ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 88/2015
ಕಲಂ 279, 337, 338 ಐ.ಪಿ.ಸಿ:
ದಿನಾಂಕ: 25-07-2015 ರಂದು ಮಧ್ಯಾನ್ಹ 2-30 ಗಂಟೆಯ ಸುಮಾರಿಗೆ ಆರೋಪಿತನು ತಾನು
ಚಲಾಯಿಸುತ್ತೀದ್ದ ಮೋಟಾರ ಸೈಕಲ ನಂ: ಕೆ.ಎ-34/ಆರ್-449 ನೇದ್ದನ್ನು ಯಲಬುರ್ಗಾ-ತುಮ್ಮರಗುದ್ದಿ
ರಸ್ತೆಯ ಮೇಲೆ ಯಲಬುರ್ಗಾ ಕಡೆಯಿಂದ ತುಮ್ಮರಗುದ್ದಿ ಗ್ರಾಮದ ಕಡೆಗೆ ಅತೀಜೋರಾಗಿ ಹಾಗೂ
ಅಲಕ್ಷತನದಿಂದ ಚಲಾಯಿಸಿಕೊಂಡು ತುಮ್ಮರಗುದ್ದಿ ಸೀಮಾದಲ್ಲಿ ಬರುವ ಭೀಮಪ್ಪ ಮುಶಿಗೇರಿ ಇವರ ಹೊಲದ
ಹತ್ತಿರ ನಡೆಯಿಸಿಕೊಂಡು ಹೋಗುತ್ತಿದ್ದಾಗ ಮೋಟಾರ ಸೈಕಲ ನಿಯಂತ್ರಣ ತಪ್ಪಿ (ಸ್ಕೀಡ ಆಗಿ)
ಬಿದ್ದಿದ್ದರಿಂದ ಸದ್ರಿಯವನ ಎಡಗಣ್ಣಿಗೆ ಭಾರಿ ಸ್ವರೂಪದ ಗಾಯವಾಗಿದ್ದು, ತಲೆಗೆ
ಒಳಪೆಟ್ಟಾಗಿದ್ದು, ಎಡಗೈ ಮುಂಗೈ ಮೇಲೆ ಮತ್ತು ಎಡಗಾಲ ಮೊಣಕಾಲ ಚಿಪ್ಪಿನ ಹತ್ತಿರ ತೆರಚಿದ ನಮೂನೆಯ
ಗಾಯವಾಗಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ
ತನಿಖೆ ಕೈಗೊಂಡಿದ್ದು ಇರುತ್ತದೆ.
2) ಗಂಗಾವತಿ ನಗರ ಪೊಲೀಸ್ ಠಾಣಾ ಗುನ್ನೆ ನಂ. 163/2015
ಕಲಂ 4 ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯ 2004 ಮತ್ತು ಹಾಗೂ ಕಲಂ 120 (ಬಿ) 504, 506 ಸಹಿತ 34 ಐ.ಪಿ.ಸಿ.
ದಿನಾಂಕ 25-07-2015 ರಂದು ಮಧ್ಯಾಹ್ನ 3-00 ಗಂಟೆಗೆ ಶ್ರೀ
ಮಂಜುನಾಥ ಸ್ವಾಮಿ ತಂದೆ ಕಾಶಿನಾಥ ಸ್ವಾಮಿ ವಯಸ್ಸು 30 ವರ್ಷ ಜಾ: ಜಂಗಮ ಉ: ವ್ಯವಸಾಯ ಮತ್ತು
ವ್ಯಾಪಾರ ಸಾ: ಶ್ರೀ ವೀರಭದ್ರೇಶ್ವರ ದೇವಸ್ಥಾನ ಮಾರ್ಕೇಟ ರಸ್ತೆ, ಗಂಗಾವತಿ ರವರು ಠಾಣೆಗೆ ಬಂದು
ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ,ಆರೋಪಿತರಾದ ಸಂತೋಷ ಮತ್ತು ಸುಭಾಸ
ಸಾದರ ರವರು ಶ್ರೀ ರಾಘವೇಂದ್ರ ಫೈನಾನ್ಸಿಯರ್ಸ್ (ರಿ) ಗಂಗಾವತಿ ಹೆಸರಿನಲ್ಲಿ ಹಣಕಾಸಿನ ವ್ಯವಹಾರ
ನಡೆಸುತ್ತಿದ್ದು, ಫಿರ್ಯಾದಿದಾರರು ದಿನಾಂಕ 11-02-2015 ರಂದು ಸದರಿ ಆರೋಪಿತರ ಹತ್ತಿರ
ಒಂದು ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದು ಇದಕ್ಕೆ ಆಧಾರವಾಗಿ ಖಾಲಿ ಪ್ರಾಮಿಸರಿ ನೋಟ್ ಮೇಲೆ
ಸಹಿ ಮಾಡಿಕೊಟ್ಟಿದ್ದು, ಸದರಿ ಸಾಲದ ಹಣಕ್ಕೆ ಸಂಬಂಧಿಸಿದಂತೆ ಈಗಾಗಲೇ 34,200-00 ರೂ. ಗಳನ್ನು
ಮರುಪಾವತಿ ಮಾಡಿದ್ದು ಇನ್ನು ರೂ. 65,800-00 ಗಳನ್ನು ಮರುಪಾವತಿಸುವುದು ಬಾಕಿ ಇದ್ದು,
ಆರೋಪಿತರು ಒಳಸಂಚು ನಡೆಸಿ ಆರೋಪಿ ನಂ. 01 & 02 ನೇದ್ದವರು ಫಿರ್ಯಾದಿಯಿಂದ ಪಡೆದುಕೊಂಡಿರುವ
ಸಹಿ ಮಾಡಿದ ಖಾಲಿ ಪ್ರಾಮಿಸರಿ ನೋಟ್ ಮೇಲೆ ಆರೋಪಿ ನಂ. 03 ಶೇಖರಗೌಡ ಇತನಿಗೆ ಫಿರ್ಯಾದಿಯು ರೂ.
7,75,000-00 ಗಳನ್ನು ಕೊಡಬೇಕಾಗಿರುತ್ತದೆಂದು ಬರೆದುಕೊಂಡು ಸದರಿ ಹಣಕ್ಕಾಗಿ ವಕೀಲರ ಮುಖಾಂತರ
ನೋಟಿಸ್ ನೀಡಿದ್ದು ಅಲ್ಲದೇ ಸದರಿ ಪ್ರಾಮಿಸರಿ ನೋಟ ಆಧಾರದ ಮೇಲಿಂದ ಮಾನ್ಯ
ನ್ಯಾಯಾಲಯದಲ್ಲಿ ದಾವೆ ಹೂಡಿರುತ್ತಾರೆ. ಹಾಗೂ ದಿನಾಂಕ 30-06-2015 ರಂದು ಆರೋಪಿ
ಸಂತೋಷ ಮತ್ತು ಸುಭಾಷ ರವರು ಕೋರ್ಟ ಬೇಲಿಫ್ ರವರೊಂದಿಗೆ ವೀರಭದ್ರೇಶ್ವರ ದೇವಸ್ಥಾನದಲ್ಲಿರುವ
ಫಿರ್ಯಾದಿದಾರರ ಮನೆಯ ಹತ್ತಿರ ಹೋಗಿ ಕೋರ್ಟ ನೋಟಿಸನ್ನು ಜಾರಿ ಮಾಡುವ ಸಲುವಾಗಿ ಫಿರ್ಯಾದಿಯನ್ನು
ಕರೆದಿದ್ದು ಫಿರ್ಯಾದಿದಾರರ ಕುಟುಂಬದವರು ಫಿರ್ಯಾದಿಯು ಮನೆಯಲ್ಲಿ ಇಲ್ಲಾ ಅಂತಾ ಹೇಳಿದ್ದಕ್ಕೆ
ಆರೋಪಿತರಿಬ್ಬರು ಫಿರ್ಯಾದಿದಾರರ ಮನೆಯ ಹತ್ತಿರ ನಿಂತುಕೊಂಡು ಅವಾಚ್ಯ ಶಬ್ದಗಳಿಂದ ಆ ಸೂಳೇ
ಮಗ ಎಲ್ಲಿದ್ದಾನೆ, ಎಷ್ಟು ದಿವಸ ತಪ್ಪಿಸಿಕೊಳ್ಳುತ್ತಾನೆ, ನಾವು ನೋಡುತ್ತೇನೆ ಅವನು
ಹೊರಗೆ ಬಂದರೆ ಪ್ರಾಣವನ್ನು ತೆಗೆಯುತ್ತೇವೆಂದು ಬೆದರಿಕೆ ಹಾಕಿರುತ್ತಾರೆಂದು ನೀಡಿದ ಫಿರ್ಯಾದಿ
ಮೇಲಿಂದ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 163/15 ಕಲಂ. 04 ಕರ್ನಾಟಕ ಮಿತಿ ಮೀರಿದ
ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯ 2004 ಹಾಗೂ ಕಲಂ. 120 (ಬಿ), 504, 506 ಸಹಿತ 34
ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 167/2015
ಕಲಂ 78(3) Karnataka
Police Act.
ದಿನಾಂಕ 25-07-2015
ರಂದು ಪಿರ್ಯಾದುದಾರ ಶ್ರೀ. ಜಯಪ್ರಕಾಶ ಪಿ.ಎಸ್.ಐ. ಮುನಿರಾಬಾದ ಮತ್ತು ಸಿಬ್ಬಂದಿಯವರು ಕೂಡಿಕೊಂಡು ಮಾಹಿತಿ ಇದ್ದ ಪ್ರಕಾರ ಹಿಟ್ನಾಳ ಗ್ರಾಮದಲ್ಲಿ
ಕೆನಾಲ ಹತ್ತಿರ ಹೋಗಿ ಮಟಕಾ ಜೂಜಾಟದಲ್ಲಿ ತೋಡಗಿದ ಆರೋಪಿತ ಇಮ್ರಾನನ್ನು ಪಂಚರೊಂದಿಗೆ ದಾಳಿಮಾಡಿ ಹಿಡಿದು ಆತನಿಂದ ಒಂದು ಬಾಲ ಪೆನ್ನು, ಒಂದು ಮಟಕಾ ಪಟ್ಟಿ ಮತ್ತು ಜೂಜಾಟದ ನಗದು ಹಣ 1370-00 ರೂ ಗಳನ್ನು ಪಂಚರ ಸಮಕ್ಷಮ ಜಪ್ತು ಮಾಡಿದ್ದು ಸದರಿ ಜಪ್ತು ಮಾಡಿದ ಮುದ್ದೆಮಾಲು, ಆರೋಪಿತನಿಗೆ ಮತ್ತು ಮೂಲ ಪಂಚನಾಮೆಯನ್ನು ಹಾಜರು ಪಡಿಸಿದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಂಡಿರುತ್ತದೆ.
4) ಅಳವಂಡಿ ಪೊಲೀಸ್ ಠಾಣಾ ಗುನ್ನೆ ನಂ. 79/2015
ಕಲಂ 87 Karnataka Police
Act.
ಫಿರ್ಯಾಧಿದಾರರಾದ ಶ್ರೀ ಗಣೇಶ. ಸಿ. ಪಿ.ಎಸ್.ಐ. ಅಳವಂಡಿ ರವರು, ಸಿಬ್ಬಂದಿಯವರು ಮತ್ತು ಪಂಚರು
ಕರೆದುಕೊಂಡು ಇಂದು ದಿನಾಂಕ: 25-07-2015 ರಂದು ಸಾಯಂಕಾಲ 5-30 ಗಂಟೆಗೆ ಠಾಣಾ ವ್ಯಾಪ್ತಿಯಲ್ಲಿ ಬೆಟಗೇರಿ
ಗ್ರಾಮದ ಕೆರೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಹಣವನ್ನು ಕಟ್ಟಿ ಅಂದರ-ಬಾಹರ ಎಂಬ ಇಸ್ಪೇಟ್
ಜೂಜಾಟವನ್ನು ಆಡುತ್ತಿರುವಾಗ ದಾಳಿ ಮಾಡಿದಾಗ 4 ಜನರು ಸಿಕ್ಕಿದ್ದು, ಸಿಕ್ಕವರಿಂದ ನಗದು ಹಣ ರೂ.
4300=00 ಗಳು, 52 ಇಸ್ಪೇಟ್ ಎಲೆಗಳು, ಹಾಗೂ ಒಂದು ಪ್ಲಾಸ್ಟಿಕ್ ಕವರನ್ನು ಜಪ್ತ ಮಾಡಿ ಸ್ಥಳದಲ್ಲಿ
ಪಂಚನಾಮೆಯನ್ನು ತಯಾರಿಸಿ ವಾಪಾಸ್ ಠಾಣೆಗೆ ಬಂದು ಒಂದು ವರದಿಯನ್ನು ಪಂಚನಾಮೆ ಮತ್ತು ಮುದ್ದೇಮಾಲನ್ನು
ಹಾಗೂ ಆರೋಪಿತರನ್ನು ಹಾಜರು ಪಡಿಸಿದ್ದು, ಸದರ ವರದಿಯ ಸಾರಾಂಶ ಮತ್ತು ಪಂಚನಾಮೆಯ ಸಾರಾಂಶದ ಮೇಲಿಂದ
ಠಾಣೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5) ಕುಷ್ಟಗಿ ಪೊಲೀಸ್ ಠಾಣಾ ಗುನ್ನೆ ನಂ. 122/2015
ಕಲಂ 379 ಐ.ಪಿ.ಸಿ:
ದಿನಾಂಕ 25-07-2015 ರಂದು ರಾತ್ರಿ 08-00 ಗಂಟೆಗೆ ಪಿರ್ಯಾದಿದರರಾದ ಶರಣಪ್ಪ ತಂದೆ ಮಲ್ಲಪ್ಪ ಬಾದವಾಡಗಿ ವಯಾ
45ವರ್ಷ ಜಾ:ಲಿಂಗಾಯತ ಉ: ವಿ.ಅರ್.ಎಲ್. ಕಂಪನಿಯಲ್ಲಿ ಮ್ಯಾನೇಜರ ಕೆಲಸ ಸಾ:ಗಂಗಾವತಿ ರವರು ಠಾಣೆಗೆ ಬಂದು ಒಂದು ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು,
ಸಾರಾಂಶವೆನೆಂದರೆ, ತಮ್ಮ ಕಂಪನಿಯ ವಿ.ಆರ್.ಎಲ್. ಟ್ರಾನ್ಸ್ ಪೋರ್ಟ ಲಾರಿ ನಂ ಕೆಎ 25/ಸಿ-7353
ನೇದ್ದರಲ್ಲಿ ಸೂರತ್ ದಿಂದ ಅನಂತಪೂರಕ್ಕೆ ವಾಯ ಸೊಲ್ಲಾಪೂರದಿಂದ ಹೊರಟಿದ್ದು, ಈ
ಲಾರಿಯಲ್ಲಿ ಚಾಲಕರುಗಳಾದ ಚಿದಾನಂದಪ್ಪ ತಂದೆ ಸಿದ್ದಪ್ಪ ಮುದಿಯಜ್ಜನವರ ಸಾ: ಮೇವುಂಡಿ
ಮತ್ತು ಮಹಾವೀರ ತಂದೆ ಬಸವರಾಜ ಜೈನ್ ಸಾ: ಪಟ್ಟಿಹಾಳ ತಾ: ಬೈಲಹೊಂಗಲ ಇಬ್ಬರೂ ಕೂಡಿ ದಿನಾಂಕ:
22-07-2015 ರಂದು ಸೂರತ್ ದಿಂದ ಸೊಲ್ಲಾಪೂರಕ್ಕೆ ಬಂದು ಅಲ್ಲಿಂದ ಸೊಲ್ಲಾಪೂರದಲ್ಲಿ ಲೋಡಿಂಗ್ –
ಅನ್ ಲೋಡಿಂಗ್ ಮಾಡಿಕೊಂಡು ಅದೇ ದಿನ ಮಧ್ಯಾಹ್ಹ 1-56 ಗಂಟೆಗೆ ಬಿಟ್ಟು ಸಂಜೆ 6-30 ಗಂಟೆಗೆ ಜಳಕಿ
ಚೆಕ್ ಪೋಸ್ಟ್ ಗೆ ಬಂದು ಅಲ್ಲಿ ಮಾಲನ್ನು ತಪಾಸಣೆ ಮಾಡಿಸಿ ಅಲ್ಲಿಂದ ಅದೇ ರಾತ್ರಿ 9-12 ಕ್ಕೆ
ಬಿಜಾಪೂರ ಟೋಲ್ ಗೇಟ್ ನ್ನು ತಲುಪಿ ಬಿಜಾಪೂರ ಟೋಲ್ ಗೇಟ್ ನಿಂದ ಹೊರಟು ಅಲ್ಲಿಯೇ ಸ್ವಲ್ಪ
ದೂರದಲ್ಲಿ ಬಂದು ಲಾರಿಯನ್ನು ಡಾಬಾದಲ್ಲಿ ನಿಲ್ಲಿಸಿ ಇಬ್ಬರೂ ಕೂಡಿ ಊಟ ವಗೈರೆ ಮಾಡಿಕೊಂಡು ಅಲ್ಲಿ
ಸುಮಾರು 1 ತಾಸು ನಿಲ್ಲಿಸಿಕೊಂಡು ನಂತರ ನೇರವಾಗಿ ಎಲ್ಲಿಯೂ ನಿಲ್ಲಿಸದೇ ದಿನಾಂಕ: 24-07-2015
ರಂದು ಕುಷ್ಠಗಿ ಟೋಲ್ ಗೇಟ್ ದಾಟಿ ಬಂದು ಲಾರಿಯನ್ನು ನಿಲ್ಲಿಸಿ ಚಿದಾನಂದಪ್ಪ ಮೂತ್ರ ಮಾಡಿ ಲಾರಿಯ
ತಾಡಪಲ್ಲನ್ನು ನೋಡಿದಾಗ ಅದರಲ್ಲಿ ತಾಡಪಲ್ಲ ಕಟ್ಟು ಮಾಡಿದ್ದನ್ನು ನೋಡಿ ಬೆಳಗಿನ 2-00 ಗಂಟೆಯ
ಸುಮಾರಿಗೆ ಫಿರ್ಯಾಧಿದಾರರಿಗೆ ವಿಷಯನ್ನು ಪೋನ್ ಮಾಡಿ ತಿಳಿಸಿದ್ದು ಆಗ ಫಿರ್ಯಾಧಿದಾರರು
ಬಂದು ನೋಡಿದ್ದು ತಮ್ಮ ತಾಡಪಲ್ಲ ಲಾರಿಯಲ್ಲಿಯ 11 ಪಾರ್ಸಲ್ ಗಳು ಬೇಲ್ ಮತ್ತು ಬಾಕ್ಸ್ ಗಳು
ಕಳುವಾಗಿದ್ದು ಅವುಗಳ ಒಟ್ಟು ಕಿಮ್ಮತ್ತು 2,13,274=00 ರೂ ಬೆಲೆಬಾಳುವದನ್ನು ಯಾರೋ ಕಳ್ಳರು
ಬಿಜಾಪೂರ ಟೋಲ್ ಗೇಟ್ ದಾಟಿ ಬಂದು ಒಂದು ಡಾಬಾದ ಹತ್ತಿರ ನಿಲ್ಲಿಸಿದಾಗ ಕಳ್ಳತನ
ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಫಿರ್ಯಾದಿಯಿಂದ ಪ್ರಕಾರ ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.
0 comments:
Post a Comment