Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, August 11, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 81/2015  ಕಲಂ 87 Karnataka Police Act.
ದಿನಾಂಕ: 10-08-2015 ರಂದು ರಾತ್ರಿ 09-30 ಗಂಟೆಗೆ ವಿಶ್ರಾಂತಿಯಲ್ಲಿದ್ದಾಗ, ಖಚಿತ ಬಾತ್ಮಿ ಬಂದಿದ್ದೇನೆಂದರೆ, ಶ್ಯಾಡಲಗೇರಿ ಗ್ರಾಮದಲ್ಲಿ, ಯಮನೂರಪ್ಪನ ದಗರ್ಾದ ಹತ್ತಿರ ಸಾರ್ವಕನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಅಂತಾ ತಿಳಿದು ಬಂದಿದ್ದು, ನಾನು ಫೋನ್ ಮೂಲಕ ಸಿಬ್ಬಂದಿಯವರಾದ ಹೆಚ್.ಸಿ-11, ಪಿ.ಸಿ-162, 223 ಹಾಗೂ ಪಿ.ಸಿ-168 ರವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಜಿ.ಬಿ. ಸರ್ಕಲ್ಗೆ ಹಾಜರಿರಲು ಫೋನ್ ಮೂಲಕ ತಿಳಿಸಿ ಸರಕಾರಿ ಜೀಪ್ ನಂ-ಕೆ..-37, ಜಿ-186, ಚಾಲಕ .ಪಿ.ಸಿ-15 ರವರೊಂದಿಗೆ ಜಿ.ಬಿ ಸರ್ಕಲ್ಗೆ ಬರಲು, ಅಲ್ಲಿ ಮೇಲಿನ ಸಿಬ್ಬಂದಿಯವರು ಹಾಗೂ ಇಬ್ಬರು ಪಂಚರಾದ 1] ಸಂಗಯ್ಯ 2] ವೆಂಕಟೇಶ ಇಬ್ಬರು ಸಾ: ಹನಮಸಾಗರ ರವರೊಂದಿಗೆ ಹೊರಟ ರಾತ್ರಿ 09-40 ಗಂಟೆಗೆ ಜಿ.ಬಿ ಸರ್ಕಲ್ದಿಂದ ಹೊರಟು ಬಾದಿಮನಾಳ, ಹನಮನಾಳ ಮಾರ್ಗವಾಗಿ ಶ್ಯಾಡಲಗೇರಿ ಗ್ರಾಮ ತಲುಪಿ, ಬಸಿರಿಗಿಡದ ಕಟ್ಟೆಯ ಹತ್ತಿರ ಜೀಪನ್ನು ನಿಲ್ಲಿಸಿ, ಎಲ್ಲರೂ ಕೆಳಗೆ ಇಳಿದು ಸ್ವಲ್ಪ ಮುಂದೆ ಹೋಗಿ ಯಮನೂರಪ್ಪನ ದಗರ್ಾದ ಹತ್ತಿರ ಮರೆಯಾಗಿ ನಿಂತು ನೋಡಲು, ದಗರ್ಾದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ದಗರ್ಾದ ಲೈಟಿನ ಬೆಳಕಿನಲ್ಲಿ ಜನರು ದುಂಡಾಗಿ ಕುಳಿತುಕೊಂಡು, ಒಂದು ಕಾಖದದ ರಟ್ಟಿನ ಮೇಲೆ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದನ್ನು ಖಚಿತ ಪಡಿಸಿಕೊಂಡು, ಪಂಚರ ಸಮಕ್ಷಮ ದಾಳಿ ಮಾಡಿದ್ದು 6 ಜನ ಆರೋಪಿತರು ಸಿಕ್ಕಿ ಬಿದ್ದಿದ್ದು ಅವರಿಂದ ಹಾಗೂ ಕಣದಲ್ಲಿ ಹೀಗೆ ಒಟ್ಟು ಹಣ 1580/- ರೂಪಾಯಿ ಹಣ, 52 ಇಸ್ಪೀಟ್ ಎಲೆ ಹಾಗೂ ಜೂಜಾಟಕ್ಕೆ ಹಾಸಿದ ಕಾಖದದ ರಟ್ಟನ್ನು ಪಂಚರ ಸಮಕ್ಷಮ ಜಪ್ತು ಮಾಡಿ ರೇಡ್ ಪಂಚನಾಮೆ ಹಾಗೂ ಆರೋಪಿತರನ್ನು ಹಾಗೂ ವರದಿಯೊಂದಿಗೆ ಹಾಜರ್ ಪಡಿಸಿ ಕ್ರಮ ಜರುಗಿಸುವಂತೆ ವರದಿ ನೀಡಿದ್ದು ಇರುತ್ತದೆ.
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 254/2015  ಕಲಂ 87 Karnataka Police Act.
ದಿನಾಂಕ:- 10-08-2015 ರಂದು ಸಂಜೆ 7:30 ಗಂಟೆಗೆ ಶ್ರೀ ಹನುಮರಡ್ಡೆಪ್ಪ ಪಿ.ಎಸ್.. ಗಂಗಾವತಿ ಗ್ರಾಮೀಣ ಠಾಣೆ ಇವರು ಕನರ್ಾಟಕ ರಾಜ್ಯ ಪೊಲೀಸ್ ಪರವಾಗಿ ಸ್ವಂತ ಫಿರ್ಯಾದಿಯನ್ನು ಸಲ್ಲಿಸಿದ್ದು, ಅದರ ಸಾರಾಂಶ ಪ್ರಕಾರ ಇದೆಇಂದು ದಿನಾಂಕ:- 10-08-2015 ರಂದು ಸಾಯಂಕಾಲ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಡಾಣಾಪೂರು ಗ್ರಾಮ ಸೀಮಾ ಸ್ಮಶಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಹಾರ್ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ. ಗಂಗಾವತಿ ಹಾಗೂ ಸಿಪಿಐ ಗಂಗಾವತಿ ಗ್ರಾಮೀಣ ವೃತ್ತ ರವರ ಮಾರ್ಗದರ್ಶನದಲ್ಲಿ ನಾನು ಮತ್ತು ಸಿಬ್ಬಂದಿಯವರಾದ ಹೆಚ್.ಸಿ. 68 ಪಿ.ಸಿ. 131, 358, 129, 160, 323, 429, 366, ಜೀಪ್ ಚಾಲಕ .ಪಿ.ಸಿ. 77 ಕನಕಪ್ಪ ರವರನ್ನು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ಸರಕಾರಿ ಜೀಪ್ ನಂ: ಕೆ.-37/ ಜಿ-307 ಮತ್ತು ವೈಯಕ್ತಿಕ ಮೋಟಾರ್ ಸೈಕಲ್ಗಳಲ್ಲಿ ಠಾಣೆಯಿಂದ ಸಾಯಂಕಾಲ 5:15 ಗಂಟೆಗೆ ಹೊರಟು ಡಾಣಾಪೂರು ಸೀಮಾದಲ್ಲಿ  ವಾಹನಗಳನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೊರಟು ನೋಡಲಾಗಿ ಅಲ್ಲಿ ಡಾಣಾಪೂರು ಸೀಮಾದ ಸ್ಮಶಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ಸಾಯಂಕಾಲ 6:00 ಗಂಟೆಯಾಗಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ 8 ಜನರು ಸಿಕ್ಕಿಬಿದ್ದಿದ್ದು ಸಿಕ್ಕವರನ್ನು ವಿಚಾರಿಸಲು ಅವರು ತಮ್ಮ ಹೆಸರುಗಳು (1) ವೆಂಕಟೇಶ ತಂದೆ ಶರಣಪ್ಪ ಬೆಳ್ಳಕ್ಕಿ, ವಯಸ್ಸು 38 ವರ್ಷ, ನಾಯಕ : ವ್ಯವಸಾಯ ಸಾ: ಶರಣಬಸವೇಶ್ವರ ಕ್ಯಾಂಪ್ (2) ಅಮರೇಶ ತಂದೆ ರಾಮಕೃಷ್ಣ ವಯಸ್ಸು 36 ವರ್ಷ, ಜಾತಿ: ಕಮ್ಮಾ : ಒಕ್ಕಲುತನ ಸಾ: ನೀಲಕಂಠೇಶ್ವರ ಸರ್ಕಲ್, ಡಿಪೋ ರೋಡ್, ಗಂಗಾವತಿ (3) ವೀರೇಶ ತಂದೆ ಪಾಂಡುರಂಗ, ವಯಸ್ಸು 35 ವರ್ಷ, ಜಾತಿ: ಲಂಬಾಣಿ : ಪಾನ್ ಶಾಪ್ ಸಾ: ಸತ್ಯನಾರಾಯಣ ಪೇಟೆ, ಕಂಪ್ಲಿ (4) ಭವಾನಿ ಶಂಕರ ತಂದೆ ಕೃಷ್ಣಪ್ಪ , 41 ವರ್ಷ, ಕಮ್ಮಾ : ಕೂಲಿ ಸಾ: ವಿದ್ಯಾನಗರ (5) ರಾಮಕೃಷ್ಣ ತಂದೆ ಲಚಮಯ್ಯ, 36 ವರ್ಷ, : ಜಿಂದಾಲ ಫ್ಯಾಕ್ಟರಿಯಲ್ಲಿ ಸೂಪರವ್ಶೆಜರ್ ಸಾ: ವಾಲ್ಮೀಕಿ ಸಾ: 6ನೇ ವಾರ್ಡ-ಕಂಪ್ಲಿ (6) ಬಸಯ್ಯ ಸ್ವಾಮಿ ತಂದೆ ಅಮರಯ್ಯ ಹಿರೇಮಠ, ವಯಸ್ಸು 46 ವರ್ಷ, ಜಾತಿ: ಜಂಗಮರು : ಕೂಲಿ ಕೆಲಸ ಒಕ್ಕಲುತನ ಸಾ: ಕೇಸರಹಟ್ಟಿ (7) ರಾಮಣ್ಣ ತಂದೆ ಮಾರೆಪ್ಪ ಒತ್ಲಿ, ವಯಸ್ಸು 50 ವರ್ಷ, ನಾಯಕ : ಮೇಸ್ತ್ರಿ ಸಾ: ವಾಲ್ಮೀಕಿ ಸರ್ಕಲ್ ಗಂಗಾವತಿ (8) ರಾಜಸಾಬ ತಂದೆ ಮೈಬೂಬಸಾಬ, ಕೋಣಿಮನಿ, 40 ವರ್ಷ. : ಒಕ್ಕಲುತನ ಸಾ: 7ನೇ ವಾರ್ಡ, ಸಿನಿಮಾ ಥೇಟರ್ ಹತ್ತಿರ, ತಾವರಗೇರಾ ಅಂತಾ ತಿಳಿಸಿದರು. ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 3,03,100-00 ಗಳು, 7 ಮೊಬೈಲ್ಗಳು, 2 ಮೋಟಾರ್ ಸೈಕಲ್ಗಳು ಮತ್ತು 52 ಇಸ್ಪೇಟ್ ಎಲೆಗಳು ಮತ್ತು ಒಂದು ಪ್ಲಾಸ್ಟಿಕ್ ಬರಕಾ ಜಪ್ತು ಮಾಡಲಾಯಿತು. ಬಗ್ಗೆ ಸಾಯಂಕಾಲ 6:00 ರಿಂದ 7:00 ಗಂಟೆಯವರೆಗೆ ಪಂಚನಾಮೆ ನಿರ್ವಹಿಸಿ ನಂತರ ಆರೋಪಿತರೊಂದಿಗೆ ಸಂಜೆ 7:30 ಗಂಟೆಗೆ ಠಾಣೆಗೆ ವಾಪಸ್ ಬಂದು ವರದಿಯನ್ನು ತಯಾರಿಸಿ ಸದರಿ ಆರೋಪಿತರ ವಿರುದ್ಧ ಕಲಂ 87 ಕೆ.ಪಿ. ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡುವ ಕುರಿತು ವರದಿಯನ್ನು ಸಲ್ಲಿಸಿದ್ದು ಇರುತ್ತದೆಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ರಾತ್ರಿ 8:00 ಗಂಟೆಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 254/2015 ಕಲಂ 87 ಕೆ.ಪಿ. ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
3) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 91/2015  ಕಲಂ 279, 337, 338 ಐ.ಪಿ.ಸಿ :.
ದಿನಾಂಕ: 10-08-2015 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ಪಿರ್ಯಾದಿದಾರಳು ತನ್ನ ಅತ್ತೆ ಹೊಳಿಯಮ್ಮ, ಚಿಗವ್ವಳಾದ ಮಾನಮ್ಮ ಹಾಗೂ ಸಂಬಂಧಿಕರಾದ ಹನುಮಂತ ತಂದೆ ಕನಕಪ್ಪ ಹಿರೇಗೌಡ್ರ, ಅನಸಮ್ಮ ಗಂಡ ಯಮನೂರಗೌಡ ಹಿರೇಗೌಡ್ರ ಇವರೊಂದಿಗೆ ತನ್ನ ಮೈದುನನ ಹೆಂಡತಿಯಾದ ಹೊನ್ನವ್ವಳನ್ನು ಅವಳ ತವರು ಮನೆಯಾದ ವಜ್ರಬಂಡಿಯಿಂದ ಶಾಖಾಪುರಕ್ಕೆ ಆರೋಪಿ ನಂ. 01 ನೇದವನ ಟಂಟಂ ಗಾಡಿ ನಂ. ಕೆಎ-37/ಎ-3643 ನೇದ್ದರಲ್ಲಿ ಕರೆದುಕೊಂಡು ಹೋರಟಿದ್ದು, ಸದರಿ ಟಂಟಂ ಗಾಡಿಯನ್ನು ಆರೋಪಿ ನಂ. 01 ನೇದವನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಕಲಕಬಂಡಿ ಸೀಮಾದಲ್ಲಿಯ ಶಂಕ್ರಪ್ಪ ಮುದಿಗೌಡ್ರ ಇವರ ಹೋಲದ ಹತ್ತಿರ ವಜ್ರಬಂಡಿ-ಶಾಖಾಪುರ ರಸ್ತೆಯ ಮೇಲೆ ಹೋಗುವಾಗ ಅದೇವೇಳೆಗೆ ಕೊನಸಾಗರ ಕಡೆಯಿಂದ ಕಚ್ಚಾ ರಸ್ತೆಯ ಮೇಲೆ ಆರೋಪಿ ನಂ. 02 ನೇದವನು ತಾನು ಚಲಾಯಿಸುತಿದ್ದ ಟಿ.ವಿ.ಎಸ್. ಎಕ್ಷ.ಎಲ್. ಸೂಪರ್ ಮೋಟಾರ್ ಸೈಕಲ್ ನಂ. ಕೆಎ-30/ಜೆ-7794 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ವಜ್ರಬಂಡಿ-ಶಾಖಾಪುರ ರಸ್ತೆಯ ಮೇಲೆ ಒಮ್ಮಿಂದೊಮ್ಮೇಲೆ ಬಂದಿದ್ದರಿಂದ ಎರಡು ವಾಹನದ ಚಾಲಕರು ನಿಯಂತ್ರಣ ತಪ್ಪಿ ಪರಸ್ಪರ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದು ಇರುತ್ತದೆ.  

0 comments:

 
Will Smith Visitors
Since 01/02/2008