ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 98/2015
ಕಲಂ 78(3) Karnataka Police
Act.
ದಿನಾಂಕ: 26-09-2015 ರಂದು ಸಾಯಂಕಾಲ 6-45 ಗಂಟೆಯ ಸುಮಾರಿಗೆ ತುಮ್ಮರಗುದ್ದಿ ಗ್ರಾಮದಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಬಲಗಡೆ
ಇರುವ ಬೇವಿನ ಗಿಡದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ಕೂಡಿಕೊಂಡು ದುಂಡಾಗಿ
ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ ದಾಳಿ
ಮಾಡಿ ಹಿಡಿದಿದ್ದು 3 ಜನರು ಸಿಕ್ಕಿ ಬಿದ್ದಿದ್ದು 10 ಜನ ಆರೋಪಿತರು ಓಡಿ ಹೋಗಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತರ ಹತ್ತಿರ ಮತ್ತು
ಕಣದಲ್ಲಿದ್ದ ಒಟ್ಟು 1,110=00 ರೂಪಾಯಿ ನಗದು ಹಣ, 52 ಇಸ್ಪೀಟ ಎಲೆಗಳು, ಒಂದು ಹಳೆ ಪ್ಲಾಸ್ಟೀಕ್ ಬರಕ
ಅಂ.ಕಿ. ಇಲ್ಲ. ಇವುಗಳು ಸಿಕ್ಕಿದ್ದು ಇರುತ್ತದೆ. ಈ ಬಗ್ಗೆ ಠಾಣಾ ಗುನ್ನೆ ನಂ 98/2015 ಕಲಂ 87
ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 129/15 ಕಲಂ: 363,
109 ಸಹಿತ 34 ಐ.ಪಿ.ಸಿ:.
ದಿನಾಂಕ:26-09-2015 ರಂದು
9-00 ಪಿಎಂಕ್ಕೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ,
ತಮ್ಮ ಮಗಳು ವ:15ವರ್ಷ, ಈಕೆಯು ದಿನಾಂಕ:23-09-2015 ರಂದು ಮುಂಜಾನೆ 9-00 ಗಂಟೆಗೆ ಶಾಲೆಗೆ ಹೋಗಿದ್ದು,
ಆದರೆ, ಸಾಯಂಕಾಲವಾದರೂ ವಾಪಸ್ ಬಾರದೇ ಇದ್ದುದರಿಂದ ತಾವು ಊರಲ್ಲಿ ವಿಚಾರಿಸಿದ್ದು ಅಲ್ಲದೇ, ಮರುದಿವಸ
ಶಾಲೆಯಲ್ಲಿ ಕೇಳಲಾಗಿ ಅವಳು ಅಂದು ಮದ್ಯಾಹ್ನ 12-00 ಗಂಟೆಗೆ ಶಾಲೆಯಿಂದ ಹೋಗಿರುವುದಾಗಿ ತಿಳಿಸಿರುತ್ತಾರೆ.
ಈಗ್ಗೆ ಎರಡು ತಿಂಗಳ ಹಿಂದೆ ಆರೋಪಿ ಮಾರುತಿ ಇವನು ಚುಡಾಯಿಸಿದ್ದರಿಂದ ಹಿರಿಯರ ಮುಖಾಂತರ ತಾಕೀತು ಮಾಡಿಸಿದ್ದು,
ಮಾರುತಿ ಇವನೇ ಅವರ ಅಣ್ಣ ವಿರೇಶ ಇವನ ಪ್ರಚೋದನೆಯ ಮೇರೆಗೆ ತನ್ನ ಮಗಳನ್ನು ದಿನಾಂಕ:23-09-2015 ರಂದು
ಮದ್ಯಾಹ್ನ 12-00 ಗಂಟೆಗೆ ಅಪಹರಿಸಿಕೊಂಡು ಹೋಗಿದ್ದು, ಮಾರುತಿ ಇವನು ಸಹ ಅಂದಿನಿಂದ ಊರಲ್ಲಿ ಇರುವುದಿಲ್ಲಾ.
ಕಾರಣ, ಮಾರುತಿ ಮತ್ತು ವಿರೇಶ ಇವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ
ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.
0 comments:
Post a Comment