ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 42/2015
ಕಲಂ 279, 338 ಐ.ಪಿ.ಸಿ:.
ಇಂದು ದಿನಾಂಕ 07-07-2015 ರಂದು ಮದ್ಯಾಹ್ನ 1-10 ಗಂಟೆಗೆ ಕೊಪ್ಪಳದ ಕಿಮ್ಸ್ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೇ
ಆಸ್ಪತ್ರೆಗೆ ಹೋಗಿ ಅಪಘಾತದಲ್ಲಿ ಗಾಯಗೊಂಡ ಮಹಿಳೆಗೆ ಚಿಕಿತ್ಸೆ ಕೊಡಿಸುತ್ತಿರುವ ಫಿರ್ಯಾದಿ ಶ್ರೀ
ನಾಗಪ್ಪ ತಂದೆ ಹನುಮಪ್ಪ ಬಣಕಾರ ವಯ. 23 ಜಾತಿ. ಮಾದಿಗ ಉ.
ವಿದ್ಯಾರ್ಥಿ ಸಾ. ಹ್ಯಾಟಿ ತಾ.ಜಿ. ಕೊಪ್ಪಳ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು ಅದರ
ಸಾರಾಂಶವೆನೆಂದರೆ,
ಇಂದು ದಿನಾಂಕ 07-07-2015 ರಂದು ಬೆಳಿಗ್ಗೆ ಫಿರ್ಯಾದಿದಾರರು ಪದ್ದಮ್ಮ ಇವರನ್ನು ಕರೆದುಕೊಂಡು ಆಧಾರ ಕಾರ್ಡ ಮಾಡಿಸಲು
ಕೊಪ್ಪಳಕ್ಕೆ ಬಂದು ಮದ್ಯಾಹ್ನ 12-30 ಗಂಟೆಯ ಸುಮಾರಿಗೆ ಕೊಪ್ಪಳ ನಗರದ ಕುಷ್ಟಗಿ ರಸ್ತೆಯ ಮೇಲೆ ತಾಲೇಡಾ ಹೊಂಡಾ ಸಮೀಪ ನಡೆದುಕೊಂಡು
ಹೊಗುತ್ತಿರುವಾಗ ಅಲ್ಲಿ ಫಿರ್ಯಾದಿಯ ಗ್ರಾಮದ ತೋಟಪ್ಪ ಕಾಮನೂರ ಇವರು ಭೇಟಿಯಾದಾಗ ಫಿರ್ಯಾದಿ
ಮತ್ತು ಗಾಯಾಳು ಪದ್ದಮ್ಮ ಇವರು ಮಾತನಾಡುತ್ತಿರುವಾಗ ತೋಟಪ್ಪ ಇವರು ತಮ್ಮ ಮೋಟಾರ್ ಸೈಕಲ್ ಬಿಟ್ಟು
ತಾಲೇಡಾ ಹೊಂಡಾ ಕಡೆಗೆ ಹೊಗುತ್ತಿರುವಾಗ ಬಸವೇಶ್ವರ ಸರ್ಕಲ್ ಕಡೆಯಿಂದ ಟ್ರಾಕ್ಟರ ನಂಬರ KA-37/TA-7723 ಮತ್ತು ಟ್ರ್ಯಾಲಿ ನಂ. TA-7724 ನೆದ್ದರ ಚಾಲಕನು ತಾನು ಚಲಾಯಿಸುತ್ತಿರುವ ಟ್ರಾಕ್ಟರನ್ನು ಜೋರಾಗಿ
ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಅಲ್ಲಿ ರೋಡ ಡಿವೈಡರ ಗ್ಯಾಪ್ ಇದ್ದ ಕಾರಣ
ಟ್ರಾಕ್ಟರನ್ನು ತಿರುಗಿಸುತ್ತಿರುವಾಗ ಒಮ್ಮೇಲೆ ರಾಂಗ ಸೈಡಿನಲ್ಲಿ ಬಂದು ರಸ್ತೆಯ ಪಕ್ಕದಲ್ಲಿ
ನಿಂತಿದ್ದ ಪದ್ದಮ್ಮ ಮತ್ತು ಮೋಟಾರ್ ಸೈಕಲ್ ಗೆ ಟಕ್ಕರಮಾಡಿ ಅಪಘಾತ ಮಾಡಿದ್ದು ಇದರಿಂದ ಪದ್ದಮ್ಮ
ಕೆಳಗೆ ಬಿದ್ದ ನಂತರ ಟ್ರಾಕ್ಟರ ಮುಂದಿನ ಗಾಲಿಯು ಪದ್ದಮ್ಮನ ಸೊಂಟದ ಮೇಲೆ ಹಾಯ್ದು ಹೊಯಿತು.
ಇದರಿಂದ ಪದ್ದಮ್ಮ ಈಕೆಯ ಎಡಗೈ ಮೊಣಕೈಗೆ, ಬಲಗೈ ಮೊಣಕೈಗೆ, ಮುಂಗೈಗೆ ಎಡಗಾಲ ಹಿಂಬಡಕ್ಕೆ
ರಕ್ತಗಾಯ ಮತ್ತು ಸೊಂಟಕ್ಕೆ ಭಾರಿ ಒಳಪೆಟ್ಟು ಆಗಿರುತ್ತದೆ ಅಂತಾ ಇದ್ದ ಹೇಳಿಕೆಯ ಫಿರ್ಯಾದಿಯ
ಸಾರಾಂಶದ ಪ್ರಕರಣವನ್ನು ದಾಖಲು
ಮಾಡಿಕೊಂಡು ತನಿಖೆಯನ್ನು ಕೈಕೊಂಡೆನು.
2) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 47/2015 ಕಲಂ. 379 ಐ.ಪಿ.ಸಿ.:
ಪಿರ್ಯಾದಿ ಮತ್ತು ಇನ್ನುಬ್ಬ ಚಾಲಕ ಮಂಜುನಾಥ ಇಬ್ಬರೂ ದಿನಾಂಕ 04.07.2015 ರಂದು ಮದ್ಯಾಹ್ನ 1:00 ಗಂಟೆ ಸುಮಾರಿಗೆ ಇಂದೋರನಲ್ಲಿರುವ ವಿಆರಎಲ್ ಆಫೀಸ್ ನಿಂದ ಲಾರಿ ನಂ:
ಕೆ,ಎ-25 ಬಿ 8296 ನೇದ್ದರಲ್ಲಿ ವಿಆರಎಲ್ ಪಾರ್ಸಲಗಳನ್ನು ಲೋಡ್ ಮಾಡಿಕೊಂಡು ಬೆಂಗಳೂರಿನ ವಿಆರಎಲ್ ಆಫೀಸಗೆ ಅನ್ ಲೋಡ್ ಮಾಡುವ ಕುರಿತು ಹೊರಟಿದ್ದು, ಇಂದೋರದಿಂದ ಬೆಂಗಳೂರಿಗೆ ಸಿಂಧವಾ ಧೂಲಿಯಾ, ಮಾಲೆಗಾವ್, ಶಿರಡಿ, ಅಹಮದನಗರ, ಸೋಲ್ಲಾಪುರ ಬೈಪಾಸ್ ಮುಖಾಂತರ ಝಳಕಿ ಚೆಕ್ ಪೋಸ್ಟ ನಂತರ ಎನ್‌ಹೆಚ್
ರಸ್ತೆಯ ಬಿಜಾಪೂರ ಆಲಮಟ್ಟಿ ರಸ್ತೆಯ ಮುಂಖಾಂತರ ಬಂದು ಕೂಡಲಸಂಗಮ ಕ್ರಾಸ್ ಹತ್ತಿರ ಬಂದಾಗ ದಿನಾಂಕ:
06-07-2015 ರಂದು ಬೆಳಗಿನ ಜಾವ 3:00 ಗಂಟೆ ಸುಮಾರಿಗೆ ಪಿರ್ಯಾದಿದಾರನಿಗೆ ಹಾಗೂ ತನ್ನ
ಜೊತೆ ಇದ್ದ ಇನ್ನೊಬ್ಬ ಚಾಲಕನಿಗೆ ನಿದ್ದೆ ಬಂದಿದ್ದರಿಂದ ಕುಡಲಸಂಗಮ ಕ್ರಾಸ್ ಹತ್ತಿರ ಲಾರಿಯನ್ನು ರಸ್ತೆಯ ಬದಿಗೆ ಸೈಡ ಹಾಕಿ ಅಲ್ಲಿ ಸುಮಾರು 4 ತಾಸುಗಳ ಕಾಲ ನಿಲ್ಲಿಸಿ ಮಲಗಿಕೊಂಡು ನಂತರ ಬೆಳಿಗ್ಗೆ 7:00 ಗಂಟೆ ಸುಮಾರಿಗೆ ಲಾರಿಯನ್ನು ತೆಗೆದುಕೊಂಡು ಬರುವಾಗ ಲಾರಿಯ ಮೇಲಿನ
ತಾಡಪಾಲ್ ಕಟ್ಟಾಗಿ ಹಾರಾಡುತ್ತಿದ್ದು ಅದನ್ನು ಸರಿಯಾಗಿ ಗಮನಿಸದೇ ಲೂಸಾಗಿ ಹಾರಡುತ್ತಿರಬಹುದು ಅಂತಾ
ತಿಳಿದು ಅಲ್ಲಿಂದ ಹಾಗೆಯೇ ಬಂದು ನಂತರ ಕುಷ್ಟಗಿ- ಹೊಸಪೇಟ್ ಎನ ಹೆಚ್ 50 ರಸ್ತೆಯ ಮುಖಾಂತರ ಬರುವ ಕಾಲಕ್ಕೆ ಕುಷ್ಟಗಿ ದಾಟಿ ಸುಮಾರು 22 ಕಿ.ಮೀ ಅಂತರದಲ್ಲಿ ನಮ್ಮಲಾರಿಯ ತಾಡಪಲ್ ಬಹಳ ಹಾರಡಿದಂತೆ ಶಬ್ದ ಬಂದಿದ್ದರಿಂದ
ಅದನ್ನು ಸರಿ ಪಡಿಸಲು ಬೆಳಿಗ್ಗೆ 10.30 ಗಂಟೆ ಸುಮಾರಿಗೆ ಕೊಳಿಹಾಳ ಸೀಮಾದಲ್ಲಿನ ಎನ್ ಹೆಚ್-50 ರಸ್ತೆಯ ಎಡಬದಿಗೆ ಇರುವ ನ್ಯೊ ಪಂಜಾಬಿ ಧಾಬಾದ ಮುಂದುಗಡೆ ಲಾರಿ ನಿಲ್ಲಿಸಿ, ನಂತರ ಪಿರ್ಯಾದಿ ಮತ್ತು ಇನ್ನೋಬ್ಬ ಚಾಲಕ ಇಬ್ಬರೂ ಲಾರಿಯ ಸುತ್ತಮುತ್ತ
ನೋಡಿ ನಂತರ ಲಾರಿಯ ಮೇಲೆ ಹತ್ತಿ ನೋಡಲಾಗಿ ಲಾರಿಯ ಮೇಲಿನ ತಾಡಪಲನ್ನು ಹರಿದು ಒಳಗಿದ್ದ ತಂತಿ ಜಾಲರಿಯನ್ನು
ಕಟ್ ಮಾಡಿ ಯಾರೋ ಕಳ್ಳರು ಮೇಲ್ಕಂಡ ಸಾಮಾನುಗಳು ಕಳ್ಳತನಮಾಡಿದ್ದು ಕಂಡು ಬಂದಿತು, ಸದರಿ ಮೇಲ್ಕಂಡ ಸಾಮಾನುಗಳನ್ನು ನಾವು ಇಂದೋರಿನಿಂದ ಬೆಂಗಳೂರಿಗೆ ಬರುವಾಗ ದಿನಾಂಕ 06.07.2015 ರಂದು ಬೆಳಗಿನ ಜಾವ 3:00 ಗಂಟೆಯಿಂದ ಬೆಳಿಗ್ಗೆ 07:00 ಗಂಟೆಯ ನಡುವಿನ ಅವಧಿಯಲ್ಲಿ ಕೂಡಲ ಸಂಗಮದ ಕ್ರಾಸ್ ಹತ್ತಿರ ಲಾರಿ ನಿಲ್ಲಿಸಿ ಮಲಗಿಸಿಕೊಂಡಾಗ ಯಾರೋ ಕಳ್ಳರು
ಲಾರಿಯ ಮೇಲಿನ ತಾಡಪಾಲ್ ಹರಿದು ಮತ್ತು ತಂತಿಯ ಜಾಲರಿಯನ್ನು ಕಟ್ ಮಾಡಿ ಕಳ್ಳತನ ಮಾಡಿಕೊಂಡು ಹೋಗಿದ್ದು
ನಾವು ಅದನ್ನು ಅಲ್ಲಯೇ ಸರಿಯಾಗಿ ನೋಡದೇ ದಿನಾಂಕ 06.07.2015 ರಂದು ಬೆಳಿಗ್ಗೆ 10.30 ಗಂಟೆ ಸುಮಾರಿಗೆ ಕೊಳಿಹಾಳ ಸೀಮಾದಲ್ಲಿ ಎನ್
ಹೆಚ್-50 ರಸ್ತೆಯ ಎಡಬದಿಗೆ ಇರುವ ನ್ಯೊ
ಪಂಜಾಬಿ ಧಾಬಾದ ಹತ್ತಿರ ನಿಲ್ಲಿಸಿ ನೋಡಿಕೊಂಡಿದ್ದು
ಇರುತ್ತದೆ. ಕಾರಣ ಆರೋಪಿತರನ್ನು ಹಾಗೂ
ಕಳ್ಳತನವಾದ ಮಾಲನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳು ವಿನಂತಿ ಅಂತಾ ಇತ್ಯಾದಿ ಪಿರ್ಯಾದಿಯ ಸಾರಾಂಶ ಮೇಲಿಂದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
0 comments:
Post a Comment