Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, September 10, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 172/2015  ಕಲಂ 323, 324, 504, 506, 498(ಎ), 307 ಸಹಿತ 149  ಐ.ಪಿ.ಸಿ ಹಾಗೂ 3 & 4 ವರದಕ್ಷಿಣೆ ನಿಷೇಧ ಕಾಯ್ದೆ:.
ದಿ: 09-09-2015 ರಂದು 8-30 ಪಿ.ಎಂ. ಕ್ಕೆ ಫಿರ್ಯಾಧಿದಾರರಾದ ಶ್ರೀಮತಿ ಸೈಯ್ಯದಾ ಸಲೀಮಾ ಬೇಗಂ ಸಾ: ಗಂಗಾವತಿ ಹಾಲಿ: ಕೊಪ್ಪಳ. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನನಗೆ ನಮ್ಮ ತಂದೆ ಗಂಗಾವತಿಯ ನಿವಾಸಿಯಾದ ಸೈಯ್ಯದ ಸಾದೀಕ ಇವರ ಮಗನಾದ ಸಯ್ಯದ ಜಮೀರ ಪಾಷಾ ಇತನೊಂದಿಗೆ ದಿ: 24-05-2014 ರಂದು ಕೊಪ್ಪಳದಲ್ಲಿ ಮದುವೆ ಮಾಡಿದ್ದು, ನನಗೆ ಒಂದು ಗಂಡು ಮಗು ಜನಿಸಿದ್ದು, ನಂತರ ದಿ: 07-03-2015 ರಿಂದ ನನಗೆ ಗಂಗಾವತಿಯ 36 ನೇ ವಾರ್ಡನಲ್ಲಿರುವ ನನ್ನ ಗಂಡನ ಮನೆಯಲ್ಲಿ ನನ್ನ ಗಂಡ, ಮಾವ, ಅತ್ತೆ ನಾದಿನಿ ಮೈದುನ ಸೇರಿ ತಮ್ಮ ಬಿಸಿಜೆಸ್ ಸಲುವಾಗಿ ನನಗೆ ನನ್ನ ತವರು ಮನೆಯಿಂದ 5,00,000/- ರೂ ವರದಕ್ಷಣೆ ಹಣವನ್ನು ತೆಗೆದುಕೊಂಡು ಬರಬೇಕು ಅಂತಾ ಒತ್ತಾಯಿಸಿದ್ದು, ನಾನು ಅಸಮರ್ಥಳಾದಾಗ ನನಗೆ ಆಹಾರ ನೀರು ಸರಿಯಾಗಿ ಕೊಡದೇ ಮನೆಯಲ್ಲಿ ಕೂಡಿ ಹಾಕಿ ನನ್ನ ಮಗನಿಂದ ಬೇರ್ಪಡಿಸಿದ್ದು ಅಲ್ಲದೇ ದಿ: 08-09-2015 ರಂದು ರಾತ್ರಿ 8-00 ಗಂಟೆಗೆ ಗಂಗಾವತಿಯ ಹೆಚ್.ಆರ್.ಎಸ್. ಕಾಲೋನಿಯಲ್ಲಿರುವ ನನ್ನ ಗಂಡನ ಮನೆಯಲ್ಲಿ ಮೇಲ್ಕಾಣಿಸಿದವರು ನನಗೆ ಹಿಯಾಳಿಸಿ ಅವಾಚ್ಯವಾಗಿ ಬೈದು ಕೈ ಮತ್ತು ಕಟ್ಟಿಗೆಯಿಂದ ಥಳಿಸಿದ್ದು ಅಲ್ಲದೆ ಕಾಲಿನಿಂದ ಒದ್ದು, ಜಡೆ ಹಿಡಿದು ಜಗ್ಗಾಡಿ ನೆಲಕ್ಕೆ ಬಿಳಿಸಿ ನನ್ನ ಕುತ್ತಿಗೆಯನ್ನು ಬಲವಾಗಿ ಹಿಚುಕಿ ಕೊಲೆ ಮಾಡಲು ಯತ್ನಿಸಿದ್ದು ಅಲ್ಲದೇ ಈಕೆಯನ್ನು ಹಾಗೆಯೇ ಬಿಡಬಾರದು ಜೀವಂತವಾಗಿ ಹುಗಿದುಬಿಡಬೇಕು ಅಂತಾ ಜಿವದ ಬೆದರಿಕೆ ಹಾಕಿ ನನ್ನ ತಂದೆಯಿಂದ 5,00,000/- ರು ವರದಕ್ಷಿಣಿ ಹಣ ತೆಗೆದುಕೊಂಡು ಬಂದರೆ ಮಾತ್ರ ನಿನಗೆ ಮನೆಯಲ್ಲಿ ಸೇರಿಸಿಕೊಳ್ಳುತ್ತೇನೆ ಅಂತಾ ಮುಂತಾಗಿ ಇರುವ ದೂರಿನ ಮೇಲಿಂದ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.
2) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 62/2015  ಕಲಂ 279, 337, 338 ಐ.ಪಿ.ಸಿ:.
ದಿನಾಂಕ : 08.09.2015 ರಂದು ಬೆಳೆಗ್ಗೆ 8 ಗಂಟೆ ಸುಮಾರಿಗೆ  ಹೊಸಪೇಟ್-ಕುಷ್ಟಗಿ ಎನ್ಹೆಚ್ 50 ರಸ್ತೆಯ ಮೆಲೆ ಗುನ್ನಾಳ ಸೀಮಾದಲ್ಲಿ ಆರೋಪಿತನು ತಾನು ನಡೆಸುತ್ತಿದ್ದ ಕ್ರೊಷರ ವಾಹನ ನಂ ಕೆ ಎ: 30 ಎಂ: 5905 ನೆದ್ದನ್ನು ಹೊಸಪೇಟ್ ಕಡೆಯಿಂದ ಕುಷ್ಟಗಿ ಕಡೆಗೆ ಅತಿ ವೇಗವಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಮುಂದೆ ಹೊರಟಿದ್ದ ವಾಹನಕ್ಕೆ ಅಂತರವನ್ನು ಕಾಪಡದೆ ರಸ್ತೆಯ ಎಡಬದಿಗೆ ಹೊರಟಿದ್ದ ಪ್ಯಾಸೆಂಜರ್ ಅಟೋ ವಾಹನ ನಂ : ಕೆ.ಎ-37 ಎ-4793 ನೇದ್ದಕ್ಕೆ ಹಿಂದಿನಿಂದ ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ಸದರಿ ಅಟೋ ವಾಹನವು ಟಕ್ಕರ್ ಕೊಟ್ಟ ರಬಸಕ್ಕೆ ಒಮ್ಮಿಂದೊಮ್ಮೆಲೆ ರಸ್ತೆಯ ಮೆಲೆ ಬಲಮಗ್ಗಲಾಗಿ ಪಲ್ಟಿಯಾಗಿ ಬಿದ್ದಿದ್ದು ಇದರಿಂದ ಅಟೋದಲ್ಲಿದ್ದ ಫಿಯರ್ಾದಿ ಹಾಗೂ ಇನ್ನೋಬ್ಬ ಯಮನೂರ ಎಂಬುವನಿಗೆ ಸಾದಾ ಹಾಗೂ ಭಾರಿ ಸ್ವರೂಪದ ರಕ್ತಗಾಯ ಹಾಗೂ ಒಳಪೆಟ್ಟುಗಳಾಗಿದ್ದು ಇರುತ್ತದೆ, ಅಂತಾ ಇತ್ಯಾದಿ ಪಿರ್ಯಾಧಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 121/2015  ಕಲಂ 110 (ಇ) ಮತ್ತು (ಜಿ) ಸಿ.ಆರ್.ಪಿ.ಸಿ:.
ದಿನಾಂಕ: 09-09-2015 ರಂದು 6-15 ಪಿ.ಎಂ ಕ್ಕೆ ಪಿ.ಎಸ್.ಐ, ಕುಕನೂರ ಠಾಣೆರವರು ಠಾಣೆಗೆ ಬಂದು ಸರ್ಕಾರೀ ತರ್ಫೆ ಪಿರ್ಯಾದಿ ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ, ಇಂದು ದಿನಾಂಕ: 09-09-2015 ರಂದು ಸಾಯಂಕಾಲ 5-00 ಪಿ.ಎಂ ಕ್ಕೆ ಪಿಸಿ-353 ಸಮೇತ ಸರಕಾರಿ ಜೀಪ್ ನಂ ಕೆ.ಎ-37  ಜಿ-276 ನೇದ್ದರಲ್ಲಿ ಠಾಣೆಯಿಂದ ಹೊರಟು ಗುದ್ನೆಪ್ಪ ಸರ್ಕಲ್ ಮುಖಾಂತರ ಬಸ್ ನಿಲ್ದಾಣದ ಹತ್ತಿರ ಹೊದಾಗ 5.15 ಪಿ.ಎಮ್ ದ ಸುಮಾರಿಗೆ ಒಬ್ಬ ವ್ಯಕ್ತಿಯು ಅರೆ ಬರೆ ಬಟ್ಟೆಯಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಮಧ್ಯಪಾನ ಮಾಡಿ ಅಸಬ್ಯವಾಗಿ ವರ್ತಿಸುತ್ತಿದ್ದಲ್ಲದೇ ಸದರಿಯವನು ಯಾವ ಸೂಳೆ ಮಕ್ಕಳು ನನಗೇನು ಮಾಡುತ್ತಾರೆ, ನಾನು ಊರಲ್ಲಿ ಹೀಗೆಯೆ ಮಾಡುವವನು ನನ್ನನ್ನು ಯಾರು ಏನು ಮಾಡಿಕೊಳ್ಳಲಾಗುವದಿಲ್ಲ, ಬಂದಾದರೂ ಬರ್ರಲೇ ಅಂತಾ ದಾರಿ ಹಿಡಿದು ಹೋಗುವವರಿಗೆ ಒದರಾಡುತ್ತಿದ್ದು, ಇದರಿಂದ ಸಾರ್ವಜನಿಕರು ಕುಪಿತರಾಗಿದ್ದು ಅಷ್ಟರಲ್ಲಿ ನಾವು ಅಲ್ಲಿಗೆ ಹೋಗಿ ವಿಚಾರಿಸಲಾಗಿ ಸದರಿಯವನು ತನ್ನ ಹೆಸರು ಬಸವರಡ್ಡೆಪ್ಪ ತಂದೆ ಅಯ್ಯಪ್ಪ ಗುರಡ್ಡಿ ವಯ 54 ವರ್ಷ, ಜಾ: ರಡ್ಡಿ ಉ: ಒಕ್ಕಲುತನ ಸಾ: ನಿಟ್ಟಾಲಿ ಅಂತಾ ಹೇಳಿದ್ದು ಸದರಿಯವನು ಮಧ್ಯಪಾನ ಮಾಡಿದಂತೆ ಕಂಡುಬಂದಿದ್ದು ಅಲ್ಲದೇ ಅವನು ಬಿದ್ದು ಅಲ್ಲಲ್ಲಿ ಗಾಯಗಳಾಗಿದ್ದು ಅವನಿಗೆ ಹಾಗೇಯೆ ಬಿಟ್ಟಲ್ಲಿ ಸಾರ್ವಜನಿಕ ಶಾಂತತೆ ಹದಗೆಟ್ಟು ಅಶಾಂತತೆ ಏರ್ಪಡುವ ಸಾಧ್ಯತೆ ಕಂಡುಬಂದದ್ದರಿಂದ ಸದರಿಯವನನ್ನು ವಶಕ್ಕೆ ಪಡೆದು ಸರಕಾರಿ ಆಸ್ಪತ್ರೆಯಲ್ಲಿ ಉಪಚರಿಸಿ ಆತನ ಸಂಬಂದಿಕರೊಂದಿಗೆ ಕಳಿಸಿಕೊಟ್ಟಿದ್ದು, ಕಾರಣ ಸದರಿಯವನಿಂದ ಗ್ರಾಮದಲ್ಲಿ ಅಹಿತಕರ ಘಟನೆಗಳು ಜರುಗುವ ಸಾಧ್ಯತೆಗಳು ಕಂಡು ಬಂದಿದ್ದರಿಂದ ಮುಂಜಾಗ್ರತೆ ಕುರಿತು ಸದರಿಯವನ ವಿರುದ್ಧ ಕ್ರಮ ಜರುಗಿಸುವಂತೆ ಇದ್ದ ಪಿರ್ಯಾದಿ ಮೇಲಿಂದ  ನಾನು ಎ.ಎಸ್.ಐ(ವೈ) ಇಂದು ದಿನಾಂಕ: 09-09-2015 ರಂದು    6-15  ಪಿಎಂಕ್ಕೆ ಕುಕನೂರ ಪೊಲೀಸ್ ಠಾಣಾ ಗುನ್ನೆ ನಂ:121/15 ಕಲಂ;110(ಇ)(ಜಿ) ಸಿ.ಅರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು,
4) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 122/2015  ಕಲಂ. 447, 504, 506 ಸಹಿತ 34 ಐ.ಪಿ.ಸಿ:.

ದಿನಾಂಕ:09-09-2015 ರಂದು 8-00 ಪಿಎಂಕ್ಕೆ ಪಿರ್ಯಾದಿದಾರ ಸಿದ್ದಲಿಂಗಪ್ಪ ಲಂಗ್ಟಿ, ಸಾ:ಕುಕನೂರ ಇವರು ಠಾಣೆಗೆ ಹಾಜರಾಗಿ, ಒಂದು ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ,ಪಿರ್ಯಾದಿದಾರ ಸರ್ವೇ ನಂ:100/ಇ ನೇದ್ದರ  ಮಾಲೀಕರಿದ್ದು, ನಿನ್ನೆ ದಿನಾಂಕ:08-09-2015 ರಂದು 11-30 ಎಎಂಕ್ಕೆ ರೆಡಿಮೇಡ್ ಕಾಂಕ್ರೀಟ್ ತುಂಬಿದ ಗಾಡಿ ನಂ:ಕೆಎ-28 ಎನ್-6682 ನೇದ್ದನ್ನು ತೆಗೆದುಕೊಂಡು ಪಿರ್ಯಾದಿದಾರರ ಆಸ್ತಿಯಲ್ಲಿ ಅತೀಕ್ರಮಿಸಿ, ಕಾಂಕ್ರೀಟ್ ಕೆಡವಿ, ಈ ರೋಡು ಎತ್ತರಕ್ಕೆ ಇರುತ್ತದೆ. ಇಲ್ಲಿ ಇಳಿಜಾರು ಮಾಡುತ್ತೇವೆ ಅಂತಾ ಅಂದಿ ಅದಕ್ಕೆ ನಮ್ಮ ಆಸ್ತಿಯಲ್ಲಿ ಅತೀಕ್ರಮಿಸಬೇಡಿರಿ ಅಂತಾ ವಿನಂತಿಸಿದರೂ ಕೂಡಾ ಅದನ್ನೇನು ಕೇಳುತ್ತೀ ಬೋಸುಡಿ ಮಗನೇ ನೀನ್ಯಾರು, ಅಂತಾ ಮುಂತಾಗಿ ಅಂದಿದ್ದು ಆ ರೀತಿ ಅಂದಿದ್ದನ್ನು ಕೇಳಿದ ಜಾಕೀರ್ ಹುಸೇನ್ ಮತ್ತು ಸಂತೋಷ  ಹಡಪದ ಎನ್ನುವವರಿಗೂ ಸಹ ಚಾಲಕನು ಆವಾಚ್ಯವಾಗಿ ಬೈಯ್ದಾಡಿದ್ದು, ಅಲ್ಲದೇ, ಜೀವದ ಬೆದರಿಕೆ ಹಾಕಿರುತ್ತಾನೆ.  ಕಾರಣ, ನ್ಯಾಯಾಲಯದ ಆದೇಶ ಧಿಕ್ಕರಿಸಿ, ಆವಾಚ್ಯ ಶಬ್ಧಗಳಿಂದ ಬೈಯ್ಯುತ್ತಾ ಜೀವದ ಬೆದರಿಕೆ ಹಾಕಿದವರ ಮೇಲೆ ಹಾಗೂ ದುರುದ್ದೇಶಕವಾಗಿ ಮೇಲಿಂದ ಮೇಲೆ ಲುಕಸಾನು ಮಾಡುತ್ತಿರುವ ಗುತ್ತಿಗೆದಾರ ಮತ್ತು ಎ.ಇ.ಇ. ಮೇಲೆ & ಇನ್ನೀತರರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು  ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.

0 comments:

 
Will Smith Visitors
Since 01/02/2008