ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 144/2015 ಕಲಂ 323, 324, 504, 506 ಸಹಿತ 34 ಐಪಿಸಿ ಹಾಗೂ 3(1)(10)ಎಸ್.ಸಿ/ಎಸ್.ಟಿ. ಕಾಯ್ದೆ 1989:.
ದಿನಾಂಕ 14-09-2015 ರಂದು ರಾತ್ರಿ 10-45 ಗಂಟೆಗೆ ಫಿರ್ಯಾಧಿದಾರ
ಶ್ರೀ ಭೋಜಪ್ಪ ತಂದೆ ಪಂಪನಗೌಡ ಗೌಡ್ರ ವಯಾ 38 ವರ್ಷ ಜಾತಿ ವಾಲ್ಮೀಕಿ ಉ: ಒಕ್ಕಲುತನ & ಮೋಟಾರ
ವೈಡಿಂಗ್ ರಿಪೇರಿ ಸಾ : ಹೊಸಗುಡ್ಡ ಇವರು ಠಾಣೆಗೆ ಹಾಜರಾಗಿ ಗಣಕಿಕೃತ ಮಾಡಿದ ಫಿರ್ಯಾಧಿಯನ್ನು ಹಾಜರ
ಪಡಿಸಿದ್ದು, ಅದರ ಸಾರಾಂಶವೇನೆಂದರೆ, ಇಂದು ದಿನಾಂಕ 14-09-2015 ರಂದು ಸಂಜೆ 6-00 ಗಂಟೆಯ ಸುಮಾರಿಗೆ
ತಾನು ಮತ್ತು ತಮ್ಮೂರ ಕುಂಟೆಪ್ಪ ಡ್ಯಾಗಿ ಇಬ್ಬರೂ ಕೂಡಿ ತಮ್ಮೂರ ಬಾಳಪ್ಪ ಕುರಿ ಇವರ ಹೊಲಕ್ಕೆ ಹೋಗಿ
ರಿಪೇರಿ ಮಾಡಿದ ಮೋಟಾರನ್ನು ಭೋರೊಳಗೆ ಇಳಿಸಲು ಹೋದೆವು. ಮೋಟಾರನ್ನು ಇಳಿಸುವ ಮೊದಲೇ ಹಣವನ್ನು ಕೊಡು
ಅಂತಾ ಆರೋಪಿ ಬಾಳಪ್ಪ ಕುರಿ ಈತನಿಗೆ ಕೇಳಿದಾಗ ಬಾಳಪ್ಪನು ರೊಕ್ಕ ಕೊಡುವುದಿಲಲ್ಲೇ ನಾಯಕ ಸೂಳೇ ಮಗನೇ,
ಯಾಕೇ ಕೊಡಬೇಕಲೇ ಅಂತಾ ಅಂದನು, ಆಗ ಅಲ್ಲಿಯೇ ಇದ್ದ ಅವನ ಸಂಬಂಧಿಕರಾದ ಹೊನ್ನರಪ್ಪ ಕುರಿ, ಬಾಳಪ್ಪ
ಕುರಿ, ಬಾರೆಪ್ಪ ಕುರಿ, ಹೊನ್ನುರಪ್ಪ ಕುರಿ ಇವರು ತಮ್ಮೊಂದಿಗೆ ಬಾಯಿ ಮಾಡುತ್ತಾ ಜಗಳ ಮಾಡುತ್ತಿರುವದನ್ನು
ನೋಡಿ ಅಲ್ಲಿಗೆ ಬಂದ ತನ್ನ ಅಣ್ಣ ಬಸನಗೌಡ ಗೌಡ್ರ ಈತನು ಬಾಳಪ್ಪನ ಹತ್ತಿರ ಹೋಗಿ ಯಾಕೇ ನನ್ನ ತಮ್ಮನ
ಜೊತೆ ಜಗಳ ಮಾಡುತ್ತೀರಿ ಅವನಿಗೆ ಮೋಟಾರ ರಿಪೇರಿ ಮಾಡಿದ ಹಣವನ್ನು ಕೊಡು ಅಂತಾ ಹೇಳಿದಾಗ ಆಗ ಆರೋಪಿತರಾದ
ಬಾಳಪ್ಪ ಕುರಿ, ಬಾರೆಪ್ಪ ಕುರಿ, ಸೋಮಪ್ಪ ಕುರಿ, ಹೊನ್ನರಪ್ಪ ಕುರಿ ಇವರೆಲ್ಲರೂ ಕೂಡಿಕೊಂಡು ಸಂಜೆ
7-00 ಗಂಟೆಯ ಸುಮಾರಿಗೆ ನಾವು ನಾಯಕ ಜನಾಂಗದವರು ಅಂತಾ ಗೊತ್ತಿದ್ದರೂ ಕೂಡ ಅದನ್ನೇನು ಕೇಳುತ್ತಿರಲೇ
ಬ್ಯಾಡ ಸೂಳೇ ಮಕ್ಕಳಾ ಅಂತಾ ಅಶ್ಲೀಲವಾಗಿ ಬೈಯುತ್ತಾ ಸೋಮಪ್ಪ ಕುರಿ & ಹೊನ್ನುರಪ್ಪ ಕುರಿ ಇವರು
ತನ್ನ ಅಣ್ಣನನ್ನು ಗಟ್ಟಿಯಾಗಿ ಹಿಡಿದುಕೊಂಡರು. ಬಾಳಪ್ಪ ಕುರಿ ಈತನು ತನ್ನ ಕೈಯಲ್ಲಿದ್ದ ಕುಡುಗೋಲಿನಿಂದ
ಬಸನಗೌಡನ ತಲೆಗೆ ಹೊಡೆದನು. ಬಾರೆಪ್ಪ ಕುರಿ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಬೆನ್ನಿಗೆ, ಹೊಟ್ಟೆಗೆ
ಹೊಡೆದು ಒಳ ಪೆಟ್ಟು ಮಾಡಿ ಈ ಸಲಾ ಉಳಿದಿಯೇಲೇ ಇನ್ನೊಮ್ಮೆ ಸಿಗಲೇ ನಿನ್ನ ಜೀವ ಸಹಿತ ಬಿಡುವದಿಲ್ಲ
ಅಂತಾ ಜೀವದ ಬೆದರಿಕೆ ಹಾಕಿ ಹೋದರು. ನಂತರ ತನ್ನ ಅಣ್ಣನನ್ನು 108 ಅಂಬುಲೆನ್ಸ್ ವಾಹನದಲ್ಲಿ ಕನಕಗಿರಿ
ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೇವೆ ಕಾರಣ ತನ್ನ ಅಣ್ಣನಿಗೆ ಬಡಿದ 4 ಜನರ ಮೇಲೆ ಕಾನೂನು
ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿರ್ಯಾಧಿಯ ಸಾರಾಂಶದ ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಕೊಂಡೆನು.
2) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 123/2015 ಕಲಂ 279, 337, 338 ಐ.ಪಿ.ಸಿ:.
ದಿನಾಂಕ:-11/09/2015 ರಂದು 9-30..ಪಿ.ಎಂ.ಕ್ಕೆ ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ
ಅಪಘಾತದ ಬಗ್ಗೆ ಎಂ.ಎಲ್.ಸಿ. ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳನ್ನು ಪರಿಶೀಲಿಸಿ
ಗಾಯಾಳು ಹನುಮಪ್ಪ ತಂ.ನೀಲಪ್ಪ ಕುರಿ ಸಾ: ಹೊನ್ನುಣಸಿರವರ ಹೇಳಿಕೆಯನ್ನು 10-30 ಪಿಎಂದಿಂದ 11-30
ಪಿಎಂದವರೆಗೆ ಪಡೆದುಕೊಂಡಿದ್ದು, ಅದರ ಸಾರಾಂಶವೆನೆಂದರೆ, ಇಂದು ದಿನಾಂಕ; 11/09/2015 ರಂದು
7-00 ಪಿ.ಎಂ.ಕ್ಕೆ ನನಗೆ ಗವಿಸಿದ್ದಪ್ಪನು ತನ್ನ ಮೋ: ಸೈಕಲ್ ನಂ:KA37 Q 5604 ನೇದ್ದರಲ್ಲಿ ತನ್ನ
ಅಳಿಯನಾದ ಮಹೇಶನಿಗೆ ಆರಾಮ ಇಲ್ಲ ಕಿನ್ನಾಳ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬರೋಣ ಬಾ ಅಂತಾ ಕರೆದುಕೊಂಡು
ಹಿರೇಬೀಡನಾಳದಿಂದ ಕಿನ್ನಾಳಗೆ ಹೋಗುವಾಗ ಹಿರೇಬೀಡನಾಳದಿಂದ 1 ಕೀ.ಮೀ. ದೂರದಲ್ಲಿ ರಸ್ತೆಯಲ್ಲಿ ಅತೀವೇಗವಾಗಿ
ಹೋಗುವಾಗ ಅದೇ ವೇಳೆಗೆ ಕಿನ್ನಾಳ ಕಡೆಯಿಂದ ಒಬ್ಬನು ತನ್ನ ಮೋಟಾರ್ ಸೈಕಲ್ ನ್ನು ಎದುರಿಗೆ ಬರುವ ವಾಹನಗಳನ್ನು
ಲೆಕ್ಕಿಸದೇ ಹಾಗೆ ಓಡಿಸಿಕೊಂಡು ಬಂದವನೇ ನಾನು ಗವಿಸಿದ್ದಪ್ಪನ ಹಿಂದೆ ಕುಳಿತು ಹೊರಟ ಬೈಕಿಗೆ ಮುಖಾಮುಖಿಯಾಗಿ
ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ್ದರಿಂದ ನಾವು ಮೂರು ಜನ ಮತ್ತು ಅವರಿಬ್ಬರೂ ಬೈಕ ಸಮೇತ ಕೆಳಗೆ ಬಿದಿದ್ದು
ಇದೆ. ನಂತರ ಅಪಘಾತ ಪಡಿಸಿದ ಬೈಕ್ ನಂ. ನೋಡಲಾಗಿ ಅದು KA 37 Y 7769 ಅಂತಾ ಇದ್ದು ಅವನ ಹೆಸರು ವಿಚಾರಿಸಲಾಗಿ
ರಾಘವೇಂದ್ರ ಅಂತಾ ಹೇಳಿ ತನ್ನ ಹಿಂದೆ ಕುಳಿತವನು ಈರಪ್ಪ ಅಂತಾ ಹೇಳಿದನು. ಇದರಿಂದ ನನಗೆ ಮತ್ತು ಆರೋಪಿತರಾದ
ರಾಘವೇಂದ್ರ, ಗವಿಸಿದ್ದಪ್ಪನಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು, ಮಹೇಶ ಮತ್ತು ಈರಪ್ಪನಿಗೆ ತೀವೃಸ್ವರೂಪದ
ಗಾಯಗಳಾಗಿದ್ದು ಇದೆ. ನಂತರ ಯಾರೋ ಒಬ್ಬರು ದಾರಿಯಲ್ಲಿ ಹೋಗುವವರು 108 ವಾಹನಕ್ಕೆ ಪೋನ್ ಮಾಡಿದ್ದರಿಂದ
108 ವಾಹನದಲ್ಲಿ ನಮ್ಮನ್ನು ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು
ಇದೆ. ಕಾರಣ ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ಮೊಟಾರ್ ಸೈಕಲ್ ನಡೆಸಿ ಅಪಘಾತಕ್ಕೆ ಕಾರಣರಾದ ಇಬ್ಬರೂ
ಮೊಟಾರ್ ಸೈಕಲ್ ಚಾಲಕರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ವಗೈರೆ ಇದ್ದ ಹೇಳಿಕೆಯ
ಪಿರ್ಯಾಧಿಯನ್ನು ಪ್ರಕರಣ ದಾಖಲು ಮಾಡಿಕೊಂಡು ತನಿಖೆ
ಕೈ ಕೊಂಡೆನು
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 288/2015 ಕಲಂ 379 ಐ.ಪಿ.ಸಿ:.
ದಿನಾಂಕ: 14-09-2015 ರಂದು ಮಧ್ಯಾಹ್ನ 12:15 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಜಿ. ಸೂರ್ಯಚಂದ್ರರಾವ್
ತಂದೆ ವೆಂಕಟೇಶ್ವರರಾವ್ ವಯಸ್ಸು: 60 ವರ್ಷ ಜಾತಿ: ಕಮ್ಮಾ, ಉ: ಒಕ್ಕಲತನ ಸಾ: ಕೋಟಯ್ಯಕ್ಯಾಂಪ್ ತಾ: ಗಂಗಾವತಿ ಇವರು ಠಾಣೆಗೆ ಹಾಜರಾಗಿ ಗಣಕೀಕರಣ
ಮಾಡಿಸಿದ ದೂರನ್ನು ಸಲ್ಲಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ.ದೈನಂದಿನ ಕೆಲಸಕ್ಕಾಗಿ ನನ್ನ
ಹೆಸರಿನಲ್ಲಿ ಕಳೆದ ಸಾಲಿನಲ್ಲಿ ಅಂದರೆ 2009 ರಲ್ಲಿ ಒಂದು ಕಪ್ಪು ಬಣ್ಣದ ಹೊಂಡಾ ಶೈನ್ ಮೋಟಾರ
ಸೈಕಲನ್ನು ಖರೀದಿಸಿದ್ದೆನು. ಅದರ ಚಾಸ್ಸಿ ನಂ: ME4JC366D98238440 ಇಂಜಿನ್ ನಂ: JA36E9372296 ಅಂತಾ ಇದ್ದು ಅದರ ನಂಬರ್ ಕೆ.ಎ-37/ಕ್ಯೂ-6543 ಅಂತಾ ಇರುತ್ತದೆ. ದಿನಾಂಕ: 28-05-2015
ರಂದು ಸಾಯಂಕಾಲ 4:00 ಗಂಟೆಯ ಸುಮಾರಿಗೆ ಗುರುವಾರ ದಿವಸ ಸಂತೆಗೆಂದು ಶ್ರೀರಾಮನಗರಕ್ಕೆ ಬಂದು
ನನ್ನ ಮೋಟಾರ ಸೈಕಲನ್ನು ಡಾ: ಬಾಬುರಾವ್ ಆಸ್ಪತ್ರೆಯ ಪಕ್ಕದ ಪರ್ಟಿಲೈಸರ್ ಅಂಗಡಿಯ ಮುಂಭಾಗದಲ್ಲಿ
ನಿಲ್ಲಿಸಿ ಸಂತೆ ಮಾಡಲು ಹೋಗಿದ್ದೆನು. ನಂತರ ವಾಪಸ್ಸು ಸಂಜೆ 5:00 ಗಂಟೆಯ ಸುಮಾರಿಗೆ ಬಂದು
ನೋಡಲಾಗಿ ಸ್ಥಳದಲ್ಲಿ ನಿಲ್ಲಿಸಿದ್ದ ನನ್ನ ಮೋಟಾರ ಸೈಕಲ್ ಕಾಣಲಿಲ್ಲಾ. ಯಾರೋ ಕಳ್ಳರು ಅದನ್ನು
ಕಳ್ಳತನ ಮಾಡಿಕೊಂಡು ಹೋಗಿದ್ದರು. ನಂತರ ನಾನು ನಮ್ಮ ಕ್ಯಾಂಪಿನ ಟಿ. ಶ್ರೀನಿವಾಸ ತಂದೆ
ಸುಬ್ಬರಾವ್ 40 ವರ್ಷ ಇಬ್ಬರೂ ಕೂಡಿ ಸಿಂಧನೂರ, ಕಾರಟಗಿ, ಗಂಗಾವತಿ,
ಕಂಪ್ಲಿ ಮುಂತಾದ ಸ್ಥಳಗಳಿಗೆ ಹೋಗಿ ಹುಡುಕಾಡಲಾಗಿ ನನ್ನ ಮೋಟಾರ ಸೈಕಲ್
ಸಿಗಲಿಲ್ಲಾ. ಈಗ್ಗೆ ಸುಮಾರು 5-6 ದಿವಸಗಳ ಹಿಂದೆ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಕಳ್ಳನನ್ನು
ಹಿಡಿದು ಮೋಟಾರ ಸೈಕಲಗಳನ್ನು ಜಪ್ತಿ ಮಾಡಿರುತ್ತಾರೆ ಅಂತಾ ವಿಷಯ ತಿಳಿದು ನಾನು ಹೋಗಿ ನೋಡಲಾಗಿ
ನನ್ನ ಮೋಟಾರ ಸೈಕಲ್ ಪೊಲೀಸ್ ಠಾಣೆಯಲ್ಲಿದ್ದು ಕಂಡು ಬಂದಿತು. ವಿಚಾರಿಸಲು ಅದನ್ನು ಚಂದ್ರಶೇಖರ
ತಂದೆ ಈಶಪ್ಪ ಬೆಟಗೇರಿ, ವಯಸ್ಸು: 27 ವರ್ಷ ಜಾತಿ: ಲಿಂಗಾಯತ, ಸಾ: ನಟರಾಜ ಕಾಲೋನಿ, ಸಿಂಧನೂರ ಎಂಬಾತನು ಕಳ್ಳತನ ಮಾಡಿದ್ದು ಆತನಿಂದ ಪೊಲೀಸ್ ರು ಮೋಟಾರ
ಸೈಕಲನ್ನು ಜಪ್ತಿ ಮಾಡಿರುತ್ತಾರೆ ಅಂತಾ ಗೊತ್ತಾಗಿ ಇಂದು ತಡವಾಗಿ ಠಾಣೆಗೆ ಹಾಜರಾಗಿ ಈ ನನ್ನ
ದೂರನ್ನು ಸಲ್ಲಿಸಿರುತ್ತೇನೆ. ಸದರಿ ನನ್ನ ಮೋಟಾರ ಸೈಕಲನ ಅಂದಾಜು ಕಿಮ್ಮತ್ತು 35,000/- ರೂ ಆಗಬಹುದು ಕಾರಣ ಈ ಬಗ್ಗೆ ಮುಂದಿನ ಕ್ರಮ ಜರುಗಿಸಿ ಕಳುವಾದ ನನ್ನ ಮೋಟಾರ
ಸೈಕಲನ್ನು ನನಗೆ ಹಿಂತಿರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
0 comments:
Post a Comment