ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 180/2015 ಕಲಂ 143,
147, 341, 323, 504, 506 ಸಹಿತ 149 34 ಐ.ಪಿ.ಸಿ:.
ದಿ: 25-09-2015 ರಂದು 10-15 ಪಿ.ಎಮ್ ಕ್ಕೆ ಫಿರ್ಯಾದಿ ನಾಗರಾಜ ಜಂತಕಲ್ ಸಾ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ನಾನು ಹಾಗೂ ನನ್ನ ತಮ್ಮ ಭೀಮಣ್ಣ, ಆತನ ಮಗ ಅನಂತಕುಮಾರ 03 ಜನ ಕೂಡಿ ನಮ್ಮ ಆಸ್ತಿಯ ವ್ಯಾಜ್ಯ ಬಗೆಹರಿಸಿಕೊಳ್ಳಲು ಅಂತಾ ಗವೀಶ್ರಿ ನಗರದ ಮಲ್ಲಪ್ಪ ಕವಲೂರ ಇವರ ಮನೆಗೆ ಹೋಗಿದ್ದು, ಅಲ್ಲಿಗೆ ನಮೂದು ಆರೋಪಿತರು ಸಹ ಬಂದಿದ್ದು, ನಂತರ ನಾವು ವ್ಯಾಜ್ಯ ಬಗೆಹರಿಸಿಕೊಂಡು ಮನೆಯಿಂದ ಹರಗಡೆ ಬಂದು ಸ್ವಲ್ಪ ಮುಂದೆ ಹೋಗುತ್ತಿದ್ದಾಗ, ಆರೋಪಿತರು ಗುಂಪು ಕಟ್ಟಿಕೊಂಡು ಬಂದು ನಮ್ಮನ್ನು ತಡೆದು ನಿಲ್ಲಿಸಿ ಲೇ ಬೋಸೂಡಿ ಮಕ್ಕಳೆ ನೀವು ಸರಿಯಾಗಿ ಪಾಲು ಮಾಡಿಲ್ಲ, ನಾವು ಆಸ್ತಿಯನ್ನು ಯಾವ ರೀತಿ ತೆಗೆದುಕೊಳ್ಳಬೇಕು ಅಂತಾ ನಮಗೆ ಗೊತ್ತು ಅಂತಾ ರಮೇಶ ನನಗೆ ಕಪಾಳಕ್ಕೆ ಹೊಡೆದಿದ್ದು, ನಂತರ ನನಗೆ ಮತ್ತು ಭೀಮಣ್ಣನಿಗೆ ಅನಂತಕುಮಾರನಿಗೆ ಈ ಸೂಳೆ ಮಕ್ಕಳದು ಬಹಳ ಆಗೈತಿ ಅಂತಾ ಅನ್ನುತ್ತಾ ಇವರಿಗೆ ಮುಗಿಸಿಬಿಟ್ಟರೆ ಆಸ್ತಿ ಎಲ್ಲಾ ನಮ್ಮ ಪಾಲು ಆಗುತ್ತ ಅಂತಾ ನಮಗೆಲ್ಲಾ ಮನಬಂದಂತೆ ಕೈಯಿಂದ ಬಡೆದು ಕಾಲಿನಿಂದ ಒದ್ದು ದುಖಾಪತ್ ಗೊಳಿಸಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ನೀಡಿದ ದೂರಿನ ಮೇಲಿಂದ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದು ಅದೆ.
2) ಕುಕನೂರ ಪೊಲೀಸ್ ಠಾಣೆ ಯುಡಿಅರ್ ನಂ:24/15 ಕಲಂ:174 ಸಿ.ಅರ್.ಪಿ.ಸಿ.
ದಿನಾಂಕ:25-09-2015 ರಂದು
11-00 ಎಎಂಕ್ಕೆ ವರದಿದಾರ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕರಣ ಮಾಡಿದ ಒಂದು ವರದಿಯನ್ನು ಹಾಜರಪಡಿಸಿದ್ದು,
ಅದರ ಸಾರಾಂಶವೇನೆಂದರೆ, ವರದಿದಾರ ದತ್ತಕ್ಕೆ ಹೋಗಿ ಗಾವರಾಳದಲ್ಲಿ ತನ್ನ ಚಿಕ್ಕಪ್ಪನ ಆಸ್ತಿಗೆ ಹೋಗಿದ್ದು,
ಆದರೆ ಮೃತ ಕೋಮಲಾಪುರದಲ್ಲಿಯ ತನ್ನ ತಂದೆಯ ಮನೆತನದ ಜವಾಬ್ದಾರಿಯನ್ನು ನೋಡಿಕೊಂಡಿದ್ದು, ಮೃತನ ತಂದೆ
ಸನ್ 2009ರಲ್ಲಿ ಎಸ್.ಬಿ.ಹೆಚ್. ಶಾಖೆ ತಳಕಲ್ ದಲ್ಲಿ ಕೃಷಿ ಉದ್ದೇಶಕ್ಕಾಗಿ ಸಾಲ ಮಾಡಿ, ಮೃತಪಟ್ಟಿದ್ದು,
ಅದನ್ನು ತೀರಿಸಲು ಬ್ಯಾಂಕಿನಿಂದ ನೋಟಿಸ್ ಬರುತ್ತಿದ್ದು, ಇದರಿಂದ ಸಾಲ ತೀರಿಸಲು ಆಗದೇ ಜೀವನದಲ್ಲಿ
ಜುಗುಪ್ಸೆಗೊಂಡು ಮೃತ ದಿನಾಂಕ:24-09-2015 ರಂದು 11-00 ಪಿಎಂಕ್ಕೆ ತನ್ನ ಮನೆಯಲ್ಲಿ ಸೀರೆಯಿಂದ ಉರುಲು
ಹಾಕಿಕೊಂಡಿದ್ದು, ನೋಡಿದ ಹೆಂಡತಿ ಮತ್ತು ತಾಯಿ ಬಾಯಿ ಮಾಡಿದ್ದರಿಂದ ಓಣಿಯ ಜನರು ಬಂದು ಎತ್ತಿ ಹಿಡಿದು
ಉರುಲು ಬಿಚ್ಚಿ ಚಿಕಿತ್ಸೆ ಕುರಿತು ಕೊಪ್ಪಳ ಜಿಲ್ಲಾ ಸರ್ಕಾರೀ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು
ಮಾಡಲು ಹೊರಟಾಗ ದಾರಿಯಲ್ಲಿ ದಿನಾಂಕ:25-09-2015 ರಂದು 12-30 ಎಎಂಕ್ಕೆ ಮೃತಪಟ್ಟಿದ್ದು ಇರುತ್ತದೆ.
ಅಂತಾ ಮುಂತಾಗಿ ಇದ್ದ ವರದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
0 comments:
Post a Comment