ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ. 227/2015 ಕಲಂ 323, 326, 504, 506, 109 ಸಹಿತ 34 ಐ.ಪಿ.ಸಿ. ಹಾಗೂ 3(1)(10) ಎಸ್.ಸಿ/ಎಸ್.ಟಿ. ಕಾಯ್ದೆ:.
ಇಂದು ದಿ:03-09-2015 ರಂದು ರಾತ್ರಿ 7-30 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆ
ಕೊಪ್ಪಳದಿಂದಾ ಜಗಳದಲ್ಲಿ ದುಖಾಃಪಾತಗೊಂಡವರು ಚಿಕಿತ್ಸೆಗೆ ದಾಖಲಾದ ಬಗ್ಗೆ ಎಮ್.ಎಲ್.ಸಿ
ಸ್ವೀಕೃತವಾಗಿದ್ದು ಕೂಡಲೇ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಗುರುಪ್ರಸಾದ ಅಲಿಯಾಸ್ ಪಚ್ಚಿ
ಕೊನಸಾಗರ ಸಾ: ಇರಕಲ್ಗಡಾ ಇವರ ಲಿಖಿತ ದೂರನ್ನು ರಾತ್ರಿ 8-30 ಗಂಟೆಗೆ ಪಡೆದುಕೊಂಡಿದ್ದು ಸದರಿ
ದೂರಿನ ಸಾರಾಂಶವೇನೆಂದರೇ, ದಿ:03-09-2015 ರಂದು
ಮದ್ಯಾಹ್ನ ದಿಂದಾ ಇರಕಲಗಡಾ ಗ್ರಾಮದಲ್ಲಿ ಫಿರ್ಯಾದಿದಾರರ ಮನೆಯ ಹತ್ತಿರ ಆರೋಪಿತರು ಬಂದು
ಫಿರ್ಯಾದಿದಾರರು ಊರಲ್ಲಿ ಮೋಟಾರ ಸೈಕಲ್ ಓಡಿಸುವ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಅವಾಚ್ಯ
ಶಬ್ದಗಳಿಂದ ಬೈಯ್ದು, ಲೇ ಬ್ಯಾಡ ಸೂಳೆ ಮಕ್ಕಳೆ
ಊರಾಗ ನಿಮ್ಮ ದೌರ್ಜನ್ಯ ಬಹಳ ಆಗೈತಿ ಅಂತಾ ಜಾತಿ ಎತ್ತಿ ನಿಂದನೆ ಮಾಡಿ ಕೈಗಳಿಂದ ಹಲ್ಲೆ
ಮಾಡಿರುತ್ತಾರೆ. ನಂತರ ಸಾಯಂಕಾಲ 4-30 ಗಂಟೆಯ ಸುಮಾರಿಗೆ ಕೊಪ್ಪಳದ ಮೇನ್ ರೋಡದ ಹೈಸ್ಕೂಲ್
ಹತ್ತಿರ ಆರೋಪಿತರು ಫಿರ್ಯಾದಿ ಹಾಗೂ ಅವರ ಅಣ್ಣ ಅನೀಲನೊಂದಿಗೆ ಮೇಲಿನ ವಿಷಯವಾಗಿ ಜಗಳ ತೆಗೆದು
ಕಟ್ಟಿಗೆಯಿಂದ ರಾಡಿನಿಂದ ಹೊಡೆದು ಹಲ್ಲೆ ಮಾಡಿದ್ದು ಅಲ್ಲದೇ ಆರೋಪಿ ಶಿವಪುತ್ರವ್ವ ಮತ್ತು
ಇನ್ನೊಬ್ಬ ಅಪರಿಚಿತ ಗಂಡಸು ವ್ಯಕ್ತಿ ಗಳು ಕೂಡಿ ಫಿರ್ಯಾದಿ ಮತ್ತು ಅವರ ಅಣ್ಣ ಅನೀಲನಿಗೆ ಹೊಡೆದು
ಸಾಯಿಸುವಂತೆ ಉ|ಳಿದ ಆರೋಪಿತರಿಗೆ ಪ್ರಚೋದನೆ ನೀಡಿದ್ದು ಅದೆ,
ಮತ್ತು ಆರೋಪಿ ನಿಂಗಜ್ಜನು ಹಿಡಿಗಾತ್ರದ ಕಲ್ಲಿನಿಂದ ಫಿರ್ಯಾದಿಗೆ
ಹೊಡೆದಿದ್ದಕ್ಕೆ ಮೇಲ್ಗಡೆಯ ಬಲಗಡೆ ಒಂದು ಹಲ್ಲು ಮುರಿದಿರುತ್ತದೆ. ಅಲ್ಲದೇ ಆರೋಪಿತರು ಇವತ್ತು
ನಿಮ್ಮ ಹಣೆಬರಹ ನೆಟ್ಟಗೈತಿ ಇಲ್ಲದಿದ್ದರೆ ನಿಮ್ಮಿಬ್ಬರನ್ನು ಹೊಡೆದು ಇಲ್ಲೆ ಜಾಗದಲ್ಲಿ
ಹೂಳುತ್ತಿದ್ದೆವು. ಅಂತಾ ಜೀವದ ಬೆದರಿಕೆ ಹಾಕಿದ್ದು ಅದೆ. ಅಂತಾ ಮುಂತಾಗಿ ನೀಡಿದ ದೂರನ್ನು
ಪಡೆದುಕೊಂಡು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ. 228/2015 ಕಲಂ 323, 326, 504, 506 ಸಹಿತ 34 ಐ.ಪಿ.ಸಿ:.
ದಿ:03-09-2015 ರಂದು ರಾತ್ರಿ 8-00 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಜಗಳ ದಲ್ಲಿ
ದುಖಾಃಪಾತಗೊಂಡವರು ಚಿಕಿತ್ಸೆಗಾಗಿ ಸೇರಿಕೆಯಾಗಿರುವ ಬಗ್ಗೆ ಎಮ್.ಎಲ್.ಸಿ ಸ್ವೀಕೃತವಾಗಿದ್ದು
ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಮಹೇಶ ಹಡಪದ. ಸಾ: ಇರಕಲ್ ಗಡಾ ಇವರ ಲಿಖಿತ
ಫಿರ್ಯಾದಿಯನ್ನು ರಾತ್ರಿ 9-30 ಗಂಟೆಗೆ ಪಡೆದುಕೊಂಡಿದ್ದು ಸದರಿ ದೂರಿನ ಸಾರಾಂಶವೇನೆಂರೇ, ದಿ:03-09-2015 ರಂದು ಮದ್ಯಾಹ್ನ ದಿಂದಾ ಫಿರ್ಯಾದಿಯ ತಮ್ಮ ನಿಂಗಜ್ಜ ಮತ್ತು ಅವರ ತಾಯಿ
ಶಿವಪುತ್ರವ್ವ ಇವರು ಆರೋಪಿತರ ಮನೆಯ ಮುಂದೆ ಬರುವಾಗ ದಾರಿಯಲ್ಲಿ ಆರೋಪಿ ಅನೀಲನಿಗೆ ನೋಡಿದ್ದಕ್ಕೆ
ನೆಪ ಮಾಡಿಕೊಂಡು ಆರೋಪಿತನು ಫಿರ್ಯಾದಿಯ ತಮ್ಮನಿಗೆ ಕೈಯಿಂದ ಬಡಿದು ಕಾಲಿನಿಂದ ಒದ್ದು
ದುಖಾಃಪಾತಗೊಳಿಸಿದ್ದು ಇರುತ್ತದೆ. ನಂತರ ಸದರಿ ಘಟನೆಯ ಬಗ್ಗೆ ಫಿರ್ಯಾದಿ ಆರೋಪಿತರ ಮನೆಗೆ ಕೇಳಲು
ಹೋದಾಗ ಆರೋಪಿತರು ನಿಮ್ಮ ತಮ್ಮ ಎಲ್ಲಿ ಇದ್ದಾನೆ ಅಲ್ಲಿಗೆ ಹೋಗಿ ಕೇಳೋಣ ನಡೆ ಅಂತಾ ಹೇಳಿದ್ದಕ್ಕೆ
ಸದರಿ ಗ್ರಾಮದ ಕೊಪ್ಪಳ ಮೇನರೋಡ ಹತ್ತಿರ ಫಿರ್ಯಾದಿದಾರನು ತನ್ನ ತಾಯಿಗೆ ಕರೆದುಕೊಂಡು ಬಂದಾಗ
ಅಲ್ಲಿ ತನ್ನ ತಮ್ಮ ಕೆಲಸಕ್ಕೆ ಹೊರಟಿದ್ದನು. ಆಗ ಆರೋಪಿತರಿಬ್ಬರೂ ಫಿರ್ಯಾದಿ ಮತ್ತು ಅವರ
ತಮ್ಮನೊಂದಿಗೆ ಜಗಳ ತೆಗೆದು ಆರೋಪಿ ಗುರು ಇತನು ಫಿರ್ಯಾದಿಯ ತಮ್ಮ ನಿಂಗಜ್ಜನಿಗೆ ಕೈಯಿಂದ
ಮನಬಂದಂತೆ ಮೈ ಕೈ ಗಳಿಗೆ ಹೊಡೆದಿದ್ದು ಅಲ್ಲದೇ ಆರೋಪಿ ಅನೀಲನು ಫಿರ್ಯಾದಿಗೆ ಚಾಕುವಿನಿಂದ ತಲೆಯ
ಹಿಂದೆ ಚುಚ್ಚಿದ್ದರಿಂದ ಭಾರಿ ರಕ್ತಗಾಯವಾಗಿರುತ್ತದೆ. ಅಲ್ಲದೇ ಆರೋಪಿತರು ಇಬ್ಬರನ್ನು
ಬಿಡಬಾರದಲೇ ಅಂತಾ ರಾಡ ತೆಗೆದುಕೊಂಡು ಬಂದಿದ್ದು ಆಗ ಆರೋಪಿ ಅನೀಲನು ನಿಂಗಜ್ಜನಿಗೆ ಹೊಡೆದನು. ಆಗ
ಶಿವಪುತ್ರವ್ವ ಹಾಗೂ ಬಾಳಪ್ಪ ಪಿನ್ನಿ ಮತ್ತು ಯಲ್ಲಪ್ಪ ಪಿನ್ನಿ ಇವರು ಬಂದು ಜಗಳ ಬಿಡಿಸಿದರು. ಆಗ
ಆರೋಪಿತರು ಲೇ ಸೂಳೆಮಕ್ಕಳೆ ಊರಿನ ಜನರು ಬಂದು ಜಗಳ ಬಿಡಿಸಿದರು ಅಂತಾ ಉಳಿದುಕೊಂಡಿರಿ
ಇಲಲ್ಲದಿದ್ದರೆ ನಿಮಗೆ ಹೊಡೆದು ಸಾಯಿಸಿಬಿಡುತ್ತಿದ್ದೆವು. ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ.
ಅಂತಾ ನೀಡಿದ ದೂರನ್ನು ಪಡೆದುಕೊಂಡು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
0 comments:
Post a Comment