Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, August 10, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 132/2015  ಕಲಂ 279, 337, 338 ಐ.ಪಿ.ಸಿ :.
ದಿನಾಂಕ: 09-08-2015 ರಂದು ರಾತ್ರಿ 9-05 ಗಂಟೆಗೆ ಸರ್ಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ಕೊಟ್ಟು ಗಾಯಾಳು ದೊಡ್ಡಪ್ಪ ತಂದೆ ಸಂಗಪ್ಪ ಮಾದನೂರು ವಯಾ: 56 ವರ್ಷ ಜಾತಿ: ಲಿಂಗಾಯತ ಉ: ಜಿಲ್ಲಾ ಪಂಚಾಯತ ಉಪ ವಿಭಾಗ ಕುಷ್ಟಗಿಯಲ್ಲಿ ಎಸ್.ಡಿ.ಎ. ಸಾ: ನವಲಹಳ್ಳಿ ಹಾಲಿ ವಸ್ತಿ: ಪಿ.ಡ್ಲೂ.ಡಿ ಕಾಲೋನಿ ಕುಷ್ಟಗಿ ಇವರ ಹೇಳಿಕೆ ಪಡೆದುಕೊಂಡಿದ್ದು ಈ ದಿನ ಸಾಯಂಕಾಲ ಫಿರ್ಯಾದಿದಾರರು ಮತ್ತು ಮರಿಸ್ವಾಮಿ ಕುಷ್ಟಗಿ, ಮಹ್ಮದ ಶೌಖತ್ ಹುಷೇಸ ಕುಷ್ಟಗಿ, ಶಿವಪ್ಪ ಕುರಿ ಸಾ: ಕುಷ್ಟಗಿ ಎಲ್ಲರೂ ಕೂಡಿ ಕೊಪ್ಪಳ ರಸ್ತೆಯಲ್ಲಿ ವಾಕಿಂಗ್ ಹೋಗಿ ವಾಪಾಸ್ ಕುಷ್ಟಗಿ ಕಡೆಗೆ ಬರುತ್ತಿದ್ದಾಗ ಹಿಂದಿನಿಂದ ಹಿರೇಅರಳಿಹಳ್ಳಿ ಕಡೆಯಿಂದ ಮೋ.ಸೈ. ಸವಾರ ಉಮೇಶ ತಂದೆ ಭೀಮಪ್ಪ ಬುರುಡಿ ಸಾ: ಹಿರೇಅರಳಿಹಳ್ಳಿ ಇತನು ತನ್ನ ಸೈಕಲ್ ಮೋಟರ್ ನಂ: ಕೆ.ಎ.29/ಆರ್-4087 ಬಜಾಜ ಕಂಪನಿಯದನ್ನು ತೆಗೆದುಕೊಂಡು ಬಂದು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಪಿರ್ಯಾದಿಗೆ ಟಕ್ಕರ ಮಾಡಿ ಅಪಘಾತಪಡಿಸಿದ್ದರಿಂದ ಫಿರ್ಯಾದಿಗೆ ಸಾದಾ ಮತ್ತು ತಿವ್ರ ಸ್ವರೂಪದ ಗಾಯಗಳನ್ನು ಉಂಟು ಮಾಡಿದ್ದು ಅಂತಾ ವಗೈರೆ ಫಿರ್ಯಾದಿಯಿಂದ ವಾಪಾಸ್ ಠಾಣೆಗೆ 10-30 ಪಿ.ಎಂ. ಗೆ ಬಂದು ಠಾಣೆಯ ಗುನ್ನೆ ನಂ: 132/2015 ಕಲಂ: 279,337,338 ಐ.ಪಿ.ಸಿ. ನೇದ್ದರಲ್ಲಿ ಗುನ್ನೆ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 172/2015  ಕಲಂ 341, 323, 325, 504, 506 ಸಹಿತ 34 ಐ.ಪಿ.ಸಿ :.
ದಿನಾಂಕ 09-08-2015 ರಾತ್ರಿ 8-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರೀ ತಿಮ್ಮಪ್ಪ ತಂದಿ ಗಿರಿಯಪ್ಪ ವಯಾ-33 ವರ್ಷ ಜಾ-ಉಪ್ಪಾರ ಉ- ಒಕ್ಕಲುತನ ಸಾ- ಕೋಳೂರ ಹಾ.ವ. ಗುಂಡೂರ್ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆ ನಾನು ಮೇಲ್ಕಾಣಿಸಿದ ವಿಳಾಸದ ನಿವಾಸಿ ಇದ್ದು ಒಕ್ಕಲುತನ ಮಾಡಿಕೊಂಡು ಉಪಜೀವನ ಮಾಡುತ್ತೇನೆ. ನಮ್ಮ ತಂದೆ ತಾಯಿಗೆ 4 ಜನ ಗಂಡು ಮಕ್ಕಳು ಹಾಗೂ 3 ಜನ ಹೆಣ್ಣುಮಕ್ಕಳಿದ್ದು ನಾನು ಮತ್ತು ನಮ್ಮ ಸಹೋದರ ಆನಂದ ಗುಂಡೂರಿನ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಂಡಿರತ್ತೇನೆ. ನಾನು ಶಂಕ್ರಪ್ಪನ ಮಗಳು ಹನಮಂತಿ @ ಗುತ್ತಮ್ಮಳನ್ನು ಮದುವೆಯಾಗಿದ್ದು ನನ್ನ ಸಹೋದರ ಆನಂದ ಇತನು ಫಕೀರಪ್ಪ ಇವರ ಮಗಳಾದ ಅಯ್ಯಮ್ಮ ಇಕೆಯನ್ನು ಮದುವೆಯಾಗಿದ್ದು ಆತನು ಅಳಿತನಕ್ಕೆಂದು ಗುಂಡೂರ ಗ್ರಾಮದಲ್ಲಿಯೇ ಬಂದು ವಾಸವಾಗಿರುತ್ತಾನೆ ನನಗೂ ಮತ್ತು ನನ್ನ ಹೆಂಡತಿಯ ಸಂಸಾರದ ವಿಷಯದಲ್ಲಿ ಮನಸ್ತಾಪ ಮಾಡಿಕೊಂಡು ತನ್ನ ತವರು ಮನೆಯಾದ ಗುಂಡೂರ್ ಗ್ರಾಮದಲ್ಲಿಯೇ ಬಂದು ತನ್ನ ತವರು ಮನೆಯಲ್ಲಿಯೇ ವಾಸವಿರುತ್ತಾಳೆ ಈ ವಿಷಯವನ್ನು ನನ್ನ ಸಹೋದರ ಆನಂದ ಇತನು ನನ್ನ ಹೆಂಡತಿ ಹಾಗೂ ಅವರ ತಂದೆ ತಾಯಿಯವರಿಗೆ ಬುದ್ದಿವಾದ ಹೇಳಿದ್ದನು ಅದೆ ನೇಪ ಮಾಡಿಕೊಂಡು ದಿನಾಂಕ7-8-2015 ರಂದು ಬೆಳಗ್ಗೆ 8-00 ಗಂಟೆಯ ಸುಮಾರಿಗೆ ನನ್ನ ಅಣ್ಣ ದೇವಸ್ಥಾನದ ಕಡೆಗೆ ಹೊರಟಿದ್ದಾಗ್ಗೆ 1) ಚೀರಂಜಿವಿ ತಂದಿ ಶಂಕ್ರಪ್ಪ 2) ಶಂಕ್ರಪ್ಪ ತಂದಿ ಬಸಪ್ಪ 3) ಗುತ್ತಮ್ಮ @ ಹನಮಂತಿ 4) ದ್ಯಾವಮ್ಮ ಗಂಡ ಶಂಕ್ರಪ್ಪ ಇವರು ಸಮಾನ ಉದ್ದೆದಿಂದ ಬಂದು ನನ್ನ ಅಣ್ಣನಿಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದಾಡಿ ನಮ್ಮ ಗುತ್ತಮ್ಮ @ ಹನಮಂತಿ ಇಕೆಯ ವಿಷಯದಲ್ಲಿ ಏನು ಸೆಂಟಾ ಬುದ್ದಿವಾದ ಹೇಳಾಕ ಬಂದಿಯಲೇ ನಿನ್ನ ಜೀವ ಸಹಿತ ಮುಗಿಸಿಬಿಡುತ್ತೇವೆ ಅಂತಾ ಆತನಿಗೆ ಎಲ್ಲರೂ ಅಡ್ಡಗಟ್ಟಿ ನಿಲ್ಲಿಸಿ ಅವನಿಗೆ ಕೈಯಿಂದ ಹಾಗೂ ಕಾಲಿನಿಂದ ಹೊಟ್ಟೆಗೆ ಜೋರಾಗಿ ಗುದ್ದಿ ಒದ್ದಿದ್ದರಿಂದ ನನ್ನ ಅಣ್ಣ ಆನಂದನಿಗೆ ಹೊಟ್ಟೆಗೆ ಭಾರೀ ಒಳಪೆಟ್ಟಾಗಿದ್ದು ಈ ಘಟನೆಯನ್ನು ಅಲ್ಲಿಯೇ ಇದ್ದ ಅಯ್ಯಮ್ಮ ಹಾಗೂ ಓಣಿಯ ಜನರು ನೋಡಿರುತ್ತಾರೆ ಈ ಘಟನೆಯಾದ ನಂತರ ನನ್ನ ಅಣ್ಣನಿಗೆ ಚಿಕಿತ್ಸೆಗಾಗಿ ಗಂಗಾವತಿ ಆಸ್ಪತ್ರೆಗೆ ಕರೆದುಕೊಂಡು ಹೊಗಿ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ ಆಸ್ಪತ್ರೆಯಲ್ಲಿ ಸೇರಿಕೆಮಾಡಿ ಆತನ ಚಿಕಿತ್ಸೆಗೆ ಆದ್ಯತೆ ಕೊಟ್ಟು ಸೇರಿಕೆ ಮಾಡಿ ಈಗ ತಡವಾಗಿ ತಮ್ಮಲ್ಲಿಗೆ ಬಂದು ಫಿರ್ಯಾದಿ ಕೊಟ್ಟಿರುತ್ತೆನೆ ಅಂತಾ ಮುಂತಾಗಿ ಕೊಟ್ಟ ಪಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 248/2015  ಕಲಂ 324, 504, 506 ಐ.ಪಿ.ಸಿ :

ದಿನಾಂಕ: 09-08-2015 ರಂದು ಸಾಯಂಕಾಲ 4:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಪರಸಪ್ಪ ತಂದೆ ತಂದೆ ಬುಡ್ಡಪ್ಪ ಬಳ್ಳಾರಿ, ವಯಸ್ಸು 28 ವರ್ಷ, ಜಾತಿ: ಕುರುಬರು ಉ: ಒಕ್ಕಲುತನ ಸಾ: ಆಗೋಲಿ ತಾ: ಗಂಗಾವತಿ ಇವರು ಠಾಣೆಗೆ ಹಾಜರಾಗಿ ತಮ್ಮ ನುಡಿ ಹೇಳಿಕೆ ದೂರನ್ನು ಸಲ್ಲಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. ದಿನಾಂಕ:- 06-08-2015 ರಂದು ಸಂಜೆ 6:00 ಗಂಟೆಯ ಸುಮಾರಿಗೆ ನಾನು ನನ್ನ ಮೋಟಾರ್ ಸೈಕಲ್ ನಡೆಯಿಸಿಕೊಂಡು ಮನೆಯಿಂದ ಆಗೋಲಿ ಸೀಮಾದಲ್ಲಿರುವ ನನ್ನ ಹೊಲದ ಕಡೆಗೆ ಹೋಗುತ್ತಿದ್ದೆನು. ಊರ ಮುಂದಿನ ರಸ್ತೆಯ ತಿರುವಿನ ಹತ್ತಿರ ಸಣ್ಣ ಸಣ್ಣ ಮಕ್ಕಳು ರಸ್ತೆಯಲ್ಲಿ ಆಡುತ್ತಿದ್ದರು.  ಆಗ ನಾನು ಅವರಿಗೆ  ಏ ಪಕ್ಕಕ್ಕೆ ಸರಿರಿ, ದಾರಿ ಬಿಡ್ರಿ, ಹಿಂಗೆ ರಸ್ತೆಗೆ ಅಡ್ಡ ಇದ್ದರೆ ಹ್ಯಾಂಗ್ ಅಂತಾ ಹೇಳಿದೆನು.  ಆಗ ಅಲ್ಲಿಯೇ ಆಡುಗಳನ್ನು ಮೇಯಿಸುತ್ತಿದ್ದ ಚಿದಾನಂದಪ್ಪ ತಂದೆ ಅಂಬಣ್ಣ ತಳವಾರ, ವಯಸ್ಸು 48 ವರ್ಷ, ಜಾತಿ: ನಾಯಕ ಸಾ: ಆಗೋಲಿ ಈತನು ನಾನು ಆತನಿಗೆ ದಾರಿ ಬಿಡು ಅಂತಾ ಹೇಳಿದ್ದೇನೆಂದು ತಪ್ಪು ತಿಳಿದುಕೊಂಡು ಲೇ ಸೂಳೇ ಮಗನೇ ನನಗೆ ದಾರಿ ಬಿಡು ಅಂತಾ ಹೇಳುತ್ತೀಯೇನು ಅಂತಾ ಅವಾಚ್ಯವಾಗಿ ಬೈದು ತನ್ನ ಕೈಯಲ್ಲಿ ಹಿಡಿದುಕೊಂಡಿದ್ದ ಒಂದು ಕುಡುಗೋಲಿನಿಂದ ಏಕಾಏಕಿ ನನ್ನ ಎಡಗಡೆ ತಲೆಗೆ ಹೊಡೆದನು. ಇದರಿಂದ ರಕ್ತಗಾಯವಾಯಿತು. ಆಗ ನಾನು ಜೋರಾಗಿ ಚೀರಾಡಲು ಅಲ್ಲಿಯೇ ಇದ್ದ ರಾಯಪ್ಪ ತಂದೆ ಲಿಂಗಣ್ಣ ಕಲ್ಮಂಗಿ, ವಯಸ್ಸು 38 ವರ್ಷ, ಲಿಂಗಾಯತ ಮತ್ತು ನನ್ನ ಚಿಕ್ಕಮ್ಮಳಾದ ಸಾವಿತ್ರಮ್ಮ ಗಂಡ ಯಮನೂರಪ್ಪ ಬಳ್ಳಾರಿ, 45 ವರ್ಷ, ಕುರುಬರು ಇವರು ಬಂದು ಬಿಡಿಸಿಕೊಂಡರು. ನಂತರ ಚಿದಾನಂದಪ್ಪನು ನನಗೆ ಲೇ ಮಗನೇ ನನ್ನ ತಂಟೆಗೆ ಬಂದರೆ ಜೀವ ಸಹಿತ ಉಳಿಸುವುದಿಲ್ಲಾ ಅಂತಾ ಬೆದರಿಕೆ ಹಾಕಿ ಹೋದನು. ನಂತರ ರಾಯಪ್ಪನು ನನಗೆ ಕರೆದುಕೊಂಡು ಬಸ್ ಸ್ಟ್ಯಾಂಡ್ ಕಡೆಗೆ ಹೋಗುತ್ತಿರುವಾಗ ಯಮನೂರಪ್ಪ ತಂದೆ ಲಿಂಗಪ್ಪ ಗೋಸಿ, ಕುರುಬರು, 32 ವರ್ಷ, ಈತನು ಬಂದಿದ್ದು, ನನಗೆ ಕೂಡಲೇ ತನ್ನ ಮೋಟಾರ್ ಸೈಕಲನಲ್ಲಿ ಚಿಕಿತ್ಸೆಗಾಗಿ ಗಂಗಾವತಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿದನು. ನಂತರ ನನಗೆ ಗಂಗಾವತಿಯಲ್ಲಿ ಸ್ಕ್ಯಾನಿಂಗ್ ಮಾಡಿಸಿದ್ದು, ವೈದ್ಯರು ನನಗೆ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ ಹೋಗಲು ತಿಳಿಸಿದ್ದರಿಂದ ನನ್ನ ತಂದೆ ಬುಡ್ಡಪ್ಪ ಇವರು ಬಂದು ನನಗೆ ಬಳ್ಳಾರಿಗೆ ಕರೆದುಕೊಂಡು ಹೋಗಿದ್ದು, ನಾನು ವಿಮ್ಸ್ ನಲ್ಲಿ ಚಿಕಿತ್ಸೆ ಪಡೆದುಕೊಂಡ ನಂತರ ವೈದ್ಯರು ಸ್ಕ್ಯಾನಿಂಗ್ ವರದಿಯನ್ನು ತೆಗೆದುಕೊಂಡು ಬರುವಂತೆ ತಿಳಿಸಿದ್ದರಿಂದ ನಾನು, ನನ್ನ ತಂದೆ ಇಂದು ವಾಪಸ್ ಗಂಗಾವತಿಗೆ ಬಂದಿರುತ್ತೇವೆ.  ನಾವು ಚರ್ಚಿಸಿ ದೂರು ಕೊಡಲು ತೀರ್ಮಾನಿಸಿ ಈಗ ತಡವಾಗಿ ಈ ಹೇಳಿಕೆ ಫಿರ್ಯಾದಿಯನ್ನು ನೀಡಿರುತ್ತೇನೆ. ವಿನಾ ಕಾರಣ ನನ್ನೊಂದಿಗೆ ಜಗಳ ತೆಗೆದು ಕುಡುಗೋಲಿನಿಂದ ಹೊಡೆದು ಗಾಯಗೊಳಿಸಿರುವ ಚಿದಾನಂದಪ್ಪನ ವಿರುದ್ಧ  ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008