Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, August 22, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 214/2015 ಕಲಂ 78(3) Karnataka Police Act.       
ದಿನಾಂಕ: 21-08-2015 ರಂದು ಸಾಯಂಕಾಲ 5-30 ಗಂಟೆಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ, ಕಿನ್ನಾಳ ಗ್ರಾಮದ ಬಸ್ ನಿಲ್ಧಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಆರೋಪಿ ಚಿನ್ನಪ್ಪ ಸಾ: ಮುತ್ತಾಳ ಇತನು ಬರ ಹೋಗುವ ಸಾರ್ವಜನಿಕರಿಗೆ ನೀವು ಬರೆಯಿಸಿದ ನಶೀಬದ ನಂಬರ ಹತ್ತಿದಲ್ಲಿ 1=00 ರೂಪಾಯಿಗೆ 80=00 ರೂಪಾಯಿಗಳನ್ನು ಕೊಡುತ್ತೇನೆ ಅಂತಾ ಕೂಗುತ್ತಾ ಮಟಕಾ ನಶಿಬದ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್.ಐ ಸಾಹೇಬರು ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ಆರೋಪಿತನಿಂದ ನಗದು ಹಣ ರೂ 500=00 ರೂ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಬಂದು ನೀಡಿದ ವರದಿ ಸಾರಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 215/2015 ಕಲಂ 279, 338, 304(ಎ) ಐ.ಪಿ.ಸಿ & 187 ಐ.ಎಂ.ವಿ. ಕಾಯ್ದೆ:    
ದಿ:21-08-2015 ರಂದು ರಾತ್ರಿ 9-00 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಫಿರ್ಯಾದಿದಾರರಾದ [ಗಾಯಾಳು] ಹನಮಪ್ಪ ಹಿಟ್ನಾಳ. ಸಾ: ವರತಟ್ನಾಳ ತಾ: ಕೊಪ್ಪಳ ಇವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು, ಸದರಿ ದೂರಿನ ಸಾರಾಂಶವೇನೆಂದರೇ, ಇಂದು ದಿ:21-08-2015 ರಂದು ಮಧ್ಯಾಹ್ನ 3-45 ಗಂಟೆಯ ಸುಮಾರಿಗೆ ಕೊಪ್ಪಳ-ಗದಗ ಎನ್.ಹೆಚ್-63 ರಸ್ತೆಯ ದದೇಗಲ್ ಗ್ರಾಮದ ಹತ್ತಿರ ಕರ್ವಿಂಗ್ ದಲ್ಲಿ ಗದಗ ಕಡೆಯಿಂದ ಆಟೋ ನಂ: ಕೆಎ-37/ಎ5816 ನೇದ್ದರ ಚಾಲಕನು ತನ್ನ ಆಟೋವನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದಾ ಓಡಿಸಿಕೊಂಡು ಕೊಪ್ಪಳ ಕಡೆಗೆ ಬರುವಾಗ ಎದರುಗಡೆಯಿಂದ ಬರುತ್ತಿದ್ದ ಮೋಟಾರ ಸೈಕಲ್ ನಂ: ಕೆಎ-31/ಆರ್-6706 ನೇದ್ದಕ್ಕೆ ಟಕ್ಕರ ಕೊಟ್ಟು ಅಪಘಾತ ಮಾಡಿ ಆಟೋವನ್ನು ಬಿಟ್ಟು ಅದರ ಚಾಲಕ ಓಡಿ ಹೋಗಿದ್ದು, ಈ ಅಪಘಾತದಲ್ಲಿ ಫಿರ್ಯಾದಿ ಹಾಗೂ ಆಟೋದಲ್ಲಿದ್ದ ಇತರೆ ಹನುಮಗೌಡ, ಅಂಜಿನಪ್ಪ ವಡ್ಡರ, ಹಾಗೂ ದೇವಪ್ಪ ಹುಯಿಲಗೋಳ ಇವರಿಗೆ ಭಾರಿ ಸ್ವರೂಪದ ಗಾಯಗಳಾಗಿರುತ್ತವೆ. ನಂತರ ಸದರಿ ಅಪಘಾತದಲ್ಲಿ ಮೋಟಾರ ಸೈಕಲ್ ಸವಾರ ಗುರುಶಾಂತಪ್ಪ ಉಮಚಗಿ ಸಾ:ಶೇಲ್ಯೂಡಿ ಇತನಿಗೆ ತಲೆಗೆ ಭಾರಿ ರಕ್ತಗಾಯವಾಗಿದ್ದು ಆತನಿಗೆ 108 ಅಂಬುಲೆನ್ಸ ದಲ್ಲಿ ಜಿಲ್ಲಾ ಆಸ್ಪತ್ರೆಗೆ ಸಾಯಂಕಾಲ 4-45 ಗಂಟೆಗೆ ತಂದು ಸೇರಿಕೆ ಮಾಡಿದಾಗ ಮಾರ್ಗದಲ್ಲಿ ಮೃತಪಟ್ಟ ಬಗ್ಗೆ ವೈದ್ಯರಿಂದ ಗೊತ್ತಾಗಿರುತ್ತದೆ. ಕಾರಣ ಅಪಘಾತ ಮಾಡಿ ಆಟೋ ಬಿಟ್ಟು ಓಡಿ ಹೋದ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ನೀಡಿದ ದೂರನ್ನು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 233/2015  ಕಲಂ 341, 323, 504, 506, 306 ಐ.ಪಿ.ಸಿ:.

ದಿನಾಂಕ: 30-07-2015 ರಂದು ರಾತ್ರಿ 9:30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ತಿಮ್ಮಣ್ಣ ತಂದೆ ಸೋಮಪ್ಪ ವಾರಿ ವಯಸ್ಸು: 45 ವರ್ಷ ಜಾತಿ: ಕುರುಬರ, ಉ: ಒಕ್ಕಲತನ ಸಾ: ವೆಂಕಟಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮ ನುಡಿ ಹೇಳಿಕೆ ದೂರನ್ನು ಕೊಟ್ಟಿದ್ದು ಅದರ ಸಾರಾಂಶ ಈ ಪ್ರಕಾರ ಇದೆ.ಇಂದು ದಿನಾಂಕ:- 30-07-2015 ರಂದು ಸಂಜೆ 7:00 ಗಂಟೆಯ ಸುಮಾರಿಗೆ ನಾನು ಹಾಗೂ ನನ್ನ ಹೆಂಡತಿ ಶಿವಮ್ಮ ಇಬ್ಬರೂ ಗಂಗಾವತಿಯಲ್ಲಿದ್ದಾಗ ನಮ್ಮ ಹೊಲದ ಹತ್ತಿರ ಬೇರೆ ಹೊಲ ಗುತ್ತಿಗೆ ಮಾಡುವ ಮಹೇಶಪ್ಪ ಪೊಲೀಸ್ ಪಾಟೀಲ್ ತಂದೆ ವೀರನಗೌಡ 45 ವರ್ಷ, ಜಾತಿ: ಕುರುಬರು ಸಾ: ಭಂಡ್ರಾಳ ಈತನು ನನಗೆ ಫೋನ್ ಮಾಡಿ ನಿನ್ನ ಮಗ ಗಣೇಶ ನಮ್ಮ ಹೊಲದಲ್ಲಿನ ಮೆಣಸಿನ ಸಸಿಗಳನ್ನು ಕಿತ್ತಿಕೊಂಡು ಹೋಗಿರುತ್ತಾನೆ ಅಂತಾ ತಿಳಿಸಿದನು. ಆಗ ನಾನು ಆತನಿಗೆ ಗಂಗಾವತಿಯಿಂದ ಬರುತ್ತಿದ್ದೇನೆ, ನೀನೇನು ಗಲಾಟೆ ಮಾಡಬೇಡಾ ನಾನು ಬಂದು ಮಾತನಾಡುತ್ತೇನೆ ಅಂತಾ ಹೇಳಿ ಕೂಡಲೇ ನಾನು ವೆಂಕಟಗಿರಿಗೆ ನಮ್ಮ ಮನೆಯ ಹತ್ತಿರ ರಸ್ತೆಯಲ್ಲಿ ಹೋಗುತ್ತಿರುವಾಗ ರಾತ್ರಿ 8:00 ಗಂಟೆಯ ಸುಮಾರಿಗೆ ಮಹೇಶಪ್ಪನು ಅಲ್ಲಿಗೆ ಬಂದು ನನ್ನನ್ನು ಅಕ್ರಮವಾಗಿ ಅಡ್ಡಗಟ್ಟಿ ತಡೆದು ನಿಲ್ಲಿಸಿ ಲೇ ಲಂಗಾ ಸೂಳೇಮಗನೇ ಎಲ್ಲಿದ್ದಾನೆ ನಿನ್ನ ಮಗ ಅವನನ್ನು ಕರೆ, ಅವನಿಗೆ ಬುದ್ದಿ ಹೇಳಲು ಆಗುವುದಿಲ್ಲವೇನು ಅಂತಾ ಜೋರಾಗಿ ಬಾಯಿ ಮಾಡಲು ಪ್ರಾರಂಭಿಸಿದನು. ಆಗ ನಾನು ಆತನಿಗೆ ಕಾಲು ಬಿದ್ದು ಕ್ಷಮೆ ಕೇಳುತ್ತೇನೆ, ನನ್ನ ಮಗ ಸಸಿಗಳನ್ನು ಕಿತ್ತಿದ್ದರೆ ಅವುಗಳನ್ನು ಪುನ: ಹೊಲದಲ್ಲಿ ಹಚ್ಚಿಸಿಕೊಡುತ್ತೇನೆ ದಯವಿಟ್ಟು ಗಲಾಟೆ ಮಾಡಬೇಡಾ, ಈ ಬಗ್ಗೆ ನನ್ನ ಮಗನಿಗೆ ವಿಚಾರ ಮಾಡುತ್ತೇನೆ ಅಂತಾ ಹೇಳಿದರೂ ಸಹ ಕೇಳಲಿಲ್ಲಾ. ಆತನಿಗೆ ಹಿರಿಯರನ್ನು ಕರೆಯಿಸಿ ಪಂಚಾಯತಿ ಮಾಡು ನಾನು ದಂಡವನ್ನು ಕಟ್ಟುತ್ತೇನೆ ಅಂತಾ ಕೇಳಿದರೂ ಸಹ ಕೇಳದೇ ಮಹೇಶಪ್ಪನು ನನ್ನ ಮೈಮೇಲೆ ಏರಿ ಅಂಗಿಯನ್ನು ಹಿಡಿದು ಎಳೆದಾಡಿ ಕೈಗಳಿಂದ ಬಡಿದನು. ನಾನು ಎಷ್ಟು ಅಂಗಲಾಚಿ ಬೇಡಿದರೂ ಸಹ ಮಹೇಶಪ್ಪನು ಕೇಳದೇ  ಇವತ್ತು ನಿನ್ನ ಮಗನನ್ನು ಉಳಿಸುವುದಿಲ್ಲಾ ಅಂತಾ ಬೆದರಿಕೆ ಹಾಕಿದ್ದರಿಂದ ಅವನ ಈ ವಿಪರೀತ ಒದರಾಟ ಮತ್ತು ಕಿರುಕುಳವನ್ನು ಕಂಡು ಅಲ್ಲಿದ್ದ ನನ್ನ ಮಗ ಗಣೇಶನು ಹೆದರಿಕೊಂಡು ಮನೆಯಲ್ಲಿ ಓಡಿ ಹೋಗಿ ಮೈಮೇಲೆ ಸೀಮೆ ಎಣ್ಣೆ ಸುರಿವಿಕೊಂಡು ಬೆಂಕಿ ಹಚ್ಚಿಕೊಂಡು ಚೀರಾಡುತ್ತಾ ಹೊರಗಡೆ ಓಡಿ ಬಂದನು. ಇದನ್ನು ನೋಡಿ ಪಕ್ಕದ ಮನೆಯವರಾದ ಯಂಕಪ್ಪ ತಂದೆ ಬಸಪ್ಪ, ಕುರುಬರು, 38 ವರ್ಷ ಈತನು ಬಂದು ಗಣೇಶನಿಗೆ ನೀರನ್ನು ಹಾಕಿ ಬೆಂಕಿಯನ್ನು ಆರಿಸಿದನು. ನೋಡಲಾಗಿ ಗಣೇಶನಿಗೆ ತಲೆಯಿಂದ ಪಾದದವರೆಗೆ ಸಂಪೂರ್ಣ ತೀವ್ರ ಸುಟ್ಟು ಗಾಯಗಳಾಗಿದ್ದು, ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ. ಕೂಡಲೇ ಅವನನ್ನು ಒಂದು ಆಟೋದಲ್ಲಿ ಕರೆದುಕೊಂಡು ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದೆವು. ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ಅಂಬ್ಯುಲೆನ್ಸ್ನಲ್ಲಿ ಬಳ್ಳಾರಿ ಕಳುಹಿಸಿ ಈಗ ಠಾಣೆಗೆ ಬಂದು ಈ ಹೇಳಿಕೆ ಫಿರ್ಯಾದಿಯನ್ನು ನೀಡಿರುತ್ತೇನೆ.  ಕಾರಣ ಈ ಘಟನೆಗೆ ಕಾರಣನಾದ ಮತ್ತು ನನ್ನ ಮೇಲೆ ಹಲ್ಲೆ ಮಾಡಿ, ಬೈದು, ಬೆದರಿಕೆ ಹಾಕಿರುವ ಮಹೇಶಪ್ಪ ಪೊಲೀಸ್ ಪಾಟೀಲ್ ತಂದೆ ವೀರನಗೌಡ 45 ವರ್ಷ, ಜಾತಿ: ಕುರುಬರು ಸಾ: ಭಂಡ್ರಾಳ ಈತನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:  233/2015 ಕಲಂ: 341, 323, 504, 506 ಐಪಿಸಿ ಅಡಿ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008