ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 179/2015 ಕಲಂ 323, 504, 506 ಸಹಿತ 34 ಐ.ಪಿ.ಸಿ. ಮತ್ತು 3(1)(10)
ಎಸ್.ಸಿ/ಎಸ್.ಟಿ. ಕಾಯ್ದೆ 1989:.
ದಿನಾಂಕ: 23-09-2015
ರಂದು 10-00 ಪಿ.ಎಂ. ಕ್ಕೆ ಫಿರ್ಯಾದಿದಾರ ರಮೇಶ ತಂದೆ ಗವಿಸಿದ್ದಪ್ಪ ಗಿಣಿಗೇರಿ ಠಾಣೆಗೆ
ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ದಿನಾಂಕ: 20-09-2015 ರಂದು 11-00 ಎ.ಎಮ್.
ಕ್ಕೆ ಕೊಪ್ಪಳ ನಗರದ ಗವೀಶ್ರೀ ನಗರದ ಕವಲೂರ ಮಲ್ಲಪ್ಪ ಇವರ ಮನೆಯ ಮುಂದೆ ಶ್ರೀ ಚಂದ್ರಪ್ಪ
ಜಡಿಯವರಿಗೆ ಸಂಬಂಧಿಸಿದ ಆಸ್ತಿ ವ್ಯಾಜ್ಯ ಬಗೆಹರಿಸಲು ಹೋದಾಗ ಅಲ್ಲಿ ನನ್ನ ತಂದೆಯ ತಮ್ಮನಾದ
ಭೀಮಪ್ಪ ಜಂತಕಲ್ ಹಾಗೂ ಅವರ ಮಕ್ಕಳಾದ ಪ್ರವೀಣ ತಂದೆ ಭೀಮಪ್ಪ ಜಂತಕಲ್, ಅನಂತಕುಮಾರ ಕಾಳಪ್ಪ
ಜಂತಕಲ್, ವಿನೋದ ನಾಗರಾಜ ಜಂತಕಲ್ ಸಾ: ವಿಕಾಸ ನಗರ ಕೊಪ್ಪಳ ಇವರು ಸೇರಿ ಅವರಿಗೆ
ಸಂಬಂಧವಿಲ್ಲದ ವಿಷಯದಲ್ಲಿ ಬಂದು ನನಗೆ ಏಕಾಏಕಿ ಮಾದಿಗ ಸೂಳೆ ಮಗನ್ನ ಯಾಕ ನ್ಯಾಯಾ
ಬಗಿಹರಿಸಲಿಕ್ಕೆ ಕರಿಸಿರಿ ಅಂತಾ ಜಾತಿ ನಿಂದನೆ ಮಾಡಿದ್ದರಿಂದ ನಾನು ಕೇಳಲು ಹೋದರೆ ನಿನಗೆ ಮತ್ತು
ನಿನ್ನ ಕುಟುಂಬದವರಿಗೆ ರೋಡಿನಲ್ಲಿ ಪೆಟ್ರೊಲ್ ಹಾಕಿ ಸುಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿ,
ಎಲ್ಲರೂ ಕೂಡಿ ನನಗೆ ತೊಡೆಯ ಸಂಧಿಯಲ್ಲಿ ಎದೆಗೆ ಕಿವಿಗೆ, ಕಪಾಳಕ್ಕೆ ಹೊಟ್ಟೆಗೆ ಹೊಡಿಬಡಿ
ಮಾಢಿರುತ್ತಾರೆ. ಆ ಕಾಲಕ್ಕೆ ನನ್ನ ಕೊರಳಲಿದ್ದ ಬಂಗಾರದ ಚೈನು ಸರ ಕೂಡಾ ಹೋಗಿದ್ದು, ಸದರಿವಯವರು
ಹುಬ್ಬಳ್ಳಿಯಿಂದ ರೌಡಿಗಳನ್ನು ಕರೆಯಿಸಿ ನನ್ನ ಮತ್ತು ನನ್ನ ಕುಟುಂಭವರಿಗೆ ಪೆಟ್ರೊಲ್ ಉಗ್ಗಿ
ಬೆಂಕಿ ಹಚ್ಚುತ್ತೀವಿ ಅಂತಾ ಪ್ರಾಣ ಬೆದರಿಕೆ ಹಾಕಿರುತ್ತಾರೆ ನಮಗೆ ರಕ್ಷಣೆ ನೀಡಬೇಕು ಅಂತಾ
ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2) ಹನುಮಸಾಗರ ಪೊಲೀಸ್ ಠಾಣೆ ಗುನ್ನೆ.ನಂ. 92/2015 ಕಲಂ 143,147,148,323,324,504,506, 109 ಸಹಿತ 149.
ದಿನಾಂಕ:23-09-2015
ರಂದು ಬೆಳಿಗ್ಗೆ 11:30 ಗಂಟೆಗೆ ಫಿರ್ಯಾಧಿದಾರರಾದ ಬಸವರಾಜ ತಂದೆ ಫಕೀರಪ್ಪ ನೀಲಗುಂದ. ಸಾ:ಜಾಹಗೀರ
ಗುಡದೂರ ರವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿ
ಹಾಜರುಪಡಿಸಿದ್ದರ ಸಾರಾಂಶವೇನೆಂದರೆ ಆರೋಪಿ ಹಾಗೂ ಫಿರ್ಯಾದಿದಾರರಿಗೆ ಪ್ಲಾಟಿನ ವಿಷಯವಾಗಿ ತಕರಾರು
ಇರುತ್ತದೆ. ಇಂದು ದಿನಾಂಕ 23-09-2015ರಂದು ಬೆಳಿಗ್ಗೆ 09:00 ಗಂಟೆ ಸುಮಾರಿಗೆ ಫಿರ್ಯಾದಿ ತಮ್ಮ
ಶಿವರಾಜ ಈತನು ಶ್ರೀ ಶರಣಬಸವೇಶ್ವರ ಗುಡಿಯ ಹತ್ತಿರ ಹೋದಾಗ
ಆರೋಪಿತರಾದ 1) ಹಣಮಂತ.2)ಶಾಂತವ್ವ. 3)ಯಮನೂರಪ್ಪ. ಇವರು ಶಿವರಾಜನಿಗೆ ಇಲ್ಲಿ ಯಾಕೇ ಅಡ್ಡಾಡುತ್ತೀಲೇ ಸೂಳೇ ಮಕ್ಕಳೆ
ಅಂತಾ ಅವಾಚ್ಯವಾಗಿ ಬೈದಾಡಿ ಕೈಯಿಂದ ಹೊಡೆದು ಕಟ್ಟಿಗೆ, ಬಡಿಗೆಯಿಂದ ಪಿರ್ಯಾದಿ ಕಾಲಿಗೆ ಹೊಡೆದು ಹಾಗೂ
ಫಿರ್ಯಾದಿ ಅಣ್ಣ ಶರಣಪ್ಪನಿಗೆ ಬಡಿಗೆಯಿಂದ ತಲೆಗೆ ಹೊಡೆದು ರಕ್ತ ಗಾಯ ಮಾಡಿರುತ್ತಾರೆ ಹಾಗೂ ಹಿಂದಿನಿಂದ
4)ದೇವೇಂದ್ರಪ್ಪ 5)ಹುಚ್ಚಪ್ಪ ರವರು ಈ ಸೂಳೇ ಮಕ್ಕಳಿಗೆ ಸಾಹಿಸಿ ಬಿಡು ಅಂತಾ ಪ್ರಚೋದಿಸಿರುತ್ತಾರೆ.
ಹಾಗೂ ಜಾಗದ ವಿಷಯವಾಗಿ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಜೀವ ಸಹಿತವಾಗಿ ಬಿಡುವದಿಲ್ಲವೆಂದು ಜೀವ
ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿ ಫಿರ್ಯಾದಿ ಇರುತ್ತದೆ.
3) ಹನುಮಸಾಗರ ಪೊಲೀಸ್ ಠಾಣೆ ಗುನ್ನೆ.ನಂ. 93/2015 ಕಲಂ 143,147,148,323,324,504,506, ಸಹಿತ 149.
ದಿನಾಂಕ:23-09-2015 ರಂದು ಮದ್ಯಾಹ್ನ 14-30 ಗಂಟೆಗೆ ಫಿರ್ಯಾಧಿದಾರರಾದ ಶಾಂತವ್ವ
ಗಂಡ ಹನಮಪ್ಪ ನೀಲಗುಂದ ಸಾ:ಜಾಹಗೀರಗುಡದೂರ ರವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿ ಹಾಜರುಪಡಿಸಿದ್ದರ
ಸಾರಾಂಶವೇನೆಂದರೆ, ಆರೋಪಿ ಹಾಗೂ ಫಿರ್ಯಾದಿದಾರರಿಗೆ ಪ್ಲಾಟಿನ ವಿಷಯವಾಗಿ ತಕರಾರು ಇರುತ್ತದೆ. ಇಂದು
ದಿನಾಂಕ 23-09-2015 ರಂದು ಬೆಳಿಗ್ಗೆ 09:00 ಗಂಟೆ ಸುಮಾರಿಗೆ ಫಿರ್ಯಾದಿಯ ಮಗ ಯಮನೂರಪ್ಪನು ತಮ್ಮ
ಮನೆಯ ಮುಂದೆ ನಳದ ಮುಂದೆ ನೀರು ತುಂಬುವಾಗ ತಮ್ಮ ಮನೆಯ ಮುಂದೆ ಎತ್ತುಗಳನ್ನು ಕಟ್ಟಿಹಾಕಿದ್ದು ತಮ್ಮೂರಿನ
ಶಿವಪ್ಪ ರವರು ನಳಕ್ಕೆ ನೀರು ತುಂಬಲು ಬಂದಾಗ ಎತ್ತುಗಳು ಗುದ್ದುತ್ತವೆ ಸ್ವಲ್ಪ ದೂರದಿಂದ ಅಡ್ಡಾಡು
ಅಂತಾ ಹೇಳಿದ್ದಕ್ಕೆ ಅದಕ್ಕೆ ಅವನು ಅವಾಚ್ಯ ಶಬ್ದಗಳಿಂದ ಬೈದು ಜಗಳ ತೆಗೆದು, ಅವರ ಅಣ್ಣನಾದ ಶರಣಪ್ಪ, ತಮ್ಮನಾದ ಬಸವರಾಜ ನಾವು ಇಲ್ಲೆ ನೀರು ತುಂಬುತ್ತೇವೆ ನಿಮಗೇನು ತೊಂದರೆ? ಆಗುತ್ತದೆಂದು ಅದಕ್ಕೆ ನಿಮ್ಮ ಜಾಗಯೇನು ಸೂಳೇ ಮಕ್ಕಳೇ ಅಂತಾ ಅವಾಚ್ಯವಾಗಿ ಬೈದು ತನ್ನ ಮಗನಾದ ಯಮನುರಪ್ಪನಿಗೆ ಶರಣಪ್ಪನು ಬಂದು ಕಲ್ಲಿನಿಂದ ಹೊಡೆದನು. ತಮ್ಮ ಮಗನಿಗೆ ತಲೆಗೆ ಗಾಯವಾಗಿದ್ದು ನಂತರ ಲಕ್ಷ್ಮವ್ವ, ಬಸವ್ವ, ಮಹಾದೇವಿ ಮತ್ತು ಮಲ್ಲವ್ವ ಇವರೆಲ್ಲರೂ ಬಂದು ಅವಾಚ್ಯ ಶಬ್ಧಗಳಿಂದ ಬೈದಾಡಿದರು ಮತ್ತು ಕೈಯಿಂದ ಬೆನ್ನಿಗೆ ತಮಗೆ ಬಡಿದರು. ಜಾಗದ ವಿಷಯವಾಗಿ ತಮ್ಮ ತಂಟೆಗೆ ಬಂದರೆ ನಿಮ್ಮನ್ನು ಜೀವಸಹಿತ ಬಿಡುವದಿಲ್ಲವೆಂದು ಜೀವ ಬೆದರಿಕೆ ಹಾಕಿದ್ದು ಅಂತಾ ಮುಂತಾಗಿ ಫಿರ್ಯಾದಿ ಅದೆ.
4) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ.ನಂ. 165/2015 ಕಲಂ 279, 338 ಐ.ಪಿ.ಸಿ:.
ದಿನಾಂಕ: 23-09-2015 ರಂದು ಸಂಜೆ 6-15 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಲಿಖಿತ
ಪಿರ್ಯಾದಿ ಹಾಜರಪಡಿಸಿದ್ದು ಸದರ ಫಿರ್ಯಾದಿ ಸಾರಂಶವೆನೆಂದರೆ ನಿನ್ನೆ ದಿನಾಂಕ: 22-09-2015
ರಂದು ಮುಂಜಾನೆ ಗಂಗಾವತಿಯಲ್ಲಿ ತಮ್ಮ ಸಂಬಂಧಿಕರು ತೀರಿಕೊಂಡಿದ್ದರಿಂದ ಮಣ್ಣಿಗೆ ಹೋಗಿ ಮಣ್ಣಿನ
ಕಾರ್ಯಕ್ರಮವನ್ನು ಮುಗಿಸಿಕೊಂಡು ವಾಪಾಸ್ ಊರಿಗೆ ಬರಲು ಗಂಗಾವತಿ ಬಸ್ ನಿಲ್ದಾಣದಿಂದ ಬಸ್ ಹತ್ತಿ
ಕುಷ್ಟಗಿಗೆ ಹೋರಟಿದ್ದು ಸಾಯಂಕಾಲ 7-30 ಗಂಟೆಗೆ ಬಸ್ ಕುಷ್ಟಗಿ ಬಸ್ ನಿಲ್ದಾಣದಲ್ಲಿ ಬಂದಿದ್ದು
ಬಸ್ ಚಾಲಕನು ಬಸ್ ನಿಲ್ಲಿಸಿದ್ದರಿಂದ ಪಿರ್ಯಾದಿದಾರನು ಬಸ್ ನಿಂದ ಕೆಳಗೆ ಇಳಿಯುತ್ತಿರುವಾಗ ಸದರಿ
ಬಸ್ ಚಾಲಕನು ಒಮ್ಮಿಂದೊಮ್ಮೆಲೆ ಬಸ್ ನ್ನು ಮುಂದಕ್ಕೆ ವೇಗವಾಗಿ ಅಲಕ್ಷ್ಯತನದಿಂದ ನಡೆಸಿದ್ದರಿಂದ
ಆತನು ಜೋಲಿ ತಪ್ಪಿ ಕೆಳಗೆ ಬಿದ್ದಿದ್ದು ಅದರಿಂದ ಫಿರ್ಯಾದಿದಾರನಿಗೆ ಬಲ ತೊಡೆಗೆ ಭಾರಿ
ಒಳಪೆಟ್ಟಾಗಿದ್ದು ಮತ್ತು ಬಲ ಕಣ್ಣಿನ ಮೇಲೆ ರಕ್ತ ಗಾಯವಾಗಿದ್ದು ನಂತರ ಬಸ್ ನಂಬರ ನೋಡಲಾಗಿ
ಕೆ.ಎ-37/ಎಫ್ -406 ಅಂತಾ ಇದ್ದು ಅದರ ಚಾಲಕನು ವಿಜಯಕುಮಾರ ತಂದೆ ಶರಣಗೌಡ ಲೆಕ್ಕಿಹಾಳ ವ: 23
ವರ್ಷ ಸಾ: ಗಟ್ಟಿಗನೂರು ತಾ: ಹುನಗುಂದ ಅಮತಾ ತಿಳಿಸಿದನು. ನಂತರ ತನನ್ನು ಯಾರೋ ಒಂದು ಖಾಸಗಿ
ವಾಹನದಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆಗಾಗಿ ಸೇರಿಕೆ ಮಾಡಿದ್ದು ನಂತರ ಅವರ ಮಗನಿಗೆ
ಫೊನ ಮಾಡಿ ವಿಷಯ ತಿಳಿಸಿ ಅವರ ಮಗನು ನಾನು ಬರುತ್ತೇನೆ ಸದ್ಯ ಫಿರ್ಯಾದಿ ಕೊಡುವದು ಬೇಡ ಅಂತಾ
ತಿಳಿಸಿದ್ದರಿಂದ ನಂತರ ಅವರ ಮಗ ನಾಗರಾಜ ಅಳ್ಳಿ ಇತನೊಂದಿಗೆ ವಿಚಾರ ಮಾಡಿ ತಡವಾಗಿ ಬಂದು
ಫಿರ್ಯಾದಿಯನ್ನು ಬರೆಯಿಸಿಕೊಟ್ಟಿದ್ದು ಕಾರಣ ಸದರಿ ಬಸ್ ನಂ: ಕೆ.ಎ.37/ ಎಫ್ – 406 ನೇದ್ದರ
ಚಾಲಕನಾದ ವಿಜಯಕುಮಾರ ತಂದೆ ಶರಣಗೌಡ ಲೆಕ್ಕಿಹಾಳ ವ: 23 ವರ್ಷ ಜಾತಿ: ಗಾಣಿಗೇರ
:ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-37/ಎಫ್-406 ನೇದ್ದರ ಚಾಲಕ ಸಾ: ಗಟ್ಟಿಗನೂರು ತಾ:
ಹುನಗುಂದ ಜಿ: ಬಾಗಲಕೋಟ ಇತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ
ಸಾರಾಂಶ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
0 comments:
Post a Comment