ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 61/2015
ಕಲಂ 279, 337, 338, 283 ಐ.ಪಿ.ಸಿ
ಸಹಿತ 187 ಐ.ಎಂ.ವಿ. ಕಾಯ್ದೆ:
ದಿನಾಂಕ: 05.09.2015 ರಂದು ಬೆಳಿಗ್ಗೆ 9:30 ಗಂಟೆ ಸುಮಾರಿಗೆ
ಹೊಸಪೇಟ
ಕುಷ್ಟಗಿ
ಎನ್ ಹೆಚ್ 50 ರಸ್ತೆಯ ಮೇಲೆ ಪುಟಗಮರಿ ಕ್ರಾಸ್
ಹತ್ತಿರ
ಆರೋಪಿ ನಂ 01 ನೆದ್ದವನು ತನ್ನ ಕಂಟೆನರ್ ಲಾರಿ ನಂ ಹೆಚ್.ಆರ್. 73/5441 ನೆದ್ದನ್ನು ಹೊಸಪೇಟ ಕಡೆಯಿಂದ ಕುಷ್ಟಗಿ ಕಡೆಗೆ ಅತಿ ವೇಗೆವಾಗಿ
ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಎನ್ ಹೆಚ್ 50 ರಸ್ತೆಯ ರೋಡ ಹಂಪ್ಸ್ನಲ್ಲಿ ಹಿಂದೆ ಬರುವ ವಾಹನಕ್ಕೆ ಯಾವುದೇ
ರೀತಿಯ ಕೈ ಸಿಗ್ನಲ್ ಹಾಗೂ ಲಾರಿಯ ಸಿಗ್ನಲ್ ಮಾಡದೆ ಒಮ್ಮಿಂದೊಮ್ಮೆಲೆ ರಸ್ತೆಯ ಮೇಲೆ ಬ್ರೇಕ್ ಹಾಕಿ ನಿಲ್ಲಿಸಿದ್ದರಿಂದ ಸದರಿ ಲಾರಿಯ ಹಿಂದೆ ಬರುತ್ತಿದ್ದ ಆರೋಪಿ ನಂ 02 ನೇದ್ದವನು
ತನ್ನ ಕಾರ ನಂ: ಕೆ.ಎ.-17 ಎನ್.2871 ನೆದ್ದನ್ನು ಹೊಸಪೇಟ
ಕಡೆಯಿಂದ
ಕುಷ್ಟಗಿ
ಕಡೆಗೆ ಅತಿ ವೇಗೆವಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಯವುಂಟಾಗುವ
ರೀತಿಯಲ್ಲಿ
ನಡೆಸಿಕೊಂಡು
ಬಂದವನೇ
ಮುಂದೆ ಇದ್ದ ಆರೋಪಿ ನಂ 1 ನೇದ್ದವನ ಲಾರಿಗೆ ಹಿಂದಿನಿಂದ ಬಲವಾಗಿ ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ಸದರಿ ಅಪಘಾತದಲ್ಲಿ ಕಾರನ ಮುಂದಿನ ಭಾಗ ಸಂಪೂರ್ಣ ಜಖಂಗೊಂಡು
ಕಾರಿನಲ್ಲಿದ್ದ
ಆರೋಪಿ ನಂ 2 ನೆದ್ದವನ ಮಗಳು ಮೇಘಾ ಇವಳಿಗೆ ಭಾರಿ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅಲ್ಲದೇ ಕಾರಿನಲ್ಲಿದ್ದ ಆರೋಪಿ ನಂ 2 ನೆದ್ದವನಿಗೆ
ಹಾಗೂ ಇವನ ಸಂಬಂಧಿಕರಾದ ಚಂದಾ, ಖುಷಬು, ಹಾಗೂ ಗಣೇಶ ಇವರಿಗೆ ಸಾಧಾ ಹಾಗೂ ಭಾರಿ ಸ್ವರೂಪದ ರಕ್ತ ಗಾಯ, ಮತ್ತು ಒಳಪೆಟ್ಟುಗಳಾಗಿದ್ದು ಇರುತ್ತದೆ. ಅಲ್ಲದೇ ಆರೋಪಿ ನಂ 1 ನೇದ್ದವನು
ತನ್ನ ಲಾರಿಯನ್ನು ನಿಲ್ಲಿಸದೆ ಅಪಘಾತ ಸ್ಥಳದಿಂದ ತನ್ನ ಲಾರಿ ಸಮೇತ ಓಡಿ ಹೋಗಿದ್ದು ಇರುತ್ತದೆ ಅಂತಾ ಇತ್ಯಾದಿ ಪಿಯರ್ದಿಯ
ಸಾರಾಂಶದ
ಮೇಲಿಂದ
ಪ್ರಕರಣ
ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
2) ಮುನಿರಾಬಾದ ಪೊಲೀಸ್
ಠಾಣಾ ಗುನ್ನೆ ನಂ. 189/2015 ಕಲಂ 279, 337 ಐ.ಪಿ.ಸಿ:.
ದಿನಾಂಕ 05-09-2015
ರಂದು ಮದ್ಯಾನ 12-45 ಗಂಟೆ ಸುಮಾರಿಗೆ ಹೊಸಪೇಟೆ - ಕುಷ್ಟಗಿ ಎನ್.ಹೆಚ್.13 ಒನ್ ವೇ ರಸ್ತೆಯ ಮೇಲೆ ನ್ಯಾಷನಲ್ ಡಾಬಾ ಮುಂದೆ ಪಿರ್ಯಾದುದಾರರು ನಿಂತಾಗ ಹೈವೇ ರಸ್ತೆಯ ಮೇಲೆ
ಯಂಕಪ್ಪ ಎನ್ನುವನು ತನ್ನ ಮೋ.ಸೈ.ನಂ.ಕೆ.ಎ.37/ಈ.ಎ. 1161
ನೇದ್ದರಲ್ಲಿ ಹೋಸಪೆಟೆಯಿಂದ ಹೋಸಳ್ಳಿಗೆ ಹೋಗುವಾಗ ಹಿಂದಿನಿಂದ ಲಾರಿ
ನಂ.ಟಿ.ಎನ್.52
/ ಎಫ್ 5986 ನೇದ್ದನ್ನು ಅತೀ ವೇಗ
ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಯಂಕಪ್ಪನಿಗೆ ತಲೆಗೆ
ಮತ್ತು ಬಲಗಾಲ ಹಿಂಬಡಕ್ಕೆ ಗಾಯ ಪೆಟ್ಟುಗಳಾಗಿರುತ್ತವೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ
ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 279/2015 ಕಲಂ. 279, 337, 338 ಐ.ಪಿ.ಸಿ:.
ದಿನಾಂಕ:- 05-09-2015 ರಂದು ಸಂಜೆ 7:15 ಗಂಟೆಗೆ ಗಂಗಾವತಿ ಉಪವಿಭಾಗ
ಆಸ್ಪತ್ರೆಯಿಂದ ಎಂ.ಎಲ್.ಸಿ. ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಹನುಮೇಶ ತಂದೆ
ಕರಿಯಪ್ಪ ಕೊಪ್ಪಳ, ವಯಸ್ಸು
20 ವರ್ಷ, ಜಾತಿ:
ಕುರುಬರು ಉ: ಒಕ್ಕಲುತನ ಸಾ: ಬೂದಗುಂಪಾ ತಾ: ಕೊಪ್ಪಳ ಇವರು ನುಡಿ ಹೇಳಿಕೆ
ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ನಾನು ಬೂದಗುಂಪಾ ಗ್ರಾಮದ
ನಿವಾಸಿ ಇದ್ದು, ಒಕ್ಕಲುತನ
ಮಾಡಿಕೊಂಡು ಉಪಜೀವನ ಮಾಡುತ್ತಿದ್ದೇನೆ. ನಿನ್ನೆ ದಿನಾಂಕ:- 04-09-2015 ರಂದು ಬೆಳಿಗ್ಗೆ ನಾನು
ಹಾಗೂ ನಮ್ಮೂರ ಲಕ್ಷ್ಮಣ ತಂದೆ ಬಸಗುಂಡೆಪ್ಪ ಜಬ್ಬಲಗುಡ್ಡ, ವಯಸ್ಸು 40 ವರ್ಷ, ಜಾತಿ: ಕುರುಬರು ಉ: ಒಕ್ಕಲುತನ ಸಾ: ಬೂದಗುಂಪಾ ಹಾಗೂ
ನರಸಪ್ಪ ತಂದೆ ಕರಿಯಪ್ಪ ನೆಲಜರಿ, ವಯಸ್ಸು 55 ವರ್ಷ, ಜಾತಿ: ಕುರುಬರು ಉ: ಒಕ್ಕಲುತನ ಸಾ: ದನಕನದೊಡ್ಡಿ ತಾ: ಕೊಪ್ಪಳ ಇವರು
ಕೂಡಿಕೊಂಡು ನಮ್ಮ ನಮ್ಮ ಜಮೀನಿನಲ್ಲಿ ಬೆಳೆದಂತಹ ಕಾಯಿಪಲ್ಲೆಯನ್ನು ಸಿಂಧನೂರು ಮಾರ್ಕೆಟ ನಲ್ಲಿ
ಮಾರಾಟ ಮಾಡುವ ಕುರಿತು ಟಾಟಾ ಏಸ್ ಗೂಡ್ಸ್ ವಾಹನ ನಂಬರ್: ಕೆ.ಎ-37/ ಎ-2873 ನೇದ್ದರಲ್ಲಿ
ಕಾಯಿಪಲ್ಲೆಯನ್ನು ಲೋಡ್ ಮಾಡಿಕೊಂಡು ಹೋಗಿದ್ದೆವು. ಕಾಯಿಪಲ್ಲೆ ಮಾರಾಟವನ್ನು ಮುಗಿಸಿಕೊಂಡು ಇಂದು
ದಿನಾಂಕ:- 05-09-2015 ರಂದು ವಾಪಸ್ ಸಿಂಧನೂರಿನಿಂದ ಸಂಜೆ ಹೊರಟೆವು. ವಾಹನವನ್ನು
ಸುರೇಶ ತಂದೆ ಸಣ್ಣ ದುರಗಪ್ಪ, ವಯಸ್ಸು 25 ವರ್ಷ, ಕುರುಬರು ಸಾ: ದನಕನದೊಡ್ಡಿ ತಾ: ಕೊಪ್ಪಳ ಈತನು ನಡೆಯಿಸುತ್ತಿದ್ದನು.
ನಾವು ಸಂಜೆ 6:00 ಗಂಟೆಯ ಸುಮಾರಿಗೆ ಗಂಗಾವತಿ-ಕೊಪ್ಪಳ ಮುಖ್ಯ ರಸ್ತೆಯ ಹೇಮಗುಡ್ಡ
ಸೀಮಾದಲ್ಲಿ ಬೈಪಾಸ್ ರಸ್ತೆಯ ಕ್ರಾಸ್ ಹತ್ತಿರ ಹೋಗುತ್ತಿರುವಾಗ ನಮ್ಮ ಎದುರುಗಡೆ ಕೊಪ್ಪಳ
ಕಡೆಯಿಂದ ಬರುತ್ತಿದ್ದ ಒಂದು ಲಾರಿ ಚಾಲಕನು ತನ್ನ ಲಾರಿಯನ್ನು ಅತೀ ವೇಗವಾಗಿ ಮತ್ತು ತೀವ್ರ
ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ನಾವು ಹೊರಟಿದ್ದ ಟಾಟಾ ಏಸ್ ವಾಹನಕ್ಕೆ ಟಕ್ಕರ್
ಕೊಟ್ಟು ಅಪಘಾತ ಮಾಡಿದನು. ಇದರಿಂದ ನನಗೆ ಎಡ ಹುಬ್ಬಿನ ಮೇಲೆ, ಬಲ ತೊಡಗೆ, ಮೂಗಿಗೆ, ಬಲ ಮೊಣಕಾಲಿಗೆ ರಕ್ತಗಾಯಗಳಾದವು. ನನ್ನ ಸಂಗಡ
ಇದ್ದ ಲಕ್ಷ್ಮಣನಿಗೆ ಎಡ ಮೊಣಕಾಲ ಕೆಳಗೆ ರಕ್ತಗಾಯ, ಬಲ ಮೊಣಕಾಲ ಮೇಲೆ, ಎದೆಗೆ ಒಳಪೆಟ್ಟಾಗಿದ್ದು, ಬಲ ಮೊಣಕೈಗೆ ತೆರೆಚಿದ ಗಾಯವಾಗಿತ್ತು.
ನರಸಪ್ಪನಿಗೆ ಎಡಗಾಲ ತೊಡೆಯ ಹತ್ತಿರ ಎಲುಬು ಮುರಿದಿದ್ದು, ಎಡಗಾಲ ಮೊಣಕಾಲ ಕೆಳಗೆ, ಮೂಗಿನ ಹತ್ತಿರ ಮತ್ತು ಎಡ ಮೊಣಕೈಗೆ, ಬಲಗೈಗೆ
ರಕ್ತಗಾಯಗಳಾಗಿದ್ದವು. ನಂತರ ಅಪಘಾತ ಮಾಡಿದ ಲಾರಿಯನ್ನು ನೋಡಲಾಗಿ ಅದರ ನಂಬರ್: ಎ.ಪಿ-22/
ವಿ-6906 ಅಂತಾ ಇದ್ದು, ಚಾಲಕನ ಹೆಸರು ವಿಚಾರಿಸಲು ಅಶೋಕುಮಾರ ತಂದೆ ಮೈಬೂಸು ಸಾ: ಶಾಗಾಪೂರು, ಪಾನಗಲ್ ಮಂಡಲಂ, ಜಿಲ್ಲೆ:
ಮಹೆಬೂಬ ನಗರ (ತೆಲಂಗಾಣ) ಅಂತಾ ತಿಳಿಯಿತು. ನಂತರ ಗಾಯಗೊಂಡ ನಾವುಗಳು 108 ಗೆ ಫೋನ್ ಮಾಡಿ
ಅಂಬ್ಯುಲೆನ್ಸ್ ನಲ್ಲಿ ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತೇವೆ. ಕಾರಣ ಈ ಅಪಘಾತ
ಮಾಡಿದ ಲಾರಿ ಚಾಲಕ ಅಶೋಕ ಕುಮಾರನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ
ಇರುತ್ತದೆ." ಅಂತಾ ನೀಡಿದ ಹೇಳಿಕೆ ಪಡೆದುಕೊಂಡು ರಾತ್ರಿ 8:00 ಗಂಟೆಗೆ ಠಾಣೆಗೆ ವಾಪಸ್
ಬಂದು ಹೇಳಿಕೆ ಸಾರಾಂಶದ ಮೇಲಿಂದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 279/2015 ಕಲಂ
279, 337, 338 ಐ.ಪಿ.ಸಿ.
ಅಡಿ ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು.
0 comments:
Post a Comment