Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, September 16, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 93/2015  ಕಲಂ 143, 147, 504, 323, 354, 506 ಸಹಿತ 149 ಐಪಿಸಿ:.
ದಿನಾಂಕ: 15-09-2015 ರಂದು ರಾತ್ರಿ 9-00 ಗಂಟೆಗೆ ಫಿಯರ್ಾದಿದಾರರಾದ ಪದ್ಮಾವತಿ ಗಂಡ ವಾಸುದೇವ ದಾಸರ ವಯ: 58 ವರ್ಷ ಜಾತಿ: ದಾಸರ ಉ: ಮನೆಕೆಲಸ ಸಾ: ನೀರಲಗಿ ತಾ: ಜಿ: ಕೊಪ್ಪಳ. ಇವರು ಜಿಲ್ಲಾ ಆಸ್ಪತ್ರೆ ಕೊಪ್ಪಳದಲ್ಲಿ ಒಂದು ಗಣಿಕೀಕರಣ ಮಾಡಿಸಿದ ಫಿಯರ್ಾದಿಯನ್ನು ಹಾಜರು ಪಡಿಸಿದ್ದು, ಸದರಿ ಪಿಯರ್ಾದಿಯ ಸಾರಾಂಶವೆನೆಂದರೆ, ದಿನಾಂಕ: 13-09-2015 ರಂದು ಫಿರ್ಯಾದಿದಾರರು ಹಾಗೂ ಅವರ ಮಗಳು ತಮ್ಮ ಮನೆಯಲ್ಲಿದ್ದಾಗ ಆರೋಪಿತರೆಲ್ಲರೂ ಕೂಡಿಕೊಂಡು ಬಂದು ಅದರಲ್ಲಿ  ಆರೋಪಿ ನಂ: 01 ಮತ್ತು 02 ಇವರು ಕೂಡಿಕೊಂಡು ಫಿರ್ಯಾದಿದಾರಳಿಗೆ ಲೇ ಬೋಸುಡಿ ನೀನು ನಿನ್ನ ಮಕ್ಳು ಸೇರಿ ನಮ್ಮ ಹೊಲ ಬಿಟ್ಟುಕೊಡಂಗಿಲ್ಲಾ ಅಂತಾ ಬೈದಾಡುತ್ತಾ, ಆರೋಪಿ ನಂ:01 ಈತನು ಫಿರ್ಯಾದಿದಾರರ ತಲೆಯ ಕೂದಲು ಹಿಡಿದ ಎಳೆದಾಡಿದ್ದು, ಆರೋಪಿ ನಂ; 02 ಇವರು ಫಿರ್ಯಾದಿದಾರ ಮೈ ಮೇಲಿನ ಸೀರಿ ಹಿಡಿದು ಎಳೆದಾಡಿದ್ದು, ಅಲ್ಲದೇ ಆರೋಪಿ ನಂ: 01 ಈತನು ಫಿರ್ಯಾದಿದಾರ ಕುತ್ತಿಗೆ ಚೂರಿ ತೆರೆಚಿದ ಗಾಯ ಮಾಡಿದ್ದು ಇರುತ್ತದೆ. ಅಲ್ಲದೇ ಆರೋಪಿರೆಲ್ಲರೂ ಸೇರಿ ಫಿಯರ್ಾದಿದಾರಳ ಮಗ ಸಂತೋಷ ಈತನಿಗೂ ಸಹ ಅವಾಚ್ಯ ಶಬ್ದಗಳಿಂದ ಬೈದು, ಹೊಡೆ ಬಡೆ ಮಾಡಿ, ಕಾಲಿನಿಂದ ಒದ್ದು, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಕಾರಣ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯನ್ನು ಪಡೆದುಕೊಂಡು  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  
2)  ಕನಕಗಿರಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 15/2015  ಕಲಂ 174(ಸಿ) ಸಿ.ಆರ್.ಪಿ.ಸಿ:.
ದಿನಾಂಕ 15-09-2015 ರಂದು ಮದ್ಯಾಹ್ನ 3-15 ಗಂಟೆಗೆ ಮೇಲ್ಕಂಡ ಫಿರ್ಯಾಧಿದಾರನು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಕೊಟ್ಟಿದ್ದು, ಅದರ ಸಾರಾಂಶೇನೆಂದರೆ,  ತನಗೆ 2 ಜನ ಗಂಡು ಮಕ್ಕಳು ಮತ್ತು 2 ಜನ ಹೆಣ್ಣು ಮಕ್ಕಳಿದ್ದು, ಗಂಡು ಮಕ್ಕಳ ಪೈಕಿ 2 ನೇ ಮಗನಾದ ನಾಗರಾಜ ವಯಾ 19 ವರ್ಷ ಜಾತಿ ಈತನು ಚಿಕ್ಕಂದಿನಿಂದಲೂ ತನ್ನ ಹೆಂಡತಿ ತರು ಮನೆಯ ಹನುಮನಾಳ ಗ್ರಾಮದಲ್ಲಿ ಕುರಿ ಮೇಯಿಸುತ್ತಾ ಅಲ್ಲಿಯೇ ಇರುತ್ತಿದ್ದು, ತನ್ನ ಮಗ ನಾಗರಾಜ, ಸೋದರ ಮಾವನಾದ ಗಂಗಣ್ಣ ಬಾಲಪ್ಪ ಕೆರಿಕೋಡಿ, ನಾಗಪ್ಪ ತಂದೆ ಮಾನಪ್ಪ ಕನಕಾಪುರ ಈ 3 ಜನ ಸೇರಿಕೊಂಡು    ತಮ್ಮ ತಮ್ಮ ಕುರಿಗಳನ್ನು ಕನಕಗಿರಿ ಸೀಮಾದಲ್ಲಿ ಮತ್ತು ಸೋಮಸಾಗರ ಸೀಮಾದಲ್ಲಿ ಕುರಿಗಳನ್ನು ಮೇಯಿಸುತ್ತಾ ಕನಕಗಿರಿ ಸೀಮಾದ ಈರಾಳ ಬಸವೇಶ್ವರ ಕೇರಿಯ ಹತ್ತಿರ ಕುರಿ ಹಟ್ಟಿ ಹಾಕಿದ್ದರು. ನಿನ್ನೆ ದಿನಾಂಕ 14-09-2015 ರಂದು ಸಂಜೆ 7-30 ಗಂಟೆಯ ಸುಮಾರಿಗೆ ತನ್ನ ಮಗ ನಾಗರಾಜ ಕುರಿ ಈತನು ಕೆರೆಯ ದಂಡೆಯ ಮೇಲೆ ಚಪ್ಪಲಿ, ಅಂಗಿಯನ್ನು ಬಿಟ್ಟು ಕಾಣೆಯಾಗಿದ್ದು, ಅವನು ಕೇರೆಯಲ್ಲಿ ಇರಬಹುದೆಂದು ತಿಳಿದು ಪೊಲೀಸ್ರು &ಈಜುಗಾರು ಕೂಡಿಕೊಂಡು ಕೇರಿಯ ನೀರಿನಲ್ಲಿ ಈಜಾಡಿ ಹುಡುಕಾಡಲಾಗಿ ಈ ದಿಸ 15-09-2015 ರಂದು ಮದ್ಯಾಹ್ನ 2-00 ಗಂಟೆಯ ಸುಮಾರಿಗೆ ತನ್ನ ಮಗನ ಶವವು ಸಿಕ್ಕಿದ್ದು, ಶವವು ಮೇಲೆ ಬರುವಾಗ ಅವನ ಮೂಗಿನಿಂದ, ಕಿವಿಯಿಂದ ರಕ್ತ ಬಂದಿರುವದು ಕಂಡು ಬಂದಿದ್ದು, ಇದರಿಂದ ತನ್ನ ಮಗನ ಮರಣದಲ್ಲಿ ಸಂಶಯ ಇರುತ್ತದೆ ಅಂತಾ ಮುಂತಾಗಿ  ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3) ಕುಕನೂರ ಪೊಲೀಸ್ ಠಾಣೆ ಯು.ಡಿ.ಅರ್.ನಂ. 23/2015  ಕಲಂ 174 ಸಿ.ಆರ್.ಪಿ.ಸಿ:.

ದಿನಾಂಕ:15-09-2015 ರಂದು 12-00 ಪಿಎಂಕ್ಕೆ ವರದಿದಾರನಾದ ಶರಣಪ್ಪ ತಂ. ಕಾಶಪ್ಪ ಬಡಿಗೇರ ವಯಾ:26 ವರ್ಷ, ಜಾ: ಬಡಿಗೇರ, ಉ:ಕಾರ್ಪೆಂಟರ್ ಸಾ:ಲಕುಮಾಪೂರ ತಾ:ಯಲಬುರ್ಗಾ ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕರಣ ಮಾಡಿಸಿದ ವರದಿಯನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ, ವರದಿದಾರನ ತಾಯಿಯಾದ ಮೃತ ಕಾಳವ್ವ ಈಗ್ಗೆ 6 ತಿಂಗಳ ಹಿಂದೆ ಜ್ವರ ಬಂದು ಯಥಾರೀತಿ ಮಾಡುತ್ತಿದ್ದು ಹೊಸಪೇಟೆಯಲ್ಲಿ ತೋರಿಸಿದ್ದು ದಿನಕ್ಕೆ ಎರಡು ಸಲ ಮಾತ್ರೆ ತೆಗದುಕೊಳ್ಳಲು ಸೂಚಿಸಿದ್ದು ಮಾತ್ರೆಗಳನ್ನು ಸರಿಯಾಗಿ ತೆಗೆದುಕೊಳ್ಳದಿದ್ದರೆ ಮತ್ತೆ ಅದೇ ರೀತಿ ವರ್ತನೆಮಾಡುತ್ತಿದ್ದು ಮೃತಳಿಗೆ ಕೊಡುವ ಮಾತ್ರೆಗಳು ಖಾಲಿಯಾಗಿದ್ದರಿಂದ ಹೊಸಪೇಟೆಗೆ ಹೋಗಿ ತರಬೇಕಾಗಿದ್ದು ಊರಿನಲ್ಲಿ ಪುರಾಣ ಮಂಗಲ ಕಾರ್ಯ ಇದ್ದುದರಿಂದ ನಾಳೆ ಹೋಗಿ ಮಾತ್ರೆಗಳನ್ನು ತಂದರಾಯಿತು ಅಂತಾ ಸುಮ್ಮನಿದ್ದನು.  ಇಂದು ದಿನಾಂಕ:15-09-2015 ರಂದು ಬೆಳಿಗ್ಗೆ 08.30 ಕ್ಕೆ ವರದಿದಾರ ತಮ್ಮೂರ ಗುಡಿಯ ಹತ್ತಿರ ಹೋದಾಗ ತನ್ನ ತಾಯಿ ಮನೆಯಲ್ಲಿಂದ 09.00 ಗಂಟೆಗೆ ಬಹಿರ್ದೆಸೆಗೆ ಹೋಗಿ ಬರುತ್ತೇನೆ ಅಂತಾ ಮನೆಯಲ್ಲಿ ತನ್ನ ಸಣ್ಣ ಮಗನಿಗೆ ಹೇಳಿ ಹೋದವಳು ಒಂದು ತಾಸು ಆದರೂ ವಾಪಾಸ್ಸು ಬಂದಿಲ್ಲಾ ಅಂತಾ 10.00 ಗಂಟೆಗೆ ತನ್ನ ತಮ್ಮ ದ್ಯಾಮಣ್ಣ ಬಂದು ತನಗೆ ತಿಳಿಸಿದ್ದರಿಂದ ತಾನು ಮತ್ತು ಊರಿಂದ ಬಂದಿದ್ದ ಅವನ ಚಿಕ್ಕಪ್ಪ ವಾಮದೇವಚಾರಿ ಹಾಗೂ ದ್ಯಾಮಣ್ಣ ಕೂಡಿಕೊಂಡು ಹುಡುಕಾಡುತ್ತಾ ತಮ್ಮೂರ ಯಲ್ಲಪ್ಪ ಹವಾರಿರವರ ಹೊಲದ ಬಾವಿಯ ಹತ್ತಿರ ಹೋಗಿ ನೋಡಲಾಗಿ ನೀರಿರದ ಬಾವಿಯಲ್ಲಿ ಅವನ ತಾಯಿಯ ದೇಹವು ಬೋರಲಾಗಿ ಬಿದ್ದು ಮೃತ ಪಟ್ಟಿದ್ದು ಸದರಿ ತನ್ನ ತಾಯಿ ಯಥಾರೀತಿ ಇದ್ದುದರಿಂದ ನೀರಿರದ ಭಾವಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಸದರಿಯವಳ ಮರಣದಲ್ಲಿ ಯಾರ ಮೇಲೂ ಯಾವುದೇ ರೀತಿಯ ಸಂಶಯ ವಗೈರೆ ಇರುವುದಿಲ್ಲಾ. ಕಾರಣ ಕಾನೂನು ರೀತಿಯ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ವರದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

0 comments:

 
Will Smith Visitors
Since 01/02/2008