Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, July 4, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 159/2015  ಕಲಂ 87 Karnataka Police Act.
ದಿ: 03.07.2015 ರಂದು ಸಾಯಂಕಾಲ 7-15 ಗಂಟೆಗೆ ಶ್ರೀ ಚಿತ್ತರಂಜನ್ ಡಿ. ಪಿ.ಎಸ್.ಐ ಕೊಪ್ಪಳ ಗ್ರಾಮೀಣ ಠಾಣೆರವರು ಠಾಣೆಗೆ ಹಾಜರಾಗಿ ಇಸ್ಪೇಟ್ ಜೂಜಾಟದ ಗುಂಪಿನ ಮೇಲೆ ದಾಳಿ ಮಾಡಿಕೊಂಡು ಬಂದು ನೀಡಿದ ಗಣಕೀಕೃತ ದೂರನ್ನು ಸ್ವೀಕರಿಸಿದ್ದು, ಸದರಿ ಫಿರ್ಯಾದಿಯು ಅಸಂಜ್ಞೆಯ ಪ್ರಕರಣವಾಗಿದ್ದರಿಂದ, ಮಾನ್ಯ ಘನ ನ್ಯಾಯಾಲಯದಿಂದಾ ರಾತ್ರಿ 7-30 ಗಂಟೆಗೆ ಅನುಮತಿ ಪಡೆದುಕೊಂಡಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ಇಂದು ದಿನಾಂಕ: 03-07-2015 ರಂದು ಸಂಜೆ 5-50 ಗಂಟೆಗೆ ಠಾಣಾ ವ್ಯಾಪ್ತಿಯ ಕೊಳೂರು ಗ್ರಾಮದ ಸಮುದಾಯ ಭವನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 10 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಎಸ್ಪೇಟ್ ಜೂಜಾಟದಲ್ಲಿ  ತೊಡಗಿದ್ದಾಗ ಮಾನ್ಯ ಸಿ.ಪಿ.ಐ ಕೊಪ್ಪಳ (ಗ್ರಾ) ವೃತ್ತರವರ ಮಾರ್ಗದರ್ಶನದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರಿಂದ ಹಾಗೂ ಕಣದಲ್ಲಿದ್ದ ಒಟ್ಟು ನಗದು ಹಣ 3200=00 ರೂಪಾಯಿಗಳು, 52 ಇಸ್ಪೇಟ್ ಎಲೆಗಳು ಇವುಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಜಪ್ತ ಮಾಡಿಕೊಂಡು, ಸದರಿ 10 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 120/2015 ಕಲಂ. 78(3) Karnataka Police Act.
ದಿನಾಂಕ 03-07-2015 ರಂದು ರಾತ್ರಿ 8-45 ಗಂಟೆಗೆ ಶ್ರೀ ಪ್ರಭಾಕರ ಎಸ್ ಧರ್ಮಟ್ಟಿ, ಸಿಪಿಐ (ಗ್ರಾ) ವೃತ್ತ ಗಂಗಾವತಿ ರವರು ಠಾಣೆಗೆ ಬಂದು ವರದಿ, ಹಾಗೂ ಪಂಚನಾಮೆ ಹಾಗೂ ಆರೋಪಿ ಮತ್ತು ಮಟಕಾ ಸಂಬಂಧಿಸಿದ ಸಾಮಾಗ್ರಿಗಳನ್ನು ಹಾಜರಪಡಿಸಿದ್ದು, ಸದರ ವರದಿಯ ಸಾರಾಂಶವೇನೆಂದರೆ, ದಿನಾಂಕ 03-07-21015 ರಂದು ಸಾಯಂಕಾಲ 7-00 ಗಂಟೆ ಸುಮಾರಿಗೆ ಕನಕಗಿರಿ ಗ್ರಾಮದ ಟೆಲಿಫೋನ್ ಟವೆರ್ ಹತ್ತಿರ ನಾಗಭೂಷಣ ಸಜ್ಜನ್ ರವರ ಮನೆಯ ಮುಂದೆ ಆರೋಪಿತರಾದ 1 ರಿಂದ 4 ರವರು ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಬರುತ್ತೀ ಬನ್ನಿ ಅಂತಾ ಕೂಗುತ್ತಾ ಅವರನ್ನು ಬರ ಮಾಡಿಕೊಂಡು ಅವರಿಂದ ಹಣ ಪಡೆದು ಅವರಿಗೆ ಓ.ಸಿ. ನಂಬರಗಳನ್ನು ಬರೆದು ಕೊಡುತ್ತಿದ್ದಾಗ ಪಂಚರು ಮತ್ತು ಸಿಬ್ಬಂದಿ ಹೋಗಿ ದಾಳಿ ಮಾಡಿ ಹಿಡಿದು ಅವರಿಂದ ನಗದು ಹಣ ರೂ.6880=00 ಹಾಗೂ ಮಟಕಾ ಸಾಮಾಗ್ರಿಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿ, ಪಂಚನಾಮೆಯನ್ನು ಮಾಡಿದ್ದು 1 ರಿಂದ 4 ಜನ ಆರೋಫಿತರು ಮಟಕಾ ಚೀಟಿಯನ್ನು ಅ.ನಂ.5 ವಿಶ್ವನಾಥ ಇವರಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ ಅಂತಾ ವರದಿ ಕೊಟ್ಟಿದ್ದು, ಸದರಿ ವರದಿಯ ಸಾರಾಂಶದ ಮೇಲಿಂದ ಪ್ರಕರಣವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ರಾತ್ರಿ 10-15 ಗಂಟೆಗೆ ಸದರಿ ವರದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 130/2015  ಕಲಂ 379 ಐ.ಪಿ.ಸಿ:.
ದಿನಾಂಕ 03/07/2015 ರಂದು 14-15 ಗಂಟೆಗೆ ಎಮ್ ಬಸವರಾಜ ತಂದೆ ಶರಣಪ್ಪ ವಯಾ: 41 ವರ್ಷ ಜಾತಿ: ನೇಕಾರ : ಗುಮಾಸ್ತ ಸಾ: ಅಮರ ಭಗತ ಸಿಂಗ್ ನಗರ ಗಂಗಾವತಿ ಇವರು ಠಾಣೆಗೆ ಬಂದು ತಮ್ಮದೊಂದು ಗಣಕಿಕೃತ ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ದಿನಾಂಕ: 03-07-2015 ರಂದು ಬೆಳಿಗ್ಗೆ 11.00 ಗಂಟೆಯ ಸುಮಾರಿಗೆ ಪಿರ್ಯಾದಿದಾರನಿಗೆ ತಾನು ಗುಮಾಸ್ತ ಕೆಲಸ ಮಾಡಿಕೊಂಡಿದ್ದ ವಿನಯ ಟ್ರೇಡರ್ಸ ಅಂಗಡಿಯ ಮಾಲಿಕರು ಪಿರ್ಯಾದಿಗೆ 1,24,000/- ರೂ.ಗಳ  ಒಂದು ಚೆಕ್ಕನ್ನು ಕೊಟ್ಟು ಅದನ್ನು ಬಿಡಿಸಿಕೊಂಡು ಬರುವಂತೆ ತಿಳಿಸಿದ್ದರಿಂದ ಅದರಂತೆ ಪಿರ್ಯಾದಿಯು ರಾಯಚೂರು ರಸ್ತೆಯಲ್ಲಿರುವ ಎಸ್ ಬಿ ಬ್ಯಾಂಕಿನಲ್ಲಿ 1,24,000/- ರೂ. ಗಳನ್ನು ಬಿಡಿಸಿಕೊಂಡು ತಾನು ತಂದಿದ್ದ ನೀಲಿ ಬ್ಯಾಗಿನಲ್ಲಿ ಹಾಕಿಕೊಂಡು ಬ್ಯಾಗನ್ನು ತಗೆದುಕೊಂಡು ವಾಪಾಸ್ ಅಂಗಡಿಯ ಕಡೆಗೆ ಹೋಗಲು ತನ್ನ ಮೋಟರ್ ಸೈಕಲ್ ನಂ ಕೆ. 37 ಎಸ್ 2403 ನೇದ್ದರ ಹ್ಯಾಂಡಲ್ ಗೆ ರೂ. 1,24,000/- ರೂಪಾಯಿ ಹಣವಿದ್ದ ಬ್ಯಾಗನ್ನು ಹಾಕಿ ಪ್ಯಾಂಟಿನ ಜೇಬಿನಿಂದ ಮೋಟಾರ್ ಸೈಕಲ್ ಕೀಲಿಯನ್ನು ತೆಗೆದುಕೊಳ್ಳುತ್ತಿದ್ದಾಗ ಯಾರೋ ಅಪರಿಚಿಯ ವ್ಯಕ್ತಿಯು ಪಿರ್ಯಾದಿಯ ತೊಡೆಗೆ ಮುಟ್ಟಿ ನಿಮ್ಮ ಹಣ ಕೆಳಗೆ ಬಿದ್ದಿವೆ ಅಂತಾ ಹೇಳಿದ್ದು ಆಗ ಪಿರ್ಯಾದಿಯು ಕೆಳಗೆ ಬಿದ್ದಿದ್ದ  ನೋಟುಗಳು ತನ್ನವೇ ಎಂದು ತಿಳಿದು ಆರಿಸಿ ಕೊಳ್ಳುತ್ತಿದ್ದಾಗ ಪಿರ್ಯಾದಿಯ ಮೋಟಾರ್ ಸೈಕಲ್ ಹ್ಯಾಂಡಲ್ ಗೆ ಹಾಕಿದ 1,24,000-00 ರೂ.ಗಳಿದ್ದ ಬ್ಯಾಗನ್ನು ಅಪರಿಚಿತ ಇಬ್ಬರು ಕಳ್ಳರು ಪಿರ್ಯಾದಿಯ ಚಿತ್ತವನ್ನು ಬೇರೆಡೆ ಸೆಳೆದು ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿಯವರ ಮೇಲೇ ಕಾನೂನು ಕ್ರಮ ಜರುಗಿಸಬೆಕೇಂದು ನೀಡಿದ ಪಿರ್ಯಾದಿ ಸಾರಾಂಶ ಮೇಲಿಂದ ಪ್ರಕಾರ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
4) ಹನುಮಸಾಗರ  ಪೊಲೀಸ್ ಠಾಣೆ ಗುನ್ನೆ ನಂ. 65/2015 ಕಲಂ. 143, 147, 148, 323, 324, 307, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ 03/07/2015 ರಂದು ಬೆಳಗಿನ ಜಾವ 04-00 ಗಂಟೆಗೆ ಇಲಕಲ್ಲ ಪೊಲೀಸ್ ಠಾಣೆಯಿಂದ ಎಮ್.ಎಲ್.ಸಿ. ಯಾದಿ ಬಂದಿದ್ದು,. ಅದರಲ್ಲಿನ ಸಾರಾಂಶ ಏನೆಂದರೆಗಾಯಾಳು ಮಹಾದೇವಪ್ಪ ತಂದೆ ಯಲ್ಲಪ್ಪ ಅರಹುಣಸಿ ಸಾ: ಬಿಳೇಕಲ್ಲ ತಾ: ಕುಷ್ಟಗಿ ಈತನು ಜಗಳದಲ್ಲಿ ಗಾಯಗೊಂಡು ಇಲಾಜು ಕುರಿತು ಶ್ರೀ. ಮಹಾಂತೇಶ ಅಕ್ಕಿ ಆಸ್ಪತ್ರೆ ಇಲಕಲ್ಲದಲ್ಲಿ ದಾಖಲಾಗಿರುತ್ತಾನೆ ಮುಂದಿನ ಕ್ರಮ ಕೈಗೊಳ್ಳಿ ಅಂತಾ ನಮೂದು ಇದ್ದು, ಕೂಡಲೇ ನಾನು ಸಂಗಡ ಪಿಸಿ 05 ರವರನ್ನು ಕರೆದುಕೊಂಡು  ಇಲಕಲ್ಲಗೆ ಹೋಗಿ ಶ್ರೀ. ಮಹಾಂತೇಶ ಅಕ್ಕಿ ಆಸ್ಪತ್ರೆಗೆ ಭೇಟಿ ಕೊಟ್ಟು ಲಾಜು ಪಡೆಯುತ್ತಿದ್ದ ಗಾಯಾಳು ಶ್ರೀ. ಮಹಾದೇವಪ್ಪ ತಂದೆ ಯಲ್ಲಪ್ಪ ಅರಹುಣಸಿ ಸಾ: ಬಿಳೇಕಲ್ಲ ತಾ: ಕುಷ್ಟಗಿ ಈತನನ್ನು ವಿಚಾರಿಸಿದ್ದು, ಸದರಿಯವನು ಲಿಖಿತ ಫಿರ್ಯಾದಿಯನ್ನು ಸಲ್ಲಿಸಿದ್ದು, ಸದರ ಫಿರ್ಯಾದಿಯ ಸಾರಾಂಶ ಏನೆಂದರೆತ್ತಿಚಿಗೆ ಜರುಗಿದ ದಗ್ರಾಮ ಪಂಚಾಯತ ಚುನಾವಣೆಯಲ್ಲಿ ಕಾಂಗ್ರೇಸ್ ಬೆಂಬಲಿತ 0 ಜನ ಅಭ್ಯರ್ಥಿಗಳು ವಿಜೇತರಾಗಿದ್ದು, ದಿನಾಂಕ: 30-06-2015 ರಂದು ಜರುಗಿದ ಅದ್ಯಕ್ಷ ಪಾಧ್ಯಕ್ಷ ಚುನಾವಣೆಯಲ್ಲಿ ಎಸ್.ಟಿ. ಮಹಿಳಾ ಮೀಸಲಾತಿ ಅಧ್ಯಕ್ಷ ಸ್ಥಾನಕ್ಕೆ ನಮ್ಮ ಕಾಂಗ್ರೇಸ್ ಪಕ್ಷದ ಬೆಂಬಲಿತ ಹೊನ್ನವ್ವ ತಳವಾರ ಆಯ್ಕೆಯಾಗಿದ್ದು ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಜೆ.ಪಿ. ಬೆಂಬಲಿತ ಬಿ.ಸಿ.ಎಂ. ಮೀಸಲಾತಿ ಅಭ್ಯರ್ಥಿ ಸಾಂತಪ್ಪ ದ್ಯಾಮಣ್ಣವರ ಸಾ: ಕೊಡತಗೇರಿ ಇವರು ಆಯ್ಕೆಯಾಗಿದ್ದು ತಾವು ಅದ್ಯಕ್ಷ ಸ್ಥಾನದ ಹೊನ್ನವ್ವ ಇವಳಿಗೆ ಬೆಂಬಲಿಸಿದ್ದರಿಂದ ನಮಗೂ ಮತ್ತು ನಮ್ಮ ಊರಿನ ಬಿ.ಜೆ.ಪಿ. ಪಕ್ಷದ ಚಂದ್ರಪ್ಪ ಶಿವಪ್ಪ ಕಂಬಳಿ, ಶೇಖಪ್ಪ ಕಂಬಳಿ, ಶರಣಪ್ಪ ಕುಣಮಿಂಚಿ ಪಂಪನಗೌಡ ಶಾಂತಗೌಡ್ರ ಹಾಗೂ ಇತರರಿಗೆ ವೈಮನಸ್ಸಿದ್ದು ಹಗೆತನ ಸಾಧಿಸುತ್ತಿದ್ದರು. ನಿನ್ನೆ ದಿನಾಂಕ 02-07-2015 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಕಾಲಂ ನಂ: 7 ರಲ್ಲಿ ನಮೂದಿಸಿದ ಆರೋಪಿತರು ಒಂದೇ ಉದ್ದೇಶದಿಂದ ಗುಂಪಾಗಿ ಸೇರಿಕೊಂಡು ಕೆಲವರು ತಮ್ಮ ಕೈಗಳಲ್ಲಿ ಕಲ್ಲುಗಳನ್ನು ಇನ್ನು ಕೆಲವು ಬಡಿಗೆಗಳನ್ನು, ರಾಡುಗಳನ್ನು ಹಿಡಿದುಕೊಂಡು ಹಾಗೂ ಇನ್ನು ಸ್ವಲ್ಪು ಜನರು ಬರಿಗೈಯಿಂದ ಬಂದಿದ್ದು ನಮ್ಮ ಮನೆಯ ಮುಂದೆ ನಿಂತುಕೊಂಡು ಲೇ ಸೂಳೇ ಮಕ್ಕಳ ಕಾಂಗ್ರೇಸ್ ಮಾಡುತ್ತೀರಾ ಸಿದ್ರಾಮಯ್ಯನಿಗೆ ಸಪೋಟ ಮಾಡುತ್ತೀರಾ ಹೊರಗೆ ಬರ್ರಿ ನಿಮ್ಮನ್ನು ಮುಗಿಸಿ ಬಿಡುತ್ತೇವೆ ಎಂದು ಬೈದಾಡುತ್ತಾ ತಮ್ಮ ಕೈಗಳಲ್ಲಿದ್ದ ಕಲ್ಲುಗಳನ್ನು ಮತ್ತು ಬಡಿಗೆಗಳನ್ನು ನಮ್ಮ ಮನೆಕಡೆಗೆ ಒಗೆದರು ಆಗ ತಾನು ಹೊರಗಡೆ ಬಂದು ಅವರಿಗೆ ಯಾಕೆ ಈ ರೀತಿ ಗಲಾಟೆ ಮಾಡುತ್ತೀರಿ ಅಂತಾ ಕೇಳುವಷ್ಟರಲ್ಲಿ ಕಾಲಂ ನಂ: 7 ರಲ್ಲಿ ನಮೂದಿಸಿದ 1 ರಿಂದ 3 ನೇದ್ದವರು ತನ್ನ ಅಂಗಿ ಹಿಡಿದು ಎಳೆದರು ಆಗ 4 ರಿಂದ 6 ನೇದ್ದವರು ತನ್ನನ್ನು ಸಾಯಿಸುವ ಉದ್ದೇಶದಿಂದ ಕೈಯಲ್ಲಿದ್ದ ಬಡಿಗೆಗಳಿಂದ ಮನಬಂದಂತೆ ಹೊಡೆದರು ಹಾಗೂ ಶರಣಪ್ಪ ಕುಣಮಿಂಚಿ ಈತನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡನಿಂದ ನನ್ನನ್ನು ಸಾಯಿಸುವ ಉದ್ದೇಶದಿಂದ ನನ್ನ ತಲೆಗೆ ಹೊಡೆದು ಭಾರಿ ರಕ್ತ ಗಾಯ ಮಾಡಿದನು. ಇನ್ನುಳಿದ 7 ರಿಂದ 15 ನೇದ್ದವರು ಕೈಯಿಂದ ಬಡಿದು ಅವಾಚ್ಯ ಶಬ್ದಗಳಿಂದ ಬೈದಾಡಿ ಜೀವದ ಬೆದರಿಕೆ ಹಾಕಿ ಕೆಲವರು ತಮ್ಮ ಕೈಗಳಲ್ಲಿ ಕಲ್ಲು ಮತ್ತು ಬಡಿಗೆಗಳನ್ನು ನನ್ನ ಮನೆ ಕಡೆಗೆ ತೂರಿದರು ಮೇಲ್ಕಂಡವರು ಹೊಡೆದಿದ್ದರಿಂದ ನನ್ನ ತಲೆಗೆ ಭಾರಿ ರಕ್ತಗಾಯವಾಗಿ ರಕ್ತ ಸೋರುತ್ತಿದ್ದು ಹಾಗೂ ಬಲಗಡೆ ಕಿವಿಗೆ ರಕ್ತ ಗಾಯವಾಗಿದ್ದು ಬಲಗಾಲ ತೊಡೆಗೆ ಬಲಗೈಗೆ ಒಳಪೆಟ್ಟಾಗಿದ್ದು ಇರುತ್ತದೆ. ಕಾರಣ ನನಗೆ ಸಾಯಿಸುವ ಉದ್ದೇಶದಿಂದ ಹೊಡಿಬಡಿ ಮಾಡಿ ವಾಚ್ಯ ಶಬ್ದಗಳಿಂದ ಬೈದಾಡಿ ಜೀವದ ಬೆದರಿಕೆ ಹಾಕಿದ ಕಾಲಂ ನಂ 7 ರಲ್ಲಿ ನಮೂದಿಸಿದ ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಇರುವ ಫೀರ್ಯಾದಿಯನ್ನು ಮುಂಜಾನೆ 7-45 ಗಂಟೆಯಿಂದ 9-00 ಗಂಟೆಯವರೆಗೆ ಶ್ರೀ ಡಾ// ಮಹಾಂತೇಶ ಅಕ್ಕಿ ಆಸ್ಪತ್ರೆಯಲ್ಲಿ ಪಡೆದುಕೊಂಡು ವಾಪಸ್ ಠಾಣೆಗೆ ಮುಂಜಾನೆ 9-30 ಗಂಟೆಗೆ ಬಂದು ಫಿರ್ಯಾದಿ ಸಾರಾಂಶದ ಪ್ರಕರಣ ದಾಖಲುಮಾಡಿಕೊಂಡು ತನಿಖೆಯನ್ನು ಕೈಕೊಂಡಿರುತ್ತೇನೆ.
5) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ.ನಂ. 199/2015  ಕಲಂ 143, 147, 447, 341, 504, 506 ಸಹಿತ 149 ಐ.ಪಿ.ಸಿ:
ದಿನಾಂಕ:- 03-07-2015 ರಂದು ಸಂಜೆ 5:30 ಗಂಟೆಗೆ ಫಿರ್ಯಾದಿದಾರರಾದ ವಿ. ಚನ್ನಪ್ಪ ತಂದೆ ಅಯ್ಯಣ್ಣ ವಲ್ಕಂದಿನ್ನಿ, ವಯಸ್ಸು 52 ವರ್ಷ, ಜಾತಿ: ಲಿಂಗಾಯತ : ಒಕ್ಕಲುತನ ಸಾ: ಇಸ್ಲಾಂಪೂರು, ಗೌಳಿ ಮಹಾದೇವಪ್ಪ ರೈಸ್ ಮಿಲ್ ಹಿಂಭಾಗ, ಗಂಗಾವತಿ ಇವರು ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿಸಿದ ದೂರನ್ನು ಹಾಜರ ಪಡಿಸಿದ್ದು, ಅದರ ಸಾರಾಂಶ ಪ್ರಕಾರ ಇದೆ "ನಾನು ಗಂಗಾವತಿ ತಾಲೂಕಿನ ವೆಂಕಟಗಿರಿ ಹೋಬಳಿಯ ಕೇಸರಹಟ್ಟಿ ಗ್ರಾಮದ ಭೂಮಿ ಸರ್ವೆ ನಂ: 31/ ವಿಸ್ತೀರ್ಣ 2-00 ಎಕರೆ ಜಮೀನನ್ನು ಸನ್ 2007 ನೇ ಸಾಲಿನಲ್ಲಿ ಕರಿಯಪ್ಪ ತಂದೆ ಪಂಪಣ್ಣ ಮೆದಕಿನಾಳ   ಸಾ: ಹೇರೂರು ಎಂಬುವವರಿಂದ ಖರೀದಿ ಮಾಡಿದ್ದು ಅಂದಿನಿಂದ ಇಂದಿನವರೆಗೆ ನಾನೇ ಮಾಲೀಕ ಮತ್ತು ಕಬ್ಜಾದಾರನಿದ್ದು, ಸದರಿ ಭೂಮಿಯಲ್ಲಿ ದಿನಾಂಕ:- 29-06-2015 ರಂದು ಬೆಳಿಗ್ಗೆ 11:30 ಗಂಟೆಯ ಸುಮಾರಿಗೆ ನಾನು ಮತ್ತು ರಮೇಶ ಗುಡ್ಡೇಕಲ್ ತಂದೆ ಯಂಕೋಬಪ್ಪ ಸಾ: ಸಿದ್ದಿಕೇರಿ ಇಬ್ಬರೂ ಕೂಡಿ ಟ್ರ್ಯಾಕ್ಟರ್ನ್ನು ತೆಗೆದುಕೊಂಡು ಹೋಗಿ ಟಿಲ್ಲರ್ ಹೊಡೆಯುತ್ತಿದ್ದಾಗ (1) ಮೆದಿಕಿನಾಳ ವಿರುಪಣ್ಣ ತಂದೆ ಕರಿಯಪ್ಪ (2) ಸುಮಂಗಲಾ ಗಂಡ ವಿರುಪಣ್ಣ (3) ಶಿವಮ್ಮ ಗಂಡ ವೆಂಕನಗೌಡ, (4) ಶೋಭಮ್ಮ ಗಂಡ ಸೋಮರೆಡ್ಡಿ ಎಲ್ಲರೂ ಸಾ: ಹೇರೂರು ಮತ್ತು (5) ವಿರುಪಣ್ಣ ತಂದೆ ಲಿಂಗಪ್ಪ ಸಾ: ಕೇಸರಹಟ್ಟಿ ಇವರೆಲ್ಲರೂ ಕೂಡಿಕೊಂಡು ಅಕ್ರಮಕೂಟ ರಚಿಸಿಕೊಂಡು ಸಮಾನ ಉದ್ದೇಶದಿಂದ ಕೂಡಿಕೊಂಡು ನನ್ನ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಿ ಬಂದು ಟ್ರ್ಯಾಕ್ಟರ್ಗೆ ಅಡ್ಡಲಾಗಿ ಬಂದು ನಮ್ಮನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ  ಲೇ ಸೂಳೇ ಮಕ್ಕಳೇ ಜಮೀನು ನಮ್ಮದು ಜಮೀನಿನಲ್ಲಿ ಟಿಲ್ಲರ್ ಹೊಡೆಯಬೇಡಿ  ಅಂತಾ ಜಗಳ ತೆಗೆದು ನನಗೆ ಬಾಯಿಗೆ ಬಂದಂತೆ ಅವಾಚ್ಯವಾಗಿ ಬೈದು ಟಿಲ್ಲರ್ ಹೊಡೆಯದಂತೆ ತಡೆದು  ಲೇ ಸೂಳೇ ಮಗನೇ ಇನ್ನೊಂದು ಸಲ ಹೊಲದಲ್ಲಿ ಕಾಲಿಟ್ಟರೆ ನಿಮ್ಮನ್ನು ಹೊಲದಲ್ಲಿಯೇ ಜೀವಂತವಾಗಿ ಹೂಳುತ್ತೇವೆ, ಟ್ರ್ಯಾಕ್ಟರ್ಗೆ ಬೆಂಕಿ ಹಚ್ಚಿ ಸುಡುತ್ತೇವೆ  ಅಂತಾ ಜೀವದ ಬೆದರಿಕೆ ಹಾಕಿದರು. ಅವರಿಗೆ ಹೆದರಿಕೊಂಡು ನಾವು ಅಲ್ಲಿಂದ ವಾಪಸ್ ಬಂದೆವು. ಘಟನೆಯನ್ನು ಅಲ್ಲಿಯೇ ಹತ್ತಿರದ ಹೊಲದವರಾದ ನಾಗರಾಜ ತಂದೆ ಕಂಠೆಪ್ಪ ಕನಕಗಿರಿ ಸಾ: ಕೇಸರಹಟ್ಟಿ ಇತನು ನೋಡಿರುತ್ತಾನೆ. ನಂತರ ನಾನು ಶಿರಡಿಗೆ ದೇವಸ್ಥಾನಕ್ಕೆ ಹೋಗಿದ್ದರಿಂದ ಕೂಡಲೇ ಬಂದು ದೂರು ನೀಡಲು ಆಗದೇ ಇದ್ದು, ನಾನು ಜಮೀನಿನಲ್ಲಿ ಹೋದರೆ ಮೆದಕಿನಾಳ ವಿರುಪಣ್ಣ ಇವರು ನನಗೆ ಪ್ರಾಣಾಪಾಯ ಮಾಡುವ ಸಾಧ್ಯತೆಗಳು ಇರುತ್ತವೆಕಾರಣ ಇಂದು ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಕಾರಣ ಬಗ್ಗೆ ಮೇಲ್ಕಂಡ 5 ಜನರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ." ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 199/2015 ಕಲಂ 143, 147, 447, 341, 504, 506 ರೆಡ್ ವಿತ್ 149 .ಪಿ.ಸಿ ಅಡಿಯಲ್ಲಿ ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು.   


0 comments:

 
Will Smith Visitors
Since 01/02/2008