Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, September 8, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 143/2015  ಕಲಂ 78(3) Karnataka Police Act & 420 IPC:.
ದಿನಾಂಕ 07-09-2015 ರಂದು ರಾತ್ರಿ 8-30 ಗಂಟೆಗೆ ಶ್ರೀ ಯಲ್ಲಪ್ಪ ಎ.ಎಸ್.ಐ. ಕನಕಗಿರಿ ಠಾಣೆ ರವರು ಠಾಣೆಗೆ ಬಂದು ವರದಿ, ಹಾಗೂ ಪಂಚನಾಮೆ ಹಾಗೂ ಆರೋಪಿ ಮತ್ತು ಮಟಕಾ ಸಂಬಂಧಿಸಿದ ಸಾಮಾಗ್ರಿಗಳನ್ನು ಹಾಜರಪಡಿಸಿದ್ದು, ಸದರ ವರದಿಯ ಸಾರಾಂಶವೇನೆಂದರೆ, ಸಂಜೆ 7-00 ಗಂಟೆಗೆ ಕನಕಗಿರಿ ಗ್ರಾಮದ ಮೂಕ ದುರಗಮ್ಮ ಗುಡಿಯ ಮುಂದೆ ಆರೋಪಿತನು ಮೋಸ ಮಾಡುವ ಉದ್ದೇಶದಿಂದ ಲೈಟಿನ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಅವರಿಗೆ 1 ರೂಪಾಯಿಗೆ 80 ರೂಪಾಯಿ ಬರುತ್ತದೇ ಬನ್ನೀ ನಸೀಬ ಜೂಜಾಟದ ಅಂತಾ ಕೂಗುತ್ತಾ ಸಾರ್ವಜನಿಕರನ್ನು ಬರ ಮಾಡಿಕೊಂಡು ಅವರಿಂದ ಹಣ ಪಡೆದು ಅವರಿಗೆ ಓ.ಸಿ. ನಂಬರಗಳನ್ನು ಬರೆದು ಕೊಡುತ್ತಿದ್ದಾಗ ಪಂಚರೊಂದಿಗೆ ದಾಳಿ ಮಾಡಲು ಆರೋಪಿತನಿಂದ 01 ಮಟಕಾ ಬರೆದ ಪಟ್ಟಿ, 1 ಬಾಲ್ ಪೆನ್ನು ನಗದು ಹಣ ರೂ.1570=00 ಸಿಕ್ಕಿದ್ದು, ಮಟಕಾ ಸಾಮಾಗ್ರಿಗಳನ್ನು ಮತ್ತು ನಗದು ಹಣವನ್ನು ಪಂಚರ ಸಮಕ್ಷಮ ಜಪ್ತ ಮಾಡಿ, ಸಂಜೆ 7-00 ಗಂಟೆಯಿಂದ 8-15 ಗಂಟೆಯವರೆಗೆ ಪಂಚನಾಮೆಯನ್ನು ಮಾಡಿ ವಾಪಸ್ ಠಾಣೆಗೆ ಬಂದು ವರದಿ ನೀಡಿದ್ದು, ಸದರ ವರದಿಯ ಸಾರಾಂಶದ ಮೇಲಿಂದ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
2)  ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 208/2015  ಕಲಂ 87 Karnataka Police Act:.
ದಿನಾಂಕ 07-09-2015 ರಂದು 19-00 ಗಂಟೆಗೆ ಶ್ರೀ . ಕಾಳಿಕೃಷ್ಣ, ಪೊಲೀಸ್ ಇನ್ಸಪೆಕ್ಟರ್ ನಗರ ಪೊಲೀಸ್ ಠಾಣೆ ರವರು ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ 04 ಜನರ ಮೇಲೆ  ಕ್ರಮ ಜರುಗಿಸಲು ಒಂದು ವರದಿ ನೀಡಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ 07-09-2015 ರಂದು ಸಾಯಂಕಾಲ 5-15 ಗಂಟೆಗೆ ಆರೋಪಿತರು ಗಂಗಾವತಿ ನಗರದ ಟಿ.ಎ.ಪಿ.ಸಿ.ಎಂ.ಎಸ್. ಹತ್ತಿರದ ಶಂಕರಲಿಂಗ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ 52 ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಇಸ್ಪೇಟ್ ಜೂಜಾಟ ಆಡುತ್ತಿರುವಾಗ ಶ್ರೀ .ಕಾಳಿಕೃಷ್ಣ, ಪೊಲೀಸ್ ಇನ್ಸಪೆಕ್ಟರ್ ಗಂಗಾವತಿ ನಗರ ಪೊಲೀಸ್ ಠಾಣೆ ರವರು ಸದರಿಯವರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವರಿಂದ ಇಸ್ಪೇಟ್ ಜೂಜಾಟದ ಒಟ್ಟು ನಗದು ಹಣ ರೂ. 8,700-00 ಹಾಗೂ 52 ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡು ಬಗ್ಗೆ ಪಂಚರ ಸಮಕ್ಷಮ 5-15 ಪಿ.ಎಂ. ದಿಂದ 6-15 ಪಿ.ಎಂ. ವರೆಗೆ ಪಂಚನಾಮೆ ಬರೆದುಕೊಂಡಿದ್ದು ಇರುತ್ತದೆ.      
3ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 234/2015  ಕಲಂ 279, 304(ಎ) ಐ.ಪಿ.ಸಿ ಹಾಗೂ 187 ಐ.ಎಂ.ವಿ. ಕಾಯ್ದೆ:.

ದಿ:08-09-2015 ರಂದು 02-15 ಎ.ಎಮ್ ಕ್ಕೆ ಫಿರ್ಯಾದಿದಾರರಾದ ಶೇಖರಯ್ಯ ಸಿಪಿಸಿ-248 ಗ್ರಾಮೀಣ ಠಾಣೆ ಕೊಪ್ಪಳ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ನಿನ್ನೆ ದಿ:07-09-2015 ರಂದು ರಾತ್ರಿ 11-00 ಗಂಟೆಗೆ ಅಭಯ ಸಾಲ್ವೆಂಟ್ ಫ್ಯಾಕ್ಟರಿಯ ಕ್ವಾಟರ್ಸ ಹತ್ತಿರ ಸುಮಾರು 25-30 ವರ್ಷದ ಅಪರಿಚಿತ ಗಂಡಸು ವ್ಯಕ್ತಿ ಜನರಿಗೆ ತೊಂದರೆ ಕೊಡುತ್ತಿದ್ದಾನೆಂದು ಮಾಹಿತಿ ಬಂದಿದ್ದರಿಂದ ಕೂಡಲೇ ಫಿರ್ಯಾದಿದಾರರು ಸ್ಥಳಕ್ಕೆ ಹೋಗಿ ನೋಡಿದಾಗ ಸದರಿ ವ್ಯಕ್ತಿ ಮಾನಸಿಕ ಅಸ್ವಸ್ಥನಿದ್ದು ಆತನು ತಮ್ಮನ್ನು ನೋಡಿ ಕತ್ತಲಲ್ಲಿ ತಪ್ಪಿಸಿಕೊಂಡಿದ್ದು ಇರುತ್ತದೆ. ನಂತರ ನಿನ್ನೆ ರಾತ್ರಿ 11-30 ಗಂಟೆಯಿಂದ ದಿ:08-09-2015 ರಂದು 00-25 ಎ.ಎಮ್ ಅವಧಿಯಲ್ಲಿ ಕೊಪ್ಪಳ ಗಿಣಿಗೇರಿ ಎನ್.ಹೆಚ್-63 ರಸ್ತೆಯ ಅಭಯ ಸಾಲ್ವೆಂಟ್ ಹತ್ತಿರ ಆರ್.ಟಿ.ಓ ಕ್ರಾಸ್ ಸಮೀಪದಲ್ಲಿ ಫಿರ್ಯಾದಿದಾರರು ಈಗಾಗಲೇ ಅಭಯ ಸಾಲ್ವೆಂಟ್ ಹತ್ತಿರ ನೋಡಿ ಹೋಗಿದ್ದ ಸುಮಾರು 25-30 ವರ್ಷದ ಅಪರಿಚಿತ ಮಾನಸಿಕ ಅಸ್ವಸ್ಥ ಗಂಡಸು ವ್ಯಕ್ತಿಗೆ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಓಡಿಸಿಕೊಂಡು ಹೋಗುವಾಗ ಟಕ್ಕರ ಕೊಟ್ಟು ಅಪಘಾತ ಮಾಡಿ ವಾಹನವನ್ನು ನಿಲ್ಲಿಸದೇ ಹೋಗಿದ್ದು ಇರುತ್ತದೆ. ಸದರಿ ಅಪರಿಚಿತ ವಾಹನದ ಚಾಲಕನನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

0 comments:

 
Will Smith Visitors
Since 01/02/2008