Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, October 1, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 187/2015  ಕಲಂ 78(3) Karnataka Police Act:.
ದಿ:30-09-2015 ರಂದು ಸಾಯಂಕಾಲ 6-00 ಗಂಟೆಗೆ  ಶ್ರೀ ಸತೀಶ ಪಾಟಲ ಪಿ.ಐ. ನಗರ ಠಾಣೆ ಕೊಪ್ಪಳ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕರಣ ಮಾಡಿದ ಫಿರ್ಯಾದಿಯ ಹಾಜರುಪಡಿಸಿದ್ದು, ಸದರಿ ದೂರು ಅಂಸಜ್ಞೆಯ ಪ್ರಕರಣವಾಗಿದ್ದರಿಂದ ಸದರಿ ದೂರನ್ನು ದಾಖಲಿಸಿ ತನಿಖೆ ಕೈಗೊಳ್ಳಲು ಕೂಡಲೇ ಮಾನ್ಯ ನ್ಯಾಯಾಲಯಕ್ಕೆ ಯಾದಿ ಮೂಲಕ ವಿನಂತಿಸಿ ಅನುಮತಿ ಪಡೆದುಕೊಂಡಿದ್ದು, ಸದರಿ ದೂರಿನ ಸಾರಾಂಶನೆಂದರೆ, ದಿ: 30-09-2015 ರಂದು 05-00 ಪಿ.ಎಂ. ಕ್ಕೆ ಕೊಪ್ಪಳ ನಗರದ ಕನಕಾಚಲ ಟಾಕೀಜ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ 01 ನೇದ್ದವರು ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ 02 ರಿಂದ 05 ನೇದ್ದವರಿಗೆ  1=00 ರೂಪಾಯಿಗೆ 80=00 ರೂಪಾಯಿ ಯಾರ ಅದೃಷ್ಟ ಹಣ ಹಚ್ಚಿರಿ ಅಂತಾ ಕೂಗುತ್ತಾ ಓ.ಸಿ. ಮಟಕಾ ನಂಬರ್ ಬರೆದುಕೊಡುತ್ತಿದ್ದಾಗ ಪಂಚರ ಸಮಕ್ಷಮ ಸಿಬ್ಬಂದಿ ಸಂಗಡ ದಾಳಿ ಮಾಡಿ ಆರೋಪಿತರಿಂದ 1] 5100=00 ಮಟಕಾ ಜೂಜಾಟದ ನಗದು ಹಣ, 2] ಒಂದು ಮಟಕಾ ಪಟ್ಟಿ 3] ಒಂದು ಬಾಲ್ ಪೆನ್ನು, 3 ಮೊಬೈಲ್ ಫೋನ್ ಗಳನ್ನು ಇವುಗಳನ್ನು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಆರೋಪಿ ನಂ 01 ನೇದ್ದವನು ತಾನು ಬರೆದ ಮಟಕಾ ಪಟ್ಟಿಯನ್ನು ಕೊಪ್ಪಳದ ಶಿವರೆಡ್ಡಿ ಇತನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ಕಾರಣ ಸದರಿ ಆರೋಪಿತರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ನೀಡಿದ ಫಿರ್ಯಾದಿಯ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಸಾಯಂಕಾಲ 7-30 ಗಂಟೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇದೆ.
2) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 131/15 ಕಲಂ: 341, 323, 324, 447, 504, 506 ಸಹಿತ  34 ಐ.ಪಿ.ಸಿ:.
ದಿನಾಂಕ:30-09-2015 ರಂದು 7-00 ಪಿಎಂಕ್ಕೆ ಪಿರ್ಯಾದಿದಾರರಾದ ಚೆನ್ನಬಸಮ್ಮ ಗಂ. ದಿ. ಶೇಖಪ್ಪ ಮೋಟಮ್ಮನವರ್, ವಯಾ 58, ಜಾ: ರಡ್ಡಿ,  ಉ: ಹೊಲಮನೆ ಕೆಲಸ ಸಾ: ಆಡೂರು, ತಾ: ಯಲಬುರ್ಗಾ ಇವರು ಠಾಣೆಗೆ ಹಾಜರಾಗಿ, ಒಂದು ಗಣಕೀಕರಣ ಮಾಡಿಸಿದ ಪಿರ್ಯಾದಿಯನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ,ಪಿರ್ಯಾದಿದಾರರ ಗಂಡ ಮತ್ತು ಮಗ 2008 ರಲ್ಲಿ  ಮೃತಪಟ್ಟಿದ್ದು ಆಗಿನಿಂದ ಇಲ್ಲಿಯವರೆಗೂ ತನ್ನ ಗಂಡನ ಪಾಲಿಗೆ ಬಂದ ಆಡೂರು ಸೀಮಾದ ಹೊಲ ಸರ್ವೇ ನಂ:264 ಮತ್ತು 288 ನೇದ್ದರ ವಾರಸುದಾರರಿದ್ದು, ಇಲ್ಲಿಯವರೆಗೂ ಸಾಗುವಳಿ ಮಾಡುತ್ತಾ ಬಂದಿದ್ದು  ಈಗ್ಗೆ ಒಂದು ತಿಂಗಳ ಹಿಂದೆ ಫಿರ್ಯಾಧಿದಾರರ ಪಾಲಿಗೆ ಬಂದ ಜಮೀನನ್ನು ಫಿರ್ಯಾದಿಯ ಮೃತ ಗಂಡನ ಸಹೋದರರು ತಮ್ಮ ಹೆಸರಿಗೆ ಮಾಡಿಸಿ ಕೊಳ್ಳುತ್ತಿದ್ದು ಅದನ್ನು ತಿಳಿದ ಫಿರ್ಯಾದಿ ತಕರಾರು ಕೊಟ್ಟು, ತನ್ನ ಸೊಸೆಯ ಹೆಸರಿಗೆ ತನ್ನ ಪಾಲಿನ ಜಮೀನನ್ನು ಮಾಡಿಸುವದನ್ನು ಸಹಿಸದ ಫಿರ್ಯಾದಿಯ ಗಂಡನ ಸಹೋದರರು ತಮ್ಮ ಮಕ್ಕಳೊಂದಿಗೆ ಇಂದು ದಿನಾಂಕ:30-09-2015 ರಂದು 11.30 ಎ.ಎಂ.ಕ್ಕೆ ಫಿರ್ಯಾದಿ ಮತ್ತು ಅವರ ಸೊಸೆ ಹಾಗೂ ಮೊಮ್ಮಕ್ಕಳು ಅವರ ಹೊಲಕ್ಕೆ ಅದೇ ಗ್ರಾಮದ ಶಿವರಡ್ಡಿಯವರ ಟ್ರ್ಯಾಕ್ಟರ್ ನೊಂದಿಗೆ ಸರ್ವೆ ನಂ.264 ರಲ್ಲಿ ಹರಗಲು ಹೋದಾಗ ಆರೋಪಿತರು ಫಿರ್ಯಾದಿದಾರರ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಿ ಟ್ರ್ಯಾಕ್ಟರ್ ಹರಗಲು ಹೊರಟಿದ್ದನ್ನು ತಡೆದು ನಿಲ್ಲಿಸಿ ಫಿರ್ಯಾದಿದಾರರಿಗೆ ಕೈಗಳಿಂದ ಹೊಡೆಬಡೆ ಮಾಡಿ ತಳ್ಳಿ ಫಿರ್ಯಾದಿಯ ಸೊಸೆಗೆ, ಮೊಮ್ಮಕ್ಕಳಾದ ಪ್ರಭುರಾಜ ಮತ್ತು ಶಿವರಾಜನಿಗೆ ಹಾಗೂ ಜೊತೆಗೆ ಹೊಲಕ್ಕೆ ಹೋದ ಈರಮ್ಮಳಿಗೆ ಕೈಗಳಿಂದ ಹೊಡೆಬಡೆ ಮಾಡಿ, ಫ್ರಭುರಾಜನಿಗೆ ಶಿವಪ್ಪನು ಕಟ್ಟಗೆಯಿಂದ ಹೊಡೆದು ದುಃಖಾಪಾತಗೊಳಿಸಿ ಎಲ್ಲರಿಗೂ ಅವಾಚ್ಯವಾಗಿ ಬೈಯ್ದಾಡಿದ್ದು ನಂತರ ಟ್ರ್ಯಾಕ್ಟರ್ ಚಾಲಕ ಹೊಲ ಹರಗುವದಿಲ್ಲ ಅಂತಾ ಹೇಳಿದಾಗ ಫಿರ್ಯಾದಿಗೆ ಮತ್ತು ಅವಳ ಸಂಬಂದಿಕರಿಗೆ ಹೊಡೆಯುವದನ್ನು ಬಿಟ್ಟು ಇನ್ನೊಮ್ಮೆ ನಮ್ಮ ಹೊಲ ಅಂತಾ ಬಂದರೆ ನಿಮ್ಮನ್ನು ಜೀವ ಸಹಿತ ಉಳಿಸುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋಗಿದ್ದಾರೆ. ನಂತರ ಟ್ರ್ಯಾಕ್ಟರ್ ನೊಂದಿಗೆ ಮನೆಗ ವಾಪಾಸ್ಸು ಬಂದು ಹಿರಿಯರೊಂದಿಗೆ ವಿಚಾರಿಸಿ ತಡವಾಗಿ ಬಂದು ಕೈಗಳಿಂದ ಮತ್ತು ಕಟ್ಟಿಗೆಯಿಂದ ಹೊಡೆಬಡೆಮಾಡಿ ಆವಾಚ್ಯ ಶಬ್ಧಗಳಿಂದ ಬೈಯ್ಯುತ್ತಾ ಜೀವದ ಬೆದರಿಕೆ ಹಾಕಿದವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:131/15 ಕಲಂ: 341,323,324, 447, 504, 506 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.
3) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ.ನಂ. 100/2015  ಕಲಂ 409, 420, 465, 468, 471 ಸಹಿತ 34 ಐ.ಪಿ.ಸಿ:.

ಸನ್ 2013-14 ನೇ ಸಾಲಿನ ಹಣಕಾಸು ಯೋಜನೆಯಡಿಯಲ್ಲಿ  ವಜ್ರಬಂಡಿ ಗ್ರಾಮ ಪಂಚಾಯತಿಗೆ ಬಿಡುಗಡೆಯಾದ 04 ಕಾಮಗಾರಿಗಳ ಅನುದಾನದಲ್ಲಿ ಒಟ್ಟು 20,41,639/- ರೂ. ಗಳನ್ನು ಹಾಗೂ ಶೌಚಾಲಯಗಳ ನಿರ್ಮಾಣದಲ್ಲಿ ರೂ. 10,19,900/- ಯು ಹೀಗೆ ಒಟ್ಟು 30,61,539/-ರೂ. ಯಷ್ಟು ಕಾಮಗಾರಿ ಅನುಷ್ಠಾನಗೊಳಿಸದೇ ಆರೋಪಿತರು ತಮ್ಮ ಅವಧಿಯಲ್ಲಿ ಹಣ ದುರುಪಯೋಗಪಡಿಸಿಕೊಂಡು ಮೋಸವೆಸಗಿರುತ್ತಾರೆ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲ ಮಾಡಿಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008