Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, August 19, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 82/2015 ಕಲಂ. 78(3) Karnataka Police Act.
ದಿನಾಂಕ: 18-08-2015 ರಂದು ರಾತ್ರಿ 09-25 ಗಂಟೆಗೆ ಸಿ.ಪಿ.ಐ ಕುಷ್ಟಗಿ ವೃತ್ತರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದರ ಸಾರಾಂಶದ ಏನೆಂದರೆ, ದಿನಾಂಕ 18-08-2015 ರಂದು ಸಂಜೆ 6-15 ಗಂಟೆಗೆ ಸಿ.ಪಿ.ಐ ರವರು ಕುಷ್ಠಗಿ ಪೊಲೀಸ್ ಠಾಣೆಯ ಆವರಣದಲ್ಲಿದ್ದಾಗ ಬೆನಕನಾಳ ಗ್ರಾಮದ ಕಲ್ಯಾಣಮಂಟಪದ ಹತ್ತಿರ ಮಟ್ಕಾ ಜೂಜಾಟ ನಡೆದಿದೆ ಅಂತಾ ಖಚಿತ ಬಾತ್ಮಿ ಬಂದಿದ್ದು ಆಗ ಪಿ.ಸಿ.117 ಶ್ರೀಧರ ರವರಿಂದ ಪಂಚರಾದ 1) ನಾಗರಾಜ ತಂದೆ ಹನಮಂತಪ್ಪ ಈಳಗೇರ ವಯಾ 22 ವರ್ಷ ಸಾ.ಹಿರೇಮನ್ನಾಪೂರ 2) ಮಂಜುನಾಥ ತಂದೆ ಕನಕಪ್ಪ ನಾಯಕ ವಯಾ 34 ವರ್ಷ ಸಾ.ಹಿರೇಮನ್ನಾಪೂರ ರವರನ್ನು ಹಾಗೂ ಸಿಬ್ಬಂದಿಯವರಾದ ಹೆಚ್,ಸಿ.-36, ಪಿ.ಸಿ.-109,296 ಎ.ಪಿ.ಸಿ.115 ರವರನ್ನು ಬರಮಾಡಿಕೊಂಡು ಎಲ್ಲರಿಗೂ ವಿಷಯ ತಿಳಿಸಿ ಎಲ್ಲರೂ ಕೂಡಿ ಸರಕಾರಿ ಜೀಪ ನಂ. ಕೆ.ಎ.37/ಜಿ-376 ನೇದ್ದರಲ್ಲಿ ಹೊರಟು ಬೆನಕನಾಳ ಗ್ರಾಮಕ್ಕೆ ಹೋಗಿ ಊರ ಹೊರವಲಯದಲ್ಲಿ ಜೀಪ್ ನಿಲ್ಲಿಸಿ ಗ್ರಾಮದ ಕಲ್ಯಾಣ ಮಂಟಪದ ಹತ್ತಿರ ಒಂದು ಮನೆಯ ಗೋಡೆಯ ಮರೆಯಲ್ಲಿ ನಿಂತು ನೋಡಲು ಕಲ್ಯಾಣಮಂಟಪದ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಜನರಿಂದ ಪಣವಾಗಿ ಹಣ ಪಡೆಯುತ್ತಾ ಮಟಕಾ ಜೂಜಾಟದಲ್ಲಿ ತೊಡಗಿ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿದ್ದನು. ಆಗ ನಾವು ಎಲ್ಲರೂ ಒಮ್ಮಲೇ ಹೋಗಿ ರೇಡ ಮಾಡಲು ಮಟಕಾ ಬರೆಯಿಸುತ್ತಿದ್ದ ಜನ ಓಡಿ ಹೋಗಿದ್ದು, ಮಟಕಾ ಬರೆಯುದ್ದವನು ಸಹ ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ಸದರಿಯವನನ್ನು ಹಿಡಿದು ಆತನನ್ನುವಿಚಾರಿಸಿದಾಗ ತನ್ನ ಹೆಸರು ಗಂಗಾಧರ ತಂದೆ ಶಿವಾನಂದಪ್ಪ ಗುಡಿ, ವಯಾ: 43 ವರ್ಷ ಜಾ:ಶೆಟ್ಟರ ಉ:ಕಿರಾಣಿ ಅಂಗಡಿ ವ್ಯಾಪಾರ ಸಾ.ಬೆನಕನಾಳ ಅಂತಾ ಹೇಳಿದ್ದು ಹಾಗೂ ತಾನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದನ್ನು ಒಪ್ಪಿಕೊಂಡನು. ನಂತರ ಸದರಿಯವನನ್ನು ಅಂಗ ಜಡತಿ ಮಾಡಿದಾಗ ಮಟಕಾ ಜೂಜಾಟದ ಹಣ 1,152=00 ರೂಪಾಯಿ ನಗದು ಹಣ, ಒಂದು ಬಾಲ್ ಪೆನ್ನು ಹಾಗೂ ಒಂದು ಮಟ್ಕಾ ಬರೆದ ಚೀಟಿ ಹಾಗೂ ಮಟಕಾ ನಂಬರ್ ಬರೆದ ನೋಟಪುಸ್ತಕ ಒಂದು ಸ್ಯಾಮಸಂಗ್ ಮೊಬೈಲ್ ಸಿಕ್ಕಿದ್ದು, ತಾನು ಬರೆದ ಮಟಕಾ ಪಟ್ಟಿಗಳನ್ನು ಬುಕ್ಕಿಯಾದ ಭೀಮೇಶ ಸಾವಜಿ ಸಾ.ಹನಮಸಾಗರ ಈತನಿಗೆ ಕೊಡುವುದಾಗಿ ತಿಳಿಸಿದನು. ನಂತರ ವಿವರವಾದ ಪಂಚನಾಮೆಯನ್ನು ಇಂದು ದಿನಾಂಕ: 18-08-2015  ರಂದು 07-15 ಪಿ.ಎಂ ದಿಂದ 08-15 ಪಿ.ಎಂ ವರೆಗೆ ಅಲ್ಲಿದ್ದ ಲೈಟಿನ ಬೆಳಕಿನಲ್ಲಿ ಬರೆದು ಮುಗಿಸಲಾಯಿತು. ನಂತರ ಆರೋಪಿತನ್ನು ಮತ್ತು ಮುದ್ದೆಮಾಲುಗಳನ್ನು ಪಂಚನಾಮೆಯನ್ನು ಈಗ ಠಾಣೆಗೆ 9-25 ಪಿ.ಎಂ. ಗಂಟೆಗೆ ಬಂದು ತಮ್ಮ ಮುಂದೆ ಹಾಜರಪಡಿಸಿದ್ದು, ಕಾರಣ  ಮುಂದಿನ ಕಾನೂನು ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ.
2)  ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 144/2015 ಕಲಂ. 78(3) Karnataka Police Act.
ದಿನಾಂಕ 18-08-2015 ರಂದು ರಾತ್ರಿ 10-15 ಗಂಟೆಗೆ ಮಾನ್ಯ ಪಿ.ಎಸ್.ಸಾಹೇಬರು ಕುಷ್ಠಗಿ ಪೊಲೀಸ ಠಾಣೆ ರವರು ಠಾಣೆಗೆ ಬಂದು ಒಂದು ವರದಿ, ಪಂಚನಾಮೆಯನ್ನು ಹಾಜರುಪಡಿಸಿದ್ದು ಸಾರಾಂಶವೆನೆಂದರೆ  ಇಂದು ದಿನಾಂಕ: 18-08-2015 ರಂದು ರಾತ್ರಿ 8-10 ಗಂಟೆಗೆ  ಠಾಣೆಯಲ್ಲಿದ್ದಾಗ ಗುಮಗೇರಿ ಗ್ರಾಮದಲ್ಲಿ ಈಶ್ವರ ದೇವಸ್ಥಾನದ ಹತ್ತಿರ ಮಟ್ಕಾ ಜೂಜಾಟ  ನಡೆದಿದೆ ಅಂತಾ ಖಚಿತ ಬಾತ್ಮಿ ಬಂದಿದ್ದು ಆಗ ಪಂಚರಾದ 1) ಮುತ್ತಣ್ಣ ತಂದೆ ಶೇಖರಪ್ಪ ಹೂಗಾರ ವಯಾ 38 ವರ್ಷ ಜಾ:ಹಿಂದೂ ಲಿಂಗಾಯತ ಉ:ಒಕ್ಕಲುತನ ಸಾ: ಗುಮಗೇರಿ  2] ದೀನಸಾಬ ತಂದೆ ಹುಸೇನಸಾಬ ಕಲಕಬಂಡಿ ವಯಾ 42 ವರ್ಷ ಜಾ: ಮುಸ್ಲಿಂ ಉ: ಒಕ್ಕಲುತನ ಸಾ:ಗುಮಗೇರಿ ರವರನ್ನು ಠಾಣೆಗೆ ಬರಮಾಡಿಕೊಂಡು ವಿಷಯ ತಿಳಿಸಿ ಹಾಗೂ ನಮ್ಮ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ-108 ಹೀರಪ್ಪ, ಪಿ.ಸಿ-116 ಸಂಗಮೇಶ, ಪಿ.ಸಿ-105 ಶರಣಪ್ಪ, ಪಿ.ಸಿ-344 ಸಂಗಪ್ಪ ಪಿಸ-08 ಮಲ್ಲಪ್ಪ, ಪರುಶುರಾಮ ಪಿಸಿ-296 ಮತ್ತು ಸರಕಾರಿ ಜೀಪ್ ಚಾಲಕ .ಪಿ.ಸಿ-38 ಶಿವಕುಮಾರ  ಎಲ್ಲರೂ ಕೂಡಿ ಸರಕಾರಿ ಜೀಪನಲ್ಲಿ ಠಾಣೆಯಿಂದ ಹೊರಟು ಗುಮಗೇರಿ ಗ್ರಾಮದ ಹೊರ ವಲಯದಲ್ಲಿ ಜೀಪ್ ನಿಲ್ಲಿಸಿ ಎಲ್ಲರೂ ಜೀಪನಿಂದ ಳಿದು ನಡೆದುಕೊಂಡು ಹೋರಟು ಗ್ರಾಮದ ಈಶ್ವರ ಗುಡಿಯ ಹತ್ತಿರ  ಒಂದು ಮನೆಯ ಗೊಡೆಯ ಮರೆಯಲ್ಲಿ ನಿಂತು ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಜನರಿಂದ ಹಣ ಪಡೆಯುತ್ತಾ ಮಟಕಾ ಜೂಜಾಟದಲ್ಲಿ ತೊಡಗಿ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿದ್ದನು. ಆಗ ನಾವು ಒಮ್ಮಲೇ ಎಲ್ಲರೂ ಕೂಡಿ ರೇಡ ಮಾಡಲು ಮಟಕಾ ಬರೆಯಿಸುತ್ತಿದ್ದ ಜನ ಓಡಿ ಹೋಗಿದ್ದು, ಮಟಕಾ ಬರೆಯುದ್ದವನು ಸಹ ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ಸದರಿಯವನ್ನು ಹಿಡಿದು ವಿಚಾರಿಸಿದಾಗ ತನ್ನ ಹೆಸರು ಈಶಪ್ಪ ತಂದೆ ಕರಬಸಪ್ಪ ಪಟ್ಟಣಶೆಟ್ಟಿ ವಯಾ 47 ವರ್ಷ ಜಾ: ಹಿಂದೂ ಲಿಂಗಾಯತ  ಉ:ಪಾನ್ ಶಾಪ್ ಸಾ:ಗುಮಗೇರಿ  ಅಂತಾ ಹೇಳಿದ್ದು ಹಾಗೂ ತಾನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದನ್ನು ಒಪ್ಪಿಕೊಂಡನು. ಸದರಿಯವನನ್ನು ಅಂಗ ಜಡತಿ ಮಾಡಿದಾಗ ಮಟಕಾ ಜೂಜಾಟದ ಹಣ 3,200=00 ರೂಪಾಯಿ ನಗದು ಹಣ, ಒಂದು ಬಾಲ್ ಪೆನ್ನು ಹಾಗೂ ಒಂದು ಮಟ್ಕಾ ಬರೆದ ಚೀಟಿ ಹಾಗೂ ಒಂದು ಕಾರ್ಬನ್ ಮೊಬೈಲ್ ಅಂ:ಕಿ:350=00 ರೂ:ಗಳಷ್ಟು ಆಗಬಹುದು ಇವುಗಳನ್ನು ಜಪ್ತ ಪಡಿಸಿದ್ದು ತಾನು ಬರೆದ ಮಟಕಾ ಪಟ್ಟಿಯನ್ನು ಅಕ್ಬರಸಾಬ ಸಾ. ಕುಷ್ಟಗಿ ಇತನಿಗೆ ಕೊಡುವದಾಗಿ ತಿಳಿಸಿದನು. ನಂತರ  ಪಂಚನಾಮೆಯನ್ನು ಇಂದು ದಿನಾಂಕ: 18-08-2015  ರಂದು 8-45 ಪಿ.ಎಂ ದಿಂದ 9-30 ಪಿ.ಎಂ ವರೆಗೆ ಬರೆದು ಮುಗಿಸಲಾಯಿತು. ನಂತರ ಆರೋಪಿತನ್ನು ಮತ್ತು ಮುದ್ದೆಮಾಲುಗಳನ್ನು ಠಾಣೆಗೆ ತಂದು ಹಾಜರುಪಡಿಸಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:144/2015 ಕಲಂ 78 [3] ಕೆ.ಪಿ.ಕಾಯ್ದೆ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 143/2015  ಕಲಂ 498(ಎ), 323, 504, 506 ಐ.ಪಿ.ಸಿ ಮತ್ತು 3 & 4 ಡಿ.ಪಿ. ಕಾಯ್ದೆ:.
ದಿನಾಂಕ. 18-08-2015 ರಂದು ರಾತ್ರಿ 9-30 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಕಸ್ತೂರೆಮ್ಮ ಗಂಡ ಗ್ಯಾನಪ್ಪ ಹರಿಜನ ವಯಾ 25 ವರ್ಷ .ಮನೆಗೆಲಸ ಸಾ.ಟೆಂಗುಂಟಿ ರವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ, ಫಿರ್ಯಾದಿದಾರಳ ಮದುವೆಯು ಈಗ್ಗೆ ಸುಮಾರು 4-5 ವರ್ಷಗಳ ಹಿಂದೆ ಗ್ಯಾನಪ್ಪ ತಂದೆ ಬಾಳಪ್ಪ ಹರಿಜನ ಸಾ.ಟೆಂಗುಂಟಿ ಈತನೊಂದಿಗೆ ಆಗಿದ್ದು, ಮದುವೆಯ ಸಮಯದಲ್ಲಿ ಆತನಿಗೆ 25,000=00ರೂ ಹಣ ಮತ್ತು 4 ಅಣೆ ತೂಕದ ಬಂಗಾರವನ್ನು ವರದಕ್ಷಿಣೆಯಾಗಿ ಕೊಟ್ಟಿದ್ದು, ಈಗ್ಗೆ ಸುಮಾರು 3 ವರ್ಷಗಳ ಹಿಂದೆ ಸದರಿ ಗ್ಯಾನಪ್ಪ ತಂದೆ ಬಾಳಪ್ಪ ಹರಿಜನ ಈತನು ಫಿರ್ಯಾದಿದಾರಳಿಗೆ ನೀನು ಚೆನ್ನಾಗಿಲ್ಲ, ನಿನಗೆ ಕೆಲಸ ಮಾಡಲು ಬರುವದಿಲ್ಲ ನೀನು ತವರು ಮನೆಯಿಂದ ಇನ್ನೂ 50,000=00ರೂ ಹಣ ತರಬೇಕು ಅಂತಾ ಹೊಡೆ ಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿ ತವರು ಮನೆಗೆ ಕಳಿಸಿದ್ದು, ಆವಾಗಿನಿಂದ ಸದರಿಯವಳು ತನ್ನ ತವರು ಮನೆಯಲ್ಲಿಯೇ ಇದ್ದು, ನಂತರ ಈಗ್ಗೆ ಸುಮಾರು ಒಂದು ವಾರದ ಹಿಂದೆ ಹಿರಿಯರು ಆತನಿಗೆ ಬುದ್ದಿವಾದ ಹೇಳಿ ಚೆನ್ನಾಗಿ ಬಾಳ್ವೆ ಮಾಡಿಕೊಂಡು ಹೋಗುವಂತೆ ಹೇಳಿದ್ದು, ನಂತರ ದಿನಾಂಕ. 07-08-2015 ರಂದು ಫಿರ್ಯಾದಿದಾಳ ತವರು ಮನೆಗೆ ಬಂದು ಇದ್ದು, ನಂತರ ದಿನಾಂಕ. 10-08-2015 ರಂದು 9-30 ಗಂಟೆಗೆ ಫಿರ್ಯಾದಿದಾರಳು ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಆಕೆಗೆ ಗ್ಯಾನಪ್ಪ ಈತನು ಇನ್ನೂ 50,000=00ರೂ ತರುವಂತೆ ಕೇಳಿದ್ದು ಅದಕ್ಕೆ ಫಿರ್ಯಾದಿದಾರಳು ನನ್ನ ತಾಯಿಯ ಹತ್ತಿರ ಹಣ ಇಲ್ಲ ಅಂತಾ ಹೇಳಿದಾಗ ಸದರಿಯವನು ಆಕೆಗೆ ಜಗಳಾ ತೆಗೆದು ಹೊಡೆ ಬಡೆ ಮಾಡಿ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕ್ರಮ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008