Our Commitment For Safe And Secure Society

Our Commitment For Safe And Secure Society

This post is in Kannada language.

To view, you need to download kannada fonts from the link section.
Follow on FACEBOOK
Koppal District Police
As per SO 1017 New beat system is introduced in Koppal District. Click on Links to know your area in charge officers ASI/HC/PC

Tuesday, July 7, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 164/2015  ಕಲಂ 78(3) Karnataka Police Act and 420 IPC.
ದಿ: 07.07.2015 ರಂದು 01:30 ಗಂಟೆಗೆ ಶ್ರೀ ಚಿತ್ತರಂಜನ್ ಡಿ. ಪಿ.ಎಸ್.ಐ ಕೊಪ್ಪಳ ಗ್ರಾಮೀಣ ಠಾಣೆರವರು ಠಾಣೆಗೆ ಹಾಜರಾಗಿ ಮಟಕಾ ಜೂಜಾಟದ ಆರೋಪಿತರ ಮೇಲೆ ದಾಳಿ ಮಾಡಿಕೊಂಡು ಬಂದು ನೀಡಿದ ಗಣಕೀಕೃತ ದೂರನ್ನು ಸ್ವೀಕರಿಸಿದ್ದುದೂರಿನ ಸಾರಾಂಶವೇನೆಂದರೆ, ದಿನಾಂಕ: 06-07-2015 ರಂದು ರಾತ್ರಿ 8-00 ಗಂಟೆಗೆ ಠಾಣಾ ವ್ಯಾಪ್ತಿಯ ಚಿಲವಾಡಗಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ  ಆರೋಪಿ ನಂ 01 ರಾಜಾಬಕ್ಷಿ ಮತ್ತು 02 ರಮೇಶ ನೇದ್ದವರು ಮಟಕಾ ಜೂಜಾಟದಲ್ಲಿ  ತೊಡಗಿದ್ದಾಗ ಅಧಿಕಾರಿ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರಿಂದ ಮಟಕಾ-ಜೂಜಾಟದ ನಗದು ಹಣ 3050=00 ರೂಪಾಯಿಗಳು, ಒಂದು ಬಾಲ ಪೆನ್, ಒಂದು ಮಟಕಾ ಚೀಟಿ ಇವುಗಳನ್ನು ಜಪ್ತ ಮಾಡಿಕೊಂಡಿದ್ದು ಸದರಿ ಆರೋಪಿತರು ತಾವು ಬರೇದ ಪಟ್ಟಿಯನ್ನು ಆರೋಪಿ ನಂ 03 ಶಿವರೆಡ್ಡಿ ಸಾ: ಕೊಪ್ಪಳ ಇತನಿಗೆ ಕೊಡುವುದಾಗಿ ಹೇಳಿದ್ದರಿಂದ ಸದರಿ ಆರೋಪಿತರನ್ನು ಸಂಗಡ ಕರೆದುಕೊಂಡು ಕೊಪ್ಪಳಕ್ಕೆ ಬಂದು ಬೆಂಕಿ ನಗರದಲ್ಲಿರುವ ಶಿವರೆಡ್ಡಿ ಇವರ ಮನೆಯ ಹತ್ತಿರ ಹೋದಾಗ ಆರೋಪಿ ಶಿವರೆಡ್ಡಿ ಇತನು ಹಣವನ್ನು ಎಣಿಸುತ್ತಿದ್ದು ಮತ್ತು ಇತರೆ 4 ಜನರು ಲೆಕ್ಜಪತ್ರ ಮಾಡುವಾಗ ಖಚಿತ ಪಡಿಸಿಕೊಂಡು ದಾಳಿ ಮಾಡಿ ಶಿವರೆಡ್ಡಿ ಇತನಿಂದ 33,190=00 ರೂ ನಗದು ಹಣ ಹಾಗೂ 2 ಬಾಲ್ ಪೆನ್, 15 ಮಟಕಾ ಚೀಟಿಗಳು, 06 ಮೊಬೈಲ್ ಗಳು, 3 ಕ್ಯಾಲ್ಯೂಲೇಟರ್, 02 ಪರೀಕ್ಷೆ ಪ್ಯಾಡ್ ಗಳು ಮತ್ತು ಲೆಕ್ಜಪತ್ರ ಮಾಡುತ್ತಿದ್ದ 4 ಜನರಿಂದ 04 ಮೊಬೈಲ್, 04, ಮಟಕಾ ಚೀಟಿ. 04 ಬಾಲ್ ಪೆನ್  ಇವುಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಸದರಿ ಆರೋಪಿತರು ಜನರಿಂದ ಸುಳ್ಳು ಹೇಳಿ ಹಣ ಪಡೆದು ಮೋಸ ಮಾಡುತ್ತಿದ್ದ ಸದರಿ 07 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ. 
2) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 102/2015 ಕಲಂ. 279, 304(ಎ) ಐ.ಪಿ.ಸಿ.:  
ದಿನಾಂಕ: 06-07-2015 ರಂದು ಬೆಳಿಗ್ಗೆ 08-30 ಗಂಟೆಗೆ ಪಿರ್ಯಾಧಿದಾರರಾದ ಶ್ರೀ ರೇಣಪ್ಪ ತಂದೆ ಲೋಕಪ್ಪ ಕಲಗುಡಿ ವಯಾ 29 ವರ್ಷ ಜಾ: ಮಾರಾಠ ಉ: ಗೌಂಡಿಕೆಲಸ ಸಾ: ಶಿವಾಜಿ ಪೇಟ ಗಜೇಂದ್ರಗಡ ತಾ:ರೋಣ ರವರು ಠಾಣೆಗೆ ಹಾಜರಾಗಿ ಲಿಖಿತ ತಮ್ಮ ಲಿಖಿತ ದೂರು ಹಾಜರಾಪಡಿಸಿದ್ದು ಸಾರಾಂಶವೇಣೆಂದರರೆ ತಮ್ಮ ಮಾವ ಹನುಮಂತಪ್ಪ ತಂದೆ ಸಣ್ನೆಪ್ಪ ಗೋಸಾವಿ ವಯಾ 40ವರ್ಷ ಜಾ:ಮರಾಠ [ಆರೇರ] ಉ:ಒಕ್ಕಲುತನ ಸಾ:ಗೆದಗೇರಿ ತಾ:ಯಲಬುರ್ಗಾ ಈತನು ನಿನ್ನೆ ರಾತ್ರಿ ತನ್ನ ಮೋಟಾರ ಸೈಕಲ್ ನಂ ಕೆ.ಎ-37 ಎಲ್-5976 ಮೇಲೆ ಕುಷ್ಟಗಿ ಕಡೆಯಿಂದ ಬಂಡಿ ಕ್ರಾಶ ಕಡೆಗೆ ಹೋಗುತ್ತಿದ್ದಾಗ ಕನಕೊಪ್ಪ ಕ್ರಾಸ ಇನ್ನೂ 1 ಕಿ,ಮೀ ಅಂತರ ಇರುವಾಗ ತನ್ನ ಮೋಟಾರಸೈಕಲ್ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಹೋಗಿ ನಿನ್ನೆ ರಾತ್ರಿ 07-45 ಗಂಟೆಗೆ ಸ್ಕೀಡ ಮಾಡಿಕೊಂಡು ಬಿದ್ದು ಎಡಹಣೆಗೆ, ಎಡತಲೆಗೆ ತೀವ್ರ ಸ್ವರೂಪದ ಗಾಯಾಗಳಾಗಿ ಅಲ್ಲದೇ ಎಡಗಣ್ಣಿಗೆ ಬಾಹು ಬಂದಿದ್ದು ಆತನನ್ನು ಪಿರ್ಯಾದಿದಾರರು ಹೆಚ್ಚಿನ ಇಲಾಜಕ್ಕಾಗಿ ಒಂದು ಖಾಸಗಿ ವಾಹನದಲ್ಲಿ ಹುಬ್ಬಳ್ಲಿ ಗೆ ಕೆದುಕೊಂಡು ಹೋಗುತ್ತಿದ್ದಾಗ ಹುಬ್ಬಳ್ಳಿ ಸಮೀ ಹೆಬಸೂರ ದಾಟಿ ಈ ದಿನ ಬೆಳಗಿನ ಜಾವ 01-00 ಗಂಟೆಗೆ ಆತನಿಗೆ ಆದ ಬಾದೆಗಳಂದ ಮೃತ ಪಟ್ಟಿದ್ದು ನಂತರ ಶವವನ್ನು ಸರಕಾರಿ ಆಸ್ಪತ್ರೆ ಯಲಬುರ್ಗಾ ದಲ್ಲಿ ತಂದು ಹಾಕಿದ್ದು ಈಗ ಪೊಲೀಸ್ ಠಾಣೆಗೆ ಬಂದು ಲಿಖಿತ ದೂರು ಹಾಜರ ಪಡಿಸಿದ್ದು  ವಗೈರೆ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 103/2015 ಕಲಂ. 279, 304(ಎ) ಐ.ಪಿ.ಸಿ.:  
ದಿನಾಂಕ:06-07-2015 ರಂದು ಮದ್ಯಾಹ್ನ 02-30 ಗಂಟೆಗೆ ಪಿರ್ಯಾದಿದಾರನಾದ ಹನುಮಂತಪ್ಪ ತಂದೆ ಭೀಮಪ್ಪ ಗೋಪಾಳಿ ವಯಾ 35 ವರ್ಷ ಜಾ:ವಾಲ್ಮೀಕಿ ಉ:ಒಕ್ಕಲುತನ ಸಾ:ಕಂದಕೂರ ತಾ:ಕುಷ್ಟಗಿ ರವರು ಠಾಣೆಗೆ ಹಾಜರಾಗಿ ನುಡಿ ಹೇಳಿಕೆ ಪಿರ್ಯಾದಿ ಸಾರಾಂಶವೇನೆಂದರೆ ತನ್ನ 2 ನೇ ಅಣ್ಣ-ತಮ್ಮಂದಿರಾದ ಬಸವರಾಜ ಈತನು ಇಂದು ಮುಂಜಾನೆ 09-30ಗಂಟೆಯ ಸುಮಾರು ತಮ್ಮ  ಮಾವನ  ಹಿರೋ ಸ್ಪ್ಲೆಂಡರ ಮೋಟಾರಸೈಕಲ್ ತೆಗೆದುಕೊಂಡು ಕುಷ್ಟಗಿಗೆ ಬೀಜ ಗೊಬ್ಬರ ತರುಲು ಹೋಗಿದ್ದನು. ವಾಪಸ ಮುಂಜಾನೆ 11-30 ಗಂಟೆಯ ಸುಮಾರಿಗ ಕಂದಕೂರು -ಕುಷ್ಟಗಿ ರಸ್ತೆಯ ಮೇಲೆ ಕಂದಕೂರು ಸೀಮಾದ ಬುತ್ತಿ ಬಸವಣ್ನ ಗುಡಿಯ ಹತ್ತಿರ ತಿರುವಿನಲ್ಲಿ ತನ್ನ ಮೋಟಾರ ಸೈಕಲ್ ನಂ:ಕೆ.ಎ-37-ಡಬ್ಲ್ಯೂ -7494 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ನೇರವಾಗಿ ಎಡಗಡೆ ಕಲ್ಲಿಗೆ ಟಕ್ಕರಕೊಟ್ಟು ತೆಗ್ಗಿಗೆ ಬಿದ್ದು ತಲೆಯ ಹಿಂದೆ, ಬಲಗಡೆ ಮಲಕಿಗೆ,ಮುಖಕ್ಕೆ ಮತ್ತು ಎಡಗಾಲು ಮೀನುಗಂಡದ ಮೇಲೆ ತೀವ್ರ ಸ್ವರೂಪದ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಅಂತಾ ಪಿರ್ಯಾದಿಗೆ ಮದ್ಯಾಹ್ನ 01-30 ಗಂಟೆಗ ಸಂಗತಿ ಗೊತ್ತಾಗಿರುತ್ತದೆ. ಅಂತಾ ಮುಂತಾಗಿ ನುಡಿ ಹೇಳಿಕೆ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ.
4) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 74/2015 ಕಲಂ. 279, 337, 338, 304(ಎ) ಐ.ಪಿ.ಸಿ.:  

ದಿನಾಂಕ: 06-07-2015 ರಂದು ಮುಂಜಾನೆ 07-30 ಗಂಟೆ ಸುಮಾರಿಗೆ ಆರೋಪಿತನು ತಾನು ಚಲಾಯಿಸುತಿದ್ದ ನೊಂದಣಿ ಸಂಖ್ಯೆ ಇರದ ತಾತ್ಕಾಲಿಕ ನೊಂದಣಿ ಸಂ. ಕೆಎ-26/ಟಿಸಿ-100 ನೇದ್ದನ್ನು ಹಿರೇಮ್ಯಾಗೇರಿ ಕಡೆಯಿಂದ ಯಲಬುರ್ಗಾ ಕಡೆಗೆ ಹಿರೇಮ್ಯಾಗೇರಿ- ಯಲಬುರ್ಗಾ ರಸ್ತೆಯ ಮೇಲೆ ಹಿರೇಮ್ಯಾಗೇರಿ ಸೀಮಾದಲ್ಲಿಯ ಸೀಮೆದ್ಯಾಮವ್ವನ ಗುಡಿ ಹತ್ತಿರ ಅತೀಜೋರಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ತನ್ನ ಎದುರುಗಡೆ ಬರುತಿದ್ದ ಅಂದರೆ ಮುಧೋಳ ಕಡೆಯಿಂದ ಹಿರೇಮ್ಯಾಗೇರಿ ಕಡೆಗೆ ಹೋಗುತಿದ್ದ ಮೋಟಾರ್ ಸೈಕಲ್ ನಂ, ಕೆಎ-26/ಎಸ್-5012 ನೇದ್ದಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದು ಇರುತ್ತದೆ. ಇದರಿಂದಾಗಿ ಆರೋಪಿತನ ಎಡಮಲಕೀಗೆ, ಬಾಯಿಗೆ, ಗದ್ದಕ್ಕೆ ಭಾರಿ ರಕ್ತಗಾಯವಾಗಿದ್ದು, ಅಲ್ಲಲ್ಲಿ ತೆರಚಿದ ಗಾಯಗಳಾಗಿದ್ದು ಇರುತ್ತದೆ. ಅದೇರೀತಿ ಇನ್ನೊಬ್ಬ ಗಾಯಾಳು ರಾಮಪ್ಪನ ಬಲಹುಬ್ಬಿನ ಮೇಲೆ, ಬಲಗಾಲ ಬೆರಳುಗಳಿಗೆ ರಕ್ತಗಾಯವಾಗಿದ್ದು ಹಾಗೂ ಎರಡು ಮೊಣಕಾಲಿಗೆ ತೆರಚಿದ ಗಾಯಗಳಾಗಿದ್ದು ಇರುತ್ತದೆಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 74/2015 ಕಲಂ: 279, 337,338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ. ನಂತರ ಮುಂಜಾನೆ 10-55 ಗಂಟೆಗೆ ಯಲಬುರ್ಗಾ ಸರ್ಕಾರಿ ಆಸ್ಪತ್ರೆಯಿಂದ ಒಂದು ಎಂ.ಎಲ್.ಸಿ. ಮಾಹಿತಿ ಸ್ವೀಕೃತಗೊಂಡಿದ್ದು, ಅದರಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಹುಸೇನಸಾಬ ತಂದೆ ಹಮೀದಸಾಬ ದನಕನದೊಡ್ಡಿ ಸಾ- ಹೋಸುರು ಸೋಂಪುರ ಇತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುತಿದ್ದಾಗ ಮಾರ್ಗ ಮಧ್ಯ ಮುಧೋಳದ ಹತ್ತಿರ ಮುಂಜಾನೆ 10-15 ಗಂಟೆಗೆ ಮೃತಪಟ್ಟಿದ್ದು, ಮುಂಜಾನೆ 10-30 ಗಂಟೆಗೆ ಸದರಿಯವನ ಮೃತದೇಹವನ್ನು ವಾಪಸ್ ಯಲಬುರ್ಗಾ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದು ಇರುತ್ತದೆ. ಕಾರಣ ಮುಂದಿನ ಕ್ರಮಕ್ಕಾಗಿ ಸೂಚಿಸಲಾಗಿದೆ ಅಂತಾ ಇದ್ದ ವರದಿಯ ಆಧಾರದ ಮೇಲಿಂದ ಸದರ ಪ್ರರಣದಲ್ಲಿ ಕಲಂ- 279, 337, 338 ಐ.ಪಿ.ಸಿ. ನೇದ್ದರ ಜೋತೆಗೆ ಕಲಂ- 304(ಎ) ಐ.ಪಿ.ಸಿ. ನೇದ್ದರಲ್ಲಿ ಸೇರಿಕೆ ಮಾಡಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಯಾದಿ ಮೂಲಕ ನಿವೇದಿಸಿಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008