Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, August 29, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 201/2015 ಕಲಂ. 78(3) Karnataka Police Act.
ದಿನಾಂಕ: 28-08-2015 ರಂದು ಸಾಯಂಕಾಲ 7-15 ಗಂಟೆಗೆ ಶ್ರೀ ಇ.ಕಾಳಿಕೃಷ್ಣ, ಪೊಲೀಸ್ ಇನ್ಸಪೆಕ್ಟರ್ ಗಂಗಾವತಿ ನಗರ ಪೊಲೀಸ್ ಠಾಣೆ ಇವರು ಒಬ್ಬ ಆರೋಪಿತನೊಂದಿಗೆ ಮೂಲ ಪಂಚನಾಮೆ, ಮುದ್ದೆಮಾಲು ಹಾಗೂ ವರದಿಯನ್ನು ಸಲ್ಲಿಸಿದ್ದು  ಸದರಿ ವರದಿಯ ಸಾರಂಶವೇನೆಂದರೆ, ಇಂದು ದಿನಾಂಕ 25-08-2015 ರಂದು 18-00 ಗಂಟೆಗೆ ಆರೋಪಿತನಾದ ಮಹ್ಮದಗೌಸ ತಂದೆ ಮೈಬೂಬಸಾಬ ಈತನು ಗಂಗಾವತಿ ನಗರದ ಇಸ್ಲಾಂಪುರದಲ್ಲಿ ಸಂಗಮೇಶ ಎಗ್ಗ್ ಸೆಂಟರ್   ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರನ್ನು ಕರೆದು 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಕೂಗುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಅವರಿಗೆ ಮಟಕಾ ನಂಬರ ಬರೆದ ಚೀಟಿ ಬರೆದುಕೊಡುತ್ತಿರುವಾಗ ಸದರಿ ವ್ಯಕ್ತಿಯ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಆರೋಪಿ ಮಹ್ಮದಗೌಸ ತಂದೆ ಮೈಬೂಬಸಾಬ ಈತನಿಂದ ಮಟಕ ಜೂಜಾಟದಿಂದ  ಸಂಗ್ರಹಿಸಿದ ನಗದು ಹಣ ರೂ. 430-00. (02) ಮಟಕಾ ನಂಬರ ಬರೆದ ಒಂದು ಚೀಟಿ. (03) ಒಂದು ಬಾಲ್ ಪೆನ್ನು ಹಾಗೂ (04) ಒಂದು ನೋಕಿಯಾ ಕಂಪನಿಯ ಮೊಬೈಲ್ ದೊರೆತಿರುತ್ತದೆ. ಸದರಿ ಮುದ್ದೇಮಾಲನ್ನು ಜಪ್ತಿ ಪಡಿಸಿದ ಬಗ್ಗೆ 6-00 ಪಿ.ಎಂ. ದಿಂದ 7-00 ಪಿ.ಎಂ.ದ ವರೆಗೆ ಪಂಚನಾಮೆಯನ್ನು ಬರೆದುಕೊಂಡು ಸದರಿಯವರ ಮೇಲೆ ಕ್ರಮ ಜರುಗಿಸಬೇಕೆಂದು ವರದಿ ನೀಡಿದ್ದು.  ಸದರಿ ಕೃತ್ಯವು ಕಲಂ: 78(III) ಕೆ.ಪಿ.ಆ್ಯಕ್ಟ್ ಅಡಿಯಲ್ಲಿ ಬರುತ್ತಿದ್ದು, ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಈ ಬಗ್ಗೆ ಪ್ರಕರಣ ದಾಖಲಿಸಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2)  ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 84/2015 ಕಲಂ. 498(ಎ), 323, 504, 506(2) ಸಹಿತ 34 ಐ.ಪಿ.ಸಿ:.
ಇಂದು ದಿನಾಂಕ 28-08-2015 ರಂದು ರಾತ್ರಿ 08-15 ಗಂಟೆಗೆ ಫಿರ್ಯಾದಿದಾರಳಾದ ಶ್ರೀಮತಿ ಜ್ಯೋತಿ ಗಂಡ ಬಸವರಾಜ ಕುಂಬಾರ ಸಾ: ಕಾಟಾಪುರ ರವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ತನಗೆ 05-04-2009 ರಂದು ಬಸವರಾಜ ಕುಂಬಾರ ಸಾ: ಕಲಾದಗಿ ಹಾ/ವ: ಶಿರಗುಪ್ಪ ಇವರ ಜೊತೆ ಮುಚಖಂಡಿ ಈರಣ್ಣ ದೇವಸ್ಥಾನದಲ್ಲಿ ಮದುವೆಯಾಗಿದ್ದು ನಂತರ ಫಿರ್ಯಾದಿದಾರಳು ಗಂಡನ ಮನೆಗೆ ನಡೆಯಲು ಹೋದಾಗ ಮನೆಯಲ್ಲಿ ಗಂಡ ಹಾಗೂ ಅತ್ತೆಯಾದ ಈರಮ್ಮ ಮತ್ತು ಗಂಡನ ಅಕ್ಕ ಲಕ್ಷ್ಮಿ, ತಂಗಿ ಸರಸ್ವತಿ ಕೂಡಿಕೊಂಡು ಹಲವಾರು ಸಾರಿ ವರದಕ್ಷಣೆ ತೆಗೆದುಕೊಂಡು ಬಾ ಅಂತಾ ಅಶ್ಲಿಲ ಪದಗಳಿಂದ ಬೈದಾಡಿದ್ದಲ್ಲದೇ 3 ತೊಲೆ ಬಂಗಾರ 2 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ತೆಗೆದುಕೊಂಡು ಬರದಿದ್ದರೆ ನಿನ್ನ ಸೀಮೆ ಎಣ್ಣೆ ಹಾಕಿ ಸುಡುತ್ತೇವೆ ಅಂತಾ ಕೈಯಿಂದ ಹೊಡೆಬಡೆ ಮಾಡಿದ್ದು ಹೀಗಾಗಿ ಗಂಡನ ಮನೆಯಿಂದ ತವರು ಮನೆಯಾದ ಕಾಟಾಪುರದಲ್ಲಿ ಬಂದು ಇದ್ದಿದ್ದು ಇರುತ್ತದೆ.  ದಿನಾಂಕ: 27-08-2015 ರಂದು ಸಾಯಾಂಕಾಲ 05-00 ಗಂಟೆಯ ಸುಮಾರಿಗೆ ಮನೆಯಲ್ಲಿ ಒಬ್ಬಳೆ ಇದ್ದಾಗ  ಈ ಮೇಲ್ಕಂಡವರಾದ ಗಂಡ ಬಸವರಾಜ ಅತ್ತೆ ಈರಮ್ಮ ನಾದಿನಿಯರಾದ ಸರಸ್ವತಿ, ಲಕ್ಷ್ಮಿ ರವರು ಕೂಡಿ ಫಿರ್ಯಾದಿಯ ತವರು ಮನೆಗೆ ಬಂದು ವರದಕ್ಷಣೆ ತರಲಿಲ್ಲ ಅಂತಾ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿ ಎಲ್ಲರೂ ಕೂದಲು ಹಿಡಿದು ಜಗ್ಗಾಡಿ 3 ತೊಲೆ ಬಂಗಾರ, 2 ಲಕ್ಷ ರೂಪಾಯಿ ತವರು ಮನೆಯಿಂದ ಇಲ್ಲದಿದ್ದರೆ ನಿನ್ನ ಸೀಮೆ ಎಣ್ಣೆ ಹಾಕಿ ಸುಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿರಿ ಅಂತಾ ಮುಂತಾಗಿ ಫಿರ್ಯಾದಿ ಇರುತ್ತದೆ.
3) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 113/2015 ಕಲಂ. 110(ಇ) & (ಜಿ) ಸಿ.ಆರ್.ಪಿ.ಸಿ:
ದಿನಾಂಕ:28-08-2015 ರಂದು 5-30 ಪಿಎಂಕ್ಕೆ ಪಿ.ಎಸ್.ಐ,ಕುಕನೂರ ಠಾಣೆರವರು ವಾಪಸ್ ಠಾಣೆಗೆ ಬಂದು ಒಬ್ಬ ಪ್ರಶಾಂತ ತಂದೆ ಕೋಟ್ರಪ್ಪ ಕರೊಗಲ್ಲ ವಯಾ:23 ವರ್ಷ, ಜಾ:ಹಡಪದ. ಸಾ: ಯಮನೂರಸ್ವಾಮಿ ದರಗಾದ ಹತ್ತಿರ, ಕುಕನೂರ ಇವನನ್ನು ವಶಕ್ಕೆ ತೆಗೆದುಕೊಂಡು ಬಂದು ಸರ್ಕಾರೀ ತರ್ಫೆ ಪಿರ್ಯಾದಿ ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ, ಇಂದು ದಿನಾಂಕ:28-08-2015 ರಂದು 5-00 ಪಿಎಂಕ್ಕೆ ಕುಕನೂರ ವಾರದ ಸಂತೆ ಪ್ರಯುಕ್ತ ಪೆಟ್ರೋಲಿಂಗ್ ಕುರಿತು ಪಿ.ಎಸ್.ಐ ಮತ್ತು ಪಿಸಿ-353 ಸಮೇತ ಠಾಣಾ ಜೀಪ್ ನಂ ಕೆ.ಎ-37 ಜಿ-427 ನೇದ್ದರಲ್ಲಿ ಠಾಣೆಯಿಂದ ಹೊರಟು ಗುದ್ನೆಪ್ಪ ಸರ್ಕಲ್ ಮುಖಾಂತರ  ಬಸ್ ನಿಲ್ದಾಣದ ಹಿಂದೆ ಯಮನೂರಸ್ವಾಮಿ ದರಗಾದ ಹತ್ತಿರ ಹೊದಾಗ 5.15 ಪಿ.ಎಮ್ ದ ಸುಮಾರಿಗೆ  ಒಬ್ಬ ವ್ಯಕ್ತಿಯು ಸಾರ್ವಜನಿಕ ರಸ್ತೆಯಲ್ಲಿ ಅಸಬ್ಯವಾಗಿ  ವರ್ತಿಸುತ್ತಿದ್ದಲ್ಲದೇ ಸದರಿಯವನು ಮಹಿಳೆಯರಿಗೆ ಮತ್ತು ಹೆಣ್ಣುಮಕ್ಕಳಿಗೆ ಕೆಟ್ಟ ದೃಷ್ಟಿಯಿಂದ ನೋಡಿ ಅಸಬ್ಯವಾಗಿ ವರ್ತಿಸುತ್ತಿದ್ದಾನೆ ಅಂತಾ ಸಾರ್ವಜನಿಕರು ಸದರಿಯವನ ಮೇಲೆ ಕೋಪಗೊಂಡು ಅವನಿಗೆ ಬೈಯುತ್ತಿರುವಾಗ ಅದೇ ವೇಳೆಗೆ ಹೋಗಿ ಸದರಿಯವನಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಪ್ರಶಾಂತ ತಂದೆ ಕೊಟ್ರಪ್ಪ ಕರೂಗಲ್ಲ ವಯ 23 ವರ್ಷ, ಜಾ: ಹಡಪದ, ಉ: ಗ್ಯಾರೇಜಿನಲ್ಲಿ ಕೆಲಸ, ಸಾ: ಯಮನೂರಸಾಬ ದರಗಾದ ಹತ್ತಿರ ಕುಕನೂರ ಅಂತಾ ತಿಳಿಸಿದ್ದು,  ಸದರಿಯವನನ್ನು ಹಾಗೇಯೆ ಬಿಟ್ಟಲ್ಲಿ ಅವನು ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರ ವಿಷಯದಲ್ಲಿ ಅಸಬ್ಯವಾಗಿ ವರ್ತಿಸಿ ಸಾರ್ವಜನಿಕ ತೊಂದರೆ ಮಾಡುವದರಿಂದ ಸಾರ್ವಜನಿಕರು ಕುಪಿತರಾಗಿ ಗ್ರಾಮದಲ್ಲಿ ಅಶಾಂತತೆ ಏರ್ಪಡುವ ಸಾಧ್ಯತೆ ಕಂಡುಬಂದದ್ದರಿಂದ ಸದರಿಯವನನ್ನು  ವಶಕ್ಕೆ ಪಡೆದುಕೊಂಡು ವಾಪಾಸ ಠಾಣೆಗೆ 5-30 ಪಿ.ಎಂ ಕ್ಕೆ ಕರೆತಂದು.ಸರ್ಕಾರೀ ತರ್ಫೆ ಪಿರ್ಯಾಧಿಯನ್ನು ನೀಡಿದ್ದು ಮುಂದಿನ ಕ್ರಮ ಜರುಗಿಸುವಂತೆ ಇದ್ದ ಪಿರ್ಯಾದಿ ಮೇಲಿಂದ  ನಾನು ಎಸ್.ಹೆಚ್.ಓ. ಹೆಚ್.ಸಿ-26, ಇಂದು ದಿನಾಂಕ:28-08-2015 ರಂದು 5-30 ಪಿಎಂಕ್ಕೆ ಕುಕನೂರ ಪೊಲೀಸ್ ಠಾಣಾ ಗುನ್ನೆ ನಂ:113/15 ಕಲಂ;110(ಇ)(ಜಿ) ಸಿ.ಅರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡುತನಿಖೆಕೈಕೊಂಡೆನು, 
4) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 223/2015 ಕಲಂ. 41(1)(ಡಿ), 102 ಸಿ.ಆರ್.ಪಿ.ಸಿ. ಮತ್ತು 98 ಕೆ.ಪಿ. ಕಾಯ್ದೆ:.

ದಿ:28-08-2015 ರಂದು ಬೆಳಗಿನಜಾವ 04-15 ಗಂಟೆಗೆ ಫಿರ್ಯಾದಿದಾರರಾದ ಹೊನ್ನಪ್ಪ ತಂದೆ ಬಸಪ್ಪ ಕನಕಗಿರಿ ಸಾ: ಬೆಳವಿನಾಳ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ಇಂದು ದಿ:28-08-2015 ರಂದು ಬೆಳಗಿನಜಾವ 03-30 ಗಂಟೆಯ ಸುಮಾರಿಗೆ ನಾನು ನಮ್ಮ ಪಂಪಸೆಟ್ದಲ್ಲಿ ಕೆಲಸ ಮುಗಿಸಿಕೊಂಡು ವಾಪಾಸ್ ಬೆಳವಿನಾಳ ಗ್ರಾಮದಲ್ಲಿರುವ ಮನೆಗೆ ಬರಲು ನಮ್ಮೂರಿನ ಸಿದ್ದಲಿಂಗಯ್ಯ ಸ್ವಾಮಿ ಕಿರಾಣಿ ಅಂಗಡಿ ಮುಂದೆ ಹೊರಟಿದ್ದಾಗ ನಾಯಿಗಳು ಒದರಾಡುತ್ತಿದ್ದವು ಆಗ ಅತ್ತ ಇತ್ತ ನೋಡಿದಾಗ ಓರ್ವ ವ್ಯಕ್ತಿ ತನ್ನ ಹೆಗಲ ಮೇಲೆ ಒಂದು ಸಿಮೆಂಟ್ ಚೀಲದಲ್ಲಿ ಏನೋ ಹೊತ್ತುಕೊಂಡು ಮೇನರೋಡ ಕಡೆಗೆ ಹೊರಟಿದ್ದನು. ಆಗ ನಾನು ಆತನಿಗೆ ನೀನು ಯಾರು ಯಾವ ಊರು ಇಲ್ಲಿಗೇಕೆ ಬಂದಿರುವೆಂದು ಕೇಳಿದಾಗ ಆತನು ಏನು ಮಾತನಾಡದೇ ಹಾಗೇಯೇ ಹೊರಟನು. ಆಗ ಆತನ ಮೇಲೆ ಸಂಶಯ ಬಂದು ನೋಡಲಾಗಿ ಆತನ ಚೀಲದಲ್ಲಿ ಕಬ್ಬಿಣದ ತುಂಡುಗಳಿದ್ದವು. ಆಗ ನಾನು ಬರ್ರೆಪ್ಪೋ ಬರ್ರಿ ಅಂತಾ ಕೂಗಾಡಿದಾಗ ನಮ್ಮೂರಿನ ಬಸವರೆಡ್ಡಿ ಮತ್ತು ಖಾದರಸಾಬ ಹೊಸೂರ ಇವರುಗಳು ಬಂದರು. ಆಗ ಆತನು ನಮ್ಮನ್ನು ನೋಡಿ ಓಡೋಡಿ ಹೊರಟು ಮುಂದೆ ರೋಡ ಹತ್ತಿರ ಹೋಗಿ ಮುಕ್ಕರಿಸಿ ಬಿದ್ದನು. ಆಗ ಅವನಿಗೆ ನಾವು ಹಿಡಿದು ವಿಚಾರಿಸಿದಾಗ ಅವನು ತನ್ನ ಹೆಸರು ಪಂಪಣ್ಣ ತಂದೆ ಇಂದ್ರಪ್ಪ ಆಗೋಲಿ. ವಯಸ್ಸು: 30 ವರ್ಷ, ಜಾ: ನಾಯಕ, ಉ: ಕೂಲಿಕೆಲಸ, ಸಾ: ಇಂದಿರಾನಗರ ತಾ: ಕೊಪ್ಪಳ ಅಂತಾ ಹೇಳಿದನು. ಆಗ ಕಬ್ಬಿಣದ ಸಾಮಾನುಗಳನ್ನು ಎಲ್ಲಿಂದ ತಂದಿರುವೆಂದು ಕೇಳಿದಾಗ ಆತನು ಎನು ಹೇಳಲಿಲ್ಲ. ಆತನು ಕಳ್ಳತನ ಮಾಡಿದ ಕಬ್ಬಿಣದ ತುಂಡುಗಳನ್ನು ತೆಗೆದುಕೊಂಡು ಹೊರಟಿರುವುದಾಗಿ ಖಚಿತವಾಯಿತು. ನಂತರ ಆತನಿಗೆ ನಾವು ಮಾಲು ಸಮೇತ ಕರೆದುಕೊಂಡು ಬಂದಿರುತ್ತೇವೆ. ಕಾರಣ ಸದರಿ ಪಂಪಣ್ಣ ತಂದೆ ಇಂದ್ರಪ್ಪ ಆಗೋಲಿ. ವಯಸ್ಸು: 30 ವರ್ಷ, ಜಾ: ನಾಯಕ, ಉ: ಕೂಲಿಕೆಲಸ, ಸಾ: ಇಂದಿರಾನಗರ ತಾ: ಕೊಪ್ಪಳ ಇತನು ಸುಮಾರು 600=00 ರೂ. ಬೆಲೆಬಾಳುವ ಕಬ್ಬಿಣದ ತುಂಡುಗಳನ್ನು ಕಳ್ಳತನ ಮಾಡಿಕೊಂಡು ಹೋಗುವಾಗ ಸಿಕ್ಕಿರುತ್ತಾನೆ. ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

0 comments:

 
Will Smith Visitors
Since 01/02/2008