ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ನಗರ ಪೊಲೀಸ್
ಠಾಣೆ ಗುನ್ನೆ ನಂ. 182/2015 ಕಲಂ 34 ಅಬಕಾರಿ ಕಾಯ್ದೆ ಮತ್ತು 188
ಐಪಿಸಿ:.
ದಿ: 27-09-2015 ರಂದು ರಾತ್ರಿ 9-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಸತೀಶ ಪಾಟೀಲ್ ಪಿ.ಐ.
ನಗರ ಠಾಣೆ ಕೊಪ್ಪಳ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೇನೆಂದರೆ, ದಿ:
27-09-2015 ರಂದು ಸಂಜೆ 07-30 ಗಂಟೆಗೆ ಕೊಪ್ಪಳ ನಗರದ ಬಸವೇಶ್ವರ ಸರ್ಕಲ್ ಹತ್ತಿರ ಯಾತ್ರಿ ನಿವಾಸ
ಹೊಟೇಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ ಮಂಜುನಾಥ ಹಾಗೂ ಗಣೇಶ ಕಾಟವಾ
ಸಾ: ಕೊಪ್ಪಳ ಇವರು ಯಾವುದೇ ಅಧೀಕೃತ ಲೈಸನ್ಸ ಇಲ್ಲದೆ, ಅನಧೀಕೃತವಾಗಿ ಮಧ್ಯದ ಬಾಟಲಿಗಳನ್ನು ಮಾರಾಟ
ಮಾಡುತ್ತಿದ್ದಾಗ ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು, ಸದರಿಯವರು ಗೌರಿ ಗಣೇಶ ಹಬ್ಬದ ಕಾಲಕ್ಕೆ ಇರುವ
ಮಾನ್ಯ ಜಿಲ್ಲಾಧಿಕಾರಿಗಳು ಕೊಪ್ಪಳ ರವರ ಮಧ್ಯಪಾನ ನಿಷೇದ ಆದೇಶವನ್ನು ಉಲ್ಲಂಘನೆ ಮಾಡಿದ್ದು ಇರುತ್ತದೆ.
ಅಂತಾ ಆರೋಪಿ, ಮುದ್ದೆಮಾಲು ಸಮೇತ ಹಾಜರುಪಡಿಸಿದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು
ಅದೆ.
2) ಕೊಪ್ಪಳ ಗ್ರಾಮೀಣ
ಪೊಲೀಸ್ ಠಾಣೆ ಗುನ್ನೆ
ನಂ: 241/15 ಕಲಂ: 279, 337, 338 ಐ.ಪಿ.ಸಿ:.
ದಿನಾಂಕ- 27.09.15 ರಂದು 2.30
ಪಿ.ಎಂ ಕ್ಕೆ ಜಿಲ್ಲಾ ಆಸ್ಪತ್ರೆಯಿಂದ ವಾಹನ ಅಪಘಾತದಲ್ಲಿ ಗಾಯಗೊಂಡವರು
ಚಿಕಿತ್ಸೆಗಾಗಿ ದಾಖಲಾದ ಬಗ್ಗೆ ಎಂ.ಎಲ್.ಸಿ ಬಂದಿದ್ದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಲಕ್ಷ್ಮಣ
ಹರಿಜನ ಇವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ-27.09.2015
ರಂದು ಮದ್ಯಾನ್ನ 01.30 ಗಂಟೆಗೆ ನಾನು ನನ್ನ ರಾಟಿ ಮಷಿನ್ ರಿಪೇರಿ ಮಾಡಿಸಲು ಅಂತಾ ನನ್ನ ಮೋಟಾರ್ ಸೈಕಲ್ ನಂಬರ್-ಕೆಎ37-ಎಲ್-5701 ನೇದ್ದರಲ್ಲಿ ಹಿಂದೆ ನಮ್ಮೂರ
ಆಂಜನೆಯ ಈತನನ್ನು ಕೂಡ್ರಿಸಿಕೊಂಡು ಗಿಣಗೇರಿ ದಾಟಿ ಬಸಾಪುರ ಗ್ರಾಮದ ಸಿಮೆ ದುರಗಮ್ಮ ಗುಡಿಯ
ಹತ್ತಿರ ರಸ್ತೆಯ ಎಡಬಾಜು ಬರುತ್ತಿರುವಾಗ ಅದೇ ವೇಳೆಗೆ ಎದುರುಗಡೆ ಕೊಪ್ಪಳ
ಕಡೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ಸ ನಂಬರ್ ಕೆಎ36 ಎಪ್ 922 ನೇದ್ದರ ಚಾಲಕನು ತನ್ನ
ಬಸ್ಸನ್ನು ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಓಡಿಸಿಕೊಂಡು
ಒಮ್ಮೆಲೆ ಬಲಗಡೆ ತೆಗೆದುಕೊಂಡು ನನ್ನ ಮೊ.ಸೈಕಲ್ಲಿಗೆ ಟಕ್ಕರ ಕೊಟ್ಟಿದ್ದು ಈ ಅಪಘಾತದಲ್ಲಿ ನನಗೆ
ಮತ್ತು ಆಂಜನೇಯನಿಗೆ ಸಾದಾ ಮತ್ತು ಭಾರಿ ಸ್ವರೂಪದ ರಕ್ತಗಾಯಗಳಾಗಿದ್ದು ಇರುತ್ತದೆ. ಕಾರಣ ಸದರಿ
ಬಸ್ ಚಾಲಕ ಸಿದ್ದಪ್ಪ ಅಂಬಿಗೇರ ರಾಯಚೂರ ಡಿಪೋ ಈತನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ನೀಡಿದ
ದೂರನ್ನು ಪಡೆದುಕೊಂಡು, ವಾಪಸ್ ಠಾಣೆಗೆ ಸಂಜೆ 5.30
ಗಂಟೆಗೆ ಬಂದು ಸದರಿ ದೂರಿನ ಮೇಲಿಂದ ಠಾಣಾ ಗುನ್ನೆ ನಂ 241/2015
ಕಲಂ-279, 337, 338 ಐಪಿಇ ಅಡಿಯಲ್ಲಿ ಪ್ರಕರಣದ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3) ಹನುಮಸಾಗರ ಪೊಲೀಸ್ ಠಾಣೆ ಗುನ್ನೆ.ನಂ. 97/2015 ಕಲಂ 279, 338
ಐ.ಪಿ.ಸಿ:.
ದಿನಾಂಕ: 27-09-2015
ರಂದು ಗಜೇಂದ್ರಗಡ ಕಡೆಯಿಂದ ಬಸ್ ನಂ: ಕೆ.ಎ-27 ಎಫ್.-514
ನೇದ್ದರ ಚಾಲಕನು ತನ್ನ ಬಸನ್ನು ಅತೀ ವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಮುಂದೆ ಹನಮಸಾಗರ ಬಸ್ ನಿಲ್ದಾಣ ಇನ್ನು ಸ್ವಲ್ಪ ದೂರದಲ್ಲಿ ರೋಡಿನ ಮೇಲೆ ಸೈಕಲ್ ಮೇಲೆ ಹೊರಟ 10 ವರ್ಷದ ಬಾಲಕ ಜಾವೀದ ತನಿಗೆ ಹಿಂದಿನಿಂದ ಠಕ್ಕರಕೊಟ್ಟು ಅಪಘಾತಪಡಿಸಿದ್ದು ಅಪಘಾತದಲ್ಲಿ ಬಾಲಕನ ಬಲಗಾಲ ಪಾದಕ್ಕೆ ಬಾರಿ ರಕ್ತಗಾಯವಾಗಿ ಮುರಿದಂತಾಗಿ
ಬಾವು ಬಂದಿದ್ದು ಹಾಗೂ ಹಣೆಗೆ, ಮೂಗಿಗೆ ತೆರಚಿದ
ಗಾಯಗಳಾಗಿದ್ದು ಇರುತ್ತದೆ ಸೈಕಲ್ ಸ್ವಲ್ಪ ಡ್ಯಾಮೇಜ ಆಗಿದ್ದು ಇರುತ್ತದೆ. ಸದರ ಘಟನೆಯನ್ನು
ಫಿರ್ಯಾದಿ ಪ್ರತ್ಯಕ್ಷ ಕಂಡಿದ್ದು ನಂತರ ಗಾಯಾಳನ್ನು ಉಪಚಾರ ಕುರಿತು ಹನಮಸಾಗರ ಆಸ್ಪತ್ರೆಗೆ
ಸೇರಿಕೆ ಮಾಡಿ ನಂತರ ಅಲ್ಲಿಂದ ಹೆಚ್ಚಿನ ಲಾಜು ಕುರಿತು ಬಾಗಲಕೋಟ ಆಸ್ಪತ್ರೆಗೆ ಹೊಗಿದ್ದು
ಇರುತ್ತದೆ ಕಾರಣ ಬಸ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ
ಇರುತ್ತದೆ.
0 comments:
Post a Comment