ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 173/2015 ಕಲಂ 323, 324, 307, 50, 506, 109, 198(ಎ) ಸಹಿತ 149 ಐ.ಪಿ.ಸಿ
ಹಾಗೂ 3 & 4 ವರದಕ್ಷಿಣೆ ನಿಷೇಧ ಕಾಯ್ದೆ:.
ದಿ: 10-09-2015 ರಂದು ಮಧ್ಯಾಹ್ನ 2-30 ಗಂಟೆಗೆ ಫಿರ್ಯಾಧಿ ಶೇಖ ಸಲ್ಮಾ ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನನಗೆ ದಿ: 02-03-14 ರಂದು ನನ್ನ ತಂದೆತಾಯಿ ಗದಗ ಬೆಟಗೇರಿ ನಗರದ ದಾವುದ್ ಮುನ್ನಾ ಅಣ್ಣಿಗೇರಿ ಇವರ ಮಗನಾದ ದಾವಲವಲಿ ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಮದುವೆ ಕಾಲಕ್ಕೆ 15 ಲಕ್ಷ ವರದಕ್ಷಿಣೆ 33 ತೊಲೆ ಬಂಗಾರದ ಆಭರಣಗಳು, 2 ಲಕ್ಷ ರೂ ಭಟ್ಟೆ ಬರಿಗಳನ್ನು ವರದನಿಗೆ ಕೊಟ್ಟಿದ್ದು, ನಂತರ ನನ್ನ ಗಂಡ ಅತ್ತೆ ಮಾವ ನಾದಿನಿಯರು ಕೂಡಿಕೊಂಡು ಇನ್ನೂ 15 ಲಕ್ಷ ರೂ ವರದಕ್ಷಿಣಿ ಹಾಗೂ ಎಲ್.ಈ.ಡಿ. ಟಿ.ವಿ. ಹಾಗೂ ಕಾರನ್ನು ತೆಗೆದುಕೊಂಡು ಬರಬೇಕು ಅಂತಾ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು, ಅಲ್ಲದೇ ನಾನು ಆತ್ಮ ಹತ್ಯೆ ಮಾಡಿಕೊಳ್ಳುವುದಕ್ಕೆ ಪ್ರಚೋದನೆ ಮಾಡಿದ್ದು ನಿನ್ನ ತಂದೆಯ
ಹೆಸರಿನಲ್ಲಿರುವ ಆಸ್ತಿಯನ್ನು ಮಾರಿ ಪೆಟ್ರೊಲ್ ಬಂಕ್ ಹಾಕಿಸಿಕೊಡುವಂತೆ ಒತ್ತಾಯಿಸಿದ್ದಲ್ಲದೆ ದಿ: 19-07-15 ರಂದು ಕೊಪ್ಪಳದಲ್ಲಿ ಗಂಡ ಮಾವ ಅತ್ತೆ ನಾದನಿಯರು ಕೂಡಿಕೊಂಡು ಬಂದು ನನಗೆ ಕುತ್ತಿಗೆಗೆ ಕೈ ಹಾಕಿ ನಿನಗೆ ಮುಗಿಸಿ ಬಿಡುತ್ತೇನೆ ಅಂತಾ ಜೀವ ಬೆದರಿಕೆ ಹಾಕಿ ಹೊಡಿಬಡಿ ಮಾಡಿ ಸಾಯಿಸಲೆಂದು
ಕಟ್ಟಿಗೆಯಿಂದ ಹೊಡೆಯಲು ಪ್ರಯತ್ನಿಸಿದ್ದು ಇರುತ್ತದೆ ಅಂತಾ ಇರುವ ಗಣಕೀಕೃತ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 283/2015 ಕಲಂ 279, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
ದಿನಾಂಕ:- 10-09-2015 ರಂದು ಸಂಜೆ 7:00 ಗಂಟೆಗೆ ಗಂಗಾವತಿಯ ಶ್ರೀ ಮಲ್ಲಿಕಾರ್ಜುನ ನರ್ಸಿಂಗ್ ಹೋಮನಿಂದ
ಎಂ.ಎಲ್.ಸಿ. ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಶ್ರೀ ಮರಿಶಾಂತಯ್ಯ ತಂದೆ ಕಂತಯ್ಯ
ಹಿರೇಮಠ, ವಯಸ್ಸು 40 ವರ್ಷ, ಜಾತಿ: ಜಂಗಮರು ಉ: ಒಕ್ಕಲುತನ ಸಾ: ಆಚಾರ ನರಸಾಪೂರು ತಾ: ಗಂಗಾವತಿ ತಮ್ಮ ನುಡಿ ಹೇಳಿಕೆ
ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ಇಂದು ದಿನಾಂಕ:- 10-09-2015
ರಂದು ಮಧ್ಯಾಹ್ನ 1:20 ಗಂಟೆಯ ಸುಮಾರಿಗೆ ನಾನು ಮತ್ತು ಕಂತೆಪ್ಪ ತಂದೆ ಸಣ್ಣ ಕಂತೆಪ್ಪ ಹಣವಾಳ, ವಯಸ್ಸು 51 ವರ್ಷ, ಜಾತಿ: ಲಿಂಗಾಯತ ಉ:
ಒಕ್ಕಲುತನ ಸಾ: ಆಚಾರ ನರಸಾಪೂರು ಇಬ್ಬರೂ ಕೂಡಿಕೊಂಡು ವೈಯಕ್ತಿಕ ಕೆಲಸದ ನಿಮಿತ್ಯ ಅರಳಹಳ್ಳಿಗೆ
ಕಂತೆಪ್ಪನ ಹೋಂಡಾ ಶೈನ್ ಮೋಟಾರ ಸೈಕಲ್ ನಂಬರ್: ಕೆ.ಎ-37/ ಡಬ್ಲ್ಯೂ-0273 ನೇದ್ದರಲ್ಲಿ ಹೋಗುತ್ತಿರುವಾಗ
ಕಂತೆಪ್ಪನು ಮೋಟಾರ ಸೈಕಲ್ ನಡೆಯಿಸುತ್ತಿದ್ದು, ನಾನು ಹಿಂಭಾಗದಲ್ಲಿ ಕುಳಿತಿದ್ದೆನು. ನಾವು ಗಂಗಾವತಿ-ಕನಕಗಿರಿ ಮುಖ್ಯ ರಸ್ತೆಯಲ್ಲಿ
ಕೇಸರಹಟ್ಟಿ ಸೀಮಾದಲ್ಲಿ ಪೆಟ್ರೋಲ್ ಬಂಕ್ ಹತ್ತಿರ ಹೋಗುತ್ತಿರುವಾಗ ಪೆಟ್ರೋಲ್ ಬಂಕ್ ನಿಂದ ಹಿರೋ
ಮೋಟಾರ ಸೈಕಲ್ ನಂ: ಕೆ.ಎ-37/ ವೈ-4535 ನೇದ್ದರ ಚಾಲಕನು ಅತೀ
ವೇಗವಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲ್ ಗೆ
ಟಕ್ಕರ್ ಕೊಟ್ಟು ಅಪಘಾತ ಮಾಡಿದನು. ಇದರಿಂದ ನನ್ನ ಬಲಗಾಲ ಮೀನಗಂಡದ ಹತ್ತಿರ ತೀವ್ರ
ಒಳಪೆಟ್ಟು, ಬಲ ಭುಜದ ಹತ್ತಿರ ತೆರೆಚಿದ
ಗಾಯ ಹಾಗೂ ಬಲಗಡೆ ಹಣೆಗೆ ತೆರೆಚಿದ ಗಾಯವಾಯಿತು. ಕಂತೆಪ್ಪನಿಗೆ ತಲೆಯ ಹಿಂಭಾಗದಲ್ಲಿ
ತೀವ್ರ ಒಳಪೆಟ್ಟಾಗಿದ್ದು ಮತ್ತು ಸೊಂಟಕ್ಕೆ ಒಳಪೆಟ್ಟಾಗಿ ವಾಂತಿ ಮಾಡಿಕೊಂಡಿದ್ದು, ನಂತರ ಗಂಗಾವತಿಯ ಶ್ರೀ ಮಲ್ಲಿಕಾರ್ಜುನ ನರ್ಸಿಂಗ್ ಹೋಮಗೆ
ದಾಖಲಾಗಿದ್ದು, ಕಂತೆಪ್ಪನಿಗೆ ಹೆಚ್ಚಿನ
ಚಿಕಿತ್ಸೆಗಾಗಿ ಬಳ್ಳಾರಿಗೆ ಕಳುಹಿಸಿದ್ದು ಇರುತ್ತದೆ. ಅಪಘಾತ ಮಾಡಿದ ಮೋಟಾರ ಸೈಕಲ್
ಚಾಲಕನು ತನ್ನ ಮೋಟಾರ ಸೈಕಲ್ ನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಕಾರಣ ಈ
ಅಪಘಾತ ಮಾಡಿದ ಹಿರೋ ಮೋಟಾರ ಸೈಕಲ್ ನಂ: ಕೆ.ಎ-37/ ವೈ-4535 ನೇದ್ದರ ಚಾಲಕನ ವಿರುದ್ಧ
ಕಾನೂನು ಕ್ರಮ ಜರುಗಿಸಲು ವಿನಂತಿ." ಅಂತಾ ನೀಡಿದ ಹೇಳಿಕೆ ಪಡೆದುಕೊಂಡು ಪ್ರಕರಣ ದಾಖಲು ಮಾಡಿ ತನಿಖೆ
ಕೈಗೊಳ್ಳಲಾಯಿತು.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 156/2015 ಕಲಂ ಮನುಷ್ಯ ಕಾಣೆ:.
ದಿನಾಂಕ:10-09-2015 ರಂದು ರಾತ್ರಿ 8-30 ಗಂಟೆಗೆ ಪಿರ್ಯಾದಿದಾರರಾದ ಯಮನಪ್ಪ ತಾಯಿ ಕೆಂಚವ್ವ ಗಡಗಿ ವಯಾ 60 ವರ್ಷ ಜಾ:ಹಿಂದೂ ಮಾದಿಗ ಉ: ಕೂಲಿಕೆಲಸ ಸಾ:ಗುಮಗೇರಾ
ತಾ:ಕುಷ್ಟಗಿ ರವರು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿ ಸಲ್ಲಿಸಿದ್ದರ ಸಾರಾಂಶ ವೆನೆಂದರೆ ಪಿರ್ಯಾದಿಗೆ ಒಟ್ಟು
3 ಜನ ಮಕ್ಕಳು ಇದ್ದು 1] ಮಹಾಲಿಂಗಪ್ಪ ವಯಾ 36 ವರ್ಷ 2] ಶಿವಾನಂದಪ್ಪ ವಯಾ 32 ವರ್ಷ & 3]
ನೀಲವ್ವ ವಯಾ 28 ವರ್ಷ ಹಿಗೇ ಇದ್ದು ಹಿರಿಯ ಮಗ ಬೆಂಗಳೂರಿನಲ್ಲಿ ಶಿಕ್ಷಕನಾಗಿರುತ್ತಾನೆ. ಮಗಳು
ನೀಲವ್ವಳನ್ನು ನಂದಾಪೂರ ಗ್ರಾಮದ ಯಮನಪ್ಪರವರಿಗೆ ಮದುವೆ ಮಾಡಿಕೊಟ್ಟಿರುತ್ತೇವೆ. ನನ್ನ 2 ನೇ
ಮಗನಾದ ಶಿವಾನಂದಪ್ಪ ಈತನು ಇತ್ತಿತ್ತಲಾಗಿ ಮಾನಸಿಕವಾಗಿ ಅಶ್ವಸ್ಥವಾಗಿದ್ದು ಈತನನ್ನು ಮಾನಸಿಕ
ಆಸ್ಪತ್ರೆ ಧಾರವಾಡಕ್ಕೆ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದು ಹಾಗೂ ಮನೆಯಲ್ಲಿ ಆಗಾಗ ಒಮ್ಮಲೇ
ಸಿಟ್ಟಿಗೆ ಬಂದು ಮನಬಂದಂತೆ ಮಾತಾನಾಡುತ್ತಾ ಬೈದಾಡುತ್ತಿದ್ದನು. ದಿನಾಂಕ;05-09-2015 ರಂದು
ಮದ್ಯಾಹ್ನ 01-00 ಗಂಟೆಯ ಸುಮಾರಿಗೆ ಮನೆಯಲ್ಲಿ ನನಗೂ ಮತ್ತು ತನ್ನ ಹೆಂಡತಿಯಾದ ಅಂಬಿಕಾ ಈಕೆಗೆ
ಹೇಳದೇ ಕೇಳದೇ ಹೋಗಿದ್ದು ಇಲ್ಲಿಯವರೆಗೂ ಮನೆಗೆ ಬಂದಿರುವುದಿಲ್ಲಾ. ಹಾಗೂ ನಾನು ನನ್ನ ಮಗನಾದ
ಮಹಾಲಿಂಗಪ್ಪನಿಗೆ ವಿಷಯ ತಿಳಿಸಿ ಆತನು ಸಹ ಬೆಂಗಳೂರಿನಲ್ಲಿ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ.
ಮತ್ತು ಸಂಬಂದಿಕರಾದ ಕೊಪ್ಪಳ, ಕಾರವಾರ ಮತ್ತು ಕುಷ್ಟಗಿ ಸುತ್ತಾ ಮುತ್ತಾ ಎಲ್ಲಾ ಕಡೆಗೂ
ಹುಡುಕಿದರು ಸಿಕ್ಕಿರುವುದಿಲ್ಲಾ. ಪಿರ್ಯಾಧಿಯ ಮಗನ ಚಹರೆ ಗುರುತು ಈ ಕೆಳಗಿನಂತೆ ಇರುತ್ತದೆ.
ಎತ್ತರ 5 ಪೀಟು 3 ಇಂಚು, ಸದೃಡವಾದ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ, ಉದ್ದನೇಯ
ಮೂಗು, ತಿಳಿ ಕಂದು ಬಣ್ಣದ ಶರ್ಟ, ಕಪ್ಪು ಬಣ್ಣದ ಪ್ಯಾಂಟ, ಕನ್ನಡ ಮಾತನಾಡುತ್ತಾನೆ. ಕೊರಳಲ್ಲಿ
ಬೆಳ್ಳಿಯಂತಹ ಬಿಳಿ ಬಣ್ಣದ ಚೈನು ಇರುತ್ತದೆ. ಸದರಿಯವನನ್ನು ಪತ್ತೆ ಮಾಡಿ ಕೊಡಲು ವಿನಂತಿ. ಅಂತಾ
ಮುಂತಾಗಿ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ.
0 comments:
Post a Comment