ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 203/2015
ಕಲಂ 78(3) Karntaka Police Act & 420 IPC.
ದಿನಾಂಕ 11-09-2015 ರಂದು ಬೆಳಿಗ್ಗೆ
10-15 ಗಂಟೆಗೆ ಶ್ರೀ. ರಾಮಣ್ಣ ಪಿ.ಎಸ್.ಐ. ಗಂಗಾವತಿ ನಗರ ಠಾಣೆ ರವರು ಹಾಜರಾಗಿ ಮಟ್ಕಾ ಜೂಜಾಟದ ಮೂಲ
ಪಂಚನಾಮೆ ಮತ್ತು ವರದಿಯನ್ನು ಹಾಜರುಪಡಿಸಿದ್ದು ಇದರ ಸಾರಾಂಶವೇನೆಂದರೆ, ದಿನಾಂಕ 11-09-2015 ರಂದು ಮಾನ್ಯ
ಡಿ.ಎಸ್.ಪಿ. ಸಾಹೇಬರ ಮಾರ್ಗದರ್ಶನದಲ್ಲಿ ಬಸವಣ್ಣ ಕ್ಯಾಂಪಿನಲ್ಲಿರುವ ಸತ್ಯಪ್ಪ ಇವರ ಮನೆಯ ಹತ್ತಿರ
ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮೋಸಮಾಡುವ ಉದ್ದೆಶದಿಂದ ಮಟಕಾ
ಜೂಜಾಟದಲ್ಲಿ ತೊಡಗಿದ್ದ ಬಗ್ಗೆ ಖಚಿತವಾದ ಬಾತ್ಮಿ ಬಂದ ಮೇರೆಗೆ ಪಂಚರ ಸಮಕ್ಷಮದಲ್ಲಿ 8-30 ಎ.ಎಂ. ಕ್ಕೆ ದಾಳಿಮಾಡಿದ್ದು ಮಟಕಾದ ನಂಬರುಗಳನ್ನು ಬರೆದುಕೊಡುತ್ತಿದ್ದ ಆರೋಪಿ ಮತ್ತು ಮಟಕಾದ
ಬುಕ್ಕಿಯಾದ 01] ಸತ್ಯಪ್ಪ ತಂದೆ ವೆಂಕಣ್ಣ ಈಳಿಗೇರ, ವಯಾ 58 ವರ್ಷ ಜಾತಿ: ಈಡಿಗ, ಸಾ: ಬಸವಣ್ಣ ಕ್ಯಾಂಪ ಇತನನ್ನು ದಸ್ತಗಿರಿ ಮಾಡಿಕೊಂಡಿದ್ದು
ಸದರಿಯವನಿಂದ ಮಟಕಾದ ನಂಬರುಗಳನ್ನು ಬರೆದ 6 ಪಟ್ಟಿ ಒಂದು ಬಾಲ್ ಪೆನ್ನು
ಮಟಕಾದ ಹಣ 40,000-00 ರೂಪಾಯಿಗಳನ್ನು
ವಶಪಡಿಸಿಕೊಂಡಿದ್ದು ಅಲ್ಲದೇ ಬರೆದಿರುವ ಮಟಕಾದ ಪಟ್ಟಿಯನ್ನು ಮತ್ತು ಹಣವನ್ನು ಕೊಡಲು ಬಂದಿದ್ದ 02] ಬಸವರಾಜ ವಯಾ
30 ವರ್ಷ ಜಾತಿ: ಲಿಂಗಾಯತ್ ಸಾ: ಕ್ಯಾನಾಲ್ ಹತ್ತಿರ ಜಾಳಿಹಾಳ ಕ್ಯಾಂಪ ತಾ: ಸಿಂಧನೂರ 03] ವಿರುಪನಗೌಡ
ವಯಾ 55 ವರ್ಷ ಜಾತಿ: ಲಿಂಗಾಯತ್ ಸಾ: ಬಸಾಪೂರ, ತಾ:ಸಿಂಧನೂರ ಇವರುಗಳು ಓಡಿ ಹೋಗಿದ್ದು ಸದರಿ ಮಟಕಾ
ಸಾಮಾಗ್ರಿಗಳನ್ನು ಪಂಚರ ಸಮಕ್ಷಮ ಪಂಚಾನಾಮೆಯನ್ನು ಇಂದು ದಿನಾಂಕ 11-09-2015 ರಂದು
ಮುಂಜಾನೆ 8-30 ಗಂಟೆಯಿಂದ 9-30 ಗಂಟೆಯವರೆಗೆ
ಪೂರೈಸಿ ಮಟಕಾದ ಸಾಮಾಗ್ರಿಗಳನ್ನು ಹಾಗೂ ಒಬ್ಬ ಆರೋಪಿತನನ್ನು ಠಾಣೆಗೆ ಕರೆದುದಕೊಂಡು ಬಂದು ಮೂರು
ಜನರ ಮೇಲೆ ಕ್ರಮ ಜರುಗಿಸಲು ನೀಡಿದ ವರದಿಯ ಮೇಲಿಂದ ಗುನ್ನೆ ದಾಖಲು
ಮಾಡಿಕೊಂಡು ತನಿಖೆ ಕೈ ಗೊಂಡಿದ್ದು ಇರುತ್ತದೆ.
0 comments:
Post a Comment