Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, August 20, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕನಕಗಿರ ಠಾಣೆ ಗುನ್ನೆ ನಂ. 136/2015 ಕಲಂ. 279, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.

ದಿನಾಂಕ 20-08-2015 ರಂದು ಮುಂಜಾನೆ 7-30 ಗಂಟೆಗೆ ಮೇಲ್ಕಂಡ ಫಿರ್ಯಾಧಿದಾರನು ಠಾಣೆಗೆ ಹಾಜರಾಗಿ ಗಣಕಿಕೃತ ಮಾಡಿದ ಫಿರ್ಯಾಧಿಯನ್ನು ಹಾಜರ ಪಡಿಸಿದ್ದು, ಅದರ ಸಾರಾಂಶೇನೆಂದರೆ, ದಿನಾಂಕ 19-08-2015 ರಂದು ರಾತ್ರಿ 11-00 ಗಂಟೆಯ ಸುಮಾರಿಗೆ ನಾನು ಕನಕಗಿರಿ-ಮುಸಲಾಪುರ ರಸ್ತೆಯ ಪಕ್ಕದಲ್ಲಿರುವ ಖಲೀಲ್ ಅಹ್ಮದ ಸಾಬ ಇವರ ದ್ರಾಕ್ಷಿ ತೋಟದಲ್ಲಿ ನಿಂತುಕೊಂಡಾಗ ಸಮಯದಲ್ಲಿ ಮುಸಲಾಪುರ ಕಡೆಯಿಂದ ಟಾ.ಟಾ. ಮ್ಯಾಜಿಕ್ ವಾಹನ ನಂ.ಕೆಎ-37/ಎಂ-7035 ಚಾಲಕ ಉಮೇಶ ತಂದೆ ಬಸಲಿಂಗಪ್ಪ ತೊಂಡಿಹಾಳ ಈತನು ತನ್ನ ವಾಹನವನ್ನು ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ಎದುರಗಡೆಯಿಂದ ಅಂದರೆ ಕನಕಗಿರಿ ಕಡೆಯಿಂದ ಬರುತ್ತಿದ್ದ ಬಜಾಜ ಪಲ್ಸರ್ ಮೋ.ಸೈ. ನಂ.ಕೆಎ-37/ಯು-3117 ನೇದ್ದರ ಸವಾರ ಅಬ್ದುಲ್ಸಾಬ ತಂದೆ ನಬೀಸಾಬ ಕಿರಟಗೇರಿ ಸಾ: ಕೊಪ್ಪಳ ಈತನಿಗೆ ಜೋರಾಗಿ ಟಕ್ಕರ್ ಕೊಟ್ಟು ಅಪಘಾತ ಮಾಡಿ ಚಾಲಕನು ವಾಹನವನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು, ಇದರಿಂದ ಮೋ.ಸೈ. ಸವಾರ ಅಬ್ದುಲ್ ಸಾಬ ಈತನ ತಲೆಗೆ, ಹಣೆಗೆ, ಮೂಗಿಗೆ ಭಾರಿ ಪೆಟ್ಟಾಗಿ ರಕ್ತ ಸೋರಿದ್ದು, ಬಲಗಾಲ ಮೊಣಕಾಲ ಕೆಳಗೆ, ತೊಡೆಗೆ ಮುರಿದಿದ್ದು, ಬಲಗಾಲ ಪಾದವು ಸಂಪೂರ್ಣ ಮುರಿದು ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.136/2015 ಕಲಂ 279 304 () ಐಪಿಸಿ ಹಾಗೂ 187 .ಎಂ.ವಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

0 comments:

 
Will Smith Visitors
Since 01/02/2008