತು 52 ಇಸ್ಪೇಟ ಎಲೆಗಳನ್ನು ಹಾಗೂ ಇತರೇ ಜೂಜಾಟದ ಸಾಮಗ್ರಿಗಳನ್ನು ಹಾಜರು ಪಡಿಸಿದ್ದು
ಅದರ ಸಾರಾಂಶವೆನೆಂದರೆ, ಚಳಗೇರಿ ಗ್ರಾಮದ ಸಂಗಮೇಶ ಯುವಕ ಮಂಡಳದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಂದರ-ಬಾಹರ ಎಂಬ ಇಸ್ಪೇಟ-ಜೂಜಾಟ ನಡೆದಿದೆ ಅಂತಾ ತಿಳಿದು
ಬಂದಿದ್ದು ಆಗ ಎ.ಎಸ್.ಐ ಮತ್ತು ಸಿಬ್ಬಂದಿರವರು ಎಲ್ಲರೂ ಕೂಡಿ ಹೋಗಿ ರೇಡ ಮಾಡಿ 4 ಜನ ಆರೋಪಿತರನ್ನು
ಹಾಗೂ ಇಸ್ಪೇಟ ಜೂಜಾಟದ ಒಟ್ಟು ಹಣ 1090/- ಹಾಗೂ 52 ಇಸ್ಪೇಟ ಎಲೆಗಳು ಹಾಗೂ ಇತರೇ ಜೂಜಾಟದ ಸಾಮಗ್ರಿಗಳನ್ನು
ಪಂಚನಾಮೆ ಜಪ್ತಿಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈ ಗೊಂಡಿರುತ್ತಾರೆ.
3) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 77/2015
ಕಲಂ 279,
304(ಎ) ಐ.ಪಿ.ಸಿ:
ದಿನಾಂಕ: 23-07-2015 ರಂದು ಮಧ್ಯಾಹ್ನ
2-30 ಗಂಟೆಗೆ ಫಿರ್ಯಾದಿದಾರರರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಒಂದು ಫಿರ್ಯಾದಿಯನ್ನು ಹಾಜರುಪಡಿಸಿದ್ದು,
ಸದರ ಫಿರ್ಯಾದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 23-07-2015 ರಂದು ಬೆಳಗ್ಗೆ ಫಿರ್ಯಾದಿ ಹಾಗೂ ಅವರ ಮಾವ ಇಮಾಮ ಅಲಿ ಹಾಗೂ ಇನ್ನೂಬ್ಬ ಮಾವ ಮೃತ ಹಾಸಿಂಸಾಬ ತಂದೆ ಮಹ್ಮದ್ಸಾಬ ಮಕ್ಕಂದರ್
ಸಾ: ಕವಲೂರು ಇವರು ತಮ್ಮ ಸಂಭಂದಿಕರ ಮನೆಯಲ್ಲಿ ಜವಳದ ಕಾರ್ಯಕ್ರಮ ಇದ್ದ ಪ್ರಯುಕ್ತ ಮೂವರು ಕೂಡಿಕೊಂಡು
ಮುಂಡರಗಿಗೆ ಹೋಗಿ, ಮುಂಡರಗಿಯಲ್ಲಿ ಬಟ್ಟೆ ಖರೀದಿ ಮಾಡಿಕೊಂಡು ಮೃತನು ತನ್ನ ಮೋಟರ್ ಸೈಕಲ್ ನಂ: ಕೆಎ-37
ವಿ-9745 ನೇದ್ದರ ಮೇಲೆ ಹಾಗೂ ಫಿರ್ಯಾದಿ ಹಾಗೂ ಇಮಾಮ ಅಲಿ ಇಬ್ಬರೂ ಇನ್ನೂಂದು ಮೋಟರ್
ಸೈಕಲ್ ಮೇಲೆ ಕವಲೂರಿಗೆ ಹೋಗುತ್ತಿದ್ದು, ಫಿಯರ್ಾದಿದಾರನ ಮೋಟರ್ ಸೈಕಲ್ ಮುಂದೆ ಮೃತನು ತನ್ನ ಮೋಟರ್
ಸೈಕಲ್ನ್ನು ನಡೆಸಿಕೊಂಡು ಹೋಗುತ್ತಿದ್ದು, ಮೃತನು ತನ್ನ ಮೋಟರ್ ಸೈಕಲ್ನ್ನು ನಡೆಸಿಕೊಂಡು ಮುಲರ್ಾಪುರ
ಸೀಮಾದಲ್ಲಿ ಬರುವ ಹಳ್ಳದ ಬ್ರೀಜ್ಡ್ ಹತ್ತಿರ ಬರುತ್ತಿದ್ದಾಗ, ಎದರುಗಡೆಯಿಂದ ಅಂದರೆ ಮುಲರ್ಾಪುರ ಕಡೆಯಿಂದ
ಕೆ.ಎಸ್.ಆರ್.ಟಿ.ಸಿ. ಸಕರ್ಾರಿ ಬಸ್ ನಂ: ಕೆಎ-26 ಎಫ್-658 ನೇದ್ದನ್ನು ಅದರ ಚಾಲಕನಾದ ಅಂದಪ್ಪ ಸೊಬಗಿನ
ಸಾ: ನಿಡಗುಂದಿ ಈತನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು, ಮೃತನಿಗೆ ಹಾಗೂ ಆತನ
ಮೋಟರ್ ಸೈಕಲ್ಗೆ ಟಕ್ಕರ್ ಕೊಟ್ಟು ಅಫಘಾತ ಮಾಡಿದ್ದರಿಂದ ಮೃತನು ಮೋಟರ್ ಸೈಕಲ್ನೊಂದಿಗೆ ಜೋರಾಗಿ ರಸ್ತೆಯ
ಮೇಲೆ ಬಿದ್ದ ಪರಿಣಾಮ ಆತನಿಗೆ ಹಣೆಯ ಮೇಲೆ ತಲೆಗೆ ಹಾಗೂ ಬಲಗೈ ಮೇಲೆ ಭಾರಿ ಸ್ವರೂಪದ ರಕ್ತಗಾಯವಾಗಿ
ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ. ಕಾರಣ ಹಾಸಿಂಸಾಬ ಮಕ್ಕಂದರ್ ಸಾ: ಕವಲೂರು ಈತನ ಸಾವಿಗೆ ಕಾರಣನಾದ ಬಸ್ ಚಾಲಕನಾದ ಅಂದಪ್ಪ ತಂದೆ ಕರಿಸಿದ್ಧಪ್ಪ
ಸೊಬಗಿನ ಸಾ: ನಿಡಗುಂದಿ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ.
4) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 183/2015
ಕಲಂ 279, 337,
338, 304(ಎ) ಐ.ಪಿ.ಸಿ:
ದಿನಾಂಕ 23.07.2015 ರಂದು ಮದ್ಯಾನ 1:30 ಗಂಟೆಯ ಸುಮಾರಿಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆ
ಕೊಪ್ಪಳದಿಂದ ಎಮ್.ಎಲ್,ಸಿ ಮಾಹಿತಿ
ಬಂದಿದ್ದು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ
ಪಡೆಯುತ್ತಿದ್ದ ಗಾಯಾಳುಗಳನ್ನು ಪರಿಶೀಲಿಸಿದ್ದು ಗಾಯಾಳು ಹನುಮಪ್ಪ ತಾಯಿ ಚನ್ನವ್ವ ಹರಿಜನ
ಇತನ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೇನೆಂದರೆ,ಇಂದು ಮದ್ಯಾನ 12:30 ಗಂಟೆಗೆ ನಾನು ಕೊಪ್ಪಳ ಕುಷ್ಟಗಿ ರಸ್ತೆಯ ಟಣಕನಕಲ್ ಸಮೀಪ ನನ್ನ ಮೋ.ಸೈ
ನಂ ಕೆ.ಎ-37/ಎಲ್-8464 ನೇದ್ದನ್ನು ಓಡಿಸಿಕೊಂಡು ಕೊಪ್ಪಳ ಕಡೆಗೆ ಬರುವಾಗ ನನ್ನ ಮುಂದೆ ಒಂದು
ಟ್ರ್ಯಾಕ್ಟರ ಇಂಜೆನ್ ನಂ ಝಡ್.ಜೆ.ಬಿ.ಸಿ03977 ನೇದ್ದರ ಚಾಲಕ ತನ್ನ ಟ್ರ್ಯಾಕ್ಟರನ್ನು
ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಹೋಗಿ ಬರುವ ವಾಹನಗಳಿಗೆ ಸರಿಯಾದ ಸೂಚನೆಗಳನ್ನು ಕೊಡದೇ
ಅತಿವೇಗವಾಗಿ ಓಡಿಸಿಕೊಂಡು ಹೋಗುತ್ತಾ ಒಮ್ಮೆಲೆ ಬ್ರೇಕ್ ಹಾಕಿದ್ದರಿಂದ , ಅದೇ ವೇಳೆಗೆ ನನ್ನ ಹಿಂದಿನಿಂದ ಕಾರ್ ನಂ ಕೆ.ಎ-37/ಎಮ್-7451 ನೇದ್ದರ ಚಾಲಕನು ತನ್ನ
ಕಾರನ್ನು ಅತಿವೇಗವಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕರವಾಗುವ ರೀತಿಯಲ್ಲಿ
ಓಡಿಸುತ್ತಾ ನನ್ನನ್ನು ಓವರ್ ಟೇಕ್ ಮಾಡಿ ಮುಂದೆ ಹೊರಟಿದ್ದ ಟ್ರ್ಯಾಕ್ಟರಗೆ ಟಕ್ಕರಕೊಟ್ಟು , ನನ್ನ ಗಾಡಿಗೆ ಸಹ ತಗುಲಿಸಿ ಅಪಘಾತ ಮಾಡಿದ್ದರಿಂದ ನನಗೆ
ಪೆಟ್ಟಾಗಿರುತ್ತವೆ. ಕಾರಿನಲ್ಲಿದ್ದ ರಾಮಣ್ಣ ರಾಮನಗೌಡರ್ ಸಾ: ವಡ್ಡರಕಲ್, ಹಾಗೂ ಉದಯಕುಮಾರ ಸಾ: ಚಿಕ್ಕಬೊಮ್ಗನಾಳ, ಶಿವಪುತ್ರಪ್ಪ ವಂಕಲಕುಂಟಾ ಸಾ: ವಡ್ಡರಕಲ್ ಇವರಿಗೆ ಸಾದಾ ಮತ್ತು ಭಾರಿ ಸ್ವರೂಪದ
ಗಾಯಗಳಾಗಿದ್ದು, ಕಾರ್ ಚಾಲಕ ಶ್ರೀನಿವಾಸ
ದರೋಜಿ ಸಾ: ವಡ್ಡರಕಲ್ ಇತನಿಗೆ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ.
ಟ್ರ್ಯಾಕ್ಟರ ಚಾಲಕ ಹನುಮಂತಪ್ಪ ತಳವಾರ ಸಾ: ಕರಡೋಣಿ ಇತನಿಗೆ ಯಾವುದೇ ಗಾಯಗಳಾಗಿರುವುದಿಲ್ಲಾ, ಕಾರಣ ಸದರಿ ಕಾರ್ ಚಾಲಕ ಮೃತ ಶ್ರೀನಿವಾಸ ಹಾಗೂ ಟ್ರ್ಯಾಕ್ಟರ ಚಾಲಕ
ಹನುಮಂತಪ್ಪ ತಳವಾರ ಸಾ: ಕರಡೋಣಿ ಇಬ್ಬರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರನ್ನು
ಪಡೆದುಕೊಂಡು,ವಾಪಾಸ ಠಾಣೆಗೆ 2:30 ಪಿ.ಎಮ್ ಕ್ಕೆ ಬಂದು
ಸದೆರಿ ದೂರಿನ ಮೆಲಿಂದ ಮೆಲ್ಕಂಡಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
5) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 183/2015
ಕಲಂ 279, 337,
338, 304(ಎ) ಐ.ಪಿ.ಸಿ:
ದಿನಾಂಕ 23.07.2015 ರಂದು ಮದ್ಯಾನ 2:30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ
ಹಾಜರಾಗಿ ಹೇಳಿಕೆ ಪಿರ್ಯಾದಿಯನ್ನು ನೀಡಿದ್ದು ಸಾರಾಂಶವೇನೆಂದರೆ ದಿನಾಂಕ 23.07.2015
ರಂದು ಬೆಳಿಗ್ಗೆ 8:00 ಗಂಟೆಗೆ ನನ್ನ ಮಗ ಸೂರ್ಯಪ್ಪ ಇತನು ಹಿರೇಹಳ್ಳದಲ್ಲಿ ಮರಳನ್ನು
ತುಂಬಿಕೊಂಡು ಬರಲು ನಮ್ಮೂರ ಹಂಚಾಳಪ್ಪ ವಾಲ್ಮೀಕಿ ಇವರ ಟ್ರ್ಯಾಕ್ಟರನ್ನು ತೆಗೆದುಕೊಂಡು
ಹೋಗುತ್ತೇನೆ ಅಂತಾ ಹೇಳಿ ಮನೆಯಿಂದ ಹೋಗಿದ್ದನು. ನಂತರ ನಾನು ಮದ್ಯಾನ 1:30 ಗಂಟೆಯ ಸುಮಾರಿಗೆ
ಮನೆಯಲ್ಲಿದ್ದಾಗ ನನ್ನ ಮಗನ ಮೊಬೈಲ್ ಫೋನ್ನಿಂದ ಯಾರೋ ಒಬ್ಬರು ಕರೆಮಾಡಿ ಮದ್ಯಾನ 1:00 ಗಂಟೆಗೆ
ಹನುಮನಹಳ್ಳಿ-ಟಣಕನಕಲ್ ರಸ್ತೆಯ ಮದ್ಯದಲ್ಲಿ ಟ್ರ್ಯಾಕ್ಟರ ಅಪಘಾತದಲ್ಲಿ ಗಾಯಗೊಂಡು ಸ್ಥಳದಲ್ಲಿಯೇ
ಮೃತ ಪಟ್ಟಿರುತ್ತಾನೆ ನೀವು ಕೂಡಲೇ ಬರ್ರಿ ಅಂತಾ ತಿಳಿಸಿದ ಮೇರೆಗೆ ನಾನು ಸ್ಥಳಕ್ಕೆ ಬಂದು
ನೋಡಿದ್ದು ವಿಷಯ ನಿಜವಿತ್ತು. ನಾನು ನೋಡಲು ನನ್ನ ಮಗ ಸೂರ್ಯಪ್ಪ ಇತನು ಹನುಮನಹಳ್ಳಿ ಗ್ರಾಮದಿಂದ
ಟಣಕನಕಲ್ ಗ್ರಾಮದ ಕಡೆಗೆ ಖಾಲಿ ಇರುವ ತನ್ನ ಟ್ರ್ಯಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ
ಮಾನವ ಜೀವಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದು ತನ್ನ ಟ್ರ್ಯಾಕ್ಟರ ಮೇಲೆ ತನ್ನ ನಿಯಂತ್ರಣ
ಸಾಧಿಸದೇ ಟ್ರ್ಯಾಕ್ಟರ ಮೇಲಿಂದ ಕೆಳಗೆ ಪುಟಿದು ರಸ್ತೆಯ ಮೇಲೆ ಬಿದ್ದು ತಲೆಗೆ ಭಾರಿ
ರಕ್ತಗಾಯವಾಗಿ ಸ್ಥಲದಲ್ಲಿಯೇ ಮೃತ ಪಟ್ಟಿದ್ದು ಅಲ್ಲದೇ ಟ್ರ್ಯಾಕ್ಟರನಿಂದ ಪುಟಿದು ಬಿದ್ದ ನಂತರ
ಸದರ ಟ್ರ್ಯಾಕ್ಟರ ಮುಂದೆ ಹೋಗಿ ಎಡಕ್ಕೆ ತೆಗ್ಗಿನಲ್ಲಿ ಇಳಿದು ರಸ್ತೆಯ ಪಕ್ಕದಲ್ಲಿದ್ದ ಕರೆಂಟ್
ಕಂಬಕ್ಕೆ ಜೋರಾಗಿ ಟಕ್ಕರಹೊಡೆದಿದ್ದರಿಂದ ಲೈಟಿನ ಕಂಬವು ಸಹ ಮುರಿದಿದ್ದು ಇರುತ್ತದೆ. ನನ್ನ ಮಗನು
ಚಲಾಯಿಸಿಕೊಂಡು ಬಂದಿದ್ದ ಟ್ರ್ಯಾಕ್ಟರ ನಂಬರ ನೋಡಲು ಕೆ.ಎ-37/ಟಿ.ಬಿ-1067, ಟ್ರೇಲರ ನಂ ಕೆ.ಎ-37/ಟಿ.ಬಿ-1068 ಅಂತಾ ಇತ್ತು.ನಂತರ ಸ್ಥಳದಲ್ಲಿಯೇ
ಮೃತ ಪಟ್ಟಿದ್ದು ಇರುತ್ತದೆ. ಕಾರಣ ನನ್ನ ಮಗ ಮೃತ ಸೂರ್ಯಪ್ಪ ತಂದೆ ದೇವಪ್ಪ ಹರಿಜನ ಸಾ:
ಚಿಲವಾಡಗಿ ಇತನ ಮೇಲೆ ಮುಂದಿನ ಕ್ರಮ ಜರುಗಿಸಲು ವಿನಂತಿ.ಅಂತಾ ಮೇಲ್ಕಂಡಂತೆ ಪ್ರಕರಣ ದಾಖಲಿಸಿ
ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment