ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ 103/2015
ಕಲಂ. 279, 304(ಎ) ಐ.ಪಿ.ಸಿ. ಮತ್ತು 187 ಐ.ಎಂ.ವಿ. ಕಾಯ್ದೆ
ದಿನಾಂಕ 15-10-2015 ರಂದು
ಸಂಜೆ 7 ಗಂಟೆಯ ಸುಮಾರಿಗೆ ಯಾವದೋ ಒಂದು ಮೋಟಾರ ಸೈಕಲ ಸವಾರನು ತಾನು ನಡೆಯಿಸುತ್ತಿದ್ದ ಮೋಟಾರ
ಸೈಕಲನ್ನು ಯಲಬುರ್ಗಾ- ಜಿ. ಜರಕುಂಟಿ ರಸ್ತೆಯ ಮೇಲೆ ಯಲಬುರ್ಗಾ ಕಡೆಯಿಂದ ಜಿ. ಜರಕುಂಟಿ ಗ್ರಾಮದ
ಕಡೆಗೆ ಅತೀಜೋರಾಗಿ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಜಿ. ಜರಕುಂಟಿ ಸೀಮಾದಲ್ಲಿ ಬರುವ
ಶ್ರೀಮತಿ ಹನಮವ್ವ ಗಂಡ ಫಕೀರಪ್ಪ ತಳವಾರ ಸಾ: ಜಿ. ಜರಕುಂಟಿ ಇವಳು ತನ್ನ ಹೊಲದಲ್ಲಿ ಕಸ ತೆಗೆದು
ಮನೆಗೆ ತನ್ನ ಹೊಲದ ಹತ್ತಿರ ರಸ್ತೆಯ ಎಡ ಮಗ್ಗಲು ನಡೆದುಕೊಂಡು ಹೋಗುತ್ತಿದ್ದಾಗ ಸದ್ರಿಯವಳಿಗೆ
ಜೋರಾಗಿ ಠಕ್ಕರ ಕೊಟ್ಟು ಅಪಘಾತ ಪಡಿಸಿದ್ದರಿಂದ ಅವಳ ಎಡ ಕಿವಿಯಲ್ಲಿ ರಕ್ತ ಬಂದಿದ್ದು, ಎಡಗೈ
ಮುಂಗೈ ಮೇಲೆ ರಕ್ತ ಗಾಯ, ಎಡಗಾಲ ಮೊಣ ಕಾಲ ಕೆಳಗೆ ಭಾರಿ ಸ್ವರೂಪದ ಗಾಯವಾಗಿ ಮುರಿದಿದ್ದು, ಬಲಗಾಲ
ಮೊಣಕಾಲ ಚಿಪ್ಪಿನ ಹತ್ತಿರ ತೆರಚಿದ ನಮೂನೆಯ ಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ.
ಸದರಿ ಆರೋಪಿತನು ಅಪಘಾತ ಮಾಡಿದ ನಂತರ ತನ್ನ ಮೋಟಾರ ಸೈಕಲನ್ನು ಪುನ: ಯಲಬುರ್ಗಾ ಕಡೆಗೆ
ಚಲಾಯಿಸಿಕೊಂಡು ಹೋಗಿರುವದರಿಂದ ಸದರಿ ಮೋಟಾರ ಸೈಕಲ ನಂಬರ ಮತ್ತು ಮೋಟಾರ ಸೈಕಲ ಸವಾರನ ಹೆಸರು
ಮತ್ತು ವಿಳಾಸ ಗೊತ್ತಾಗಿರುವದಿಲ್ಲ. ಕಾರಣ ಸದ್ರಿ ಮೋಟಾರ ಸೈಕಲನ್ನು ಮತ್ತು ಅದರ
ಸವಾರನನ್ನು ಪತ್ತೆ ಹಚ್ಚಿ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶ
ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ- 103/2015 ಕಲಂ-279 304(ಎ) ಐ.ಪಿ.ಸಿ ಹಾಗೂ 187 ಐ.ಎಂ.ವಿ
ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2) ಸಂಚಾರಿ
ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ. 577/2015 ಕಲಂ. 279, 337 ಐ.ಪಿ.ಸಿ:.
ದಿನಾಂಕ 15-10-2015
ರಂದು ರಾತ್ರಿ 7-50 ಗಂಟೆಗೆ ಕೊಪ್ಪಳದ ಕಿಮ್ಸ ಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೇ
ಆಸ್ಪತ್ರೆಗೆ ಹೋಗಿ ಅಪಘಾತದಲ್ಲಿ ಗಾಯಗೊಂಡ ಫಿರ್ಯಾದಿಯ ಹೇಳಿಕೆಯನ್ನು ಪಡೆದುಕೊಂಡಿದ್ದು ಅದರ
ಸಾರಾಂಶವೆನೆಂದರೆ,
ಇಂದು ದಿನಾಂಕ 15-10-2015 ರಂದು ರಾತ್ರಿ 7-20 ಗಂಟೆಗೆ ಫಿರ್ಯಾದಿದಾರರು
ತಮ್ಮ ಹೊಟಲ್ ಗೆ ರವೆಯನ್ನು ತೆಗೆದುಕೊಂಡು ಬರಲು ಬಸವೇಶ್ವರ ಸರ್ಕಲಗೆ ಹೋಗಲು ಆಟೋ ನಂಬರ KA-19/A-3493
ನೆದ್ದರಲ್ಲಿ ಕುಳಿತುಕೊಂಡು ನಾನು ಮತ್ತು ರದೀಶ ಇಬ್ಬರೂ
ಹೊಗುತ್ತಿರುವಾಗ ಗದಗ-ಹೋಸಪೇಟೆ ಎನ್.ಹೆಚ್.-63 ರಸ್ತೆಯ ಮೇಲೆ ಜೆ.ಕೆ.ಎಸ್ ಹೋಟೆಲ್ ಸಮೀಪ ಟೋ ಚಾಲಕನು ಆಟೋವನ್ನು ಜೋರಾಗಿ ಮತ್ತು
ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಆಟೋವನ್ನು ರಸ್ತೆಯ ಮೇಲೆ ಪಲ್ಟಿಮಾಡಿ
ಅಪಘಾತಮಾಡಿದ್ದರಿಂದ ಫಿರ್ಯಾದಿಗೆ ಬಲಗೈ ಕಿರುಬರಳಿಗೆ ಮತ್ತು ಅದರ ಪಕ್ಕದ ಬೆರಳಿಗೆ ರಕ್ತಗಾಯ
ಮತ್ತು ಆಟೋದಲ್ಲಿ ಕುಳಿತುಕೊಂಡ ರದೀಶ ಇತನಿಗೆ ಬಲಗೈ ಮೋಣಕೈ ಕೆಳಗೆ ಒಳಪೆಟ್ಟು ಆಗಿರುತ್ತದೆ ಅಂತಾ
ಮುಂತಾಗಿದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 57/2015 ಕಲಂ. 279, 337 ಐ.ಪಿ.ಸಿ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
0 comments:
Post a Comment