ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 235/2015 ಕಲಂ 78(3) Karntaka Police Act.
ದಿ:11-09-15 ರಂದು ರಾತ್ರಿ
7-30 ಗಂಟೆಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ, ಹಿರೇಬೊಮ್ಮನಾಳ
ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಬರ ಹೋಗುವ ಸಾರ್ವಜನಿಕರಿಗೆ ನೀವು ಬರೆಯಿಸಿದ ನಶೀಬದ ನಂಬರ ಹತ್ತಿದಲ್ಲಿ 1=00 ರೂಪಾಯಿಗೆ 80=00
ರೂಪಾಯಿಗಳನ್ನು ಕೊಡುತ್ತೇವೆ. ಅಂತಾ ಕೂಗುತ್ತಾ ಹಣ ಪಡೆದು ನಂಬರ ಬರೆದು ಕೊಡುವ ಮಟಕಾ ನಶೀಬದ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ಚಿತ್ತರಂಜನ್.ಡಿ. ಪಿ.ಎಸ್.ಐ ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ಆರೋಪಿತರಿಂದ ನಗದು ಹಣ ರೂ 670=00 ರೂ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ನು
ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಅಂತಾ
ಮುಂತಾಗಿ
ನೀಡಿದ ವರದಿ ಸಾರಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು
ಕೈ ಗೊಂಡಿದ್ದು ಇರುತ್ತದೆ.
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 286/2015 ಕಲಂ 323, 354, 506 ಐ.ಪಿ.ಸಿ:.
ದಿನಾಂಕ:- 11-09-2015 ರಂದು ರಾತ್ರಿ 7:40 ಗಂಟೆಗೆ ಗಂಗಾವತಿ ಉಪವಿಭಾಗ ಆಸ್ಪತ್ರೆಯಿಂದ ಎಂ.ಎಲ್.ಸಿ. ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಲಾಗಿ ಗಾಯಾಳು ಶ್ರೀಮತಿ ಸುಶೀಲಾ ಗಂಡ ಯೋಗಾನಂದ ಸಾ: ಶ್ರೀರಾಮನಗರ ಇವರು ಲಿಖಿತ ದೂರನ್ನು ಹಾಜರಪಡಿಸಿದ್ದು, ಅದರ ಸಾರಂಶ ಈ ಪ್ರಕಾರ ಇದೆ." ಇಂದು ದಿನಾಂಕ:- 11-09-2015 ರಂದು ಸಂಜೆ 6:00 ಗಂಟೆಯ ಸುಮಾರಿಗೆ ನನ್ನ ಗಂಡನಾದ ಯೋಗಾನಂದ ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಬಡೆದು ಬಿಡಿಸಲು ಬಂದ ನನ್ನ ತಾಯಿ, ಅಣ್ಣನನ್ನು ಕೂಡ ಬಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಾನು ದಿ:- 21-05-2015 ರಂದು ನಗರ ಪೊಲೀಸ್ ಠಾಣೆಯಲ್ಲಿ ನನ್ನ ಗಂಡನಾದ ಯೋಗಾನಂದ, ಅತ್ತೆ ಶ್ರೀದೇವಿ, ನಾದಿನಿಯರಾದ ಯಲ್ಲಮ್ಮ, ಹೇಮಾವತಿ, ನಿವೇದಿತಾ ಮೇಲೆ ವರದಕ್ಷಿಣೆ ಕಿರುಕುಳ ಮತ್ತು ವಿಷ ಉಣಿಸಿದ ಬಗ್ಗೆ ದೂರು ನೀಡಿದ್ದರಿಂದ ಆ ದೂರನ್ನು ವಾಪಸ್ ತೆಗೆದುಕೋ ಎಂದು ಮಗನ ಹುಟ್ಟು ಹಬ್ಬದ ನೆವದ ಮೇಲೆ ಮನೆಯ ಹತ್ತಿರ ಬಂದು ಜಗಳ ಮಾಡಿ ಒಡೆದು ಅವಾಚ್ಯವಾಗಿ ನಿಂದಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಆದ್ದರಿಂದ ರಕ್ಷಣೆಗಾಗಿ ಈ
ದೂರನ್ನು ಸ್ವೀಕರಿಸಲು ವಿನಂತಿಸಿಕೊಳ್ಳುತ್ತೇನೆ" ಅಂತಾ ಮುಂತಾಗಿ ಸಾರಾಂಶ ಇದ್ದು, ಸದರಿ ದೂರನ್ನು ಪಡೆದುಕೊಂಡು ರಾತ್ರಿ 8:15 ಗಂಟೆಗೆ ಠಾಣೆಗೆ ವಾಪಸ್ ಬಂದು ಸದರಿ ದೂರಿನ ಆಧಾರದ ಮೇಲಿಂದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 286/2015 ಕಲಂ 323, 354, 504 ಐ.ಪಿ.ಸಿ. ಅಡಿ ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು.
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 287/2015 ಕಲಂ 143, 147, 148, 324, 326, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ:- 11-09-2015
ರಂದು ರಾತ್ರಿ 9:30 ಗಂಟೆಗೆ ಕಾರಟಗಿ ಸರಕಾರಿ ಆಸ್ಪತ್ರೆಯಿಂದ ಫೋನ್ ಮೂಲಕ ಮಾಹಿತಿ ಬಂದ ಮೇರೆಗೆ
ಆಸ್ಪತ್ರೆಗೆ ಭೇಟಿ ನೀಡಲಾಗಿ ಗಾಯಾಳು ಶ್ರೀ ಬಿ. ಯೋಗಾನಂದ ತಂದೆ ತಿಮ್ಮಣ್ಣ ಬೋವಿ, ವಯಸ್ಸು 32
ವರ್ಷ, ಉ: ಎ.ಪಿ.ಸಿ. 83, ಡಿ.ಎ. ಆರ್. ಕೊಪ್ಪಳ ಸಾ: ಕೊಟ್ರೇಶ್ವರ ಕ್ಯಾಂಪ್, ವಾರ್ಡ ನಂ: 26
ಗಂಗಾವತಿ ಇವರು ತಮ್ಮ ಲಿಖಿತ ದೂರನ್ನು ಸಲ್ಲಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. "ನಾನು
ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನನ್ನ ಹೆಂಡತಿ ಸುಶೀಲಾ ಮತ್ತು
ಮಗ ಚಿನ್ವಯ, ಅವಳ ತವರುಮನೆಯಾದ ಶ್ರೀರಾಮನಗರದಲ್ಲಿ ಇದ್ದಳು. ನನ್ನ ಮಗನಾದ ಚಿನ್ವಯ ಈತನ
ಹುಟ್ಟು ಹಬ್ಬ ದಿ:- 12-09-2015 ರಂದು ಇದ್ದುದರಿಂದ ಹೊಸ ಬಟ್ಟೆಗಳನ್ನು ಮತ್ತು ಸಾಮಗ್ರಿಗಳನ್ನು
ತೆಗೆದುಕೊಂಡು ಕೊಡಲು ದಿ:- 11-09-2015 ರಂದು ಸಂಜೆ ಹೋದಾಗ ಸಂಜೆ 6:00 ರಿಂದ 6:20
ಗಂಟೆಯ ಅವಧಿಯಲ್ಲಿ ನನ್ನ ಹೆಂಡತಿಯಾದ ಸುಶೀಲಾ ಈಕೆಯ ಸಹೋದರರಾದ ವೆಂಕಟೇಶ ತಂದೆ ದಿ: ಟಿ.
ರಾಮುಲು, ವಿಜಯ @ ಆಯುಷ್ ತಂದೆ ದಿ: ಟಿ. ರಾಮುಲು, ನನ್ನ ಸಹೋದರ ಸಂಬಂಧಿಯಾದ ಗಾಳೆಪ್ಪ ಮತ್ತು
ಈತನ ಹೆಂಡತಿಯಾದ ಸತ್ಯಮ್ಮ @ ಲಕ್ಷ್ಮೀ (ಗ್ರಾಮ ಪಂಚಾಯತ ಸದಸ್ಯ) ಕೂಡಿಕೊಂಡು ಏನಲೇ ಯೋಗಾ ಸೂಳೇ
ಮಗನೇ, ಏನು ಶಂಠಾ ಹಡಿಸೋಕೆ ಬಂದೀಲೇ ಬೋಸುಡಿ ಮಗನೇ ಅಂತಾ ಬೈದು ಬಹಳ ದಿನದಿಂದ ಕಾಯ್ದಾ ಇದ್ದೆ
ಮಗನೇ ಇವತ್ತು ಸಿಕ್ಕೀಯಾ ಅದ್ಹೆಗೆ ಪ್ರಾಣದಿಂದ ವಾಪಸ್ ಹೋಗ್ತಿಯಾ ಅಂತಾ ಮಚ್ಚು, ರಾಡನಿಂದ
ವೆಂಕಟೇಶ, ವಿಜಯ @ ಆಯುಷ್, ಗಾಳೆಪ್ಪ ಸತ್ಯಮ್ಮ @ ಲಕ್ಷ್ಮೀ ಏಕಾಏಕಿ ದಾಳಿ ಮಾಡಿದರು. ಈ
ಸೂಳೇಮಗನನ್ನು ಉಳಿಸುವುದೇ ಬೇಡ ಮುಗಿಸಿಯೇ ಬಿಡೋಣಾ ಅಂತಾ ಅಂದವರೇ ವೆಂಕಟೇಶನು ಮಚ್ಚುನಿಂದ,
ವಿಜಯನು ರಾಡ್ ನಿಂದ, ಗಾಳೆಪ್ಪನು ಕಟ್ಟಿಗೆಯಿಂದ ಬಡಿಯುವಾಗ ಈ ಸೂಳೇಮಗ ತಪ್ಪಿಸಿಕೊಂಡು ಹೋಗಬಾರದು
ಅಂತಾ ಸತ್ಯಮ್ಮ ಮತ್ತು ನನ್ನ ಅತ್ತೆ ಅಂಬಮ್ಮ ಇವರು ನನ್ನ ಕಣ್ಣಿಗೆ ಖಾರದ ಪುಡಿಯನ್ನು
ಎರಚಿದರು. ನಾನು ಜೀವ ಉಳಿಸಿಕೊಳ್ಳಲು ಅಲ್ಲಿಂದ ಓಡಿ ಬರುವಾಗ ಈ ಘಟನೆ ನೋಡಿ ಹನುಮಂತ,
ಫಕೀರಪ್ಪ ಇವರು ಬಂದು ಯಾವುದೋ ವಾಹನದಲ್ಲಿ ಕಾರಟಗಿ ಆಸ್ಪತ್ರೆಗೆ ಕಳುಹಿಸಿದರು. ಕಾರಣ
ನನ್ನ ಮೇಲೆ ದ್ವೇಷದಿಂದ ಹಲ್ಲೆ ಮಾಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು
ವಿನಂತಿ"ಅಂತಾ ಮುಂತಾಗಿ ನೀಡಿದ ದೂರನ್ನು ಪಡೆದುಕೊಂಡು ಪ್ರಕರಣ ದಾಖಲು ಮಾಡಿ ತನಿಖೆ
ಕೈಗೊಳ್ಳಲಾಯಿತು.
4) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 157/2015 ಕಲಂ. 279, 338 ಐ.ಪಿ.ಸಿ. ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ: 11-09-2015 ರಂದು ಸಂಜೆ 5-30 ಗಂಟೆಗೆ ಎಂ.ಎಲ್.ಸಿ. ಮಾಹಿತಿ ಬಂದ ಮೇರೆಗೆ ಕೂಡಲೇ
ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ವೀರಪ್ಪ ತಂದೆ ಮಹಾದೇವಪ್ಪ ನಾಯಕವಾಡಿ ವಯಾ: 66 ವರ್ಷ
ಜಾತಿ: ಲಿಂಗಾಯತ ಉ: ನಿವೃತ್ತ ಪಿ.ಎಸ್.ಐ. ಸಾ: ಬಿ.ಬಿ.ನಗರ ಕುಷ್ಟಗಿ ರವರ ಹೇಳಿಕೆ
ಫಿರ್ಯಾದಿಯನ್ನು ಪಡೆದುಕೊಂಡು ವಾಪಾಸ್ ಠಾಣೆಗೆ ಸಂಜೆ 7-05 ಗಂಟೆಗೆ ಬಂದು ಸದರ ಸಾರಾಂಶವೆನೆಂದರೆ
ಇಂದು ಸಂಜೆ 5-00 ಗಂಟೆ ಸುಮಾರಿಗೆ ಸಂಗಮೇಶ್ವರ ಮೇಡಿಕಲ್ ಶಾಪ್ ನಲ್ಲಿ ಶುಗರ್ ಗುಳಿಗೆಗಳನ್ನು
ತೆಗೆದುಕೊಂಡು ಸದರ ಶಾಪ್ ಮುಂದೆ ಸರ್ಕಾರಿ ಆಸ್ಪತ್ರೆ ಹತ್ತಿರ ಕಚ್ಚಾ ರಸ್ತೆಯಲ್ಲಿ ನಡೆದುಕೊಂಡು
ಮನೆ ಕಡೆಗೆ ಹೋಗುತ್ತಿರುವಾಗ ಮಾರುತಿ ಸರ್ಕಲ್ ಕಡೆಯಿಂದ ಬಜಾಜ ಮೋ. ಸೈ. ನಂ:
ಕೆ.ಎ-37/ವಾಯ್-7761 ನೇದ್ದರ ಸವಾರನಾದ ರಾಮಣ್ಣ ತಂದೆ ಗೋವಿಂದಪ್ಪ ಸಾ: ಕೊರಡಕೇರಾ ಇತನು ತನ್ನ
ಮೋ.ಸೈ. ನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಟಕ್ಕರ ಕೊಟ್ಟು
ಅಪಘಾತಪಡಿಸಿದ್ದು ಅಪಘಾತದಲ್ಲಿ ಫಿರ್ಯಾದಿಗೆ ಏಡಗಾಲ ಮೊಣಕಾಲ ಹತ್ತಿರ ಭಾರಿ
ಒಳಪೆಟ್ಟಾಗಿರುತ್ತದೆ. ಸದರ ಮೋ.ಸೈ. ಸವಾರನು ಮೋ.ಸೈ. ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ
ಮುಂತಾಗಿ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
0 comments:
Post a Comment