ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 185/2015
ಕಲಂ 302, 201 ಐ.ಪಿ.ಸಿ:
ದಿ:24-07-2015 ರಂದು ಸಾಯಂಕಾಲ 4-00 ಗಂಟೆಗೆ ಫಿರ್ಯಾದಿದಾರರಾದ ಹನುಮಪ್ಪ ಹಿರೇಮನಿ ಸಾ: ಕವಳಕೇರಿ,
ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ನಮ್ಮ ಅಳಿಯ ಬಸವರಾಜ ಇವನು ನಿನ್ನೆ ದಿನಾಂಕ: 23-07-2015 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ನನ್ನ ಮಗಳು
ಲಲಿತಮ್ಮ @ ರತ್ನಮ್ಮಳಿಗೆ ಕೂಲಿ
ಕೆಲಸಕ್ಕೆ ಹೋಗಬೇಡ, ಮನೆಯಲ್ಲಿ ಅಡುಗೆ
ಮಾಡಿಕೊಂಡಿರು ಅಂತ ಹೇಳಿದ್ದಕ್ಕೆ, ನನ್ನ ಮಗಳು ಕೂಲಿ ಹೋಗುತ್ತಿದ್ದುದನ್ನು ನೋಡಿ, ನನ್ನ ಅಳಿಯ ಅವಳಿಗೆ ಸಂಶಯ ಮಾಡಿ ಕೈಯಿಂದ ಅವಳ ಮುಖಕ್ಕೆ ಮತ್ತು ಬೆನ್ನಿಗೆ ಮೇಲಿಂದ ಮೇಲೆ
ಜೋರಾಗಿ ಸಾಯುವಂತೆ ಗುದ್ದಿದ್ದರಿಂದ ಅವಳು ಮೂರ್ಚೇ ಹೋಗಿದ್ದು, ನಂತರ ಅವಳನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆ ಕೊಪ್ಪಳಕ್ಕೆ ಕರೆದುಕೊಂಡು ಹೋದಾಗ,
ಉಪಚಾರ ಕಾಲಕ್ಕೆ ಮೃತಪಟ್ಟಿದ್ದು, ಸದರ ನನ್ನ ಅಳಿಯ ನನ್ನ ಮಗಳಿಗೆ ಕೊಲೆ ಮಾಡಿ, ಮಾಡಿದ ಕೊಲೆಯನ್ನು ಮುಚ್ಚಿ ಹಾಕಲು ದವಾಖಾನೆಯಲ್ಲಿ ಅವಳಿಗೆ ಹಾರ್ಟ ಆಗಿದೆ ಅಂತ ಸುಳ್ಳು
ಹೇಳಿ, ಶವವನ್ನು ಯಾವುದೋ ಒಂದು ಆಟೋದಲ್ಲೆ ಊರಿಗೆ ತೆಗೆದುಕೊಂಡು ಹೋಗಿ ಕಿಚ್ಚು ಮಾಡಲು ಯತ್ನಿಸಿದ್ದು ಇರುತ್ತದೆ. ಕಾರಣ ನನ್ನ ಮಗಳನ್ನು ಕೊಲೆ ಮಾಡಿದ ಬಸವರಾಜ ತಂದಿ
ಹನಮಪ್ಪ ಮ್ಯಾಗಳಮನಿ, ಸಾ: ನರೆಗಲ್ ಇವನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣವನ್ನು
ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2) ಗಂಗಾವತಿ ನಗರ ಪೊಲೀಸ್ ಠಾಣಾ ಗುನ್ನೆ ನಂ. 162/2015
ಕಲಂ 3 ಮತ್ತು 4 ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯ 2004 ಮತ್ತು ಹಾಗೂ ಕಲಂ 420 ಐ.ಪಿ.ಸಿ :.
ದಿನಾಂಕ 24-07-2015 ರಂದು 19-45 ಗಂಟೆಗೆ ಮಾನ್ಯ ಪೊಲೀಸ್ ಉಪವಿಭಾಗಾಧಿಕಾರಿಗಳು, ಗಂಗಾವತಿ ರವರ ಕಾರ್ಯಾಲಯದಿಂದ
ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 110/15 ಕಲಂ. 03 & 04 ಕರ್ನಾಟಕ ಮಿತಿ ಮೀರಿದ ಬಡ್ಡಿ
ವಿಧಿಸುವಿಕೆಯ ನಿಷೇದ ಅಧಿನಿಯಮ 2004 ಮತ್ತು ಕಲಂ 420 ಐ.ಪಿ.ಸಿ. ನೇದ್ದು ಹದ್ದಿ
ಪ್ರಯುಕ್ತ ಗಂಗಾವತಿ ನಗರ ಠಾಣೆಗೆ ವರ್ಗಾವಣೆಗೊಂಡು ಬಂದಿದ್ದು ಇರುತ್ತದೆ. ಸದರಿ
ಫಿರ್ಯಾದಿಯನ್ನು ದಿನಾಂಕ. 15-07-2015 ರಂದು ರಾತ್ರಿ 9-45 ಗಂಟೆಗೆ ಶ್ರೀ ಬಿಂದು ಮಾಧವರಾವ್
ತಂದೆ ತಿರುಮಲರಾವ್ ದೇಸಾಯಿ ವಯಾ 66 ವರ್ಷ ಉ.ನಿವೃತ್ತ ನೌಕರ ಸಾ.ಕೃಷ್ಣಗಿರಿ ಕಾಲೋನಿ ಕುಷ್ಟಗಿ
ರವರು ಕುಷ್ಟಗಿ ಪೊಲೀಸ್ ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು, ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರರು ದಿನಾಂಕ 01-08-2009 ರಂದು ಗಂಗಾವತಿಯ ಅಜಯ್
ಫೈನಾನ್ಸ್ ನ ಶ್ರೀ ಮಲ್ಲಿಕಾರ್ಜುನ ಬಿಚ್ಚಾಲಿ ರವರ ಕಡೆಯಿಂದ 25 ಲಕ್ಷ ರೂಪಾಯಿ ಸಾಲ ರೂಪದಲ್ಲಿ
ಪಡೆದು ಅಡವಾಗಿ ಗಂಗಾವತಿಯ ಪಂಪಾನಗರದಲ್ಲಿರು ತಮ್ಮ ಮನೆ ನಂ. 1-1-158/ಎ ನೇದ್ದನ್ನು ರಜಿಸ್ಟರ್
ಮಾಡಿಕೊಟ್ಟಿದ್ದು ಸದರಿ ವೇಳೆಯಲ್ಲಿ ಸಾಲ ತೀರಿದ ನಂತರ ಮನೆಯನ್ನು ವಾಪಸ್ ಬಿಟ್ಟುಕೊಡುವಂತೆ
ಕರಾರು ಪತ್ರವನ್ನು ಮಾಡಿದ್ದು, ಸದರಿ ಮಲ್ಲಿಕಾರ್ಜುನ ಬಿಚ್ಚಾಲಿ ರವರು ಕರಾರನ್ನು ತಮ್ಮ ಪತ್ನಿಯಾದ ಶ್ರೀಮತಿ ಸುಜಾತಾ
ಬಿಚ್ಚಾಲಿ ರವರ ಹೆಸರಿನಲ್ಲಿ ಮಾಡಿಕೊಂಡಿದ್ದು ಇರುತ್ತದೆ, ಸದರಿ ವ್ಯವಹಾರವು ಶ್ರೀ ರಾಮಕೃಷ್ಣ ಜಾಗೀರದಾರ ರವರ ಮುಖಾಂತರ
ನಡೆದಿರುತ್ತದೆ, ನಂತರ ಸದರಿ ಮಲ್ಲಿಕಾರ್ಜುನ
ಬಿಚ್ಚಾಲಿ ರವರಿಗೆ ಕಂತುಗಳ ರೂಪದಲ್ಲಿ ಹಣ ಪಾವತಿಸಿದ್ದು, ಆದರೆ ಸದರಿಯವರು ಈಗಾಗಲೇ ಫಿರ್ಯಾದಿದಾರರಿಂದ ಖಾಲಿ ಕಾಗದ ಪತ್ರಗಳ
ಮೇಲೆ ಸಹಿ ಪಡೆದಿದ್ದರ ಆಧಾರದ ಮೇಲಿಂದ ಸಾಲವನ್ನು ಒಟ್ಟು 70 ಲಕ್ಷ ರೂಪಾಯಿ ಕೊಡಬೇಕಾಗಿದೆ ಅಂತಾ
ಹೇಳಿ ಸನ್ 2013 ನೇ ಸಾಲಿನಲ್ಲಿ ಸದರಿಯವರು ಫಿರ್ಯಾದಿದಾರರ ಮನೆಗೆ ಬಂದು ಜಗಳ ಮಾಡಿ ಮನೆ ಖಾಲಿ
ಮಾಡಿಸಿದ್ದು, ಹಾಗೂ ಸದರಿಯವರು
ಫಿರ್ಯಾದಿದಾರರಿಗೆ ಕರಾರು ಪತ್ರದಲ್ಲಿ ಇರುವಂತೆ ಪ್ರತಿ ತಿಂಗಳಿಗೆ ನೂರು ರೂಪಾಯಿಗೆ 2-00 ರೂ.
ಗಳಂತೆ ಬಡ್ಡಿ ವಿಧಿಸಿದ್ದು ಅಲ್ಲದೇ ಹಣ ಲೇವಾದೇವಿಯಲ್ಲಿಇ ಮೋಸ ಮಾಡಿರುತ್ತಾರೆ ಅಂತಾ ಮುಂತಾಗಿ
ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 162/15
ಕಲಂ. 03 ಮತ್ತು 04 ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯ 2004 ಹಾಗೂ
ಕಲಂ. 420 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 186/2015
ಕಲಂ 279, 338 ಐ.ಪಿ.ಸಿ:
ದಿ:24-07-2015 ರಂದು ಸಂಜೆ 7-00 ಗಂಟೆಗೆ ಶ್ರೀ ಶರಣಪ್ಪ. ಹೆಚ್.ಸಿ-59 ರವರು ಗದಗ-ಬೆಟಗೇರಿ ಜರ್ಮನ್ ಆಸ್ಪತ್ರೆಯಲ್ಲಿ
ಫಿರ್ಯಾದಿದಾರರಾದ, ರಾತ್ರಿ 10-00 ಗಂಟೆಗೆ ಫಿರ್ಯಾದಿದಾರರಾದ ಗಂಗಾಧರ ಹಳ್ಳಿ ತಳವಾರ ಸಾ: ಹಿರೇವ್ಡಡಟ್ಟಿ. ತಾ: ಮುಂಡರಗಿ ಇವರು ನೀಡಿದ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡು ಬಂದು ರಾತ್ರಿ 10-00 ಗಂಟೆಗೆ
ಹಾಜರಪಡಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೇ, ದಿ:23-07-2015 ರಂದು ಸಾಯಂಕಾಲ 4-00 ಗಂಟೆಗೆ
ಫಿರ್ಯಾದಿದಾರರ ಮಾವ ಫಕೀರಗೌಡ ತನು ತನ್ನ ಮೋಟಾರ ಸೈಕಲ್ ನಂ: ಕೆಎ-05/ಇಸಿ-9066 ನೇದ್ದನ್ನು
ಕಿನ್ನಾಳ ದಿಂದಾ ಬುಡಶೆಟ್ನಾಳ ಗ್ರಾಮಕ್ಕೆ ಓಡಿಸಿಕೊಂಡು ಹೋಗುವಾಗ ಮಾರ್ಗದ ರಪ್ಪ ಬಸ್ಸೆಟ್ಟೆರ್ ಇವರ
ಹೊಲದ ಹತ್ತಿರ ಅತಿವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಓಡಿಸಿಕೊಂಡು ತನ್ನ ವಾಹನವನ್ನು
ನಿಯಂತ್ರಿಸದೇ ಸ್ಕಿಡ್
ಮಾಡಿದ್ದರಿಂದ ವಾಹನ ಸಮೇತ ಬಿದ್ದು ಈ ಅಪಘಾತದಲ್ಲಿ ಭಾರಿ ರಕ್ತಗಾಯಗಳಾಗಿದ್ದು ಇರುತ್ತದೆ. ಕಾರಣ ಸದರಿ ನಮ್ಮ ಮಾವ ಫಕೀರಗೌಡ ವರ ಮೇಲೆ ಸೂಕ್ತ ಕಾನೂನು ಕ್ರಮ
ಜರುಗಿಸುವಂತೆ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
0 comments:
Post a Comment