ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 95/2015 ಕಲಂ 87 Karnataka Police Act.
ಫಿರ್ಯಾಧಿದಾರರಾದ ಶ್ರೀ ಗಣೇಶ. ಸಿ. ಪಿ.ಎಸ್.ಐ. ಅಳವಂಡಿ
ರವರು, ಸಿಬ್ಬಂದಿಯವರು ಮತ್ತು ಪಂಚರು ಕೂಡಿಕೊಂಡು ದಿನಾಂಕ: 22-09-2015 ರಂದು ಸಾಯಂಕಾಲ 6-00 ಗಂಟೆಗೆ
ಠಾಣಾ ವ್ಯಾಪ್ತಿಯಲ್ಲಿ ಬಿಸರಳ್ಳಿ ಗ್ರಾಮದಲ್ಲಿ ಅಲ್ಲಾಸಾಬ ಮಸೂತಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ
ಆರೋಪಿತರು ಹಣವನ್ನು ಕಟ್ಟಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟವನ್ನು ಆಡುತ್ತಿರುವಾಗ ದಾಳಿ ಮಾಡಿದಾಗ
8 ಜನರು ಸಿಕ್ಕಿದ್ದು, ಆರೋಪಿತರಿಂದ ನಗದು ಹಣ ರೂ. 9,000=00 ಗಳು, 52 ಇಸ್ಪೇಟ್ ಎಲೆಗಳು, ಹಾಗೂ
ಒಂದು ಪ್ಲಾಸ್ಟಿಕ್ ಬಕರ್ಾವನ್ನು ಜಪ್ತ ಮಾಡಿ ಸ್ಥಳದಲ್ಲಿ ಪಂಚನಾಮೆಯನ್ನು ತಯಾರಿಸಿ ವಾಪಾಸ್ ಠಾಣೆಗೆ
ಬಂದು ಒಂದು ವರದಿಯನ್ನು ಪಂಚನಾಮೆ ಮತ್ತು ಮುದ್ದೇಮಾಲನ್ನು ಹಾಗೂ ಆರೋಪಿತರನ್ನು ಹಾಜರು ಪಡಿಸಿದ್ದು,
ಸದರ ವರದಿಯ ಸಾರಾಂಶ ಮತ್ತು ಪಂಚನಾಮೆಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
2) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ.ನಂ. 164/2015 ಕಲಂ 87 Karnataka Police Act.
ದಿನಾಂಕ 22-09-2015 ರಂದು ಸಂಜೆ 6-30 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಠಗಿ ಪೊಲೀಸ ಠಾಣೆರವರು ಠಾಣೆಗೆ ಬಂದು ಹಾಜರು
ಪಡಿಸಿದ್ದು ಅದರ ಸಾರಾಂಶವೆನಂದರೆ ಹುಲಸಗೇರಿ ಗ್ರಾಮದ ದುರುಗಮ್ಮ ಗುಡಿಯ ಮುಂದೆ ಸಾರ್ವಜನಿಕ
ಸ್ಥಳದಲ್ಲಿ ಅಂದರಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ
ಪಿರ್ಯಾಧಿದಾರರು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-108, ಪಿ.ಸಿ-, 117, 116, 344, 124,109,24,393 & ಜೀಪ್ ಚಾಲಕ ಎ.ಪಿ.ಸಿ-38 ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 6 ಜನ ಆರೋಪಿತರನ್ನು ಹಾಗೂ
ಇಸ್ಪೆಟ್ ಜೂಜಾಟದ ಒಟ್ಟು ಹಣ 2670=00, ಹಾಗೂ 52 ಇಸ್ಪೆಟ್ ಎಲೆಗಳು ಹಾಗೂ ಇತರೇ ಜೂಜಾಟದ ಸಾಮಗ್ರಿಗಳನ್ನು ಪಂಚನಾಮೆ ಕಾಲಕ್ಕೆ
ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಹಾಜರು ಪಡಿಸಿದ ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ.ನಂ. 297/2015 ಕಲಂ 279, 337, 304(ಎ) ಐ.ಪಿ.ಸಿ:.
ದಿನಾಂಕ:- 22-09-2015 ರಂದು ಬೆಳಿಗ್ಗೆ
09:30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಹಂಪಣ್ಣ ತಂದೆ ಹುಸೇನಪ್ಪ ಕೌತಾಳ, ವಯಸ್ಸು
47 ವರ್ಷ, ಜಾತಿ: ಮಾದಿಗ ಉ: ಕೂಲಿ ಕೆಲಸ ಸಾ: ಗೋರಕಲ್ ತಾ: ಮಾನ್ವಿ ಹಾಲಿವಸ್ತಿ:
ವಿದ್ಯಾನಗರ, 5ನೇ ವಾರ್ಡ, ಸಿರವಾರ, ತಾ: ಮಾನ್ವಿ ಜಿಲ್ಲೆ: ರಾಯಚೂರು ಇವರು ಠಾಣೆಗೆ ಹಾಜರಾಗಿ ನುಡಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು,
ಅದರ ಸಾರಾಂಶ ಪ್ರಕಾರ ಇದೆ. “ ನನ್ನ ಅಣ್ಣ ಹುಸೇನಪ್ಪ ಈತನ ಮಗನಾದ ಯಲ್ಲಪ್ಪ ವಯಸ್ಸು 36 ವರ್ಷ ಈತನು
ಸುಮಾರು 5-6 ವರ್ಷಗಳಿಂದ ತನ್ನ ಹೆಂಡತಿ ಗಂಗಮ್ಮ ಹಾಗೂ 5 ಜನ ಮಕ್ಕಳೊಂದಿಗೆ ಗೋರಕಲ್ನಿಂದ ಬಂದು
ಗಂಗಾವತಿಯಲ್ಲಿ ವಾಸವಾಗಿದ್ದನು. ಯಲ್ಲಪ್ಪನು ಸೀಮೆ ಎಣ್ಣೆ ಸಾಗಿಸುವ ಟ್ಯಾಂಕರನಲ್ಲಿ ಕ್ಲೀನರ
ಕೆಲಸ ಮಾಡಿಕೊಂಡಿದ್ದರು. ಯಲ್ಲಪ್ಪನ ತಂದೆ-ತಾಯಿಗಳು ತೀರಿಕೊಂಡಿರುತ್ತಾರೆ. ದಿನಾಂಕ:-
22-09-2105 ರಂದು ಬೆಳಗಿನಜಾವ 05:00 ಗಂಟೆಯ ಸುಮಾರಿಗೆ ಯಲ್ಲಪ್ಪನು ಕೆಲಸ ಮಾಡುವ ಟ್ಯಾಂಕರ್
ಮಾಲೀಕರು ಫೋನ್ ಮಾಡಿ ತಮ್ಮ ಟ್ಯಾಂಕರ ಹುಬ್ಬಳ್ಳಿಯಿಂದ ಗಂಗಾವತಿಗೆ ಸೀಮೆಎಣ್ಣೆ ತೆಗೆದುಕೊಂಡು
ಬರುತ್ತಿರುವಾಗ ಗಂಗಾವತಿ-ಕೊಪ್ಪಳ ಮುಖ್ಯ ರಸ್ತೆಯ ಹಿರೇಬೆಣಕಲ್ ಕ್ರಾಸ್ ಹತ್ತಿರ
ದಿನಾಂಕ:- 21-09-2015 ರಂದು ರಾತ್ರಿ 10:30 ಗಂಟೆಯ ಸುಮಾರಿಗೆ ಪಲ್ಟಿಯಾಗಿ ಬಿದ್ದು
ಯಲ್ಲಪ್ಪನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ, ಶವವನ್ನು ಗಂಗಾವತಿ ಉಪವಿಭಾಗ ಆಸ್ಪತ್ರೆಯಲ್ಲಿ ಹಾಕಲಾಗಿದೆ ಅಂತಾ
ತಿಳಿಸಿದರು. ಕೂಡಲೇ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಗಂಗಾವತಿ-ಕೊಪ್ಪಳ ಮುಖ್ಯ ರಸ್ತೆಯಲ್ಲಿ
ಹಿರೇಬೆಣಕಲ್ ಕ್ರಾಸ್ ಹತ್ತಿರ ಕೊಪ್ಪಳ ಕಡೆಯಿಂದ ಬರುವ ರಸ್ತೆಯ ಬಲಗಡೆ ಸೀಮೆಎಣ್ಣೆ ಟ್ಯಾಂಕರ್
ಉರುಳಿ ಬಿದ್ದಿದ್ದು, ನೋಡಲಾಗಿ ಅದು ಟಾಟಾ ಕಂಪನಿ ಇದ್ದು, ನಂಬರ: ಕೆ.ಎ-35/ 1820 ಅಂತಾ
ಇತ್ತು. ನಂತರ ಗಂಗಾವತಿಗೆ ಬಂದು ಆಸ್ಪತ್ರೆಯ ಶವಾಗಾರ ಕೋಣೆಯಲ್ಲಿದ್ದ ಶವವನ್ನು ನೋಡಲಾಗಿ
ಗದ್ದಕ್ಕೆ, ಮುಖಕ್ಕೆ ಗಾಯಗಳಾಗಿ ತಲೆಯ ಹಿಂಭಾಗದಲ್ಲಿ ತೀವ್ರ ಒಳಪಟ್ಟಾಗಿತ್ತು.
ನಂತರ ಟ್ಯಾಂಕರ ಚಾಲಕನ ಬಗ್ಗೆ ವಿಚಾರಿಸಲು ಆತನ ಹೆಸರು ಸೈಯ್ಯದ್ ಸಿರಾಜ್ ತಂದೆ ಸೈಯ್ಯದ್ ಅಹ್ಮದ್
ಸಾ: ಪ್ರಶಾಂತ ನಗರ-ಗಂಗಾವತಿ ಅಂತಾ ಇದ್ದು, ಆತನಿಗೆ ಸಹ ಸಣ್ಣ ಪುಟ್ಟ ಗಾಯಗಳಾಗಿರುವುದಾಗಿ ತಿಳಿಯಿತು. ಸ್ಥಳ ಪರಿಶೀಲನೆಯಿಂದ ಮತ್ತು ವಿಚಾರಣೆಯಿಂದ ಕಂಡುಬಂದಿದ್ದೇನೆಂದರೆ, ಟ್ಯಾಂಕರ್
ನಂಬರ: ಕೆ.ಎ-35/ 1820 ನೇದ್ದರ ಚಾಲಕ ಸೈಯ್ಯದ್ ಸಿರಾಜ್ ಮತ್ತು ಕ್ಲೀನರನಾದ ಯಲ್ಲಪ್ಪ ತಂದೆ
ಹುಸೇನಪ್ಪ ಸಾ: ಗೋರಕಲ್ ಹಾಲಿವಸ್ತಿ: ಗಂಗಾವತಿ ಇಬ್ಬರೂ ಕೂಡಿಕೊಂಡು ಹುಬ್ಬಳ್ಳಿಯಿಂದ
ಟ್ಯಾಂಕರ್ನಲ್ಲಿ ಸೀಮೆ ಎಣ್ಣೆ ತುಂಬಿಕೊಂಡು ಗಂಗಾವತಿಗೆ ಬರುತ್ತಿರುವಾಗ ದಿನಾಂಕ:- 21-09-2015
ರಂದು ರಾತ್ರಿ 10:30 ಗಂಟೆಯ ಸುಮಾರಿಗೆ ಕೊಪ್ಪಳ-ಗಂಗಾವತಿ ಮುಖ್ಯ ರಸ್ತೆಯಲ್ಲಿ ಚಾಲಕ ಸೈಯ್ಯದ್
ಸೀರಾಜ್ ಈತನು ಟ್ಯಾಂಕರ್ನ್ನು ಅತೀ ವೇಗವಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ
ನಡೆಯಿಸಿದ್ದರಿಂದ ವೇಗವನ್ನು ನಿಯಂತ್ರಿಸಲು ಆಗದೇ ರಸ್ತೆಯ ಪಕ್ಕದಲ್ಲಿ ಪಲ್ಟಿಯಾಗಿ ಉರುಳಿ
ಬಿದ್ದು ಯಲ್ಲಪ್ಪನು ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದು, ಚಾಲಕನಿಗೆ ಸಹ ಸಣ್ಣ ಪುಟ್ಟ
ಗಾಯಗಳಾಗಿದ್ದು, ಕಾರಣ ಮಾನ್ಯರು ಈ ಅಪಘಾತಕ್ಕೆ ಕಾರಣನಾದ ಟ್ಯಾಂಕರ್ ಚಾಲಕ
ಸೈಯ್ಯದ್ ಸಿರಾಜ್ ಈತನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ. ಅಂತಾ
ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಗಂಗಾವತಿ. ಪ್ರಕರಣ ದಾಖಲು
ಮಾಡಿ ತನಿಖೆ ಕೈಗೊಳ್ಳಲಾಯಿತು.
0 comments:
Post a Comment