ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 167/2015
ಕಲಂ 78(3) Karnataka Police Act.
ದಿನಾಂಕ: 08-07-2015 ರಂದು ರಾತ್ರಿ 8:10 ಗಂಟೆಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ,
ಗೋಸಲದೊಡ್ಡಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಬರ ಹೋಗುವ ಸಾರ್ವಜನೀಕರಿಗೆ ನೀವು ಬರೆಯಿಸಿದ
ನಶಿಬದ ನಂಬರ ಹತ್ತಿದಲ್ಲಿ 1 ರೂಪಾಯಿಗೆ 80 ರೂಪಾಯಿಗಳನ್ನು ಕೊಡುತ್ತೇನೆ ಅಂತಾ ಕೂಗುತ್ತಾ ಮಟಕಾ ನಶಿಬದ
ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ. ಚಿತ್ತರಂಜನ ಪಿ.ಎಸ್.ಐ ಸಾಹೇಬರು ಹಾಗೂ ಸಿಬ್ಬಂದಿಗಳು ದಾಳಿ ಮಾಡಿ
ಆರೋಪಿತರಿಂದ ನಗದು ಹಣ ರೂ 1260=00 ರೂ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ ಇವುಗಳನ್ನು
ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಬಂದು ನೀಡಿದ ವರದಿ ಸಾರಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು
ಕೈ ಗೊಂಡಿದ್ದು ಇರುತ್ತದೆ.
2) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 153/2015 ಕಲಂ. ಕಲಂ 78(3) Karnataka Police Act.
ದಿನಾಂಕ- 08-07-2015 ರಂದು 8-15- ಪಿ.ಎಮ್. ಸುಮಾರಿಗೆ ಕಾರಟಗಿಯ ಎಸ್.ಬಿ. ಹೆಚ್. ಬ್ಯಾಂಕ್ ಪಕ್ಕ ಡಬ್ಬಿ ಅಂಗಡಿಯ ಮುಂದೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು
ಸಾರ್ವಜನಿಕರಿಗೆ ಕೂಗಿ ಮಟ್ಕಾ ನಂಬರುಗಳನ್ನು ಬರೆಸುವವರು ಬರೆಸಿರಿ ನಿಮ್ಮ ಲಕ್ಕಿ ನಂಬರ್
ಬಂದರೆ 1-00 ರೂಪಾಯಿಗೆ 80=00 ರೂಪಾಯಿ
ಕೊಡುತ್ತೇವೆ ಅಂತಾ ಕೂಗಿ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ನಂಬರ ಬರೆದುಕೊಳ್ಳುತ್ತಿರುವಾಗ್ಗೆ ಮಾನ್ಯ ಪಿ.ಎಸ್.ಐ ಕಾರಟಗಿ ಹಾಗೂ
ಸಿಬ್ಬಂದಿಯವರು ಪಂಚರ ಸಮಕ್ಷದಲ್ಲಿ ದಾಳಿ ಮಾಡಲು
ಆರೋಪಿ ನಂ 1 ಸಿಕ್ಕಿ ಬಿದ್ದಿದ್ದು ಆರೋಪಿ ನಂ 2 ಓಡಿ ಹೋಗಿದ್ದು ಆರೋಪಿ 1 ಈತನಿಂದ
ಮಟ್ಕಾ ಜೂಜಾಟದ ಸಾಮಾಗ್ರಿಗಳು ಮತ್ತು ನಗದು ಹಣ ರೂ. 1430=00- ಗಳನ್ನು ಜಪ್ತ ಮಾಡಿಕೊಂಡಿದ್ದು ಬಂದು ಮೂಲ
ಪಂಚನಾಮೆ ಮತ್ತು ವರದಿಯನ್ನು ಹಾಜರುಪಡಿಸಿದ್ದರ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ
ಕೈಗೊಂಡಿದ್ದು ಇರುತ್ತದೆ.
3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 166/2015 ಕಲಂ. ಕಲಂ 395 ಐ.ಪಿ.ಸಿ:.
ದಿನಾಂಕ 08.07.2015 ರಂದು ಸಾಯಂಕಾಲ 6:00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ
ಹಿಂದಿಯಲ್ಲಿ ಹೇಳಿಕೆ ಪಿರ್ಯಾದಿಯನ್ನು ಸಲ್ಲಿಸಿದ್ದು ಅದನ್ನು ಠಾಣೆಯಲ್ಲಿ ಕನ್ನಡಕ್ಕೆ ಅನುವಾದ
ಮಾಡಿ ಗಣಕೀಕರಣಗೊಳಿಸಿದ್ದು ಅದರ ಸಾರಾಂಶವೇನೆಂದರೆ,ಕಳೆದ 02 ತಿಂಗಳಿನಿಂದ ಐಡಿಯಲ್ ಕಂಪನಿಯ ಲಾರಿ ನಂ:ಜಿ.ಜೆ-5/ಎ.ಟಿ-1754 ನೇದ್ದರಲ್ಲಿ ಡ್ರೈವರ
ಅಂತಾ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ನಾನು ನಿನ್ನೆ ದಿ: 07.07.2015 ರಂದು ಮದ್ಯಾಹ್ನ
1.00 ಗಂಟೆಯ ಸುಮಾರಿಗೆ ತೋರಣಗಲ್ನ ಜಿಂದಾಲ್ ಕಂಪನಿಯಿಂದ ನಮ್ಮ ಲಾರಿಯಲ್ಲಿ ಕಬ್ಬಿಣದ
ರಾಡ್ಗಳನ್ನು ಲೋಡ ಮಾಡಿಕೊಂಡಿದ್ದೆನು. ನಂತರ ಇಂದು ದಿ: 08.07.2015 ರಂದು ಬೆಳಿಗ್ಗೆ 09:00
ಗಂಟೆಯ ಸುಮಾರಿಗೆ ನಾನು ತೋರಣಗಲ್ಲಿನ ಐಡಿಯಲ್ ಟ್ರಾನ್ಸಪೋರ್ಟನಲ್ಲಿ ಅಡ್ವಾನ್ಸ 10 ಸಾವಿರ
ರೂಪಾಯಿಗಳನ್ನು ಪಡೆದು ಕೊಂಡು, ಕಬ್ಬಿಣದ ರಾಡ್ ಲೋಡ ಮಾಡಿದ ನನ್ನ ಲಾರಿ ನಂ: ಜಿ.ಜೆ-5/ಎ.ಟಿ-1754 ನೇದ್ದನ್ನು
ಚಲಾಯಿಸಿಕೊಂಡು ಗುಜರಾತ್ ರಾಜ್ಯದ ಜಾಮನಗರಕ್ಕೆ ಅನ್ಲೋಡ್ ಮಾಡುವ ಕುರಿತು ಹೊರಟೆನು.ನಂತರ
ಮದ್ಯಾಹ್ನ 2:00 ಗಂಟೆಯ ಸುಮಾರಿಗೆ ಕುಷ್ಟಗಿ-ಹೊಸಪೇಟೆ ಎನ್.ಹೆಚ್-50 ರಸ್ತೆಯ ಮುಖಾಂತರ ನನ್ನ
ಲಾರಿಯನ್ನು ತೆಗೆದುಕೊಂಡು ಹೊರಟಿದ್ದು ಕೆರೆಹಳ್ಳಿ ಗ್ರಾಮದ ಹತ್ತಿರ ಇರುವ ಟೋಲ್ಗೇಟನಲ್ಲಿ
ಲಾರಿಯನ್ನು ನಿಲ್ಲಿಸಿ ನಾನು ಟೋಲ್ ಹಣವನ್ನು ಕಟ್ಟಿ ಮುಂದೆ ಹೊರಡಬೇಕೆನ್ನುವಷ್ಟರಲ್ಲಿ ನನ್ನ
ಲಾರಿಯ ಹತ್ತಿರ 06 ಜನ ಮಹಿಳೆಯರು ಬಂದು ನಾವು ರಸ್ತೆಯ ಬಾಜು ಪ್ಲ್ಯಾಸ್ಟಿಕ್ ಹಾಳೆ ಚೀಲಗಳನ್ನು
ಆರಿಸಿಕೊಂಡು ಗಿಣಿಗೇರಿ ಗ್ರಾಮದಲ್ಲಿ ಮಾರಾಟ ಮಾಡಿ ಜೀವನ ಮಾಡುವವರಿದ್ದೆವೆ. ಅಂತಾ ಹೇಳಿ ಮುಂದೆ
ಹೊಸೂರ ಕ್ರಾಸ್ ಹತ್ತಿರ ಡಾಭಾ ಇರುತ್ತದೆ. ನಾವು ನಿನ್ನ ಲಾರಿಯಲ್ಲಿ ಬರುತ್ತೇವೆ ಅಂತಾ
ತಿಳಿಸಿದ್ದು ಆಗ ನಾನು 06 ಜನ ಮಹಿಳೆಯರನ್ನು ನನ್ನ ಲಾರಿಯ ಕ್ಯಾಬಿನ್ದಲ್ಲಿ ಹತ್ತಿಸಿಕೊಂಡೆನು.
ನಂತರ ನಾನು ನನ್ನ ಲಾರಿಯನ್ನು ಟೋಲ್ಗೇಟ ನಿಂದ ಸುಮಾರು 06 ಕಿ.ಮೀ ದೂರ ಕುಷ್ಟಗಿ ಕಡೆಗೆ ಮೆತಗಲ್
ಸಮೀಪ ಮದ್ಯಾಹ್ನ 2:20 ಗಂಟೆಯ ಸುಮಾರಿಗೆ ಚಲಾಯಿಸಿಕೊಂಡು ಹೊರಟಿದ್ದಾಗ, ನನ್ನ ಲಾರಿಯಲ್ಲಿ ಕುಳಿತಿದ್ದ ಮಹಿಳೆಯರ ಪೈಕಿ ಒಬ್ಬಳು ನಾವು ಇಲ್ಲಿಯೇ ಇಳಿಯುತ್ತೇವೆ.
ಲಾರಿಯನ್ನು ರಸ್ತೆಯ ಬಾಜು ನಿಲ್ಲಿಸು ಅಂತಾ ಹೇಳಿದ್ದರಿಂದ ನಾನು ರಸ್ತೆಯ ಸೈಡಿಗೆ ಲಾರಿಯನ್ನು
ನಿಲ್ಲಿಸಿದೆನು. ನಂತರ 06 ಜನ ಮಹಿಳೆಯರ ಪೈಕಿ ಸಣ್ಣ ಹುಡಿಗಿ ನನಗೆ ವಾಪಾಸ ನೀನು ಬರುವಾಗ
ಬಳೆಯನ್ನು ತಂದು ಕೊಡು ಅಂತಾ ಹೇಳಿದ್ದು, ಆಗ ನಾನು ನೀವೆಲ್ಲರೂ ಮೊದಲು ಕೆಳಗೆ ಇಳಿಯಿರಿ ಅಂತಾ ತಿಳಿಸಿದೆನು. ಆಗ 06 ಜನ ಮಹಿಳೆಯರ
ಪೈಕಿ ಒಬ್ಬಳು ತನ್ನಲ್ಲಿರುವ ಒಡೆದ ಕನ್ನಡಿಯ ಚೂರನ್ನು ನನ್ನ ಕುತ್ತಿಗೆಯ ಹತ್ತಿರ ಹಿಡಿದು
ಹಣವನ್ನು ಕೊಡುವಂತೆ ಕೇಳಿದಳು. ಅದಕ್ಕೆ ನಾನು ಹಣ ಕೊಡಲು ನಿರಾಕರಿಸಿದ್ದು, ಆಗ 06 ಜನ ಮಹಿಳೆಯರು ನನಗೆ ತಮ್ಮ ಕೈಗಳಿಂದ ಗಟ್ಟಿಯಾಗಿ
ಹಿಡಿದುಕೊಂಡು ನನ್ನ ಜೇಬಿನಲ್ಲಿ ಕೈ ಹಾಕಿ ನನ್ನಲ್ಲಿದ್ದ 1,500=00 ರೂ. ನಗದು ಹಣವನ್ನು ಜಬರದಸ್ತಿಯಿಂದ ಕಸಿದುಕೊಂಡರು. ಆಗ ನಾನು ಕೂಗಾಡಿದಾಗ 06 ಜನ
ಮಹಿಳೆಯರು ಲಾರಿಯಿಂದ ಕೆಳಗೆ ಇಳಿದು ರಸ್ತೆಯ ಬಾಜು ಇರುವ ಹೊಲದಲ್ಲಿ ಓಡಿ ಹೋದರು. 06 ಜನ
ಅಪರಿಚಿತ ಮಹಿಳೆಯರು ಹಿಂದಿಯಲ್ಲಿ ಮತ್ತು ಕನ್ನಡದಲ್ಲಿ ಮಾತನಾಡುತ್ತಿದ್ದು ಒಬ್ಬಳು ಲಂಗವನ್ನು
ಉಟ್ಟಿದ್ದ ಮಹಿಳೆಯ ಕೈಯಲ್ಲಿ ಒಡೆದ ಕನ್ನಡಿಯ ಚೂರು ಇದ್ದು, 05 ಜನ ಮಹಿಳೆಯರು ಸೀರೆಯನ್ನು, ಒಬ್ಬಳು ಲಂಗ ಮತ್ತು ಬ್ಲೌಜ್ ಧರಿಸಿದ್ದು ಇರುತ್ತದೆ. ಇಬ್ಬರು ಸುಮಾರು 20 ರಿಂದ 25
ವರ್ಷದೊಳಗಿನವರು ಹಾಗೂ 03 ಜನರು ಸುಮಾರು 30 ರಿಂದ 35 ವಯಸ್ಸಿನವರಾಗಿದ್ದು, ಒಬ್ಬಳು ಸುಮಾರು 60 ವರ್ಷದ ವಯಸ್ಸಿನವಳಿದ್ದು ಆ 06 ಜನ ಮಹಿಳೆ
ಯರನ್ನು ನಾನು ನೋಡಿದರೆ ಗುರ್ತಿಸುತ್ತೇನೆ.ಕಾರಣ ನಾನು ಅಡ್ವಾನ್ಸ ತಂದಿದ್ದ ಹಣ 10 ಸಾವಿರ
ಹಣದಲ್ಲಿ 8,500=00 ಹಣವನ್ನು ಲಾರಿಯ ಕ್ಯಾಬಿನ್
ನಲ್ಲಿರುವ ಒಂದು ಬಾಕ್ಸನಲ್ಲಿ ಇಟ್ಟಿದ್ದು, ಇನ್ನುಳಿದ 1,500=00 ರೂ ಹಣವನ್ನು ದಾರಿಯ
ಖಚರ್ಿಗಾಗಿ ನನ್ನ ಜೇಬಿನಲ್ಲಿ ಇಟ್ಟು ಕೊಂಡಿದ್ದ ನಗದುಹಣವನ್ನು ಬಲವಂತವಾಗಿ ನನ್ನಿಂದ
ಕಸಿದುಕೊಂಡು ಒಡೆದ ಕನ್ನಡಿಯ ಚೂರನ್ನು ತೋರಿಸಿ, ಕೈಯಿಂದ ಹೊಡೆಬಡಿ ಮಾಡಿ ಹೋದ ಅಪರಿಚಿತ 06 ಜನ ಮಹಿಳೆಯರನ್ನು ಪತ್ತೆ ಮಾಡಿ ಸೂಕ್ತ ಕಾನೂನು
ಕ್ರಮ ಜರುಗಿಸಲು ವಿನಂತಿ ಇರುತ್ತದೆ. ಈ ಘಟನೆಯ ಬಗ್ಗೆ ನಮ್ಮ ಲಾರಿಯ ಟ್ರಾನ್ಸಪೋರ್ಟ ಮಾಲೀಕರಾದ
ಪರಾಗ್ ಇವರಿಗೆ ಪೋನ ಮಾಡಿ ವಿಷಯ ತಿಳಿಸಿ ತಡವಾಗಿ ಬಂದು ಈ ನನ್ನ ಹೇಳಿಕೆ ಫಿರ್ಯಾದಿಯನ್ನು
ನೀಡಿದ್ದು ಇರುತ್ತದೆ.ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ
166/2015 ಕಲಂ 395 ಐ.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4) ಅಳವಂಡಿ ಪೊಲೀಸ್ ಠಾಣಾ ಗುನ್ನೆ ನಂ. 74/2015
ಕಲಂ 279, 304(ಎ) ಐ.ಪಿ.ಸಿ:
ದಿನಾಂಕ: 08-07-2015 ರಂದು ರಾತ್ರಿ 10-30 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಒಂದು ಪಿಯರ್ಾದಿಯನ್ನು ಹಾಜರುಪಡಿಸಿದ್ದು, ಸದರ ಫಿರ್ಯಾದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 08-07-2015 ರಂದು ಸಾಯಂಕಾಲ 6-30 ಗಂಟೆಯ ಸುಮಾರಿಗೆ ಫಿರ್ಯಾದಿದಾರನು ತಮ್ಮೂರಿನ ಊರಿನ ಬಸ್ ನಿಲ್ದಾಣದ ಹತ್ತಿರ ನಿಂತುಕೊಂಡಿದ್ದಾಗ, ಆರೋಪಿತನು ಸಕರ್ಾರಿ ಕೆ.ಎಸ್.ಆರ್.ಟಿ.ಸಿ. ಬಸ್ ನಂ: ಕೆಎ-37 ಎಫ್-254 ನೇದ್ದನ್ನು ಅಳವಂಡಿ-ಬೆಟಗೇರಿ ರಸ್ತೆಯ ಮೇಲೆ ಅತೀವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಅಳವಂಡಿ ಕಡೆಯಿಂದ ಬಂದು ಮೋರನಹಳ್ಳಿ ಶಾಲೆಯ ಹತ್ತಿರ ರಸ್ತೆಯ ಎಡಗಡೆಯ ಬದಿಗೆ ಹೋಗುತ್ತಿದ್ದ ಮೃತ ದಾನಪ್ಪನಿಗೆ ಟಕ್ಕರ್ ಕೊಟ್ಟಿದ್ದರಿಂದ ದಾನಪ್ಪನು ಬಸ್ನ ಕೆಳಗೆ ಬಿದ್ದಿದ್ದು, ಆಗ ಬಸ್ನ ಹಿಂದಿನ ಗಾಲಿಯು ದಾನಪ್ಪನ ತಲೆಯ ಮೇಲೆ ಆಯ್ದು ಹೋಗಿದ್ದರಿಂದ ಆತನ ತಲೆಯು ಸಂಪೂರ್ಣವಾಗಿ ಒಡೆದು ಹೋಗಿ, ಗಿಜಿ ಗಿಜಿಯಾಗಿ, ಮಾಂಸ ಕಂಡಗಳು ಹೋರಗೆ ಬಂದು ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ. ಕಾರಣ ದಾನಪ್ಪನ ಸಾವಿಗೆ ಕಾರಣನಾದ ಬಸ್ ಚಾಲಕ ಮಲ್ಲಪ್ಪ ತಂದೆ ಹನಮಪ್ಪ ದಳವಾಯಿ ಸಾ: ಮಂಡಲಗಿರಿ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment