Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, September 5, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ. 277/2015  ಕಲಂ 3 & 7 ಇ.ಸಿ. ಕಾಯ್ದೆ:.
ದಿನಾಂಕ:- 04-09-2015 ರಂದು ಬೆಳಿಗ್ಗೆ 11:30 ಗಂಟೆಗೆ ಫಿರ್ಯಾದಿದಾರರಾದಶ್ರೀ ಹೆಚ್.ಐ. ಬಗಲಿ, ಆಹಾರ ನಿರೀಕ್ಷಕರು, ತಹಶೀಲ್ ಕಾಯರ್ಾಲಯ ಗಂಗಾವತಿ ಇವರು ಠಾಣೆಗೆ ಹಾಜರಾಗಿ ಮೂಲ ಪಂಚನಾಮೆಯೊಂದಿಗೆ ಗಣಕೀಕರಣ ಮಾಡಿಸಿದ ದೂರನ್ನು ಹಾಜರ್ ಪಡಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ.  ಇಂದು ದಿನಾಂಕ:-    04-09-2015 ರಂದು ಬೆಳಿಗ್ಗೆ 09:30 ಗಂಟೆಯ ಸುಮಾರಿಗೆ ಗಂಗಾವತಿ ತಾಲೂಕಿನ ಶರಣಬಸವೇಶ್ವರ ಕ್ಯಾಂಪ್ನಲ್ಲಿ ಸರಕಾರದಿಂದ ಸಾರ್ವಜನಿಕರಿಗೆ ವಿತರಿಸುವ ಪಡಿತರ ಅಕ್ಕಿ ಮತ್ತು ಗೋದಿಯನ್ನು ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತಿದೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿ ಶ್ರೀ ಹನುಮರಡ್ಡೆಪ್ಪ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಠಾಣೆ ಇವರನ್ನು ಸಂಗಡ ಕರೆದುಕೊಂಡು ಹೊರಟು ಇಬ್ಬರು ಪಂಚರಾದ (1) ಮಹ್ಮದ್ ಯೂನೂಸ್ ತಂದೆ ಬಷೀರ್ ಅಹ್ಮೆದ್, ವಯಸ್ಸು 25 ವರ್ಷ, ಜಾತಿ: ಮುಸ್ಲೀಂ ಉ: ಕಂಪ್ಯೂಟರ್ ಆಪರೇಟರ್ ಸಾ: ವಡ್ಡರಹಟ್ಟಿ ಕ್ಯಾಂಪ್ ತಾ: ಗಂಗಾವತಿ. (2) ದಾದಾ ಖಲಂದರ ತಂದೆ ಬಷೀರ್.ಎಸ್, ವಯಸ್ಸು 24 ವರ್ಷ, ಜಾತಿ: ಮುಸ್ಲೀಂ ಉ: ಕಂಪ್ಯೂಟರ್ ಆಪರೇಟರ್ ಸಾ: ಮಹಿಬೂಬ ನಗರ-ಗಂಗಾವತಿ ಇವರುಗಳನ್ನು ಬರಮಾಡಿಕೊಂಡು ಎಲ್ಲರೂ ಕೂಡಿಕೊಂಡು ಬೆಳಿಗ್ಗೆ 10:00 ಗಂಟೆಗೆ ನಮಗೆ ಇದ್ದ ಮಾಹಿತಿ ಸ್ಥಳವಾದ ಶರಣಬಸವೇಶ್ವರ ಕ್ಯಾಂಪ್ನ ಬಸ್ ನಿಲ್ದಾಣದ ಹತ್ತಿರ ಹೋದಾಗ  ಗಂಗಾವತಿ ಕಡೆಯಿಂದ ಒಂದು ಚೀಲಗಳನ್ನು ತುಂಬಿದ ಆಪೆ ಪ್ಯಾಸೆಂಜರ್ ಆಟೋ ಬಂದಿದ್ದು, ಅದನ್ನು ನಿಲ್ಲಿಸಿ ಪರಿಶೀಲನೆ ಮಾಡಲಾಗಿ ಅದರ ನಂಬರ್: ಕೆ.ಎ-34/ ಬಿ-2614 ಅಂತಾ ಇದ್ದು, ಅದರಲ್ಲಿ 50 ಕೆ.ಜಿ.ಯ ಭತರ್ಿ ಹಿಡಿಸುವ ತೂಕದ ಪ್ಲಾಸ್ಟಿಕ್ ಚೀಲಗಳ ಗಂಟುಗಳು ಕಂಡು ಬಂದಿದ್ದು, ಸದರಿ ಚೀಲಗಳನ್ನು ಬಿಚ್ಚಿ ಪರಿಶೀಲನೆ ಮಾಡಲಾಗಿ ಅದರಲ್ಲಿ ಸಾರ್ವಜನಿಕರಿಗೆ ಸರಕಾರದಿಂದ ನ್ಯಾಯ ಬೆಲೆ ಅಂಗಡಿಯಲ್ಲಿ ವಿತರಿಸುವಂತಹ ಪಡಿತರ ಅಕ್ಕಿ ಮತ್ತು ಗೋದಿ ಕಂಡು ಬಂದಿದ್ದು, ಪ್ರತಿಯೊಂದು ಚೀಲದಲ್ಲಿ ಸುಮಾರು 30 ರಿಂದ 35 ಕೆ.ಜಿ. ಭತರ್ಿ ಮಾಡಿ ಗಂಟುಗಳನ್ನು ಕಟ್ಟಿದ್ದು, ಅವುಗಳನ್ನು ಎಣಿಸಲಾಗಿ ಪಡಿತರ ಗೋದಿಯ 10 ಗಂಟು ಕಟ್ಟಿದ ಚೀಲಗಳು ಅಂದಾಜು 3.5 ಕ್ವಿಂಟಾಲ್ ಅಂ.ಕಿ. ರೂ.  6,300-00 ಗಳು ಮತ್ತು ಪಡಿತರ ಅಕ್ಕಿಯ 7 ಗಂಟು ಕಟ್ಟಿದ ಚೀಲಗಳು ಅಂದಾಜು 2.5 ಕ್ವಿಂಟಾಲ್ ಅಂ.ಕಿ. ರೂ. 6000-00 ಗಳು ಕಂಡುಬಂದವು.  ಹಾಜರ್ ಇದ್ದ ಆಟೋ ಚಾಲಕನಿಗೆ ವಿಚಾರಿಸಲು ಅವನು ತನ್ನ ಹೆಸರು ವಲಿಬಾಷಾ ತಂದೆ ಹೊನ್ನೂರಸಾಬ, ವಯಸ್ಸು 38 ವರ್ಷ, ಜಾತಿ: ಮುಸ್ಲೀಂ ಉ: ಆಟೋ ಚಾಲಕ ಸಾ: 3ನೇ ವಾರ್ಡ, ಚಪ್ಪರದಹಳ್ಳಿ, ಕಂಪ್ಲಿ ತಾ: ಹೊಸಪೇಟೆ ಅಂತಾ ತಿಳಿಸಿದ್ದು, ಅವನಿಗೆ ಈ ಪಡಿತರ ಅಕ್ಕಿ ಮತ್ತು ಗೋದಿಯನ್ನು ಎಲ್ಲಿಂದ ತಂದಿದ್ದು ಅಂತಾ ವಿಚಾರಿಸಲು ಕಂಪ್ಲಿ, ಯಮನೂರು ಕಡೆಯಿಂದ ತಂದಿರುವುದಾಗಿ ತಿಳಿಸಿದ್ದು, ಯಾವುದೇ ಖಚಿತ ವಿಳಾಸವನ್ನು ಮತ್ತು ಯಾರಿಂದ ತೆಗೆದುಕೊಂಡು ಬಂದಿದ್ದು ಅಂತಾ ತಿಳಿಸಲಿಲ್ಲಾ. ಸದರಿಯವನು ಅಕ್ರಮವಾಗಿ ಕಾಳ ಸಂತೆಯಲ್ಲಿ ಪಡಿತರ ಅಕ್ಕಿ ಮತ್ತು ಗೋದಿಯನ್ನು ಕಡಿಮೆ ಬೆಲೆಗೆ ಖರೀದಿಸಿ ಅವುಗಳನ್ನು ಹೆಚ್ಚಿನ ಬೆಲೆಗೆ  ಮಾರಾಟ ಮಾಡುವ ಕುರಿತು ಶರಣಬಸವೇಶ್ವರ ಕ್ಯಾಂಪ್ಗೆ ತೆಗೆದುಕೊಂಡು ಬಂದಿದ್ದು,  ಇದಕ್ಕೆ ಸಂಬಂಧಿಸಿದಂತೆ ಅವನ ಹತ್ತಿರ ಯಾವುದೇ ಅಧಿಕೃತ ದಾಖಲೆಗಳು, ಸರಕಾರದ ಪರವಾನಿಗೆ ಇರುವುದಿಲ್ಲಾ ಅಂತಾ ತಿಳಿಸಿದನು. ಈ ಬಗ್ಗೆ ಬೆಳಿಗ್ಗೆ 10:15 ರಿಂದ 11:00 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆ ನಿರ್ವಹಿಸಿ ಅಕ್ಕಿ ಮತ್ತು ಗೋದಿಯನ್ನು ವಶಕ್ಕೆ ತೆಗೆದುಕೊಂಡಿದ್ದು, ತಜ್ಞರ ಪರೀಕ್ಷೆಗಾಗಿ ಕಳುಹಿಸಲು ಪ್ರತಿಯೊಂದು ಅಕ್ಕಿ ಚೀಲದಿಂದ ಸ್ವಲ್ಪ ಸ್ವಲ್ಪ ಅಕ್ಕಿಯಂತೆ ಸುಮಾರು 2 ಕೆ.ಜಿ.ಯಷ್ಟು ಅಕ್ಕಿ, ಅದರಂತೆ ಎಲ್ಲಾ ಗೋದಿ ಚೀಲಗಳಿಂದ ಸ್ವಲ್ಪ ಸ್ವಲ್ಪ ಗೋದಿಯಂತೆ ಸುಮಾರು 2 ಕೆ.ಜಿ.ಯಷ್ಟು ಗೋದಿಯನ್ನು ಶ್ಯಾಂಪಲ್ಗಾಗಿ ಪ್ರತ್ಯೇಕವಾಗಿ ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ಗಂಟು ಕಟ್ಟಿ ಗಿಃ ಅಕ್ಷರದಿಂದ ಸೀಲ್ ಮಾಡಲಾಯಿತು. ನಂತರ ಚಾಲಕ ವಲೀಬಾಷಾ ಈತನನ್ನು ಮತ್ತು ಆಟೋ ಹಾಗೂ ಅಕ್ಕಿ ಗೋದಿಗಳನ್ನು ವಶಕ್ಕೆ ತೆಗೆದುಕೊಂಡು ಅಕ್ಕಿ ಮತ್ತು ಗೋದಿಯನ್ನು ಕನರ್ಾಟಕ ಆಹಾರ ಮತ್ತು ನಾಗರಿಕ ನಿಗಮ ಗಂಗಾವತಿಯಲ್ಲಿ ಜಮಾ ಮಾಡಿ ನಂತರ ಚಾಲಕ ಮತ್ತು ಆಟೋವನ್ನು ಪೊಲೀಸ್ ಠಾಣೆಗೆ ತಂದು ಈ ವರದಿಯೊಂದಿಗೆ ಹಾಜರಪಡಿಸಿದ್ದು ಇರುತ್ತದೆ.                                                            ವಲಿಬಾಷಾ ತಂದೆ ಹೊನ್ನೂರಸಾಬ, ವಯಸ್ಸು 38 ವರ್ಷ, ಜಾತಿ: ಮುಸ್ಲೀಂ ಉ: ಆಟೋ ಚಾಲಕ ಸಾ: 3ನೇ ವಾರ್ಡ, ಚಪ್ಪರದಹಳ್ಳಿ, ಕಂಪ್ಲಿ ತಾ: ಹೊಸಪೇಟೆ ಈತನು ಸರಕಾರವು ಬಿ.ಪಿ.ಎಲ್. ಪಡಿತರ ಚೀಟಿದಾರರಿಗೆ ಅತೀ ಕಡಿಮೆ ದರದಲ್ಲಿ ವಿತರಿಸಲು ಬಿಡುಗಡೆ ಮಾಡಿದ ಪಡಿತರ ಅಕ್ಕಿ ಹಾಗೂ ಗೋದಿಯನ್ನು ಹೆಚ್ಚಿನ ಲಾಭಕ್ಕಾಗಿ ಕಾಳಸಂತೆಯಲ್ಲಿ ಖರೀದಿಸಿ, ಅಕ್ರಮವಾಗಿ ಮಾರಾಟ ಮಾಡಲು ತೊಡಗಿರುವುದರಿಂದ ಅವನು ಕನರ್ಾಟಕ ಅಗತ್ಯ ವಸ್ತುಗಳ (ಸಾ.ವಿ.ಪ) ನಿಯಂತ್ರಣ ಆದೇಶ 1992 ರ 3 (2) ಹಾಗೂ 18 ಉಲ್ಲಂಘಿಸಿರುತ್ತಾರೆ. ಕಾರಣ ಇವನ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955 ಕಲಂ 3 ಮತ್ತು 7 ಅಡಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರಿನ ಆಧಾರದ ಮೇಲಿಂದ ಪ್ರಕರಣ ಮಾಡಿ ತನಿಖೆ ಕೈಗೊಳ್ಳಲಾಯಿತು.   
2)  ಮುನಿರಾಬಾದ ಪೊಲೀಸ್ ಠಾಣಾ ಗುನ್ನೆ ನಂ. 188/2015  ಕಲಂ 395 ಐ.ಪಿ.ಸಿ:.
ದಿನಾಂಕ: 04-09-2015 ರಂದು ಮದ್ಯಾಹ್ನ 2-00 ಗಂಟೆಗೆ ಪಿರ್ಯದಿದಾರರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕೃತ ಮಾಡಿದ ಪಿರ್ಯಾದಿಯನ್ನು ಹಾಜರ ಪಡಿಸಿದ್ದು ಅದರ ಸಾರಾಂಶವೇನಂದರೆ, ಪಿರ್ಯಾಧಿದಾರರು ದಿನಾಂಕ: 31-08-2015 ರಂದು ಸಂಜೆ 7-05 ಗಂಟೆಯಿಂದ 7-15 ಗಂಟೆಯ ಅವಧಿಯಲ್ಲಿ ಅಗಳಕೇರಿ ಗ್ರಾಮದ ಹತ್ತಿರ ತುಂಗಭದ್ರಾ ಎಡದಂಡೆ ಕಾಲುವೆ ಹತ್ತಿರ ತಮ್ಮ ಮೋಟರ ಸೈಕಲ ಮೇಲೆ ಬರುತ್ತಿರುವಾಗ ಕೆನಾಲ್ ಸಮೀಪದಲ್ಲಿ ಯಾರೋ 5 ಜನ ದರೋಡೆಕೋರರು ಮುಖಕ್ಕೆ ಮುಸುಕು (ಮಂಕಿ ಕ್ಯಾಫ್) ಹಾಕಿಕೊಂಡು 2 ಮೋಟರ ಸೈಕಲಗಳ ಬಂದು ಪಿರ್ಯಾದಿದಾರರನ್ನು ಅಡ್ಡಗಟ್ಟಿ ನಿಲ್ಲಿಸಿ ಚಾಕೂ ತೋರಿಸಿ ಕಟ್ಟಿಗೆಯಿಂದ ಹೊಡಿಬಡಿ ಮಾಡಿ ಅವರ ಬಳಿ ಇದ್ದ 2 ಬಂಗಾರದ ಉಂಗುರುಗಳು ಅಂ.ಕಿ. 50,000-00 ರೂ,  ಕುತ್ತಿಗೆಯಲ್ಲಿ ಹಾಕಿಕೊಂಡಿದ್ದ 2 ತೊಲೆಯ ಬಂಗಾರದ ಚೈನ ಅಂ.ಕಿ.50,000-00 ರೂ., ಒಂದು ಹಾನರ್ ಕಂಪನಿಯ ಮೊಬೈಲ್ ಅಂ.ಕಿ. 8000-00 ರೂ. ಮತ್ತು 1500-00 ರೂ. ನಗದು ಹಣ ಹೀಗೆ ಒಟ್ಟು 1,9,500-0 ರೂ. ಬೆಲೆ ಬಾಳುವ ಬಂಗಾರದ ವಸ್ತುಗಳನ್ನು ಮತ್ತು ನಗದು ಹಣವನ್ನು ದರೋಡೆ ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಮ. 188/2015 ಕಲಂ 395 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 85/2015 ಕಲಂ.  279, 337 ಐ.ಪಿ.ಸಿ:.
ದಿನಾಂಕ: 04-09-2015 ರಂದು ಮುಂಜಾನೆ 11-30 ಗಂಟೆಗೆ ಕುಷ್ಟಗಿಯ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ಕೊಟ್ಟು  ಫಿಯರ್ಾದಿದಾರರಾದ ಶ್ರೀ.ಶೇಷಪ್ಪ ತಂದೆ ನೇಲಗಿರಿಯಪ್ಪ ದಾಸರ್ ವ:- 50 ವರ್ಷ ಜಾ:- ದಾಸರ್,ಉ:-ಕೂಲಿ ಕೆಲಸ ಸಾ:-ಕೆ.ಗೋನಾಳ ರವರ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶವೆನೆಂದರೆ ಫಿರ್ಯಾಧಿದಾರರ ಹೆಂಡತಿಯಾದ ಶ್ರೀಮತಿ ಶಾಂತಮ್ಮ ವಯಾ:- 40 ವರ್ಷ ಈಕೆಯು ಕೆ.ಗೋನಾಳ ಗ್ರಾಮದಿಂದ ಕೆ.ಹೊಸುರು ಗ್ರಾಮಕ್ಕೆ ಅಂಗನವಾಡಿ ಕಟ್ಟಡ ನಿಮರ್ಾಣದ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಆರೋಪಿ ಮಂಜುನಾಥ ಈತನು ತನ್ನ ಸೈಕಲ್ ಮೋಟಾರ್ ನಂಬರ್-ಕೆ.ಎ-37/ಆರ್-6649 ನೆದ್ದರ ಮೇಲೆ ಹೋಗುತ್ತಿದ್ದಾಗ ಶಾಂತಮ್ಮಳು ಹೋಸುರು ಗ್ರಾಮದ ತನಕ ಬರುವುದಾಗಿ ಹೇಳಿ ಸೈಕಲ್ ಮೋಟಾರ್ ಮೇಲೆ ಕುಳಿತುಕೊಂಡು ಹೋಸೂರು ಕಡೆ ಬರುತ್ತಿದ್ದಾಗ ಹೊಸೂರು ಗ್ರಾಮದ ಸಮೀಪ ಮಂಜುನಾಥನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿ,ವಾಹನ ಸ್ಕಿಡ್ ಮಾಡಿದ್ದರಿಂದ ,ಆಕೆಯು ಜೋಲಿ ಹೋಗಿ ಕೆಳಗೆ ಬಿದ್ದು,ಆಕೆಗೆ ಬಲಗಡೆ ಕಣ್ಣಿನ ಮೇಲೆ, ಹಣೆಗೆ ರಕ್ತ ಗಾಯ,ಎಡ ಕಪಾಳಕ್ಕೆ ಗಾಯ ಮತ್ತು ಎಡಗಡೆ ಕಾಲಿನ ಕಿರುಬೆರಳಿಗೆ ರಕ್ತ ಗಾಯ ಉಂಟು ಮಾಡಿದ್ದು ಮತ್ತು ಈ ಘಟನೆಯು ಇಂದು ಬೆಳಿಗ್ಗೆ 09-30ರ ಸುಮಾರಿಗೆ ಆಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿಯರ್ಾದಿಯಿಂದ ವಾಪಸ್ ಠಾಣೆಗೆ ಮಧ್ಯಾಹ್ನ 03-00 ಗಂಟೆಗೆ ಬಂದು  ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 85/2015 ಕಲಂ:  279.337, ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದೆ.
4)  ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 118/2015 ಕಲಂ. 87 Karnataka Police Act.
ದಿನಾಂಕ: 04-09-2015 ರಂದು 6-30 ಪಿಎಂಕ್ಕೆ ಪಿ.ಎಸ್.. ಕುಕನೂರ ಠಾಣೆರವರು ಠಾಣೆಗೆ ಹಾಜರಾಗಿ ದಾಳಿ ಪಂಚನಾಮೆ ಲಗತ್ತಿಸಿ, ಸರ್ಕಾರೀ ತರ್ಫೆ ಪಿರ್ಯಾದಿಯನ್ನು ಮುದ್ದೆಮಾಲು ಹಾಗೂ ವಶಕ್ಕೆ ಪಡೆದ 7 ಜನ ಆರೋಪಿತರನ್ನು ಹಾಜರಪಡಿಸಿ ವರದಿ ನೀಡಿದ್ದು, ಅದರ ಸಾರಾಂಶವೇನೆಂದರೆ, ಇಂದು ಜೂಜಾಟದ ಮಾಹಿತಿ ಬಂದ ಪ್ರಕಾರ ತಾವು ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ 5-00 ಪಿಎಂಕ್ಕೆ ಮಂಡಲಗೇರಿ ಗ್ರಾಮದ ಹೊರಪೇಟಿರವರ ಹತ್ತಿಗಿರಣಿ ಮುಂದಿನ ಸಾರ್ವಜನಿಕ ಬಯಲು ಜಾಗೆಯಲ್ಲಿ ಗಿಡದ ಕೆಳಗೆ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ, ಸದರಿಯವರನ್ನು ವಶಕ್ಕೆ ಪಡೆದುಕೊಂಡು ಸದರಿಯವರಿಂದ ಹಾಗೂ ಜೂಜಾಟದ ಕಣದಿಂದ ಒಂದು ಪ್ಲಾಸ್ಟಿಕ್ ಚೀಲ, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 4470/- ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಈ ಬಗ್ಗೆ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಬಂದಿದ್ದು, ಕಾರಣ, ಸದರಿಯವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದುಇರುತ್ತದೆ.
5)  ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 153/2015 ಕಲಂ. 78(3) Karnataka Police Act.
ದಿನಾಂಕ: 04-09-2015 ರಂದು 9-15 ಪಿ.ಎಂ.ಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಟಗಿ ಪೊಲೀಸ್ ಠಾಣೆ ರವರು  ಹಾಜರುಪಡಿಸಿದ ವರದಿ, ಪಂಚನಾಮೆ ಸಾರಾಂಶವೆನೆಂದರೆ ಇಂದು ರಾತ್ರಿ  07-15 ಗಂಟೆಗೆ ಕುಷ್ಠಗಿ ಪೊಲೀಸ್ ಠಾಣೆಯಲ್ಲಿದ್ದಾಗ ಕುಷ್ಠಗಿ ಪೊಲೀಸ್ ಠಾಣೆಯಲ್ಲಿದ್ದಾಗ ಕುಷ್ಟಗಿ ಪಟ್ಟಣದ ಆಂಬೇಡ್ಕರ ನಗರ  ಹತ್ತಿರ ಮಟ್ಕಾ ಜೂಜಾಟ  ನಡೆದಿದೆ ಅಂತಾ ಖಚಿತ ಬಾತ್ಮಿ ಬಂದಿದ್ದು ಆಗ ಪಂಚರಾದ 1) ಮಾಹಾಂತೇಶ ತಂದೆ ಜಯಪ್ಪ ಮದಲಗಟ್ಟಿ ವಯ: 43, ಜಾ: ಮಾದಿಗ ಉ: ಒಕ್ಕಲುತನ ಸಾ: ಗಾಂಧಿನಗರ ಕುಷ್ಟಗಿ 2] ಹನುಮಂತಪ್ಪ ತಂದೆ ಮರಿಯಪ್ಪ ಇಂಡಿ ವಯ: 45, ಜಾ: ಮಾದಿಗ ಉ: ಒಕ್ಕಲುತನ ಸಾ: ಅಂಭೇಡ್ಕರನಗರ ಕುಷ್ಟಗಿ  ರವರನ್ನು ಠಾಣೆಗೆ ಬರಮಾಡಿಕೊಂಡು ವಿಷಯ ತಿಳಿಸಿ ಹಾಗೂ ನಮ್ಮ ಠಾಣೆಯ ಸಿಬ್ಬಂದಿಯವರಾದ ಪಿ.ಸಿ-344 ಸಂಗಪ್ಪ, ಪಿ.ಸಿ.109 ಅಮರೇಶ ಪಿ.ಸಿ-116 ಸಂಗಮೇಶ, ಪಿ.ಸಿ-105 ಶರಣಪ್ಪ, ಪಿ.ಸಿ 393 ಮುತ್ತುರಾಜ, ಮತ್ತು ಸರಕಾರಿ ಜೀಪ್ ಚಾಲಕ ಎ.ಪಿ.ಸಿ-38 ಶಿವಕುಮಾರ ಎಲ್ಲರೂ ಕೂಡಿ ಸರಕಾರಿ ಜೀಪನಲ್ಲಿ ಠಾಣೆಯಿಂದ 07-15 ಪಿ.ಎಂ ಗಂಟೆಗೆ ಹೊರಟು ಆಂಬೇಡ್ಕರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಂಪೌಂಡ ಗೋಡೆ ಹತ್ತಿರ  ಜೀಪ್ ನಿಲ್ಲಿಸಿ ದೂರದಲ್ಲಿ ನಿಂತು ನೋಡಲು ಅಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಜನರಿಂದ ಹಣ ಪಡೆಯುತ್ತಾ ಮಟಕಾ ಜೂಜಾಟದಲ್ಲಿ ತೊಡಗಿ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿದ್ದನು. ಆಗ ನಾವು ಒಮ್ಮಲೇ ಎಲ್ಲರೂ ರೇಡ ಮಾಡಲು ಪೊಲೀಸರನ್ನು ನೋಡಿ ಮಟಕಾ ಬರೆಯಿಸುತ್ತಿದ್ದ ಜನ ಓಡಿ ಹೋಗಿದ್ದು, ಮಟಕಾ ಬರೆಯುದ್ದವನು ಸಹ ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ಸದರಿಯವನ್ನು ಹಿಡಿದು ವಿಚಾರಿಸಿದಾಗ ಹೆಸರು ಹನುಮಪ್ಪ ತಂದೆ ಮುದುಕಪ್ಪ ಹಿರೇಮನಿ ವಯ: 67, ಜಾ: ಮಾದಿಗ, ಉ: ಕೂಲಿ ಕೆಲಸ, ಸಾ: ಅಂಬೇಡ್ಕರನಗರ ಕುಷ್ಟಗಿ  ಅಂತಾ ಹೇಳಿದ್ದು ಹಾಗೂ ಸದರಿಯವನು ಜನರಿಂದ ಪಣವಾಗಿ ಹಣ ಪಡೆದು ಅವರಿಗೆ ಹೆಚ್ಚಿನ ಹಣ ಕೊಡುವುದಾಗಿ ಹೇಳಿ ನಂಬಿಸಿ ಮೋಸ ಮಾಡುತ್ತಿದ್ದು, ಹಾಗೂ ತಾನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದನ್ನು ಒಪ್ಪಿಕೊಂಡನು. ಸದರಿಯವನನ್ನು ಅಂಗ ಜಡತಿ ಮಾಡಿದಾಗ ಮಟಕಾ ಜೂಜಾಟದ ಹಣ 1,050=00 ರೂಪಾಯಿ ನಗದು ಹಣ, ಒಂದು ಬಾಲ್ ಪೆನ್ನು ಹಾಗೂ ಒಂದು ಮಟ್ಕಾ ಬರೆದ ಚೀಟಿ ಹಾಗೂ ಒಂದು ಪೆಲ್ ಕಂಪನಿಯ ಮೊಬೈಲ್ ಅಂ:ಕಿ:300=00 ರೂ:ಗಳಷ್ಟು ಆಗಬಹುದು ಇವುಗಳನ್ನು ಜಪ್ತ ಪಡಿಸಿಕೊಂಡಿದ್ದು ಇರುತ್ತದೆ.  ಈ ಪಂಚನಾಮೆಯನ್ನು ಇಂದು ದಿನಾಂಕ: 04-09-2015  ರಂದು 07-45 ಪಿ.ಎಂ ದಿಂದ 08-45 ಪಿ.ಎಂ ವರೆಗೆ ಬರೆದು ಮುಗಿಸಲಾಯಿತು. ನಂತರ ಆರೋಪಿತನ್ನು ಮತ್ತು ಮುದ್ದೆಮಾಲುಗಳನ್ನು ಪಂಚನಾಮೆಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
6)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 229/2015 ಕಲಂ. 87 Karnataka Police Act.

ದಿ:04-09-15 ರಂದು ರಾತ್ರಿ 7-45 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಹಾಲವರ್ತಿ ಗ್ರಾಮದ ರಂಗಮಂದಿರದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ  ತೊಡಗಿದ್ದಾಗ ಅಧಿಕಾರಿ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟಕ್ಕೆ ಉಪಯೋಗಿಸಿ ನಗದು ಹಣ 1265=00 ರೂ, ನಗದುಹಣ ಮತ್ತು 52 ಇಸ್ಪೇಟ್ ಎಲೆಗಳನ್ನು  ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.

0 comments:

 
Will Smith Visitors
Since 01/02/2008