ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 46/2015
ಕಲಂ 279, 304(ಎ) ಐ.ಪಿ.ಸಿ:
ದಿನಾಂಕ: 04.07.2015 ರಂದು ಮದ್ಯಾಹ್ನ 1:00 ಗಂಟೆ ಸುಮಾರಿಗೆ ಉಚ್ಚಲಕುಂಟಾ ತಾಳಕೇರಿ ರಸ್ತೆಯ ಮೇಲೆ ಉಚ್ಚಲಕುಂಟಾ ಸೀಮಾದಲ್ಲಿ ಆರೋಪಿತನು ತಾನು ನಡೆಸುತ್ತಿದ್ದ ಟ್ರಾಕ್ಟರ ಇಂಜಿನ ನಂಬರ. SBSWL1343 ಟ್ರಾಲಿ ನಂ ಕೆ,ಎ 26 ಟಿ 2077 ನೆದ್ದನ್ನು ಉಚ್ಚಲಕುಂಟಾ ಕಡೆಯಿಂದ ತಾಳಕೇರಿ ಕಡೆಗೆ ಅತಿ ವೇಗೆವಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯ ಉಂಟಾಗುವ ರೀತಿಯಲ್ಲಿ ನಡೆಸಿಕೊಂಡು ಹೋಗಿದ್ದರಿಂದ ಟ್ರಾಕ್ಟರ ಮೇಲೆ ನಿಯಂತ್ರಣ ಸಾಧಿಸದೆ ರಸ್ತೆಯ ಎಡಕ್ಕೆ ಜಗ್ಗಿ ಟ್ರ್ಯಾಕ್ಟರ ರಸ್ತೆಯ ಎಡಬದಿಗೆ ಇರುವ ತಗ್ಗಿನಲ್ಲಿ ಹೋಗಿದ್ದರಿಂದ ಟ್ರ್ಯಾಕ್ಟರ ಚಾಲಕ ನಾಗಪ್ಪ ಇವನು ಪುಟಿದು ಕೆಳಗೆ ಬಿದ್ದಾಗ ಟ್ರ್ಯಾಕ್ಟರ ಹಾಗೆ ಮುಂದೆ ಹೋಗಿದ್ದರಿಂದ ಟ್ರ್ಯಾಕ್ಟರದ ಮುಂದಿನ ಗಾಲಿ ಆರೋಪಿನ ಹೊಟ್ಟೆಯ ಮೇಲೆ ಹಾಯಿದು ಟ್ರ್ಯಾಕ್ಟರ ಮುಂದೆ ಹೋಗಿ ನಿಂತಿದ್ದು, ಸದರಿ ಅಪಘಾತದಲ್ಲಿ ಆರೋಪಿತನಿಗೆ ಭಾರಿ ಸ್ವರೂಪದ ಒಳ ಪೆಟ್ಟಾಗಿದ್ದರಿಂದ ಇವನಿಗೆ ಚಿಕಿತ್ಸೆಗಾಗಿ ಕೊಪ್ಪಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಮಾಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಕಾಲಕ್ಕೆ ಸಾಯಂಕಾಲ 5:00 ಗಂಟೆ ಸುಮಾರಿಗೆ ಲಕ್ಕುಂಡಿ ಸಮೀಪ ರಸ್ತೆಯ ಮದ್ಯದಲ್ಲಿ ಮೃತಪಟ್ಟಿದ್ದು ಇರುತ್ತದೆ. ಅಂತಾ ಇತ್ಯಾದಿ ಪಿಯರ್ಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 160/2015 ಕಲಂ. ಮಹಿಳೆ ಕಾಣೆ
ದಿನಾಂಕ 04.07.2015 ರಂದು ಸಾಯಂಕಾಲ 4:30
ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರೀ ಎಮ್.ವೆಂಕಟೇಶ್ವರರಾವ್
ತಂದೆ ರಂಗಯ್ಯ ಮೇಡಪಲ್ಲಿ ಸಾ: ಜಿನ್ನಾಪೂರ ತಾ:ಜಿ:ಕೊಪ್ಪಳ ಫೋ ನಂ 9480299535
ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಫಿರ್ಯಾದಿಯನ್ನು ಹಾಜರು
ಪಡಿಸಿದ್ದು ಅದರ ಸಾರಾಂಶವೇನೆಂದರೆ ಜಿನ್ನಾಪೂರ ಗ್ರಾಮದ ಹತ್ತಿರ ಇರುವ ರೇಣುಕಾ ಕೋಳಿ
ಫಾರಂನಲ್ಲಿ ಸುಮಾರು 16 ವರ್ಷಗಳಿಂದ ಕೂಲಿ ಕೆಲಸ
ಮಾಡಿಕೊಂಡು ಕೋಳಿ ಪಾರಂನಲ್ಲಿರುವ ಲೇಬರ ಶೆಡ್ ಮನೆಯಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೇನೆ.
ದಿನಾಂಕ 02.07.2015 ರಂದು ಮದ್ಯಾನ 3
:00 ಗಂಟೆಯ ಸುಮಾರಿಗೆ ಮನೆಯಲ್ಲಿ ನಾನು ನನ್ನ ಹೆಂಡತಿ ಇಬ್ಬರೂ ಕೂಡಿ ಊಟ
ಮಾಡಿದ್ದು ನಂತರ ನಾನು ಮದ್ಯಾನ 3:30 ಗಂಟೆಗೆ ಕೊಳಿ ಪಾರಂಗೆ ಕೆಲಸಕ್ಕೆ ಹೋದೆನು. ನಂತರ ಸಾನು ನನ್ನ ಕೆಲಸವನ್ನು
ಮುಗಿಸಿಕೊಂಡು ವಾಪಾಸ ಸಾಯಂಕಾಲ 7:00 ಗಂಟೆಗೆ ನಮ್ಮ ಮನೆಗೆ ಬಂದು ನೋಡಲಾಗಿ ಮನೆಯಲ್ಲಿ ನನ್ನ ಹೆಂಡತಿ ಶ್ರೀಮತಿ ಮಧುರವಾಣಿ ಈಕೆಯು
ಕಾಣಲಿಲ್ಲ. ನಂತರ ನಾನು ಸ್ವಲ್ಪ ಹೊತ್ತು ಕಾಯ್ದು ಹೊರಗೆ ಹೋದವಳು ಬರಬಹುದೆಂದು
ಸುಮ್ಮನಾಗಿದ್ದೇನು. ನಂತರ ರಾತ್ರಿ 08 ಗಂಟೆಯಾದರೂ ನನ್ನ ಹೆಂಡತಿ ಮನೆಗೆ ವಾಪಾಸ ಬಾರದೇ ಇರುವುದರಿಂದ ನಾನು ನನ್ನ ಮನೆಯ ಅಕ್ಕ
ಪಕ್ಕದವನ್ನು ವಿಚಾರಿಸಲಾಗಿ ನನ್ನ ಹೆಂಡತಿ ಮಧುರವಾಣಿ ಇವಳು ಸಾಯಂಕಾಲ 6:00 ಗಂಟೆಗೆ ಮನೆಯಿಂದ ಹೊರಗೆ ಹೋಗಿದ್ದು ನಾನು ನೋಡಿರುತ್ತೇವೆ ಅಂತಾ ತಿಳಿಸಿದ್ದು ಇರುತ್ತದೆ.
ನಂತರ ನಾನು ನಮ್ಮ ಕೋಳಿ ಫಾರಂನ ಮ್ಯಾನೇಜರರಾದ ಶ್ರೀ ರಾಜು ಇವರಿಗೆ ವಿಷಯ ತಿಳಿಸಿ ಇಬ್ಬರೂ
ಕೂಡಿಕೊಂಡು ಗ್ರಾಮದ ಸುತ್ತಾಮುತ್ತಾ ಮತ್ತು ನಮ್ಮ ಸಂಭಂದಿಕರಿಗೆ ವಿಚಾರಿಸಲು ಅವಳು ಮನೆಗೆ
ಬಂದಿರುವುದಿಲ್ಲಾ ಅಂತಾ ತಿಳಿಸಿದ್ದು ಇರುತ್ತದೆ. ಕಾರಣ ದಿನಾಂಕ 02.07.2015
ರಂದು ಸಾಯಂಕಾಲ 6:00 ಗಂಟೆಯ ಸುಮಾರಿಗೆ ಜಿನ್ನಾಪೂರ ಸೀಮಾದ ರೇಣುಕಾ ಕೋಳಿ ಫಾರಂನಲ್ಲಿರುವ ನಮ್ಮ ವಾಸದ ಮನೆಯಿಂದ
ನನ್ನ ಹೆಂಡತಿ ಮಧುರವಾಣಿ ವಯಾ: 35ವರ್ಷ ಇವಳು ಹೊರಗಡೆ ಹೋಗಿದ್ದು ಇಲ್ಲಿಯವರೆಗೂ ಪತ್ತೆಯಾಗಿರುವುದಿಲ್ಲಾ. ಕಾರಣ ತಾವುಗಳು
ಹುಡುಕಿಕೊಡಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 160/2015
ಕಲಂ ಮಹಿಳೆ ಕಾಣೆ ನೇದ್ದರಲ್ಲಿ ಪ್ರಕರನ ದಾಖಲಿಸಿ ತನಿಖೆ
ಕೈಗೊಂಡಿದ್ದು ಇರುತ್ತದೆ.
3) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 118/2015 ಕಲಂ 323, 325, 504, 506, 109 ಸಹಿತ 34 ಐ.ಪಿ.ಸಿ:.
ದಿನಾಂಕ
04-07-2015 ರಂದು ರಾತ್ರಿ 08-00 ಗಂಟೆಗೆ ಪಿರ್ಯಾಧಿದಾರರಾದ ಸುಮಂಗಲ ಠಾಣೆಗೆ ಹಾಜರಾಗಿ ಸಲ್ಲಿಸಿದ
ದೂರಿನ ಸಾರಾಂಶ ವೇನೆಂದರೆ ಈಗ್ಗೆ ಸುಮಾರು ಒಂದು ವಾರದ ಹಿಂದೆ ಕೊಪ್ಪಳ ನಗರದ ಸಾಲಾರಜಂಗ ರಸ್ತೆಯಲ್ಲಿ
ಪಿರ್ಯಾಧಿದಾರರ ತಂಗಿಯಾದ ಸುಮಂಗಲಾ ಹಾಗೂ ಅವಳ ಗಂಡ ವೆಂಕಟೇಶ ಇವರು ಬಂದು ಅವಾಚ್ಯ ಶಬ್ದಗಳಿಂದ ಬೈದು
ಕೈಯಿಂದ ಹಲ್ಲೆ ಮಾಡಿದ್ದು ಇದಕ್ಕೆ ಕಾರಣ ವೇನೆಂದರೆ ನಮ್ಮ ಎರಡನೇ ತಂಗಿಯಾದ ಶಿವಮ್ಮ ಇವಳನ್ನು ಸಾಕಿದರೆ
ನಮ್ಮ ತಂದೆಯಿಂದ ಬಂದ ಆಸ್ತಿಯನ್ನು [ ಮಣ್ಣಿನ ಮನೆ] ಅವರ ಹೆಸರಿಗೆ ಬರೆಸಿಕೊಳ್ಳಬಹುದು ಅಂತಾ
ಹೇಳಿದ್ದು ಅದರಂತೆ ನಾನು ಶಿವಮ್ಮ ಇವಳನ್ನು ಸಾಕುತ್ತಿದ್ದು ನಮ್ಮ ತಂದೆಯಿಂದ ಬಂದ ಆಸ್ತಿಯನ್ನು [
ಮಣ್ಣಿನ ಮನೆ] ನನ್ನ ಹೆಸರಿಗೆ ಮಾಡಿಸಿಕೊಳ್ಳಲು 04 ಜನರ ಸಾಕ್ಷಿದಾರರೊಂದಿಗೆ ಕರಾರು ಪತ್ರವನ್ನು
ಬರೆಸಿಕೊಂಡಿದ್ದು ಅದಕ್ಕೆ ಕೊಪ್ಪಳ ನ್ಯಾಯಾಲಯದಲ್ಲಿ ನೋಟರಿ ಮಾಡಿಸಿದ್ದು ಅದೆ ಈ ಕರಾರು ಪತ್ರದ ಒಪ್ಪಂದದ
ಪ್ರಕಾರ ನಾನು ನನ್ನ ಎರಡನೇ ತಂಗಿ ಶಿವಮ್ಮ ಇವಳು ಬುದ್ದಿಮಾಂದ್ಯಳಿದ್ದು ಇವಳ ಸಾಕುವ ಜವಾಬ್ದಾರಿಯನ್ನು
ಹೊತ್ತಿರುತ್ತೇನೆ. ಶಿವಮ್ಮ ಇವಳನ್ನು ನನ್ನ ದೂರದ ಸಂಬಂದಿ ನಾಗರಾಜ ಈತನು ಪೋಷಣೆ ಮಾಡಿತ್ತಿದ್ದು ನಾಗರಾಜ
ಈತನಿಗೆ ಮಂಜುಳಾ ಹಾಗೂ ವೆಂಕಟೇಶ ಇವರು ನೀನೇಕೆ ಶಿವಮ್ಮ ಇವಳನ್ನು ಪಾಲನೆ ಪೋಷಣೆ ಮಾಡಿತ್ತೀಯ ಅಂತಾ
ಜೀವದ ಬೆದರಿ ಹಾಕಿದ್ದು ಅಲ್ಲದೇ, ದಿನಾಂಕ 04-07-2015 ರಂದು ಗಂಗಾವತಿ ನಗರ ನಗರ ಸಭೆ ಕಂಪೌಂಡಿನ
ಹೊರಭಾಗದ ಸ್ಥಳದಲ್ಲಿ ಮಂಜುಳಾ ಇವರು ಅವನ ದೇಹದ ಮೇಲೆ ಬಾಯಿಂದ ಕಚ್ಚಿ ಗಾಯ ಮಾಡಿ ಹಲ್ಲೇ ಮಾಡಿದ್ದು
ಇರುತ್ತದೆ. ನಾಗರಾಜ ಇವನಿಗೆ ಚಿಕಿತ್ಸೆ ಕೊಡಿಸಿ ಹಾಗೂ ಹಿರಿಯರೊಂದಿಗೆ ವಿಚಾರಿಸಿ ಇಂದು ಠಾಣೆಗೆ ಬಂದು
ದೂರು ಸಲ್ಲಿಸಿದ್ದು ಕಾರಣ ಸದರಿ ಮಂಜುಳಾ ಹಾಗೂ ವೆಂಕಟೇಶ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳ
ಬೇಕೆಂದು ಸಲ್ಲಸಿದ ದೂರಿನ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೆನು.
0 comments:
Post a Comment