ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 119/2015
ಕಲಂ 87 Karnataka Police Act.
ದಿ: 05-07-2015 ರಂದು ಸಂಜೆ 05-30 ಗಂಟೆಗೆ ಶ್ರೀ ಅಶೋಕ ಎ.ಎಸ್.ಐ
ನಗರ ಠಾಣೆ ಕೊಪ್ಪಳ ರವರು ಠಾಣೆಗೆ ಹಾಜರಾಗಿ ಗಣಕೀಕೃತ ದೂರನ್ನು ನೀಡಿದ್ದು ಸದರಿ ದೂರಿನಲ್ಲಿ ಇಸ್ಪೀಟ ಜೂಜಾಟದ ದಾಳಿ ಪಂಚನಾಮೆಯನ್ನು ಹಾಜರಪಡಿಸಿದ್ದು ಅದರ ಸಾರಾಂಶವೇನೆಂದರೆ, ಇಂದು ಸಂಜೆ 04-00 ಗಂಟೆಯ ಸುಮಾರಿಗೆ ಭಾಗ್ಯನಗರದ ಹನುಮಂತ ದೇವರ
ಗುಡಿ ಹಿಂದಿನ ಬಯಲು ಜಾಗೆಯ ಸಾರ್ವಜನಿಕ ಸ್ಥಳದಲ್ಲಿ 06 ಜನ ಆರೋಪಿತರು ಗುಂಪಾಗಿ ಕುಳಿತುಕೊಂಡು ಅಂದರ-ಬಾಹರ್ ಇಸ್ಪೀಟ ಜೂಜಾಟದಲ್ಲಿ ತೊಡಗಿರುವಾಗ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಪಂಚರ ಸಮಕ್ಷಮದಲ್ಲಿ ಆರೋಪಿತರಿಂದ
2500=00 ಇಸ್ಪೀಟ ಜೂಜಾಟದ ಹಣವನ್ನು ಹಾಗೂ 52 ಇಸ್ಪೀಟ ಎಲೆಗಳನ್ನು ಮತ್ತು ಒಂದು ಬೆಡ್ ಶೀಟನ್ನು
ಜಪ್ತಿ ಮಾಡಿಕೊಂಡು ಬಂದು ಮುಂದಿನ ಕ್ರಮಕ್ಕಾಗಿ ಮುದ್ದೇಮಾಲು ಹಾಗೂ ಆರೋಪಿತರೊಂದಿಗೆ ಹಾಜರಪಡಿಸಿದ್ದು, ಆರೋಪಿತರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಪಿರ್ಯಾಧಿಯನ್ನು ನೀಡಿದ್ದು ಇದು ಅಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ಸಿ.ಜೆ.ಎಮ್ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು 06-15 ಪಿ.ಎಮ್ ಗಂಟೆಗೆ ಠಾಣಾ ಗುನ್ನೆ ನಂ 119/2015 ಕಲಂ 87 ಕೆ.ಪಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
2) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 149/2015 ಕಲಂ 87 Karnataka Police Act.
ದಿನಾಂಕ- 05-07-2015 ರಂದು ¸ಸಾಯಂಕಾಲ 5-00 ಗಂಟೆಯ ಸುಮಾರಿಗೆ ಕಾರಟಗಿ ಠಾಣಾ ವ್ಯಾಫ್ತಿಯ ಪನ್ನಾಪೂರ ಗ್ರಾಮದ ಹನುಮಂತಪ್ಪ ಕುರಿ ಇವರ ಮನೆ ಹತ್ತಿರ ಸಾವಜನಿಕ ಸ್ಥಳದಲ್ಲಿ ಆರೋಪಿತ ರು ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ್ಗೆ
ಪಿ.ಎಸ್.ಐ.ಸಾಹೇಬರು ಕಾರಟಗಿರವರು ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತರನ್ನು
ಹಿಡಿದುಕೊಂಡು ಆರೋಪಿತರ ವಶದಿಂದ ಇಸ್ಪೇಟ್ ಜೂಜಾಟದ ಸಾಮಾಗ್ರಿಗಳು ಹಾಗೂ ನಗರದು ಹಣ 13,620-00 ರೂ. ಗಳನ್ನು
ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಆರೋಪಿತರೊಂದಿಗೆ ಸಾಯಂಕಾಲ 6-30 ಗಂಟೆಗೆ ಬಂದು ವರದಿ ಮತ್ತು ದಾಳಿ ಪಂಚನಾಮೆ ಹಾಜರಪಡಿಸಿದ್ದರಿಂದ ಸದರಿ
ವರದಿಯ ಸಾರಂಶ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ.
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 204/2015 ಕಲಂ 87 Karnataka Police Act.
ದಿ:- 05-07-2015 ರಂದು ಸಾಯಂಕಾಲ 4:00 ಗಂಟೆಗೆ ಶ್ರೀ ಪ್ರಭಾಕರ ಎಸ್. ಧರ್ಮಟ್ಟಿ, ಸಿಪಿ.ಐ. ಗಂಗಾವತಿ ಗ್ರಾಮೀಣ ವೃತ್ತ ರವರು ಕನರ್ಾಟಕ ರಾಜ್ಯ ಪೊಲೀಸ್ ಪರವಾಗಿ ಸ್ವಂತ ಫಿಯರ್ಾದಿಯೊಂದಿಗೆ ಮೂಲ ಪಂಚನಾಮೆ ಮುದ್ದೇಮಾಲು ಮತ್ತು ಆರೋಪಿತರನ್ನು ಹಾಜರ್ಪಡಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. ಇಂದು ದಿನಾಂಕ:- 05-07-2015 ರಂದು ಮಧ್ಯಾಹ್ನ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕೃಷ್ಣದೇವರಾಯ ನಗರ ಸೀಮಾದಲ್ಲಿ ರಾಮಕೃಷ್ಣ ಎಂಬುವವರ ಹೊಲದ ಹತ್ತಿರ ಹೊಲಗಳಿಗೆ ಹೋಗುವ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಹಾರ್ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ. ಗಂಗಾವತಿರವರ ಮಾರ್ಗದರ್ಶನದಲ್ಲಿ ನಾನು ಮತ್ತು ಟಿ.ಜಿ. ನಾಗರಾಜ, ಎ.ಎಸ್.ಐ., ಸಿಬ್ಬಂದಿಯವರಾದ ಪಿ.ಸಿ. 60, 358, 354, 129, 131, 180, 287, 323, ಜೀಪ್ ಚಾಲಕ ಎ.ಪಿ.ಸಿ. ಬಸವರಾಜ ರವರನ್ನು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ಸರಕಾರಿ ಜೀಪ್ ನಂ: ಕೆ.ಎ-37/ ಜಿ-336 ಮತ್ತು ವೈಯಕ್ತಿಕ ಮೋಟಾರ್ ಸೈಕಲ್ಗಳಲ್ಲಿ ಠಾಣೆಯಿಂದ ಮಧ್ಯಾಹ್ನ 2:00 ಗಂಟೆಗೆ ಹೊರಟು ಕೃಷ್ಣದೇವರಾಯ ನಗರ ಸೀಮಾದಲ್ಲಿ ಹೋಗಿ ವಾಹನಗಳನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೊರಟು ನೋಡಲಾಗಿ ಅಲ್ಲಿ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ಮಧ್ಯಾಹ್ನ 2:30 ಗಂಟೆಯಾಗಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ 5 ಜನರು ಸಿಕ್ಕಿಬಿದ್ದಿದ್ದು ಸಿಕ್ಕವರನ್ನು ವಿಚಾರಿಸಲು ಅವರು ತಮ್ಮ ಹೆಸರುಗಳು (1) ಸದ್ದಾಂ ತಂದೆ ರಹಿಮಾನ್ ಸಾಬ ಅಂಗಡಿ, ವಯಸ್ಸು 26 ವರ್ಷ, ಉ: ಎಗ್ ರೈಸ್ ವ್ಯಾಪಾರ ಸಾ: ಅಯೋಧ್ಯ (2) ವಿರುಪಾಕ್ಷಗೌಡ ತಂದೆ ಬಸನಗೌಡ ಬಾಲನಗೌಡ, ವಯಸ್ಸು 37 ವರ್ಷ, ಜಾತಿ: ಲಿಂಗಾಯತ ಉ: ಒಕ್ಕಲುತನ ಸಾ: ಅಯೋಧ್ಯ (3) ಎಲ್.ವಿ. ಅಶೋಕ ತಂದೆ ಕೃಷ್ಣಮೂತರ್ಿ, ವಯಸ್ಸು 52 ವರ್ಷ, ಜಾತಿ: ಕಮ್ಮಾ ಉ: ಒಕ್ಕಲುತನ ಸಾ: ಅಯೋಧ್ಯ (4) ಇ. ಶ್ರೀರಾಮ ತಂದೆ ನರಸಿಂಹಮೂತರ್ಿ, ವಯಸ್ಸು 55 ವರ್ಷ, ಜಾತಿ: ಕಮ್ಮಾ ಉ: ಒಕ್ಕಲುತನ ಸಾ: ಅಯೋಧ್ಯ (5) ರಾಮಕೃಷ್ಣ ತಂದೆ ವೀರರಾಜು, ವಯಸ್ಸು 45 ವರ್ಷ, ಜಾತಿ: ಕಮ್ಮಾ ಉ: ಒಕ್ಕಲುತನ ಸಾ: ಅಯೋಧ್ಯ ಅಂತಾ ತಿಳಿಸಿದರು. ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 3,200/- ಗಳು ಮತ್ತು 52 ಇಸ್ಪೇಟ್ ಎಲೆಗಳು ಮತ್ತು ಒಂದು ಪ್ಲಾಸ್ಟಿಕ್ ಚೀಲ ಜಪ್ತು ಮಾಡಲಾಯಿತು. ಈ ಬಗ್ಗೆ ಮಧ್ಯಾಹ್ನ 2:30 ರಿಂದ 3:30 ಗಂಟೆಯವರೆಗೆ ಪಂಚನಾಮೆ ನಿರ್ವಹಿಸಿ ನಂತರ ಆರೋಪಿತರೊಂದಿಗೆ ಸಂಜೆ 4:00 ಗಂಟೆಗೆ ಠಾಣೆಗೆ ವಾಪಸ್ ಬಂದು ಈ ವರದಿಯನ್ನು ತಯಾರಿಸಿ ಸದರಿ ಆರೋಪಿತರ ವಿರುದ್ಧ ಕಲಂ 87 ಕೆ.ಪಿ. ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡುವ ಕುರಿತು ವರದಿಯನ್ನು ಸಲ್ಲಿಸಿದ್ದು ಇರುತ್ತದೆ. ಅಂತಾ ಇದ್ದ ವರದಿ ಆಧಾರದ ಮೇಲಿಂದ ಪ್ರಕರಣವು ಅಸಚಿಜ್ಞಾ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಲಯದ ಅನುಮತಿ ಪಡೆದುಕೊಂಡು ಸಾಯಂಕಾಲ 4:30 ಗಂಟೆಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 204/2015 ಕಲಂ 87 ಕ.ಪೋ. ಕಾಯ್ದೆ ಆಡಿ ಪ್ರಕರಣವನ್ನು ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು.
0 comments:
Post a Comment