ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ತಾವರಗೇರಾ ಪೊಲೀಸ್ ಠಾಣಾ
ಗುನ್ನೆ ನಂ 98/2015 ಕಲಂ. 279, 337 ಐ.ಪಿ.ಸಿ. ಕಾಯ್ದೆ
ದಿನಾಂಕ: 16-10-2015 ರಂದು ಸಂಜೆ 05-30 ಗಂಟೆಗೆ ಕುಷ್ಟಗಿ
ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಭೇಟಿ ಕೊಟ್ಟು
ಫಿರ್ಯಾಧಿದಾರರಾದ ಶ್ರೀ ಯಮನಪ್ಪ ತಂದೆ ಛತ್ರಪ್ಪ ನಾಗಲಾಪುರ ವಯ: 33 ವರ್ಷ, ಜಾತಿ: ಮಾದರ ಉ: ಕೂಲಿ,
ಸಾ: ಹಿರೇಮುಕರ್ತಿನಾಳ ಇವರ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶವೆನೆಂದರೆ ಫಿರ್ಯಾಧಿದಾರನ ಹೆಂಡತಿ
ಲಕ್ಷ್ಮೀ 28 ವರ್ಷ, ಈಕೆಯು 8 ತಿಂಗಳ ಗರ್ಭೀಣಿ ಇದ್ದು ಈಕೆಯನ್ನು ಹಿರೇಮನ್ನಾಪುರ ಸರಕಾರಿ ಆಸ್ಪತ್ರೆಗೆ
ತೋರಿಸಿಕೊಂಡು ಬರಲು ತಮ್ಮ ಮೋಟಾರು ಸೈಕಲ್ ನಂ: ಎ.ಪಿ-16/ ಎಫ್-2480 ನೇದ್ದನ್ನು ತೆಗೆದುಕೊಂಡು ಹೋಗಿ
ತನ್ನ ಹೆಂಡತಿಯನ್ನು ತೋರಿಸಿಕೊಂಡು ಪುನಃ ತಮ್ಮೂರಿಗೆ ಬರಲು ಮೋಟಾರು ಸೈಕಲ್ ಹಿಂದುಗಡೆ ತನ್ನ ಹೆಂಡತಿಯನ್ನು
ಕೂಡಿಸಿಕೊಂಡು ಹಿರೇಮನ್ನಾಪುರ ತಾವರಗೇರಾ ರಸ್ತೆಯಲ್ಲಿ ಬರುತ್ತಿದ್ದಾಗ ಸಂಜೆ 04-40 ಗಂಟೆಗೆ ಹಂಚಿನಾಳ
ಗ್ರಾಮದ ಹಳ್ಳ ದಾಟುತ್ತಿದ್ದಾಗ ಫಿರ್ಯಾಧಿ ಮುಂದೆ ಹೊರಟ ಒಂದು ಟಿಪ್ಪರ್ ನಂ: ಕೆ.ಎ-25/ಡಿ-8438 ಟಿಪ್ಪರ್
ನೇದ್ದರ ಚಾಲಕ ಮುತ್ತಪ್ಪ ಈತನು ತನ್ನ ಟಿಪ್ಪರ್ನ್ನು ಯಾವುದೇ ಮುನ್ಸೂಚನೆ ಕೊಡದೇ ಅತಿವೇಗ ಅಲಕ್ಷತನದಿಂದ
ವಾಹನವನ್ನು ಎಡಕ್ಕೆ ತಿರುಗಿಸಿದ್ದರಿಂದ ಫಿರ್ಯಾಧಿದಾರರ ಮೋಟಾರು ಸೈಕಲ್ ಟಿಪ್ಪರ್ಗೆ ಟಚ್ಆಗಿ ಬಿದ್ದಿದ್ದು
ಇದರಿಂದ ಮೋಟಾರು ಸೈಕಲ್ ಹಿಂದೆ ಕುಳಿತ ಲಕ್ಷ್ಮೀಗೆ ಎಡಗಡೆ ಚಪ್ಪೆಗೆ ಒಳಪೆಟ್ಟು ಹಾಗೂ ಮೊಣಕಾಲಿಗೆ
ತೆರಚಿದ ಗಾಯವಾಗಿದ್ದು ಮತ್ತು ಫಿರ್ಯಾಧಿದಾರನಿಗೆ ಯಾವುದೇ ಗಾಯ ಪೆಟ್ಟು ಆಗಿರುವುದಿಲ್ಲ. ಅಂತಾ ವಗೈರೆ
ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 98/2015 ಕಲಂ: 279, 337 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ
ಕೈಗೊಂಡಿದ್ದು ಇರುತ್ತದೆ.
2)
ಮುನಿರಾಬಾದ್ ಪೊಲೀಸ್ ಠಾಣೆ ಗುನ್ನೆ ನಂ. 210/2015
ಕಲಂ. 279, 337 ಐ.ಪಿ.ಸಿ
ಮತ್ತು 187 ಐ.ಎಂ.ವಿ. ಕಾಯ್ದೆ.
ದಿನಾಂಕ
16-10-2015 ರಂದು ಬೆಳಿಗ್ಗೆ 09-00 ಗಂಟೆ ಸುಮಾರಿಗೆ ಪಿರ್ಯಾದುದಾರರು ಮತ್ತು ಪೆನ್ನಪ್ಪ ಇವರು
ತಮ್ಮ ಬಜಾಜ ಮೋ.ಸೈ.ನಂ.ಕೆಎ.37/ಎಕ್ಷ 0869 ನೇದ್ದರಲ್ಲಿ ಹೊಸಪೇಟೆ-ಕುಷ್ಟಗಿ ಎನ್ ಹೆಚ್ 13 ಒನ್
ವೇ ರಸ್ತೆಯ ಮೇಲೆ ಪೆನ್ನಪ್ಪ ಈತನು ಮೋ.ಸೈ ನ್ನು ಚಲಾಯಿಸುತ್ತಿದ್ದು ತಮ್ಮ ಸೈಡಿನಲ್ಲಿ
ಹೋಗುತ್ತಿರುವಾಗ ಕಂಟೇನರ ಲಾರಿ ನಂ ಯುಪಿ 21/ ಎನ್ ಬಿ.1254 ನೇದ್ದರ ಚಾಲಕನು ಹಿಂದಿನಿಂದ ಬಂದು
ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಪಿರ್ಯಾದಿಗೆ ಹಾಗೂ ಪೆನ್ನಪ್ಪನಿಗೆ
ಗಾಯಪೆಟ್ಟುಗಳಾಗಿರುತ್ತವೆ ಮತ್ತು ಲಾರಿ ಚಾಲಕನು ಓಡಿ ಹೋಗಿರುತ್ತಾನೆ ಅಂತಾ ಮುಂತಾಗಿದ್ದ
ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಕೂಕನೂರು ಪೊಲೀಸ್ ಠಾಣೆ ಗುನ್ನೆ ನಂ. 140/2015 ಕಲಂ.
498 (ಎ), 306, ಸಹಿತ 34 ಐ.ಪಿ.ಸಿ.
ದಿನಾಂಕ:16-10-2015 ರಂದು
01-30 ಪಿಎಂಕ್ಕೆ ಪಿರ್ಯಾದಿದಾರನು ಠಾಣೆಗೆ ಹಾಜರಾಗಿ ತನ್ನ ಒಂದು ಲಿಖಿತ ವರದಿಯನ್ನು ಹಾಜರಪಡಿಸಿದ್ದು,
ಅದರ ಸಾರಾಂಶವೇನೆಂದರೆ, ತನ್ನ ಮಗಳಾದ ಶಾರಮ್ಮ ವ:30 ವರ್ಷ ಈಕೆಯನ್ನು ಈಗ್ಗೆ 2 ವರ್ಷಗಳ ಹಿಂದೆ ಮುತ್ತಾಳದ
ನಿಂಗಪ್ಪ ತಂ.ಭೀಮಪ್ಪ ಬೂದಿಹಾಳ ಈತನ ಮೊದಲನೇ ಹೆಂಡತಿ ಈರವ್ವ ಈಕೆಗೆ ಮಕ್ಕಳಾಗದೇ ಇದ್ದುದರಿಂದ ನಿಂಗಪ್ಪ
ಮತ್ತು ಈರವ್ವ ಇವರು ತಮ್ಮ ಒಪ್ಪಿಗೆಯಂತೆ ಫಿರ್ಯಾದಿದಾರನ ಮಗಳನ್ನು ಮದುವೆ ಮಾಡಿಕೊಂಡಿದ್ದು ಮದುವೆ
ನಂತರ ಹತ್ತು ತಿಂಗಳು ಚೆನ್ನಾಗಿದ್ದು ನಂತರ ಫಿರ್ಯಾದಿದಾರನ ಮಗಳು ಶಾರಮ್ಮ ಈಕೆಯು ಐದು ತಿಂಗಳ
ಗರ್ಭವತಿ ಅಂತಾ ಗೋತ್ತಾದಾಗಿನಿಂದ ಅಳಿಯ ನಿಂಗಪ್ಪ ಹಾಗೂ ಆತನ ಮೊದಲನೇ ಹೆಂಡತಿ ಈರವ್ವ ಇಬ್ಬರೂ ಕೂಡಿ
ಆಕೆ ಗರ್ಭವತಿಯಾದ ಹೊಟ್ಟೆಕಿಚ್ಚಿನಿಂದ ವಿನಾಕಾರಣ ಫಿರ್ಯಾದಿದಾರನ ಮಗಳಿಗೆ ನೀನು ಕಿವುಡಿ ಇದ್ದಿ ನೀನು
ಹೊಟ್ಟೀಲಿ ಆಗಿ ನಮಗ ಹಾಳುಮಾಡಕ್ಕ ನಿಂತಿ ನಿನಗೆ ಸರಿಯಾಗಿ ಅಡಿಗೆ ಮಾಡಲು ಬರುವದಿಲ್ಲಾ. ನೀನೆಂತಾ
ಬಾಳುವೆ ಮಾಡಿ ನಿನ್ನಿಂದ ನಮ್ಮಿಬ್ಬರಿಗೆ ಬೇಸರ ಆಗಿದೆ ನೀನು ಎಲ್ಲಾರ ಬಿದ್ದು ಏನಾರ ಮಾಡಿಕೊಂಡು ಸಾಯಿ
ಅಂತಾ ಮಾನಸಿಕ ಹಿಂಸೆ ನೀಡುತ್ತಾ ಹೊಡೆ ಬಡೆ ಮಾಡುತ್ತಿದ್ದು ಈ ಬಗ್ಗೆ ಊರಿನ ಹಿರಿಯರಿಗೆ ವಿಷಯ ತಿಳಿಸಿದ್ದು
ಅವರು ಬುದ್ದಿ ಹೇಳಿದಾಗಲೂ ಕೂಡ ಅದೇ ವರ್ತನೆ ಮುಂದುವರೆಸಿ, ತನ್ನ ಮಗಳಿಗೆ ಹೊಡಿ-ಬಡಿ ಮಾಡುವುದನ್ನು
ಬಿಟ್ಟಿರಲಿಲ್ಲಾ. ಆದರೆ, ನಿನ್ನೆ ದಿನಾಂಕ:15-10-2015 ರಂದು ರಾತ್ರಿ 10-00 ಗಂಟೆಗೆ ತನ್ನ
ಮಗಳು ಮುತ್ತಾಳದ ತನ್ನ ಗಂಡನ ಮನೆಯಲ್ಲಿ ವಿಷ ಸೇವನೆ ಮಾಡಿಕೊಂಡಿದ್ದನ್ನು ನೋಡಿ, ಮುತ್ತಾಳದ ವಿರುಪಾಕ್ಷಪ್ಪ
ಮಾಳಗೌಡ್ರ, ರಾಜಶೇಖರಗೌಡರ, ವೀರಪ್ಪ ಕುರಿ ಇವರು ನೋಡಿ, ಯಾವುದೋ ಒಂದು ಟಾಂಟಾಂ ವಾಹನದಲ್ಲಿ ಮಂಗಳೂರ
ಸರಕಾರಿ ಆಸ್ಪತ್ರೆಗೆ ಕರೆದು ಕೊಂಡು ಬಂದು ಸೇರಿಕೆ ಮಾಡಿ ಫಿರ್ಯಾದಿಗೆ ವಿಷಯ ತಿಳಿಸಿದ್ದು ಫಿರ್ಯಾದಿ
ಆಸ್ಪತ್ರೆಗೆ ಹೋಗಿ ನೋಡಿದಾಗ ತನ್ನ ಮಗಳು ಪ್ರಜ್ಞಾ ಹೀನ ಸ್ಥಿತಿಯಲ್ಲಿ ಇದ್ದು, ಅಲ್ಲಿಂದ ಮುಂದಿನ
ಚಿಕಿತ್ಸೆ ಕುರಿತು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಅಲ್ಲಿ ಚಿಕಿತ್ಸೆ
ಫಲಕಾರಿಯಾಗದೇ ಇಂದು ಬೆಳಗಿನ ಜಾವ 01.30 ಮೃತಪಟ್ಟಿದ್ದು, ತನ್ನ ಮಗಳ ಸಾವಿಗೆ ನಿಂಗಪ್ಪ ಮತ್ತು
ಆತನ ಮೊದಲ ಹೆಂಡತಿ ಈರವ್ವ ಇವರು ನೀಡುತ್ತಿದ್ದ ಮಾನಸಿಕ ದೈಹಿಕ ಹಿಂಸೆ ನೀಡುತ್ತಾ, ಸಾಯಲು ಪ್ರೇರಣೆ
ಮಾಡುತ್ತಿದ್ದುದೇ ಕಾರಣವಾಗಿರುತ್ತದೆ. ಕಾರಣ, ನಿಂಗಪ್ಪ ಮತ್ತು ಅವನ ಮೊದಲನೇ ಹೆಂಡತಿ ಈರವ್ವ ಇವರ
ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.
4) ಅಳವಂಡಿ ಪೊಲೀಸ್
ಠಾಣೆ ಗುನ್ನೆ ನಂ. 101/2015 ಕಲಂ. 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ.
ಹುಬ್ಬಳ್ಳಿ
ತತ್ವದರ್ಶ ಆಸ್ಪತ್ರೆಯಿಂದ ರಸ್ತೆ ಅಪಘಾತವಾಗಿ ಗಾಯಾಳು ಚಿಕಿತ್ಸೆಗಾಗಿ ದಾಖಲಾದ ಬಗ್ಗೆ ಎಂ.ಎಲ್.ಸಿ.
ಮಾಹಿತಿ ಬಂದ ಮೇರೆಗೆ ಇಂದು ದಿನಾಂಕ: 16-10-2015 ರಂದು ಮಧ್ಯಾಹ್ನ 2-30 ಗಂಟೆಗೆ ಸದರಿ ಆಸ್ಪತ್ರೆಗೆ
ಬೇಟಿ ನೀಡಿ, ಗಾಯಾಳು ಹೇಳಿಕೆ ಕೊಡುವ ಸ್ಥಿತಿಯಲ್ಲಿ ಇಲ್ಲದಿದ್ದರಿಂದ ಅವರ ಮಾವನಾದ ಫಿರ್ಯಾಧಿದಾರರು
ಕನ್ನಡದಲ್ಲಿ ಬರೆದ ಒಂದು ಫಿರ್ಯಾಧಿಯನ್ನು ಹಾಜರು ಪಡಿಸಿದ್ದು, ಅದರ ಸಾರಾಂಶವೆನೆಂದರೆ, ಫಿಯರ್ಾದಿದಾರರ
ಅಳಿಯನಾದ ಗಾಯಾಳು ಮುದೇಗೌಡ ಈತನು ನಿನ್ನೆ ದಿನಾಂಕ: 15-10-2015 ರಂದು ಬೆಳಗ್ಗೆ 11-30 ಗಂಟೆಯ ಸುಮಾರಿಗೆ
ತನ್ನ ರಜೀಸ್ಟ್ರೇನ್ ಆಗದ ಮೋಟರ್ ಸೈಕಲ್ ಮೇಲೆ ಬೇಳೂರು ಗ್ರಾಮಕ್ಕೆ ಹೋಗುತ್ತಿದ್ದಾಗ ಎದರುಗಡೆಯಿಂದ
ಅಂದರೆ ಬೇಳೂರು ಕಡೆಯಿಂದ ಒಬ್ಬ ಟ್ರಾಕ್ಟರ್ ಚಾಲಕನು ತಾನು ನಡೆಸುತ್ತಿದ್ದ ಸೋನಾಲಿಕ ಕಂಪನಿಯ ನೀಲಿ
ಬಣ್ಣದ ಹಾಗೂ ಕಪ್ಪು ಬಣ್ಣದ ಟ್ರಾಲಿಯುಳ್ಳ (ರಜೀಸ್ಟ್ರೇನ್ ನಂಬರ ಬರೆಯಿಸಿರುವುದಿಲ್ಲ.) ನೇದ್ದನ್ನು
ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಗಾಯಾಳುವಿಗೆ ಹಾಗೂ ಆತನ ಮೋಟರ್ ಸೈಕಲ್ಗೆ
ಟಕ್ಕರ್ ಕೊಟ್ಟು ಅಫಘಾತ ಮಾಡಿದ ಪರಿಣಾಮ ಮದೇಗೌಡ ಈತನಿಗೆ ತಲೆಗೆ, ಎಡಗಡೆ ಗದ್ದಕ್ಕೆ ಭಾರಿ ಪೆಟ್ಟಾಗಿ
ರಕ್ತ ಗಾಯವಾಗಿದ್ದು, ಎಡಗಾಲ ಮೋಣಕಾಲಿಗೆ ತೆರಚಿದ ಗಾಯ ಮತ್ತು ಹಲ್ಲು, ನಾಲಿಗೆಗೆ ಕೂಡಾ ಭಾರಿ ಪೆಟ್ಟಾಗಿದ್ದು,
ಅಲ್ಲದೇ ಅಲ್ಲಲ್ಲಿ ತೆರೆಚಿದ ಗಾಯಗಳಾಗಿದ್ದು ಇರುತ್ತದೆ. ಅಫಘಾತ ಪಡಿಸಿದ ನಂತರ ಟ್ರಾಕ್ಟರ್ ಚಾಲಕನು
ಟ್ರಾಕ್ಟರ್ನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದರಿಂದ ಆತನ ಹೆಸರು ವಿಳಾಸ ಗೋತ್ತಾಗಿರುವುದಿಲ್ಲ.
ಕಾರಣ ಸದರಿ ಚಾಲಕನನ್ನು ಪತ್ತೆ ಮಾಡಿ ಆತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ
ಕೊಟ್ಟ ಫಿರ್ಯಾಧಿಯನ್ನು ಪಡೆದುಕೊಂಡು ಇಂದು ಸಂಜೆ 7-45 ಗಂಟೆಗೆ ವಾಪಸ್ ಠಾಣೆಗೆ ಬಂದು ಫಿರ್ಯಾಧಿಯ
ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 101/2015 ಕಲಂ: 279,337,338 ಐ.ಪಿ.ಸಿ. ಹಾಗೂ 187 ಐ.ಎಂ.ವಿ.
ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
5) ಕುಷ್ಠಗಿ ಪೊಲೀಸ್
ಠಾಣೆ ಗುನ್ನೆ ನಂ. 180/2015 ಕಲಂ.143,147, 323, 326, 504,
506 ಸಹಿತ 149 ಐ.ಪಿ.ಸಿ.
ದಿನಾಂಕ 16-10-2015 ರಂದು ರಾತ್ರಿ 9-30 ಗಂಟೆಗೆ ಕುಷ್ಟಗಿ ಸರಕಾರಿ ಆಸ್ಪತ್ರೆಯಿಂದ
ಎಂ.ಎಲ್.ಸಿ. ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿ ಫಿರ್ಯಾದಿದಾರರಾದ
ಶಿವಬಸಪ್ಪ ತಂದೆ ಸೋಮಪ್ಪ ದಂಡೀನ್ ವಯಾ 55 ವರ್ಷ ಜಾ.ಗಾಣಿಗೇರ ಉ.ಒಕ್ಕಲುತನ ಸಾ.ರ್ಯಾವಣಕಿ ರವರು ನೀಡಿದ
ಲಿಖಿತ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೇನಂದರೆ ಈ ಹಿಂದೆ ಮಹಾಂತೇಶ ಲಿಂಗಸಗೂರ ಈತನು
ಫಿರ್ಯಾದಿಯ ಮಗನಾದ ಸೋಮಪ್ಪ ದಂಡೀನ್ ಈತನೊಂದಿಗೆ ಜಗಳಾಡಿ ಬಡಿದಿದ್ದು ಇಂದು ದಿನಾಂಕ 16-10-2015
ರಂದು ಮಧ್ಯಾನ್ಹ 2-30 ಗಂಟೆ ಸುಮಾರಿಗೆ ಫಿರ್ಯಾದಿದಾರನು ಹೊಲದಿಂದ ತಮ್ಮ ಮನೆಗೆ ಹೋಗುತ್ತಿದ್ದಾಗ
ಗ್ರಾಮದ ಅಗಸಿಮುಂದೆ ಆರೋಪಿತರಾದ 1) ಮಹಾಂತೇಶ ತಂದೆ ದೊಡ್ಡಪ್ಪ ಲಿಂಗಸೂರ 2) ದೊಡ್ಡಬಸಪ್ಪ ತಂದೆ ದೊಡ್ಡಪ್ಪ
ಲಿಂಗಸಗೂರ 3) ದೊಡ್ಡಪ್ಪ ತಂದೆ ಮಹಾಂತಪ್ಪ ಲಿಂಗಸಗೂರ 4) ಬಸಪ್ಪ ತಂದೆ ಮಹಾಂತಪ್ಪ ಲಿಂಗಸಗೂರ 5) ಮಲ್ಲಪ್ಪ
ತಂದೆ ಬಸಪ್ಪ ಲಿಂಗಸಗೂರ ರವರು ಫಿರ್ಯಾದಿದಾರನ ಹತ್ತಿರ ಬಂದು ಆತನಿಗೆ ಅವಾಚ್ಯವಾಗಿ ಬೈಯತೊಡಗಿದ್ದು
ಆಗ ಫಿರ್ಯಾದಿಯು ಅವರಿಗೆ ನಮಗ್ಯಾಕ ಈ ರೀತಿ ಬೈದಾಡುತ್ತಿದ್ದಿ ಮೊನ್ನೆ ನನ್ನ ಮಗನಿಗೆ ಬಡಿದುಕೊಂಡಿರಿ
ಹಿಂಗ್ಯಾಕ ಮಾಡ್ತಿ ಅಂತಾ ಕೇಳಿದಾಗ ಮಾಹಾಂತೇಶ ಈತನು ಒಮ್ಮಿಂದೊಮ್ಮಲೇ ಸಿಟ್ಟಿಗೆ ಬಂದು ಲೇ ಮುದಿ ಸೂಳೇ
ಮಗನೇ ನಿನ್ನ ಮಗನಿಗೆ ಬಡಿದೀವಿ ನಿನಗೂ ಬಡಿತೀವಿ ಅಂದವನೇ ತೆಕ್ಕೆಮುಕ್ಕಿಗೆ ಬಿದ್ದು ಫೀರ್ಯಾದಿಯನ್ನು
ಕೆಳಗೆ ಕೆಡವಿ ಅಲ್ಲಿಯೇ ಬಿದ್ದಿದ್ದ ಒಂದು ಕಲ್ಲನ್ನು ತೆಗೆದುಕೊಂಡು ಫಿರ್ಯಾದಿಯ ತಲೆಗೆ ಜೋರಾಗಿ ಹೊಡೆದಿದ್ದು
ಅದರಿಂದ ಫಿರ್ಯಾದಿಗೆ ಭಾರಿ ರಕ್ತ ಗಾಯವಾಗಿದ್ದು ನಂತರ ದೊಡ್ಡಬಸಪ್ಪ ಮತ್ತು ಬಸಪ್ಪ ರವರು ಕಾಲಿನಿಂದ
ಫಿರ್ಯಾದಿಗೆ ಒದ್ದಿದ್ದು ಮತ್ತು ದೊಡ್ಡಪ್ಪ ಈತನು ಫಿರ್ಯಾದಿಯ ಅಂಗಿ ಹಿಡಿದು ಮೇಲಕ್ಕೆ ಎಳೆದನು, ಮಲ್ಲಪ್ಪ
ಈತನು ಫಿರ್ಯಾದಿಯ ಬೆನ್ನಿಗೆ ಜೋರಾಗಿ ಗುದ್ದಿದನು ನಂತರ ಈ ಸೂಳೇ ಮಗನನ್ನು ಜೀವಸಹಿತ ಬಿಡುವುದು ಬೇಡ
ಜೀವವನ್ನು ತೆಗೆಯಿರಿ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ
ಮೇಲಿಂದ ವಾಪಸ್ ಠಾಣೆಗೆ 10-30 ಪಿ.ಎಂ.ಗೆ ಬಂದು ಠಾಣಾ ಗುನ್ನೆ ನಂ. 180/15 ಕಲಂ.
143,147,323, 326,504,506 ರೆ.ವಿ. 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ
ಕ್ರ್ರಮ ಕೈಕೊಂಡಿದ್ದು ಇರುತ್ತದೆ.
0 comments:
Post a Comment