Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, August 17, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 182/2014 ಕಲಂ. 87 ಕೆ.ಪಿ. ಕಾಯ್ದೆ:
ದಿನಾಂಕ- 16-08-2015 ರಂದು ಮದ್ಯಾಹ್ನ 3-45 ಗಂಟೆಯ ಸುಮಾರಿಗೆ ಕಾರಟಗಿ ಠಾಣಾ ವ್ಯಾಫ್ತಿಯ ಸಿದ್ದಾಪೂರ ಲಕ್ಷ್ಮೀ ಕ್ಯಾಂಪ್ ರಸ್ತೆಯ ಪಕ್ಕದಲ್ಲಿರುವ ಸಾರ್ವಜನಿಕ ಹಳ್ಳದಲ್ಲಿ ಆರೋಪಿತ ರು ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಿ.ಎಸ್.ಐ.ಸಾಹೇಬರು ಕಾರಟಗಿರವರು ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಲು  ಆರೋಪಿ ನಂ 1 ರಿಂದ 5 ರವರು ಸಿಕ್ಕಿಬಿದ್ದಿದ್ದು ಉಳಿದ ಆರೋಪಿತರು ತಮ್ಮ ಮೋಟಾರ್ ಸೈಕಲ್ ಬಿಟ್ಟು ಓಡಿ ಹೋಗಿದ್ದು ನಂತರ ಪಂಚನಾಮೆ ಕಾಲಕ್ಕೆ ಆರೋಪಿ ನಂ 5 ಈತನು ಓಡಿ ಹೋಗಿದ್ದು ಇರುತ್ತದೆ ಪಿ.ಎಸ್.ಐ ಸಾಹೇಬರು ಸಿಕ್ಕ ಆರೋಪಿತರ ಕಡೆಯಿಂದ ಒಟ್ಟು ನಗದು ಹಣ ರೂ. 17250=00 ಗಳನ್ನು ಮತ್ತು ಒಟ್ಟು 12 ಮೋಟಾರ್ ಸೈಕಲ್ ಮತ್ತು 52 ಇಸ್ಪೀಟ್ ಎಲೆಗಳು  ಒಂದು ಹಳೆ ಬರಕಾವನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಆರೋಪಿತರೊಂದಿಗೆ ಠಾಣೆಗೆ ಬಂದು ಸಾಯಂಕಾಲ 7-15 ಗಂಟೆಗೆ ಬಂದು ವರದಿ ಮತ್ತು ದಾಳಿ ಪಂಚನಾಮೆ ಹಾಜರಪಡಿಸಿದ್ದರಿಂದ ಸದರಿ ವರದಿಯ ಸಾರಂಶ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು  ಇರುತ್ತದೆ.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 207/2015  ಕಲಂ 279, 337, 338 ಐ.ಪಿ.ಸಿ :.
ದಿ:16-08-15 ರಂದು ಮದ್ಯಾಹ್ನ 3-00 ಗಂಟೆಗೆ ಕೊಪ್ಪಳ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ಗಾಯಾಳು ನಿಂಗಪ್ಪ ತಾಡಪ್ಪನವರ ಸಾ: ಹುಣಸಿಹಾಳ ಇವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸದರಿ ದೂರಿನ ಸಾರಾಂಶವೇನೆಂದರೇ, ಇಂದು ದಿ: 16-08-15 ರಂದು ಬೆಳಿಗ್ಗೆ 10-00 ಗಂಟೆಗೆ ನಾನು ನನ್ನ ಮೋಟಾರ ಸೈಕಲ್ ನಂ: ಕೆಎ-37/ಆರ್-6070 ನೇದ್ದರ ಹಿಂದೆ ನಮ್ಮ ತಂಗಿ ಮತ್ತು ಮಕ್ಕಳನ್ನು ಕೂಡ್ರಿಸಿಕೊಂಢು ಕೊಪ್ಪಳ ಕುಸ್ಟಗಿ ರಸ್ತೆಯ ಇರಕಲ್ ಗಡಾ ದಾಟಿ ಶ್ರೀ ಮಾರುತಿ ದೇವಾಲಯದ ಮುಂದೆ ಹೊರಟಿದ್ದಾಗ ಅದೇ ವೇಳೆಗೆ ನನ್ನ ಮುಂದೆ ಮೋಟಾರ ಸೈಕಲ್ ನಂ: ಕೆಎ-37/ವಿ-2497 ನೇದ್ದರ ಚಾಲಕನು ತನ್ನ ಗಾಡಿಯನ್ನು ಅತೀವಾಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯಕರವಾಗುವ ರೀತಿಯಲ್ಲಿ ಓಡಿಸುತ್ತಾ ಹಿಂದೆ ಹೊರಟಿದ್ದ ನಮ್ಮ ವಾಹನಕ್ಕೆ ಯಾವುದೇ ಸೂಚನೆ ಸಿಗ್ನಲ್ ಕೊಡದೇ ಒಮ್ಮೆಲೆ ಬಲಗಡೆ ದೇವಾಲಯದ ಕಡೆಗೆ ತೆಗೆದುಕೊಂಡಾಗ ನನ್ನ ಮೋಟಾರ ಸೈಕಲ್ ಗೆ ಟಕ್ಕರ ಆಗಿದ್ದು ಇರುತ್ತದೆ. ಈ ಅಪಘಾತದಲ್ಲಿ ನನಗೆ ಭಾರಿ ಪೆಟ್ಟುಗಳಾಗಿದ್ದು, ಅಪಘಾತ ಮಾಡಿದ ಚಾಲಕನಿಗೆ ಸಾದಾ ಸ್ವರೂಪದ ಗಾಯಗಳಾಗಿವೆ. ಕಾರಣ ಸದರಿ ಮೋಟಾರ ಸೈಕಲ್ ಚಾಲಕ ವೀರನಗೌಡ ತೋಟದ ಸಾ: ಅಬ್ಬಿಗೇರಿ ಇತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರನ್ನು ಪಡೆದುಕೊಂಡು ವಾಪಾಸ್ ಠಾಣೆಗೆ 4-00 ಪಿ.ಎಮ್ ಕ್ಕೆ ಬಂದು ಸದರಿ ದೂರಿನ ಮೇಲಿಂದ ಕೊಪ್ಪಳ ಗ್ರಾಮೀಣ ಠಾಣೆ ಗುನ್ನೆ ನಂ: 207/2015. ಕಲಂ: 279,337,338 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
4) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 142/2015  ಕಲಂ 279, 337, 338 ಐ.ಪಿ.ಸಿ :.

ದಿನಾಂಕ 16-08-2015 ರಂದು ರಾತ್ರಿ 11-45  ಗಂಟೆಗೆ ಮಹಾಂತೇಶ ಅಕ್ಕಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೇ ಮಹಾಂತೇಶ ಅಕ್ಕಿ ಆಸ್ಪತ್ರೆ ಇಲಕಲ್ ಗೆ  ಭೇಟಿ ನೀಡಿ ಗಾಯಾಳು ಕುಬರಾಬೇಗಂ ಗಂಡ ಸೈಯದ್ ಉಮರ್ ಬಾರಾಮನಿ ವ: 60 ವರ್ಷ ಜಾತಿ: ಮುಸ್ಲಿಂ ಉ:ಮನೆಗೆಲಸ ಸಾ: ಕೆ.ಎಸ್,ಆರ್.ಟಿ.ಸಿ ಡಿಪೋ ಹತ್ತಿರ  ಶಹಪೂರ ಜಿ: ಯಾದಗಿರಿ ರವರ ಹೇಳಿಕೆ ಫಿರ್ಯಾದಿ  ಸಾರಾಂಶವೆನೆಂದರೆ  ತಮ್ಮ  ಅಳಿಯ  ಮಹ್ಮದ ಇಂತಿಯಾಸ್ ಹುಸೇನ್ ರವರ ಮದುವೆಯನ್ನು ಇಂದು ಮದ್ಯಾಹ್ನ ಮುಗಿಸಿಕೊಂಡು ವಾಪಾಸ್ ಮುನಿರಾಬಾದಗೆ ಬರಲು ಇಂದು ಸಂಜೆ 6-00 ಗಂಟೆಗೆ ಫಿರ್ಯಾದಿ ಹಾಗೂ ಮಹ್ಮದ ಇಂತಿಯಾಸ್ ಹುಸೇನ್ ಆತನ ಹೆಂಡತಿ  ಅಪಷಾ ಬೇಗಂ ಹಾಗೂ  ಆತನ  ತಾಯಿ ಮೆಹರೂನಿಷಾ ಎಲ್ಲರೂ ಕೂಡಿ ಆದೇ ಕಾರಲ್ಲಿ ಮುನಿರಾಬಾದಗೆ ಹೋಗಲು ಹೋರಟು ರಾತ್ರಿ 10-00 ಗಂಟೆಯ ಸುಮಾರು ಎನ್.ಹೆಚ್-50 ರಸ್ತೆ ಮಾರ್ಗವಾಗಿ ಇನ್ನೂ ಕುಷ್ಟಗಿ 01 ಕಿ.ಮೀ. ದೂರದಲ್ಲಿರುವಾಗ ಹೊಸ ಇನೋವಾ ಕಾರ ಟೆಂಪರವರಿ ಪಾಸಿಂಗ ನಂ: ಕೆ.ಎ-35/ಎನ್.ಟಿ-14255 ನೇದ್ದರ ಚಾಲಕ ರೆಹಮಾನ ಷಾವಲಿ ಇತನು  ಕಾರನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಮುಂದಿನ ಎಡಗಡೆ  ಟೈರ್ ಬಸ್ಟ ಆಗಿ  ರಸ್ತೆಯ ಎಡಗಡೆ ಇರುವ 80 ಕಿ.ಮಿ.ಇರುವ ಬೋರ್ಡ ಕಂಬಕ್ಕೆ ಮತ್ತೊಂದು ಎಂಟ್ರಿ ಮಾರ್ಕ ಇರುವ ಬೋರ್ಡ ಕಂಬಕ್ಕೆ ಟಕ್ಕರ  ಕೊಟ್ಟು ಕಾರ ಪಲ್ಟಿ ಹೊಡೆಸಿ ನಾಲ್ಕು ಗಾಲಿ ಮೇಲಾಗಿ ಅಪಘಾತಪಡಿಸಿದ್ದು ಅಪಗಾತದಲ್ಲಿ ಫಿರ್ಯಾದಿಗೆ ಮುಂದೆಲೆಗೆ ಭಾರಿ ರಕ್ತ ಗಾಯವಾಗಿ ಹಾಗೂ ಮೆಹರೂನಿಷಾ   ಇವರಿಗೆ ಎರಡೂ ಭುಜಕ್ಕೆ ಒಳ ಪೆಟ್ಟಾಗಿದ್ದು ಎಡ ಹುಬ್ಬು ಮತ್ತು ಮೇಲ್ತುಟಿಗೆ ರಕ್ತ ಗಾಯವಾಗಿ ಮಹ್ಮದ ಇಂತಿಯಾಸ್ ಹುಸೇನ್ ಮತ್ತು  ಅಪಷಾ ಬೇಗಂ ಹಾಗೂ ಕಾರ  ಚಾಲಕನಿಗೆ ಯಾವುದೇ ಗಾಯ ವಗೈರೆ ಆಗಿರುವದಿಲ್ಲ,ಕಾರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಪಿರ್ಯಾದಿ  ಸಾರಾಂಶದ ಮೇಲಿಂದ  ಪ್ರಕರಣ ದಾಖಲಿಸಿಕೊಂಡು ತನಿಖೆಕೈಕೊಂಡೆನು.

0 comments:

 
Will Smith Visitors
Since 01/02/2008