ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 202/2015
ಕಲಂ 336, 338 ಐ.ಪಿ.ಸಿ:.
ಇಂದು ದಿನಾಂಕಃ-08-092015
ರಂದು ರಾತ್ರಿ 9-50 ಗಂಟೆಗೆ ಪಿರ್ಯಾದಿದಾರರಾದ . Mukesh Gupta s/o
Mangilal Gupta R/o R.G Road Karatagi Tq- Gangavati ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿಯನ್ನು ಹಾಜರುಪಡಿಸಿದ್ದು ಸದರಿ ಪಿರ್ಯಾದಿಯ ಸಾರಾಂಶವೆನಂದರೆ ನಾನು ಈಗ್ಗೆ ಸುಮಾರು
13 ವರ್ಷಗಳ ಹಿಂದೆ ಗುಜರಾತ್ ರಾಜ್ಯದ ಡಿಶಾ ಗ್ರಾಮದ ಭಕ್ತಿರಾಮ ಇವರ ಮಗಳಾದ ರೇಖಾ ದೇವಿ ಇವಳನ್ನು ಮದುವೆ ಮಾಡಿಕೊಂಡಿದ್ದು ಇವರಿಗೆ ಇಬ್ಬರು ಮಕ್ಕಳು
1) ರಿತಿಕ್ , 12 ವರ್ಷ 2) ಪ್ರೀನ್ಸ್ 10 ವರ್ಷ, ಅಂತಾ ಇರುತ್ತಾರೆ. ನಾವು ಗಂಡ ಹೆಂಡತಿ ಕುಟುಂಬ ಯೋಜನೆಯ ಪ್ರಕಾರ ನಮಗೆ ಪರಿಚಯಸ್ಥರಾದ ಡಾ. ಕೆ. ವಿರಣ್ಣ ಉಪ್ಪಾಳ, ನಿವೃತ್ತ ಸರಕಾರಿ ವೈದ್ಯಾಧಿಕಾರಿಗಳು ಇವರು ಖಾಸಗಿ ಆಸ್ಪತ್ರೆಯಾದ ಕಾರಟಗಿಯಲ್ಲಿ ದಿನಾಂಕಃ-15-06-2015 ರಂದು ನಾನು ಮತ್ತು ನನ್ನ ಹೆಂಡತಿ ರೇಖಾದೇವಿ ಹಾಗೂ ನನ್ನ ಸಹೋದರ ಹಂಸರಾಜ ಕೂಡಿ ಡಾ. ವೀರಣ್ಣ ಇವರು ಕೆಲಸ ಮಾಡುವ ಆಸ್ಪತ್ರೆಯಾದ ಹಳೆ ಬಸ್ ನಿಲ್ದಾಣದ ಹತ್ತಿರ ಇರುವ ಅಮೃತ ಪಾಲಿ ಕ್ಲೀನಿಕ್ ದಲ್ಲಿ ಬೆಳಿಗ್ಗೆ 11-00 ಗಂಟೆಗೆ ಡಾ. ವೀರಣ್ಣ ಇವರಿಗೆ ವಿಚಾರಿಸಲಾಗಿ ತಾನು ರೇಖಾ ದೇವಿ ಈಕೆಗೆ ಮಕ್ಕಳ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡುವುದಾಗಿ ಹೇಳಿ ನನ್ನ ಹೆಂಡತಿಯನ್ನು ಅಪರೇಷನ್ ಕೋಠಡಿಗೆ ಕರೆದುಕೊಂಡು ಹೋಗಿದ್ದರು ಸದರಿ ವೀರಣ್ಣ ಡಾಕ್ಟರ್ ಈತನು ನನ್ನ ಹೆಂಡತಿಗೆ ಸರಿಯಾಗಿ ಲಕ್ಷ್ಯ ವಹಿಸಿ ಸಂತಾನ ಹರಣ ಚಿಕಿತ್ಸೆ ಮಾಡದೇ ನಿರ್ಲಕ್ಚತನದಲ್ಲಿ ನನ್ನ ಹೆಂಡತಿಯ ಅನ್ನನಾಳದ ಕರುಳನ್ನು ಕತ್ತರಿಸಿ ಅಪರೇಷನ ಮಾಡಿರುತ್ತೇನೆ ಅಂತಾ ಹಾಗೆ ನಮಗೆ ಮನೆಗೆ ಕಳುಹಿಸಿದ್ದನು ನಂತರ ನನ್ನ ಹೆಂಡತಿಗೆ ಮನೆಯಲ್ಲಿ ತುಂಬಾ ತ್ರಾಸ್ ಆಗಿದ್ದರಿಂದ ನನ್ನ ಹೆಂಡತಿಯನ್ನು ಕೂಡಲೆ ಗಂಗಾವತಿ ಸೋಮರಾಜ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ನಮಗೆ ವಿಷಯ ಗೊತ್ತಾಗಿ ಅಲ್ಲಿ ನಾವು ನನ್ನ ಹೆಂಡತಿಗೆ ಚಿಕಿತ್ಸೆ ಮಾಡಿ ನಂತರ ಅಹಮ್ಮದಾಬಾದಿನ ಖೈಜಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಮಾಡಿಸಿ ನನ್ನ ಹೆಂಡತಿಯನ್ನು ಆಕೆಯ ತವರು ಮನೆಯಲ್ಲಿ ಬಿಟ್ಟು ಈಗ ತಡವಾಗಿ ಬಂದು ದೂರು ನೀಡುತ್ತಿದ್ದೇನೆ ಕಾರಣ ನನ್ನ ಹೆಂಡತಿಗೆ ನಿರ್ಲಕ್ಷತೆ ವಹಿಸಿ ಅಪರೇಷನ್ ಮಾಡಿದ ಡಾ. ವೀರಣ್ಣ ಉಪ್ಪಳ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 120/2015 ಕಲಂ 279, 337, 338 ಐ.ಪಿ.ಸಿ ಹಾಗೂ 187 ಐ.ಎಂ.ವಿ. ಕಾಯ್ದೆ:.
ದಿನಾಂಕ:08-09-2015 ರಂದು 12-30 ಪಿಎಂಕ್ಕೆ ಸಾರ್ವಜನಿಕರು ಫೋನ್ ಮಾಡಿ ಬಾನಾಪುರ ಕ್ರಾಸ್ ಹತ್ತಿರ
ರಸ್ತೆ ಅಪಘಾತವಾದ ಬಗ್ಗೆ ಮಾಹಿತಿ ತಿಳಿಸಿದ ಮೇರೆಗೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ , 12-45 ಪಿಎಂದಿಂದ 1-30 ಪಿಎಂದವರೆಗೆ ಫಿರ್ಯಾದಿದಾರನಾದ ಪ್ರಕಾಶ ತಂದೆ ಜಂಬುನಾಥ ನೇಗಿಗೌಡ್ರ ಸಾ,ಹಗರಿಬೊಮ್ಮನಹಳ್ಳಿ ಹಾ/ವ/ ಕುಕನೂರ ಇವರು ನೀಡಿದ ಹೇಳಿಕೆ ಪಿರ್ಯಾದಿಯನ್ನು ಸರಕಾರಿ ಜಿಲ್ಲಾ ಆಸ್ಪತ್ರೆ
ಕೊಪ್ಪಳದಲ್ಲಿ ಹೇಳಿ ಪಡೆದುಕೊಂಡಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ;08-09-2015 ರಂದು 10.30 ಎ.ಎಂ.ಕ್ಕೆ ಫಿರ್ಯಾದಿದಾರನು ಮತ್ತು
ಮಾಲಿಕರಾದ ಚಂದ್ರು ಕಾಳಾಚಾರ್ ಇಬ್ಬರೂ ಸೇರಿ ತಮ್ಮ ಚಂದ್ರು ಚಲಾಯಿಸುತ್ತಿದ್ದ ಸ ಮೋ: ಸೈಕಲ್ ನಂ:ಕೆಎ-37 ಕ್ಯೂ-9458 ನೇದ್ದರ ಮೇಲೆ ಕುಕನೂರಿಂದ ಕೊಪ್ಪಳಕ್ಕೆ ಬೇಕರಿ ಮಾಲು ತರಲು ಹೊರಟು
ಬಾನಾಫುರ ಐ.ಬಿ ಮುಂದಿನ ಕೊಪ್ಪಳಕ್ಕೆ ಹೊಗುವ ಕೊಪ್ಪಳ-ಗದಗ ಎನ್.ಹೆಚ್.63 ರಸ್ತೆಯ ಮೇಲೆ ಬಾನಾಪೂರ ಸೀಮಾದಲ್ಲಿ ಐ.ಬಿ ಮುಂದಿನ ತಿರುವಿನ ಹತ್ತಿರ ಹೋರಟಾಗ ಅದೆ ವೇಳೆಗೆ ಎದುರು ಗಡೆಯಿಂದ
ಅಂದರೆ ಕೊಪ್ಪಳ ಕಡೆಯಿಂದ ಆರೋಪಿತನು ತಾನು ನಡೆಸುತ್ತಿದ್ದ ಕಾಯಿಪಲ್ಲೆ ತುಂಬಿದ ಆಪೇ ಟಾಂ.ಟಾಂ ನಂ: ಕೆ,ಎ,26/ಎ 5161 ನೇದ್ದನ್ನು ಅತೀ ವೇಗದಿಂದ
ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ಹಾಗೆ ನಡೆಸಿಕೊಂಡು ಬಂದವನೇ ಫಿರ್ಯಾದಿ ಕುಳಿತ
ಹಾಗೂ ಚಂದ್ರು ಕಾಳಾಚಾರ್ ನಡೆಸುತ್ತಿದ್ದ ಮೋ.ಸೈ ಗೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ್ದರಿಂದ ಪಿರ್ಯಾದಿ ಮತ್ತು
ಚಂದ್ರು ಇವರಿಗೆ ಭಾರೀ ಸ್ವರೂಪದ ಗಾಯಗಳಾಗಿದ್ದು, ಅಲ್ಲದೇ, ಆರೋಪಿತನ ಟಾಂಟಾಂದಲ್ಲಿದ್ದ ದಾವಲಸಾಬ ಇವನಿಗೆ ಸಾದಾಸ್ವರೂಪದ ಗಾಯಗಳಾಗಿದ್ದು, ಅಪಘಾತಪಡಿಸಿದ ನಂತರ ಅರೋಪಿತನು ವಾಹನ ಬಿಟ್ಟು ಓಡಿಹೋಗಿದ್ದು, ಕಾರಣ, ಅವನ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ
ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.
0 comments:
Post a Comment